Loading...
Larger font
Smaller font
Copy
Print
Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಮಾನಸಾಂತರ.

  ದೇವರ ದೃಷ್ಟಿಯಲ್ಲಿ ಮನುÀ್ಯನು ನೀತಿವಂತನೆನಿಸಿಕೊಳ್ಳುವುದು ಹೇಗೆ? ಪಾಪಾತ್ಮನು ನೀತಿವಂನಾಗುವುದು ಹೇಗೆ? ಕ್ರಿಸ್ತನ ಮೂಲಕ ನಾವು ಪರಿಶುದ್ಧರಾಗಿ ದೇವರ ಸಂಗಡ ಒಂದಾಗಿಬಹುದು; ಆದರೆ ನಾವು ಕ್ರಿಸ್ತನ ಬಳಿಗೆ ಬರುವುದು ಹೇಗೆ? ಪಂಚಾಶತ್ತಮ ಹಬ್ಬದ ದಿನದಲ್ಲಿ ಸೇರಿದ ಆ ಜನರು ತಮ್ಮ ಪಾಪಗಳಿಂದಲೂ ಮನಸ್ಸಾಕ್ಷಿಯ ಒತ್ತಯದಿಂದಲೂ ಕೂಡಿ “ನಾವೇನು ಮಾಡೋಣ” ಎಂದು ಪೇತ್ರನು ಕೊಟ್ಟ ವೊದಲನೆಯ ಉತ್ತರವು “ಮಾನಸಾಂತರ ಪಡಿರಿ” ಎಂಬದಾಗಿತ್ತು. ಸ್ವಲ್ಪ ಹೊತ್ತಿನ ನಂತರ ಪೇತ್ರನು ಮತ್ತೆ “ದೇವರು ನಿಮ್ಮ ಪಾಪಗಳನ್ನು ಅಳಿಸಿ ಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.” ಎಂದು ಹೇಳಿದನು.LI 18.1

  ಮಾನಸಾಂತರವೆಂದರೆ ಪಾಪಕ್ಕಾಗಿ ವ್ಯಸನ ಪಡುವುದೇ ಅಲ್ಲ, ಅದನ್ನು ಬಿಟ್ಟು ಅದಕ್ಕೆ ವಿಮುಖವಾಗುವುದೆಂದೂ ಅರ್ಥವಾಗುತ್ತದೆ. ಪಾಪದ ಕರಾಳ ಸ್ವರೂಪವನ್ನು ನಾವು ತಿಳಿದ ಹೊರತು ಅದನ್ನು ಬಿಡಲಾರೆವು. ಮನ:ಪೂರ್ವಕವಾಗಿ ನಾವು ಪಾಪವನ್ನು ಬಿಟ್ಟು ಅದಕ್ಕೆ ವಿಮುಖರಾಗದ ಹೊರತ್ತು ನಮ್ಮ ಹೃದಯಗಳಲ್ಲಿ ಪರಿವರ್ತನೆಯಾಗದು. ಮಾನಸಾಂತರದ ನೈಜರೂಪವನ್ನು ಅರಿಯಲಾರದ ಜನರು ಅನೇಕ ಸಂಖ್ಯೆಯಲ್ಲಿದ್ದಾರೆ. ಲಕ್ಷಾಂತರ ಜನರು ತಾವು ಮಾಡಿದ ಪಾಪಗಳಿಗಾಗಿ ವ್ಯಸನ ಪಡುತ್ತಾರೆ. ತಾವು ಪಶ್ಚಾತ್ತಾಪ ಪಟ್ಟಿದ್ದಾರೆಂಬುದನ್ನು ಬಾಹ್ಯ ಪ್ರದರ್ಶನದಿಂದ ತೋರಿಸಿಕೊಡುತ್ತಾರೆ. ಪಾಪಗಳಿಂದ ತಮಗೆ ತೊಂದರೆಯಾಗುತ್ತದೆಂದು ಅವರು ತಿಳಿಯುವುದರಿಂದ ಅವರು ಹೀಗೆ ಮಾಡುತ್ತಾರೆ. ಪಾಪಗಳಿಗಿಂತಲೂ ಅಧಿಕವಾಗಿ ತಮಗೆ ಪ್ರಾಪ್ತವಾಗುವ ತೊಂದರೆಗಳ ಕಡೆಗೆ ಇಂಥವರು ಚಿಂತಿಸುತ್ತಾರೆ. ಚೊಚ್ಚಲುತನದ ಹಕ್ಕು ಹೋದುದರಿಂದ ಏಸಾವನು ಪಟ್ಟ ಚಿಂತೆಯು ಇಂತಹ ಪಶ್ಚಾತ್ತಾಪಕ್ಕೆ ಸಮವಾಗಿದೆ. ಹಿರಿದ ಕತಿಯನ್ನು ಹಿಡಿದ ದೇವದೂತನು ತನ್ನ ಹಾದಿಯಲ್ಲಿರುವುದನ್ನು ಕಂಡ ಬಿಳಾಮನು ನಡುಗಿ ಹೋದನು; ತಾನು ಸಾಯುವೆನೆಂಬ ಭಯದಿಂದ ತನ್ನ ತಪ್ಪನ್ನು ಅರಿಕೆ ಮಾಡಿಕೊಂಡನು; ಆದರೆ ನಿಜವಾಗಿ ಪಶ್ಚಾತ್ತಪ ಪಡಲಿಲ್ಲ; ತನ್ನ ಮನಸ್ಸನ್ನು ಬದಲಾಯಿಸಲಿಲ್ಲ; ಪಾಪದ ವಿÀಯ ಅಸಹ್ಯವನ್ನು ತೋರಿಸಲಿಲ್ಲ. ಯೂದನು ತನ್ನ ಕರ್ತನನ್ನು ಹಿಡಿದು ಕೊಟ್ಟ ನಂತರ ಈ ರೀತಿ ಪ್ರಲಾಪಿಸಿದನು: “ತಪ್ಪಿಲ್ಲದವನನ್ನು ಮರಣಕ್ಕೆ ಒಪ್ಪಿಸಿ ಕೊಟ್ಟು ಪಾಪ ಮಾಡಿದೆನು.” ಮನಸ್ಸಾಕ್ಷಿಯ ವೇದನೆಯಿಂದಲೂ ಮುಂದಣ ನ್ಯಾಯ ತೀರ್ಪಿನ ಭಯದಿಂದಲೂ ತಾನು ಮಾಡಿದ್ದು ತಪ್ಪೆಂದು ಒಪ್ಪಿಕೊಳ್ಳುವ ಹಾಗೆ ಆತನ ಅಪರಾಧದ ಮನಸ್ಸು ಆತನನ್ನು ಬಲಾತ್ಕಾರ ಪಡಿಸಿತು. ತಾನೆಸಗಿದ ದುÁ್ಕರ್ಯದ ದೆಸೆಯಿಂದ ಮುಂದೆ ತನಗೆ ಸಂಭವಿಸಬಹುದಾದ ಶಿಕ್ಷೆಯ ಭಯವು ಆತನನ್ನು ತತ್ತರಿಸುವಂತೆ ಮಾಡಿತು. ಆದರೆ ಇಸ್ರಯೇಲ್ಯರ ಪರಿಶುದ್ಧನನ್ನು ತಿರಸ್ಕಾರ ಮಾಡಿದನೆಂಬ ಮತ್ತು ಪಾಪರಹಿತನಾದ ದೇವ ಕುಮಾರನಾದ ಯೇಸುಕ್ರಿಸ್ತನನ್ನು ಶತ್ರುಗಳಿಗೆ ಒಪ್ಪಿಸಿ ಕೊಟ್ಟನೆಂಬ ನಿಜವಾದ ಮಾನಸಾಂತರವು ಆತನಲ್ಲಿರಲಿಲ್ಲ. ಫರೋನನೂ ಸಹ ದೇವರಿಂದ ಬಾಧಿಸಲ್ಪಟ್ಟಾಗ ಮುಂದಣ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಮಾನಸಾಂತರ ಪಟ್ಟನು. ಇವರೆಲ್ಲರೂ ಪಾಪದ ಫಲಗಳಿಂದ ಪ್ರಾಪ್ತವಾಗುವ ತೊಂದರೆಗಳಿಗೆ ಮಾತ್ರ ಭಯ ಪಟ್ಟು ಪಶ್ಚಾತ್ತಾಪ ಪಟ್ಟರೇ ವಿನ: ಪಾಪದ ನಿಮಿತ್ತವಾಗಿಯೇ ಪಶ್ಚಾತ್ತಾಪ ಪಡಲಿಲ್ಲ. ಆದರೆ ಮಾನವನ ಹೃದಯವು ದೇವಾತ್ಮನ ನಡೆಯಿಸುವಿಕೆಗೆ ಒಪ್ಪಿದಾಗ ಆತನ ಮನೋಸಾಕ್ಷಿಯು ಎಚ್ಚೆತ್ತು ಸ್ವರ್ಗ ಮತ್ತು ಮತ್ರ್ಯಲೋಕಗಳಿಗೆ ಆಸ್ತಿವಾರವಾಗಿರುವ ದೈವಾಜ್ಞೆಗಳ ಆಳವನ್ನು ಮತ್ತು ಅವುಗಳ ಪರಿಶುದ್ಧತೆಯನ್ನು ಆತನು ಅರಿತುಕೊಳ್ಳುವನು. “ಆ ಬೆಳಕೇ ಪ್ರತಿ ಮನುÀ್ಯನಿಗೂ ಬೆಳಕನ್ನು ಕೂಡುವಂಥಾದ್ದಾಗಿತ್ತು.” ನಿಜವಾದ ಬೆಳಕು ಮಾನವನ ಅಂತರಾತ್ಮವನ್ನು ಪ್ರವೇಶಿಸಿದರೆ ಕತ್ತಲೆಯಲ್ಲಿ ಅಡಗಿರುವ ವಸ್ತುಗಳು ಪ್ರಕಾಶಕ್ಕೆ ಬರುತ್ತವೆ. ಮನುÀ್ಯನ ಹೃದಯದಲ್ಲಿರುವ ಪಾಪಗಳೂ ಅಪರಾಧಗಳೂ ಅವನಿಗೆ ತಿಳಿದೇ ಇರುತ್ತವೆ. ಯೆಹೋವನ ನೀತಿಯು ಪಾಪಾತ್ಮನಿಗೆ ಮನದಟ್ಟಾದಾಗ ಹೃದಯಗಳನ್ನು ಪರಿಶೋಧಿಸುವ ಆತನ ಎದುರಿಗೆ ಪಾಪಿಸು ತನ್ನ ಪಾಪಾವಸ್ಥೆಯಲ್ಲಿ ನಿಲ್ಲಲು ಹೆದರುವನು. ದೇವರ ಪ್ರೀತಿಯನ್ನು ಪರಿಶುದ್ಧತ್ವದ ಸೌಂದರ್ಯವನ್ನೂ ಅದರಿಂದ ಲಭಿಸುವ ಆನಂದವನ್ನೂ ಈತನು ಮನದಟ್ಟು ಮಾಡಿಕೊಳ್ಳುವನು. ಆಗ ಆತನು ತನ್ನ ಪಾಪಗಳಿಂದ ಬಿಡುಗಡೆಯನ್ನು ಹೊಂದಿ ಸ್ವರ್ಗದೊಡನೆ ಅನ್ಯೋನ್ಯ ಸಂಬಂ ಧವನ್ನು ಹೊಂದುವನು. ಪಾಪ ಮಾಡಿದ ಮೇಲೆ ದಾವೀದನು ತಾನು ಮಾಡಿರುವ ಪ್ರಾರ್ಥನೆಯು ಮಾನಸಾಂತರದ ನೈಜ ಲಕ್ಷಣವನ್ನು ತೋರಿಸಿ ಕೊಡುತ್ತದೆ. ದಾವೀದನ ಮಾನಸಾಂತರವು ಯಾಥಾರ್ಥವಾದದ್ದೂ, ಆಳವಾದದ್ದೂ ಆಗಿತ್ತು. ಆತನು ತನ್ನ ಅಪರಾಧದ ವಿಚಾರ ಯಾವ ನೆಪವನ್ನೂ ಹೇಳಲಿಲ್ಲ; ದೈವಕೋಪದಿಂದ ತಪ್ಪಿಸಿಕೊಳ್ಳಲು ಆತನು ಆವೇಶದ ಪ್ರಾರ್ಥನೆಯನ್ನು ಮಾಡಲಿಲ್ಲ. ದಾವೀದನು ತನ್ನ ಪಾಪದ ಭೀಕರ ರೂಪವನ್ನು ತಾನೇ ಗ್ರಹಿಸಿಕೊಂಡನು; ತನ್ನ ಆತ್ಮವು ಮಲಿನವಾದುದನ್ನು ತಾನು ಗ್ರಹಿಸಿದನು, ಪಾಪವನ್ನು ಅದರ ನೈಜರೂಪದಲ್ಲಿ ಗ್ರಹಿಸಿದನು. ಕಡೆಗೆ ಪಾಪವನ್ನು ಅಸಹಿಸಿದನು. ದಾವೀದನು ತನ್ನ ಅಪರಾಧದ ಕ್ಷಮೆಗೋಸ್ಕರ ಮಾತ್ರ ಪ್ರಾರ್ಥಿಸಲಿಲ್ಲ; ಆದರೆ ಶುದ್ಧವಾದ ಹೃದಯಕ್ಕೋಸ್ಕರವೂ ಪ್ರಾರ್ಥಿಸಿದನು. ಪರಿಶುದ್ಧತ್ವದ ಸಂತೋÀವು ಲಭಿಸಲೆಂದೂ, ದೇವರೊಂದಿಗೆ ಮರಳಿ ತಾನು ಅನ್ಯೋನ್ಯತೆಯನ್ನು ಹೊಂದಿ ಪ್ರಾರ್ಥಿಸಲು ಯೋಗ್ಯನಾದನೆಂದೂ, ಆತನು ಆಶಿಸಿ ಗ್ರಹಿಸಿ ಮಾಡಿಕೊಂಡನು. ಆತನ ಅಂತರಾತ್ಮನ ನುಡಿಯು ಹೀಗಿದ್ದಿತು: LI 18.2

  “ಯಾವನ ದ್ರೋಹವು ಪರಿಹಾರವಾಗಿದೆಯೋ, ಯಾವನ ಪಾಪವು ಕ್ಷಮಿಸಲ್ಪಟ್ಟಿದೆಯೋ, ........................ ಯಾವನ ಹೃದಯದಲ್ಲಿ ಕಪಟವಿರುವುದಿಲ್ಲವೋ ಅವನು ಧನ್ಯನು” ಮತ್ತು “ಪ್ರೀತಿಸ್ವರೂಪನಾದ ದೇವರೇ ನನ್ನನ್ನು ಕರುಣಿಸು, ಕರುಣಾನಿಧಿಯೇ ನನ್ನ ದ್ರೋಹಗಳನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋÀವನ್ನು ಪರಿಹರಿಸಿ ನನ್ನನ್ನು ಶುದ್ಧಗೊಳಿಸು ..................... ಆಗ ನನ್ನ ನಾಲಿಗೆಯು ಉತ್ಸಾಹದಿಂದ ನಿನ್ನ ರಕ್ಷಣೆಯನ್ನು ಕೊಂಡಾಡುವುದು.”LI 20.1

  ಈ ವಿಧವಾದ ಮಾನಸಾಂತರವು ನಮ್ಮ ಶಕ್ತಿಗೆ ಮೀರಿದ್ದು; ಸ್ವರ್ಗಲೋಕವನ್ನೇರಿ ಮನುÀ್ಯರಿಗೆ ಬಹುಮಾನಗಳನ್ನು ಮಾಡಿದ ಕ್ರಿಸ್ತನ ಶಕ್ತಿಯಿಂದ ಇದು ನಮಗೆ ದೊರಕುತ್ತದೆ. ನಿಜವಾದ ಮಾನಸಾಂತರಕ್ಕೆ ಕ್ರಿಸ್ತನೇ ಮೂಲ.LI 20.2

  ಮನುÀ್ಯರು ಈ ವಿಚಾರದಲ್ಲಿ ತಪ್ಪು ಅಭಿಪ್ರಾಯವನ್ನು ಇಟ್ಟುಕೊಂಡಿರುತ್ತಾರೆ ‘ಆದುದರಿಂದಲೇ ಕ್ರಿಸ್ತನು ಕೊಡಲು ಇÀ್ಟ ಪಡುವ ಸಹಾಯವು ಅವರಿಗೆ ದೊರಕುವುದಿಲ್ಲ. ಅವರು ಕ್ರಿಸ್ತನ ಬಳಿಗೆ ಬರುವ ವೊದಲು ಮಾನಸಾಂತರ ಪಡಬೇಕಂದೂ, ಮತ್ತು ಮಾನಸಾಂತರವು ಪಾಪ ಪರಿಹಾರದ ದಾರಿಯೆಂದೂ ಹೇಳುತ್ತಾರೆ. ಪಾಪಪರಿಹಾರಕ್ಕೆ ವೊದಲು ಮಾನಸಾಂತರವು ಅವಶ್ಯಕವೆಂಬುದು ನಿಜವಾದ ಸಂಗತಿಯಾಗಿದೆ; ಯಾಕಂದರೆ ಮುರಿದು ಹೋದ ಮತ್ತು ಜಜ್ಜಿದಂತಹ ಹೃದಯಗಳನ್ನು ಹೊಂದಿದವರೇ ತಮಗೆ ಒಬ್ಬ ರಕ್ಷಕನು ಅಗತ್ಯವೆಂದು ಅರಿತು ಕೊಳ್ಳುತ್ತಾರೆ. ಆದರೆ ಪಾಪಿಯಾದರೋ, ತಾನು ಇನ್ನೂ ಮಾನಸಾಂತರ ಪಟ್ಟಿಲ್ಲವಲ್ಲಾ ಎಂದೂ, ಕ್ರಿಸ್ತನ ಬಳಿಗೆ ಬರುವುದು ಹೇಗೆ ಎಂದೂ ಹೇಳಿ ತಡಮಾಡಬಹುದೇ? ಕ್ರಿಸ್ತನ ಬಳಿಗೆ ಸಮೀಪಿಸಲು ಮಾನಸಾಂತರವೂ ಒಂದು ಅತಂಕವಾಗಿರಬಹುದೇ? ‘ಎಲೈ ಕÀ್ಟಪಡುವವರೇ ಹೊರ: ಹೊತ್ತವರೇ ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿ ಕೊಡುವೆನು’ ಎಂಬ ಕ್ರಿಸ್ತನ ಕರೆಯುವಿಕೆಗೆ ವೊದಲು ಪಾಪಿಯು ಪಶ್ಚಾತ್ತಾಪ ಪಡಬೇಕಾಗಿತ್ತು ಎಂದು ಸತ್ಯವೇದವು ಬೋಧಿಸುವುದಿಲ್ಲ. ಕ್ರಿಸ್ತನಿಂದ ಹೊರಡತಕ್ಕ ಶಕ್ತಿಯೇ ಮನುÀ್ಯರಲ್ಲಿ ನಿಜವಾದ ಪಶ್ಚಾತ್ತಪವನ್ನು ಹುಟ್ಟಿಸುತ್ತದೆ. “ದೇವರು ಆತನನ್ನೇ ಇಸ್ರಯೇಲ್ಯ ಜನರಿಗೆ ಮಾನಸಾಂತರವನ್ನೂ ಪಾಪಪರಿಹಾರವನ್ನೂ ದಯ ಪಾಲಿಸುವುದಕ್ಕಾಗಿ ನಾಯಕನೆಂತಲೂ ರಕ್ಷಕನೆಂತಲೂ ತನ್ನ ಬಲಗೈಯಿಂದ ಉನ್ನತ ಸ್ಥಾನಕ್ಕೆ ಏರಿಸಿದ್ದಾನೆ.” ಎಂದು ಪೇತ್ರನು ಹೇಳಿದ ಈ ಸಂಗತಿಯನ್ನು ಪರಿÁ್ಕರ ಮಾಡಿಕೊಟ್ಟಿದ್ದಾನೆ. ಕ್ರಿಸ್ತನಿಲ್ಲದೆ ಮಾನಸಾಂತರವಿಲ್ಲ; ಕ್ರಿಸ್ತನಿಲ್ಲದೆ ಪಾಪಕ್ಷಮೆಯಿಲ್ಲ; ಕ್ರಿಸ್ತನಿಲ್ಲದೆ ಮನಸ್ಸಾಕ್ಷಿಯ ಎಚ್ಚರವಿಲ್ಲ; ಇವುಗಳೆಲ್ಲಕ್ಕೂ ಕ್ರಿಸ್ತನೇ ಮೂಲನಾಗಿದ್ದಾನೆ. ಎಲ್ಲಾ ವಿಧವಾದ ಸತ್ಪ್ರೇರಣೆಗಳಿಗೂ ಕ್ರಿಸ್ತನೇ ಮೂಲ. ಆತನು ಮಾತ್ರ ನಮ್ಮಲ್ಲಿ ಪಾಪದ ಮೇಲೆ ದ್ವೇÀವನ್ನು ಹುಟ್ಟಿಸುವನು. ಸತ್ಯಸಂಧರಾಗಿಯೂ ಪರಿಶುದ್ಧ ರಾಗಿಯೂ ನಡೆಯಬೇಕೆಂಬ ಆಶೆ ಮತ್ತು ಪಾಪದ ಮನವರಿಕೆಗಳನ್ನು ಮನುÀ್ಯರಲ್ಲಿ ಹುಟ್ಟಿಸುವಾಗ ಕ್ರಿಸ್ತನ ಆತ್ಮವು ಆ ಮನುÀ್ಯನ ಅಂತರ್ಯದಲ್ಲಿ ತೀವ್ರತೆಯನ್ನುಂಟುಮಾಡಿ ಅವರ ಮನಸ್ಸನ್ನು ಚೇತನಗೊಳಿಸುತ್ತದೆಂಬುದಕ್ಕೆ ನಿದರ್ಶನವಾಗಿದೆ. “ನಾನು ಭೂಮಿಯಿಂದ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳೆದುಕೊಳ್ಳವೆನು” ಎಂದು ಕ್ರಿಸ್ತನು ಹೇಳಿದನು. ಕ್ರಿಸ್ತನು ತಾನು ಪಾಪಾತ್ಮರ ಸಲುವಾಗಿ ಸಾಯುವವನಾಗಿದ್ದಾನೆಂದು ಪ್ರಕಟಿಸಲ್ಪಡಬೇಕು. ಕಲ್ವಾರಿಗುಡ್ಡದ ಮೇಲೆ ದೇವರ ಕುರಿಮರಿಯನ್ನು ನಾವು ನೋಡುವಾಗ ರಕ್ಷಣೆಯ ಗುಟ್ಟು ನಮಗೆ ಪ್ರಕಟವಾಗುತ್ತದೆ. ಮತ್ತು ದೇವರ ಒಳ್ಳೇತನವು ನಮ್ಮನ್ನು ಮಾನಸಾಂತರಕ್ಕೆ ನಡೆಸುತ್ತದೆ.LI 20.3

  ಕ್ರಿಸ್ತನ ಬಲಿಯರ್ಪಣೆಯಲ್ಲಿ ಕಂಡು ಬರುವ ಪ್ರೀತಿಯು ತಿಳಿಯಲಸದಳವಾಗಿದೆ. ಪಾಪಿಯು ಇದನ್ನು ಧ್ಯಾನಿಸಿದಂತೆಲ್ಲಾ ಆತನ ಹೃದಯವನ್ನು ಕರಗಿಸಿ ಅವನ ಹೃದಯದಲ್ಲಿ ಈ ಭಾವಚಿತ್ರವು ನೆಲೆಯಾಗಿ ನಿಂತು ಮಾನಸಾಂತರವನ್ನುಂಟು ಮಾಡುತ್ತದೆ. ನಾವು ಕ್ರಿಸ್ತನ ಬಳಿಗೆ ಎಳೆಯಲ್ಪಡುತ್ತದ್ದೇವೆ ಎಂಬ ಪರಿಜ್ಞಾನವು ಉಂಟಾಗುವುದಕ್ಕೆ ವೊದಲೇ ಕೆಲವರು ತಮ್ಮ ಪಾಪದ ವಿಚಾರ ನಾಚಿಕೆ ಪಟ್ಟು ತಮ್ಮ ದಾರಿಗಳನ್ನು ತ್ಯಜಿಸಬಹುದು. ಒಳ್ಳೆಯವನ್ನು ಮಾಡಬೇಕೆಂದು ಯಥಾರ್ಥವಾಗಿ ಆಶೆಪಟ್ಟು ಪುನ: ತನ್ನ ನಡೆತೆಯನ್ನು ಮಾರ್ಪಡಿಸಿಕೊಂಡು ನಡೆಯಬೇಕೆಂದು ಮನುÀ್ಯನು ಪ್ರಯತ್ನಿಸುವಾಗಲೆಲ್ಲಾ ಕ್ರಿಸ್ತನ ಶಕ್ತಿಯು ಅವನನ್ನು ತನ್ನ ಕಡೆಗೆ ಸೆಳೆಯುತ್ತಾ ಇದೆಯೆಂದು ನಾವು ತಿಳಿದುಕೊಳ್ಳಬಹುದು. ಯಾವುದೋ ಶಕ್ತಿಯು ಅವರಿಗೆ ತಿಳಿಯದ ರೀತಿಯಲ್ಲಿ ಅವರ ಮನಸ್ಸಾತ್ಮಗಳನ್ನು ಉದ್ರೇಕಿಸಿ ಅವರ ಬಾಹ್ಯ ಜೀವಮಾನವನ್ನು ಬದಲಾಯಿಸುತ್ತಾ ಬರುವುದು. ತಮ್ಮ ಪಾಪಗಳಿಂದ ಕ್ರಿಸ್ತನನ್ನು ಘಾಯಪಡಿಸಿ ಆತನನ್ನು ಶಿಲುಬೆಗೆ ಏರಿಸಿದ ರೀತಿಯನ್ನು ಕ್ರಿಸ್ತನು ಅವರಿಗೆ ತೋರಿಸಿ, ಅವರನ್ನು ತನ್ನ ಬಳಿಗೆ ಎಳೆದಾಗ ಅವರ ಮನಸ್ಸಾಕ್ಷಿಯು ಎಚ್ಚರಗೊಳ್ಳುತ್ತದೆ. ತಮ್ಮ ಪಾಪಜೀವನದ ಹೊಲಸೂ, ಪಾಪಜೀವನದ ಕೊಳಚೆಯಲ್ಲಿ ಬಿದ್ದಿರುವ ಅವರ ಆತ್ಮನ ಸ್ಥಿತಿಯೂ ಅವರಿಗೆ ಮನದಟ್ಟಾಗುವುದು. ಆಗ ಅವರಿಗೆ ಸ್ವಲ್ಪ ಮಟ್ಟಿಗೆ ಕ್ರಿಸ್ತನ ಶುದ್ಧತೆಯು ಮಂದಟ್ಟಾಗಿ ಪಾಪಿಯು ಅಶುದ್ಧತ್ವದಿಂದ ಕೂಡಿ ಪಾಪವು ಎÀ್ಟು ಭಯಂಕರವಾದರೂ ಅದರ ನಿವಾರಣೆಗೆ ಇಂಥಾ ದೊಡ್ಡ ಬಲಿಯನ್ನು ಅದು ಕೇಳುತ್ತದೆಯೇ? ನಾವು ನಾಶವಾಗದೆ ನಿತ್ಯ ಜೀವವನ್ನು ಪಡೆಯಲು ಇಂಥಾ ಪ್ರೀತಿ, ಇಂಥಾ ಶ್ರಮೆ, ಇಂಥಾ ದೈನ್ಯತೆ ಇವುಗಳನ್ನು ಅನುಭವಿಸಬೇಕಾಯಿತೇ?LI 21.1

  ಈ ಪ್ರೀತಿಯನ್ನು ಪಾಪಿಯು ಧಿಕ್ಕರಿಸಬಹುದು, ಕ್ರಿಸ್ತನ ಬಳಿಗೆ ಎಳೆಯಲ್ಪಡಲು ಇÀ್ಟಪಡದಿರಬಹುದು; ಆದರೆ ಅವನು ಹಾಗೆ ಮಾಡದೆ ಕ್ರಿಸ್ತನ ಬಳಿಗೆ ಬಂದರೆ ಮನುÀ್ಯರ ರಕ್ಷಣೆಗೋಸ್ಕರ ದೇವರು ಅವರಿಗೆ ಏರ್ಪಡಿಸಿರುವ ಸಂಕಲ್ಪವು ಗೊತ್ತಾಗಿ ಆತನನ್ನು ಪಶ್ಚಾತ್ತಾಪದೊಡನೆ ಶಿಲುಬೆಯ ಬಳಿಗೆ ಬರುವಂತೆ ಮಾಡಿ ದೈವಕುಮಾರನು ಪಾಪಿಗಳ ಸಲುವಾಗಿಯೇ ಈ ಶ್ರಮೆಯನ್ನು ಅನುಭವಿಸಿದನೆಂದು ಮನದಟ್ಟು ಮಾಡುವುದು. ಇದೇ ಬಗೆಯಾದ ಸಂಕಲ್ಪವು ಪ್ರಕೃತಿಯಲ್ಲೂ ಮಾನವನಿಗೆ ಗೋಚರವಾಗಿ, ವಿವರಿಸಲಸದಳವಾದ ರೀತಿಯಲ್ಲಿ ತಾನು ಹೊಂದದೇ ಇರುವುದನ್ನು ಆ ಪ್ರಕೃತಿಯಿಂದ ಹೊಂದುವ ಆಶೆಯನ್ನುಂಟು ಮಾಡುತ್ತದೆ. ಭೂಲೋಕದ ಯಾವು ವಿಚಾರಗಳಾಗಲಿ ಮನುÀ್ಯನನ್ನು ತೃಪ್ತಿಗೊಳಿಸಲಾರವು. ದೈವಾತ್ಮವು ಅವರೊಂದಿಗೆ ವಾದಿಸಿ, ಕ್ರಿಸ್ತನ ಮೂಲಕ ಮಾತ್ರವೇ ದೊರಕುವ ರಕ್ಷಣೆ, ಸಂತೋÀ ಮತ್ತು ಪರಿಶುದ್ಧತೆಗಳನ್ನು ಅವರು ಹುಡುಕುವಂತೆ ಮಾಡು ವನು. ಕ್ರಿಸ್ತನು ಪ್ರತ್ಯಕ್ಷವಾದ ಅಥವಾ ಪರೋಕ್ಷವಾದ ಪ್ರೇರೇಪಣೆಗಳಿಂದ ಮಾನಸಿಕ ತೃಪ್ತಿಯನ್ನು ಕೊಡದೆ ಲೌಕೀಕವಾದ ಆಶೆಗಳಿಂದ ಮನುÀ್ಯನನ್ನು ತಪ್ಪಿಸಿ ತನ್ನಿಂದ ಸಿಕ್ಕುವ ಅಗಣಿತಾಶೀರ್ವಾದಗಳ ಕಡೆಗೆ ಎಳೆಯುತ್ತಿರುತ್ತಾನೆ. ಭೂಲೋಕದವುಗಳಿಂದ ತೃಪ್ತಿಯನ್ನು ಹೊಂದಲು ನಿರರ್ಥಕವಾಗಿ ಯತ್ನಿಸುತ್ತಿರುವ ಆತ್ಮಗಳಿಗೆ ಈ ದೈವಸಂದೇಶವನ್ನು ಕೊಡುತ್ತಿದ್ದಾನೆ: “ದಾಹವುಳ್ಳವನು ಬರಲಿ ಇÀ್ಟವುಳ್ಳವುನು ಜೀವಜಲವನ್ನು ಕ್ರಯವಿಲ್ಲದೇ ತಕ್ಕೊಳ್ಳಲಿ” ಪ್ರಿಯ ವಾಚಕನೇ ಭೂಲೋಕವು ಕೊಡುವುದಕ್ಕಿಂತಲೂ ಉತ್ತಮವಾದದ್ದು ನಿನಗೆ ಬೇಕೆಂದು ನೀನು ಇÀ್ಟಪಡುವಿಯಾದರೆ, ನೀನು ಇದನ್ನು ದೈವವಾಣಿಯೆಂದು ಗ್ರಹಿಸಕೊಳ್ಳು”. ನಿನ್ನಲ್ಲಿ ಪಶ್ಚಾತ್ತಾಪ ಹುಟ್ಟುವಂತೆಯೂ, ಕ್ರಿಸ್ತನ ಉದಾರವಾದ ಪ್ರೀತಿಯೂ ಆತನ ಪರಿಶುದ್ಧತೆಯೂ ಪ್ರಕಟವಾಗುವಂತೆ ನೀನು ಪ್ರಾರ್ಥಿಸು. ಮನುÀ್ಯರನ್ನೂ ದೇವರನ್ನೂ ಪ್ರೀತಿ ಮಾಡಬೇಕೆಂಬ ದೈವನಿಯಮವು ಕ್ರಿಸ್ತನ ಜೀವಮಾನದಿಂದ ಉದಾಹರಿಸಲ್ಪಟ್ಟಿದೆ. ಪರಪ್ರೀತಿ ಮತ್ತು ಔದರ್ಯಗಳು ಆತನ ಆತ್ಮದ ಲಕ್ಷಣಗಳಾಗಿದ್ದವು. ನಾವು ಆತನನ್ನು ನೋಡಿದಂತೆಲ್ಲಾ ಆತನ ಆತ್ಮದ ಬೆಳಕು ನಮ್ಮ ಮೇಲೆ ಚೆಲ್ಲಿ ಹೊಳೆದು ನಮ್ಮ ಹೃದಯದ ಪಾಪಸ್ಥಿತಿಯು ಬಯಲಾಗುತ್ತದೆ.LI 22.1

  ನಮ್ಮ ಜೀವಮಾನವು ನ್ಯಾಯವಾಗಿದೆಯೆಂದೂ, ನಮ್ಮ ನಡತೆಯು ಸರಿಯಾಗಿದೆಯೆಂದೂ, ಸಾಧಾರಣ ಪಾಪಿಗಳಂತೆ ನಾವು ದೇವರ ಸಮ್ಮುಖದಲ್ಲಿ ತಗ್ಗಿಸಿ ಕೊಳ್ಳಬೇಕಾದ ಅಗತ್ಯವಿಲ್ಲವೆಂದೂ ನಿಕೋದೇಮನಂತೆ ನಾವೂ ನಮ್ಮನ್ನು ಶ್ಲಾಘಿಸಿಕೊಳ್ಳಬಹುದು. ಆದರೆ ನಮ್ಮ ಆತ್ಮಗಳಿಗೆ ಕ್ರಿಸ್ತನಿಂದ ಬೆಳಕು ಪ್ರವೇಶಿಸಿದ ನಂತರ ನಾವು ಎÀ್ಟು ಅಶುದ್ಧರೆಂದೂ, ಎÀ್ಟು ಸ್ವಾರ್ಥಪರರೆಂದೂ, ನಮಗೂ ದೇವರಿಗೂ ಇರುವ ಶತೃತ್ವದಿಂದ ಜೀವಮಾನವು ಎÀ್ಟು ಅಸಹ್ಯವಾಗಿದೆಯೆಂದೂ ನಾವೇ ಗ್ರಹಿಸಿ ಕೊಳ್ಳಬಹುದು. ಆಗ ನಮ್ಮ ನೀತಿಯು ಹರಿದ ಚಿಂದಿ ಬಟ್ಟೆಗಳಿಗೆ ಸಮನಾಗಿದೆಯೆಂದೂ, ಯೇಸುಕ್ರಿಸ್ತನ ರಕ್ತವು ಮಾತ್ರ ನಮ್ಮ ಎಲ್ಲಾ ದುÀ್ಕøತ್ಯಗಳನ್ನು ತೊಳಿದು ಆತನ ಸಾರೂಪ್ಯಕ್ಕೆ ನಮ್ಮ ಹೃದಯಗಳನ್ನು ನವೀಕರಿಸುವುದೆಂದೂ ನಮಗೆ ತಿಳಿದು ಬರುವುದು. ದೈವಮಹಿಮೆಯ ಒಂದು ಕಿರಣವಾಗಲಿ, ಅಥವಾ ಕ್ರಿಸ್ತನ ಪರಿಶುದ್ಧತ್ವದ ಬೆಳಕಾಗಲಿ ನಮ್ಮ ಹೃದಯವನ್ನು ಹೊಕ್ಕರೆ, ನಮ್ಮಲ್ಲಿರುವ ಸಕಲ ಅಶುದ್ಧತೆಯನ್ನು ನಮ್ಮ ಮನಸ್ಸು ನೋಯುವ ರೀತಿಯಲ್ಲಿ ನಮಗೆ ವಿÀದಪಡಿಸಿ, ನಮ್ಮ ಗುಣನಡತೆ ಗಳಲ್ಲಿರುವ ಎಲ್ಲಾ ನ್ಯೂನಾತಿರೇಕಗಳನ್ನೂ ಬಹಿರಂಗಪಡಿಸುತ್ತದೆ. ನಮ್ಮ ಹೃದಯಗಳ ದುರಾಶೆಗಳನ್ನೂ, ಅವಿಶ್ವಾಸಗಳನ್ನೂ, ನಮ್ಮ ತುಟಿಗಳ ಹೊಲಸುತನವನ್ನೂ ಅದು ಬಯಲು ಮಾಡು ತ್ತದೆ. ಪಾಪಾತ್ಮನು ದೇವರಿಗೆ ಸ್ವಾಮಿಭಕ್ತಿಯನ್ನು ಸಲ್ಲಿಸದೆ ಇರೋಣವೂ, ದೈವಾಜ್ಞೆಗಳನ್ನು ನಿರರ್ಥಕ ಮಾಡೋಣವೂ, ಬೆಳಕಿಗೆ ಬಂದು ಹೃದಯವನ್ನು ಪರಿಶೋಧಿಸುವ ದೇವರಾತ್ಮನ ಶಕ್ತಿಗೆ ಆತನ ಹೃದಯವು ನಾನಾ ರೀತಿ ಪರಿತಪಿಸುವುದು. ಆಗ ಅವನು ಕ್ರಿಸ್ತನ ಪರಿಶುದ್ಧವಾದ ನಡತೆಯನ್ನು ತಿಳಿದುಕೊಂಡು ತನ್ನ ನಡತೆಯ ವಿಚಾರ ಅಸಹ್ಯಪಡುವನು. ಪ್ರವಾದಿಯಾದ ದಾನಿಯೇಲನು ತನ್ನ ಬಳಿಗೆ ಕಳುಹಿಸಲ್ಪಟ್ಟ ದೇವದೂತನ ಪ್ರಭೆಯನ್ನು ಕಂಡು ತನ್ನ ಬಲಹೀನತೆಯನ್ನು ಅಸಂಪೂರ್ಣತೆಯನ್ನೂ ತಿಳಿದು ದಿಗ್ಭ್ರಾಂತನಾದನು. ತಾನು ಕಂಡ ಅದ್ಭುತ ರೂಪವನ್ನು ಹೀಗೆ ವರ್ಣಿಸುತ್ತಾನೆ.LI 23.1

  “ನಾನು ಏಕಾಂಗಿಯಾಗಿ ಉಳಿದು ಆ ಅದ್ಭುತ ದರ್ಶನವನ್ನು ಕಂಡು ಶಕ್ತಿಯನ್ನೆಲ್ಲಾ ಕಳೆದುಕೊಂಡೆನು. ನನ್ನ ಗಾಂಭೀರ್ಯವು ಹಾಳಾಯಿತು, ನಿತ್ರಾಣನಾದೆನು.” ದಾನಿಯೇಲನಂತೆ ಯಾರು ಗ್ರಹಿಸಿಕೊಳ್ಳುತ್ತಾರೋ ಅಂಥವವರು ಸ್ವಾರ್ಥತೆಯನ್ನು ದ್ವೇಷಿಸುತ್ತಾರೆ, ಸ್ವಪ್ರೀತಿಯನ್ನು ತ್ಯಜಿಸುತ್ತಾರೆ, ಕ್ರಿಸ್ತನ ಪರಿಶುದ್ಧತ್ವದ ಮೂಲಕ ಹೃದಯ ಸ್ವಚ್ಛತೆಯನ್ನು ಹೊಂದಿ ದೈವಕಟ್ಟಳೆಗಳನ್ನು ಕೈಕೊಂಡು ಆತನೊಂದಿಗೆ ಐಕ್ಯವಾಗಿ ಕ್ರಿಸ್ತನ ನಡತೆಯನ್ನು ಪಡೆಯಲು ಯತ್ನಿಸುತ್ತಾರೆ.LI 24.1

  “ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಶಿ” ಎಂಬದಾಗಿ ಪೌಲನು ತಿಳಿಸುವವ ನಾಗಿರುತ್ತಾನೆ. ಬಾಹ್ಯಾಡಂಬರ ಪ್ರಕಾರ ಆತನು ನಿರಪರಾಧಿಯೆಂದು ಕಂಡರೂ, ಧರ್ಮಶಾಸ್ತ್ರವನ್ನು ಆತ್ಮೀಕ ದೃಷ್ಟಿಯಿಂದ ಪರೀಕ್ಷಿಸಿದ್ದಲ್ಲಿ ಆತನು ಅಪರಾಧಿಯಾಗೆಯೇ ಇದ್ದು. ಜನರು ಧರ್ಮಶಾಸ್ತ್ರದ ಅರ್ಥಮಾಡುವ ಬಾಹ್ಯ ತೋರಿಕೆಯಂತೆ ಆತನು ಪಾಪಕ್ಕೆ ದೂರವಾಗಿದ್ದುನು; ಆದರೆ ಆತನು ಧರ್ಮಶಾಸ್ತ್ರದ ಗೂಢಾರ್ಥವನ್ನು ಗ್ರಹಿಸಿ ಅದರೊಡನೆ ತನ್ನನ್ನು ಹೋಲಿಸಿಕೊಂಡಾಗ ತನ್ನನ್ನು ತಾನು ತಗ್ಗಿಸಿಕೊಂಡು ಹೇಳುವುದೇನೆಂದರೆLI 24.2

  “ನಾನು ವೊದಲು ಧರ್ಮಶಾಸ್ತ್ರವಿಲ್ಲದವನಾಗಿದು ಜೀವದಿಂದಿದ್ದನೆ; ಆಜ್ಞೆಯು ಬಂದಾಗ ಪಾಪಕ್ಕೆ ಜೀವ ಬಂತು, ನಾನು ಸತ್ತೆನು” ದೈವಕಟ್ಟಳೆಗಳ ಆತ್ಮೀಯ ತತ್ವಾರ್ಥವನ್ನು ಆತನು ತಿಳಿದಾಗ ಪಾಪದ ಕರಾಳ ಸ್ವರೂಪವನ್ನು ಗ್ರಹಿಸಿ ತನ್ನ ಅಹಂಕಾರವನ್ನು ತ್ಯಜಿಸಿದನು. ಎಲ್ಲಾ ಪಾಪಗಳು ಒಂದೇ ತರಗತಿಗೆ ಸೇರಿದವುಗಳೆಂದು ದೇವರು ಭಾವಿಸುವುದಿಲ್ಲ, ಆತನ ದೃಷ್ಟಿಯಲ್ಲಿ ಪಾಪದ ಅಂತಸ್ತುಗಳುಂಟು. ಇದರಂತೆಯೇ ಮನುÀ್ಯರೂ ಪರಿಗಣಿಸಲ್ಪಡುತ್ತಾರೆ. ಆದರೆ ಒಂದು ಅಪರಾಧವು ಮನುÀ್ಯನ ದೃಷ್ಟಿಯಲ್ಲಿ ಅಲ್ಪವೆಂದು ಅಲಕ್ಷ್ಯದಿಂದ ಕಾಣಲಾರನು. ಮಾನವರ ತೀರ್ಮಾನವು ಅಸಂಪೂರ್ಣವಾದುದೂ, ಏಕಪಕ್ಷಕ್ಕೆ ನಿಲ್ಲುವಂಥಾದ್ದೂ ಆಗಿರುತ್ತದೆ; ಆದರೆ ದೇವರು ಸಮಸ್ತ ವಿಧವಾದ ಪಾಪಗಳನ್ನು ಅವುಗಳ ನೈಜವಾದ ಬೆಲೆಯಲ್ಲಿಯೇ ತೂಕಮಾಡಿ ನೋಡುತ್ತಾನೆ. ಕುಡುಕನು ತನ್ನಪರಾಧದಿಂದ ನಿರಾಕರಿಸಲ್ಪಟ್ಟು ಸ್ವರ್ಗಬಾಹಿರ ನೆಂಬುದು ಅವನಿಗೆ ತನ್ನ ಪಾಪದ ಫಲದಿಂದ ತಿಳಿಯಬರುತ್ತದೆ. ಅಹಂಕಾರವೂ, ಸ್ವಾರ್ಥಪರತೆಯೂ, ಮತ್ತು ದುರಾಶೆಯೂ ದೇವರಿಂದ ಗದರಿಸಲ್ಪಡದೇ ಹೋಗಲಾರವು. ಈ ಪಾಪಗಳು ದೇವರಿಗೆ ಬಹಳ ಹಗೆಯಾದವು; ಸ್ವರ್ಗದಲ್ಲಿ ನೆಲಸಿರುವ ಆತನ ಸ್ವಾರ್ಥರಹಿತವಾದ ದೈವೀಕ ಗುಣಲಕ್ಷಣಗಳಿಗೆ ಇವು ತೀರಾ ವಿರುದ್ಧವಾದವು. ಅಂತರಂಗವಾದ ಕೆಲವು ದೊಡ್ಡ ಪಾಪಗಳಿಗೆ ಸಿಕ್ಕಿಬಿದ್ದು ನರಳುವವರು ತಮ್ಮ ಪಾಪಗಳ ವಿಚಾರದಲ್ಲಿ ನಾಚಿಕೆ ಪಟ್ಟು, ಕ್ರಿಸ್ತನ ಕ್ಷಮಾಪಣೆ ಮತ್ತು ಕರುಣೆಯು ತಮಗೆ ಅಗತ್ಯವೆಂದು ತಿಳಿದು ಕೊಳ್ಳಬಹುದು; ಆದರೆ ಅಹಂಕಾರಿಗಳಿಗೆ ಇದು ಬೇಕಾಗಿರುವುದಿಲ್ಲ. ಆದುದರಿಂದ ಯಾರು ತಮ್ಮನ್ನು ಕ್ರಿಸ್ತನಿಗೆ ಒಪ್ಪಿಸಿಕೊಡುವುದಿಲ್ಲವೋ ಅಂಥವರು ಕ್ರಿಸ್ತನಿಗೆ ತಮ್ಮ ಹೃದಯಗಳನ್ನು ತೆರೆಯದೆ ಆತನಿಂದ ದೊರೆಯಬಹುದಾದ ಸಕಲ ಉತ್ತಮ ವರಗಳಿಗೂ ಬಾಹಿರರಾಗುತ್ತಾರೆ.LI 24.3

  “ದೇವರೇ, ಪಾಪಿಯಾದ ನನ್ನನ್ನು ಕರುಣಿಸು” ಎಂದು ಪ್ರಾರ್ಥಿಸಿದ ಆ ಸುಂಕದವನು ತನ್ನನ್ನು ತಾನು ಬಹು ಕೆಟ್ಟವನೆಂದೇ ತೀರ್ಮಾನಿಸಿ ಕೊಂಡನು. ತನ್ನ ಪಾಪದ ಹೊರೆಯನ್ನು ದು:ಖದಿಂದಲೂ ನಾಚಿಕೆಯಿಂದಲೂ ದೇವರ ಸನ್ನಿಧಿಗೆ ತಂದು ಆ ಹೊರೆಯಿಂದ ಬಿಡುಗಡೆಯಾಗಲು ದೇವರನ್ನು ಪ್ರಾರ್ಥಿಸಿದನು. ತನ್ನ ಹೃದಯಕ್ಕೆ ದೇವರಾತ್ಮನು ಬಂದು ತನ್ನ ಕೃಪೆಯ ಕೆಲಸವನ್ನು ನಡೆಯಿಸಿ ತನ್ನನ್ನು ಪಾಪದಿಂದ ಬಿಡಿಸಬೇಕೆಂದು ಈತನು ಆಶಿಸಿ ಅದಕ್ಕಾಗಿ ಬೇಡಿಕೊಂಡನು. ಆದರೆ ಜಂಭದಿಂದಲೂ, ಅಹಂಕಾರ-ಸ್ವನೀತಿಯಿಂದಲೂ ಕೂಡಿದ ಫರಿಸಾಯನು ತನ್ನ ಹೃದಯದಲ್ಲಿ ದೇವಾತ್ಮನು ಬಂದು ಕೆಲಸ ನಡಿಸಲು ಅವಕಾಶ ಕೊಡಲಿಲ್ಲ. ನಿನ್ನ ಪಾಪದ ಸ್ಥಿತಿಯು ನಿನಗೆ ಗೊತ್ತಾದರೆ ನಿನ್ನನ್ನು ನೀನೇ ಉತ್ತಮ ಮಾಡಿಕೊಳ್ಳಲು ನಿಲ್ಲಬೇಡ, ಕ್ರಿಸ್ತನ ಬಳಿಗೆ ಬರುವÀ್ಟು ಯೋಗ್ಯರು ನಾವಾಗಿಲ್ಲವೆಂದು ಎÉ್ಟೂೀ ಜನರು ಯೋಚಿಸುತ್ತಾರೆ. ಸ್ವಪ್ರಯತ್ನದಿಂದಲೇ ನೀನು ಉತ್ತಮನಾಗಬಹುದೋ? “ಕೂÀ್ಯನು ತನ್ನ ಚರ್ಮವನ್ನು ಮಾರ್ಪಡಿಸಬಲ್ಲನೇ, ಚಿರತೆಯು ತನ್ನ ಚುಕ್ಕಿಗಳನ್ನು ಬದಲಾಯಿಸೀತೇ? ಹೀಗಾದರೆ ದುÀ್ಟತನದಲ್ಲಿ ಶಿಕ್ಷಿತರಾದ ನೀವು ಶಿÀ್ಟತನದಲ್ಲಿ ಪಡೆಯಬಹುದು.” ದೇವರೊಬ್ಬನಿಂದಲೇ ನಮಗೆ ಸಹಾಯ ದೊರೆಯುತ್ತದೆ. ಬಲಾತ್ಕಾರದ ಒತ್ತಾಯಕ್ಕಾಗಲಿ ಒಳ್ಳೆಯ ಘಳಿಗೆಗಾಗಲಿ, ಕಾಯ ಬೇಕಾಗಿರುವುದಿಲ್ಲ; ನಾವೇ ನಮಗಾಗಿ ಏನನ್ನೂ ಮಾಡಿಕೊಳ್ಳಲಾರೆವು, ನಾವು ಇರುವ ಸ್ಥಿತಿಯಲ್ಲೇ ಕ್ರಿಸ್ತನ ಬಳಿಗೆ ಬರಬೇಕು. ದೇವರು ದಯಾಮಯನು, ಕರುಣಾಸಾಗರನೂ ಆಗಿರುವ ಕಾರಣ ಆತನು ನೇಮಿಸಿರುವ ರಕ್ಷಣಾ ಮಾರ್ಗವನ್ನು ತ್ಯಜಿಸುವವರನ್ನೂ ರಕ್ಷಿಸುವನೆಂಬ ತಪ್ಪು ಅಭಿಪ್ರಾಯದಿಂದ ಯಾರೂ ತಮ್ಮನ್ನು ತಾವೇ ವೋಸಗೊಳಿಸಿ ಕೊಳ್ಳಬಾರದು. ಶಿಲುಬೆಯನ್ನು ನೋಡಿ ತಿಳಿದು ಕೊಳ್ಳುವವರಿಗೆ ಪಾಪದ ಭೀಕರತೆಯು ಗೊತ್ತಾಗುವುದು. ದೇವರು ಒಳ್ಳೆಯವನೆಂದು ಹೇಳುವವರು ತಮ್ಮ ದೃಷ್ಟಿಯನ್ನು ಕಲ್ವಾರಿ ಗುಡ್ಡದ ಕಡೆಗೆ ಎತ್ತಲಿ. ಮಾನವಜಾತಿ ರಕ್ಷಣೆ ಹೊಂದುವ ಸಲುವಾಗಿ ಬೇರೊಂದು ದಾರಿಯಿಲ್ಲದ್ದರಿಂದಲೂ, ಮಾನವರನ್ನು ಹೊಲಸು ಮಾಡುವ ಪಾಪಶಕ್ತಿಗೆ ತ್ಯಾಗಬಲಿಯು ಅಗತ್ಯವಾದುದರಿಂದಲೂ, ಮಾನವನು ಸ್ವರ್ಗೀಯ ಅನ್ಯೋನ್ಯತೆಯನ್ನು ಹೊಂದಲು ಈ ತ್ಯಾಗಬಲಿಯು ಅಗತ್ಯವಾದು ದರಿಂದಲೂ, ಈ ತ್ಯಾಗವಿಲ್ಲದೆ ಮನುÀ್ಯನು ಆತ್ಮೀಯ ಜೀವಮಾನದಲ್ಲಿ ಭಾಗಿಯಾಗಲು ಸಾಧ್ಯವಿಲ್ಲದ್ದರಿಂದಲೂ, ಕ್ರಿಸ್ತನು ನರಾವತಾರ ಎತ್ತಿ ಮಾನವರ ಅಪರಾಧಗಳನ್ನು ತನ್ನ ಮೇಲೆ ಹಾಕಿಕೊಂಡು ಅವರಿಗೆ ಪ್ರತಿಯಾಗಿ ತಾನೇ ಶ್ರಮೆ, ಮರಣಗಳನ್ನು ಅನುಭವಿಸಿ ಅವರನ್ನು ರಕ್ಷಿಸಿದನು. ದೇವಕುಮಾರನ ಪ್ರೀತಿ, ತ್ಯಾಗ ಮತ್ತು ಶ್ರಮೆಗಳು ಪಾಪದ ಭಯಂಕರ ಸ್ವರೂಪವನ್ನು ಪ್ರತ್ಯಕ್ಷಪ್ರಮಾಣ ಪೂರ್ವಕವಾಗಿ ತೋರಿಸಿಕೊಡುವುದರ ಮೂಲಕ ನಾವು ಪಾಪದ ಶಕ್ತಿಯಿಂದ ಪಾರಾಗಲು ಕ್ರಿಸ್ತನಿಗೆ ನಮ್ಮ ಆತ್ಮಗಳನ್ನು ಒಪ್ಪಿಸಿಕೊಟ್ಟ ಹೊರತು ಬೇರೆ ದಾರಿಯಿಲ್ಲವೆಂದು ತೋರಿಸಿಕೊಡುತ್ತವೆ.LI 25.1

  ಮಾನಸಾಂತರ ಪಡದ ಕೆಲವರು ಕ್ರೈಸ್ತರೆನ್ನಿಸಿಕೊಂಡವರನ್ನು ನೋಡಿ ಹೀಗೆ ಹೇಳುತ್ತಾರೆ:-- “ನಾವೂ ಅವರÉ್ಟೀ ಒಳ್ಳೆಯವರು; ಅವರು ನಮಗಿಂತಲೂ ನಿಸ್ವಾರ್ಥವರರಾಗಿಯೂ, ಸ್ವಸ್ಥ ಚಿತ್ತವುಳ್ಳವರಾಗಿಯೂ, ತಮ್ಮ ನಡಾವಳಿಕೆಗಳಲ್ಲಿ ಅತಿ ಜಾಗರೂಕರಾಗಿಯೂ ಇರುವುದಿಲ್ಲ; ಅವರೂ ನಮ್ಮಂತೆಯೇ ಭೋಗಾಪೇಕ್ಷೆ ಗಳಿಗೂ, ಸ್ವೇಚ್ಛೆಗಳಿಗೂ ಒಳಪಟ್ಟಿದ್ದಾರೆ.” ಅವರು ಈ ರೀತಿಯಾಗಿ ಹೇಳುತ್ತಾ ಇತರರ ಅಪರಾಧಗಳ ದೆಸೆಯಿಂದ ತಮ್ಮ ಅಪರಾಧ ತಪ್ಪುಗಳನ್ನು ಮುಚ್ಚಿ ತಮ್ಮ ಕರ್ತವ್ಯದಿಂದ ಬಾಹಿರಾರಾಗುತ್ತಾರೆ. ಇತರರ ಅಪರಾಧಗಳು ನಮ್ಮ ತಪ್ಪುದೋÀಗಳನ್ನು ಮರೆಮಾಚುವ ನೆವಗಳಾಗಿರಬಾರದು. ಯಾಕಂದರೆ ಕ್ರಿಸ್ತನ ಮಾದರಿಯು ಅಪರಾಧ ರಹಿತವಾದುದು. ಇಂಥಾ ಸುಮಾದರಿಯು ಇರುವುದರಿಂದ ಕ್ರೈಸ್ತರ ನಡಾವಳಿಯಲ್ಲಿ ತಪ್ಪುದೋÀಗಳನ್ನು ಆರೋಪಿಸಿ ದೂರವವರು ತಮ್ಮ ನಡಾವಳಿಯನ್ನು ಉತ್ತಮ ಪಡಿಸಿಕೊಂಡು ತಾವೇ ಸುಮಾದರಿಯನ್ನು ತೋರಿಸಬೇಕು. ಕ್ರೈಸ್ತರ ನಡಾವಳಿಗಳು ಘನತರವಾದವುಗಳಾಗಿರಬೇಕಂದು ಹೇಳುವವರು ತಮ್ಮಲ್ಲೇ ಅಪರಾಧಗಳು ದೊಡ್ಡವುಗಳಾಗಿವೆಯೆಂದು ಯೋಚಿಸಬಾರದೇ? ನ್ಯಾಯವಾದದ್ದೂ, ಸರಿಯಾದದ್ದೂ ಯಾವುದೆಂದು ಅವರಿಗೆ ಮನವರಿಕೆಯಾಗಿದ್ದರೆ ತಾವೇ ಹಾಗೆ ನಡೆಯಲು ತಿರಸ್ಕಾರ ಮಾಡುವುದೇತಕ್ಕೆ? ನಾಳೆಯೆಂದು ಹೇಳುತ್ತಾ ನೀನು ಸಾವಕಾಶ ಮಾಡಬಾರದು, ಕ್ರಿಸ್ತನ ಮೂಲಕ ದೊರೆಯುವ ನೀತಿಯನ್ನು ತಡೆಯಬೇಡ. ಈ ವಿಚಾರವಾಗಿ ಲಕ್ಷಾಂತರ ಜನರು ತಪ್ಪು ಮಾಡಿ ನಿರಂತರವಾದ ನÀ್ಟಕ್ಕೆ ಒಳಗಾಗಿದ್ದಾರೆ.LI 26.1

  ಅತ್ಯಲ್ಪವಾದ ಮತ್ತು ಅಸ್ಥಿರವಾದ ಈ ಜೀವಮಾನಕಾಲದ ವಿಚಾರ ನಾನು ಮಾತಾಡಲಾರೆನು; ಆದರೆ ಯಾರು ಇನ್ನೂ ಪಾಪದಲ್ಲಿಯೇ ಜೀವಿಸುತ್ತಾ ದೇವರ ಆತ್ಮನ ನುಡಿಗೆ ವಿಧೇಯರಾಗದೆ ನಡೆಯುತ್ತಾರೋ ಅಂಥವವರು ಭಯಂಕರವಾದ ಸ್ಥಿತಿಗೆ ಬೀಳುತ್ತಾರೆಂಬುದನ್ನು ಹೇಳಬೇಕಾಗಿರುತ್ತದೆ. ಈ ಭಯಂಕರ ಸ್ಥಿತಿಯು ಅನೇಕರಿಗೆ ಪೂರ್ಣವಾಗಿ ಗೊತ್ತಾಗಿರುವುದಿಲ್ಲ. ಈ ರೀತಿ ತಡಮಾಡುವುದು ನಮ್ಮನ್ನು ಭಯಂಕರವಾದ ಸ್ಥಿತಿಗೆ ಬೀಳಿಸುತ್ತದೆ. ಪಾಪವನ್ನು ನಾವು ಎÀ್ಟು ಅಲ್ಪವಾದುದೆಂದು ಭಾವಿಸಿದರೂ ಅದು ನಮ್ಮನ್ನು ಅಸದಳವಾದ ನÀ್ಟಕ್ಕೇ ಗುರಿಮಾಡುತ್ತದೆ. ನಾವು ಯಾವ ಪಾಪಕ್ಕೆ ಸೋತು ಹೋಗುತ್ತೇವೋ ಆ ಪಾಪವು ನಮ್ಮನ್ನು ಸೋಲಿಸಿ ತನ್ನ ನಾಶನದ ಕಾರ್ಯವನ್ನು ನಮ್ಮಲ್ಲಿ ನಡಿಸುತ್ತದೆ. ನಿಶೇಧಿಸಲ್ಪಟ್ಟ ಹಣ್ಣನ್ನು ತಿನ್ನುವ ಅಲ್ಪಕಾರ್ಯದಿಂದ ದೇವರು ಮುಂತಿಳಿಸಿದ ದೊಡ್ಡ ಶಿಕ್ಷೆಯು ತಮ್ಮ ಮೇಲೆ ಬರಲಾರದೆಂದು ಅದಮನೂ ಹವ್ವಳೂ ಯೋಚಿಸಿದರು. ಆದರೆ ಈ ಸಣ್ಣ ಆಜ್ಞೆಯೇ ನಿರಂತರ ಮತ್ತು ಪರಿಶುದ್ಧವಾದ ಕಟ್ಟಳೆಯನ್ನು ಮೀರುವುದಾಗಿದ್ದಿತು; ಈ ಅವಿಧೇಯತೆಯೇ ಮನುÀ್ಯನನ್ನು ಸೃಷ್ಟಿಕರ್ತನಿಂದ ಬೇರೆ ಮಾಡಿ ಹೇಳಲಸದಳವಾದ ಗೋಳಾಟವನ್ನೂ ಮರಣವನ್ನೂ ಪ್ರಪಂಚಕ್ಕೆ ತಂದಿತು. ಯುಗಯುಗಗಳಲ್ಲೂ ಈ ಗೋಳಾಟವು ಏರುತ್ತಿದೆ; ಆದಿ ಮಾನವನ ಅವಿಧೇಯತೆಯಿಂದ ಸೃಷ್ಟಿಯೆಲ್ಲವೂ ಗೋಳಾಡುತ್ತಲೂ ನರಳಾಡುತ್ತಲೂ ಇರುತ್ತದೆ. ಮಾನವನ ಈ ಅವಿಧೇಯತೆಯು ಸ್ವರ್ಗವನ್ನೂ ಸಹ ತೊಂದರೆ ಪಡಿಸದೆ ಬಿಡಲಿಲ್ಲ.LI 27.1

  ದೈವಾಜ್ಞೆಗಳನ್ನು ಮೀರಿದ ಮನುÀ್ಯನ ಅಪರಾಧಗಳನ್ನು ಪರಿಹರಿಸಲು ಕ್ರಿಸ್ತನಿಂದ ಸಮರ್ಪಿಸಿದ ಅಮೂಲ್ಯ ತ್ಯಾಗಬಲಿಯು ಭೂವರಲೋಕಗಳ ನಡುವೆ ಜ್ಞಾಪಕಾರ್ಥವಾಗಿ ಏರ್ಪಡಿಸಲ್ಪಟ್ಟ ಸ್ಮಾರಕ ಸ್ಥಂಭದಂತಿದೆ. ನಾವು ಯಾವಾಗಲೂ ಪಾಪವನ್ನು ಅಲ್ಪವೆಂದು ಪರಿಗಣಿಸಬಾರದು.LI 28.1

  ಒಂದೊಂದು ಪಾಪವೂ ಕ್ರಿಸ್ತನು ಬೇಡವೆನ್ನುವ ಒಂದೊಂದು ಅಲಕ್ಷ್ಯ ಭಾವನೆಯೂ ನಮ್ಮ ತಲೆಯ ಮೇಲೆ ಬೀಳುತ್ತದೆ, ಅದು ನಮ್ಮ ಹೃದಯವನ್ನು ಕಠಿನಮಾಡುತ್ತದೆ; ಮನಸ್ಸಿನ ಭ್ರÀ್ಟತೆಯನ್ನುಂಟು ಮಾಡುತ್ತದೆ; ತಿಳಿವಳಿಕೆಯನ್ನು ಸ್ತಬ್ಧ ಮಾಡುತ್ತದೆ; ಪವಿತ್ರಾತ್ಮನಗೆ ನಮ್ಮ ಹೃದಯಗಳನ್ನು ಒಪ್ಪಿಸುವುದರಲ್ಲಿ ನಿಧಾನಿಸುವಂತೆಯೂ, ಮತ್ತು ಮನವನ್ನು ಒಪ್ಪಿಸುವ ಶಕ್ತಿಯು ಕಡಿಮೆಯಾಗುವಂತೆಯೂ ಮಾಡುತ್ತದೆ.LI 28.2

  ತಮಗೆ ಯಾವಾಗ ಮನಸ್ಸು ಬರುತ್ತದೋ ಆಗ ತಮ್ಮ ದುÀ್ಟ ಹಾದಿಯನ್ನು ಬಿಡಲು ಶಕ್ತರಾಗಿರುವೆನೆಂದು ಹೇಳುತ್ತಾ ದೇವರ ಕೃಪಾಕರೆಯುವಿಕೆಯನ್ನು ಲಘುವಾಗಿ ಭಾವಿಸಿ ಉದಾಸೀನತೆಯಿಂದಿದ್ದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುವ ಅನೇಕರುಂಟು. ಇಂಥವರು ದೇವರ ಕೃಪಾವರವನ್ನು ಲಕ್ಷಿಸದೆ, ಸೈತಾನನ ಪಕ್ಷವನ್ನು ಹಿಡಿದು ಕಡೆಗೆ ಯಾವುದೋ ಒಂದು ದಿನದಲ್ಲಿ ತಮ್ಮ ಹಾದಿಯನ್ನು ಬದಲಾಯಿಸಬಹುದೆಂದು ಯೋಚಿಸುವುದುಂಟು. ಆದರೆ ಅವರು ಯೋಚಿಸುವÀ್ಟು ಇದು ಸುಲಭವಾದ ಕಾರ್ಯವಲ್ಲ. ಪೂರ್ಣ ಜೀವಮಾನದ ಅವರ ಅನುಭವ, ವಿದ್ಯೆ ಇವು ಅವರ ಗುಣವನ್ನು ಪೂರ್ತಿಯಾಗಿ ಯಾವುದೋ ಒಂದು ರೂಪಕ್ಕೆ ವೊದಲೇ ತಂದಿರುವುದರಿಂದ ಅವರಲ್ಲಿ ಕೆಲವರು ಮಾತ್ರ ಕ್ರಿಸ್ತನನ್ನು ಸ್ವೀಕರಿಸಲು ಇÀ್ಟಪಡುತ್ತಾರೆ. ಅಪರಾಧದ ಗುಣವನ್ನು ನಾಬು ಬಿಡದಿರುವುದದಾರೆ ಅದು ನಮ್ಮಲ್ಲಿ ಬೆಳೆಯಬೇಕಾದ ಸುವಾರ್ತೆಯ ಶಕ್ತಿಯನ್ನು ನಾಶ ಮಾಡುತ್ತದೆ. ಪಾಪವನ್ನು ಮಾಡಬೇಕೆಂಬ ಪ್ರತಿಯೊಂದ ಆಶೆಯೂ ದೇವರ ಆತ್ಮವನ್ನು ನಿರಾಕರಿಸುವಂತೆ ಮಾಡುತ್ತದೆ. ದೇವರನ್ನು ನಂಬದ ಅವಿಶ್ವಾಸಿಗಳು ದೈವಸತ್ಯಾಂಶಗಳ ವಿಚಾರ ಉದಾಸೀನರಾಗಿ ತಾವು ಬಿತ್ತಿದುದನ್ನು ಕೊಯ್ಯ ಬೇಕಾಗುತ್ತದೆ. ದುÀ್ಟತ್ವವನ್ನು ಸಾಮಾನ್ಯವೆಂದು ಹೇಳುವ ವಿಚಾರ ಸತ್ಯವೇದವು ಇತರ ಎಲ್ಲಾ ವಿಚಾರಗಳಿಗಿಂತಲೂ ಅಧಿಕವಾಗಿ ಖಂಡಿಸುತ್ತದೆ.LI 28.3

  “ದುÀ್ಟನ ದುÀ್ಕøತ್ಯಗಳೇ ಅವನನ್ನು ಆಕ್ರಮಿಸುವವು” ಎಂಬುದಾಗಿ ಜ್ಞಾನಿಯು ಹೇಳಿದ್ದಾನೆ. ಕ್ರಿಸ್ತನು ನಮ್ಮನ್ನು ಪಾಪಗಳಿಂದ ಬಿಡಿಸಲು ಇÀ್ಟ ಪಡುತ್ತಾನೆ. ಆದರೆ ಆತನು ಯಾರನ್ನೂ ಬಲಾತ್ಕರಿಸುವುದಿಲ್ಲ. ಮನುÀ್ಯನು ಕೆಟ್ಟದ್ದನ್ನೇ ಮಾಡಬೇಕೆಂದು ಇÀ್ಟ ಪಟ್ಟರೆ, ಪಾಪದಿಂದ ಬಿಡುಗಡೆಯನ್ನು ಹೊಂದಲು ಆತನು ಇನ್ನೇನನ್ನು ತಾನೇ ಮಾಡಬಲ್ಲನು. ನಾವು ಆತನ ಪ್ರೀತಿಯನ್ನು ಮನ:ಪೂರ್ವಕವಾಗಿ ನಿರಾಕರಿಸುವುದಾದರೆ ನಮ್ಮನ್ನು ನಾವೇ ವೋಸಪಡಿಸಿ ಕೊಳ್ಳುವವರಾಗಿರುತ್ತೇವೆ. “ಈಗಲೇ ಆ ಸುಪ್ರಸನ್ನತೆಯ ಕಾಲ; ಇದೇ ಆ ರಕ್ಷಣೆಯ ದಿನ” “ನೀವು ಈ ಹೊತ್ತು ದೇವರ ವಾಣಿಯನ್ನು ಕೇಳಿದರೆ .............. ನಿಮ್ಮ ಹೃದಯಗಳನ್ನು ಕಠಿನಪಡಿಸಿ ಕೊಳ್ಳಬೇಡಿರಿ”LI 29.1

  “ಯೆಹೋವನು ಮನುÀ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಮನುÀ್ಯರ ಹೃದಯಗಲ ಆಶೆಯನ್ನೂ, ಸಂತೋÀ ವ್ಯಸನಗಳನ್ನೂ, ವೋಸ ಕಪಟತನಗಳನ್ನೂ ದೇವರು ಬಲ್ಲವನಾಗಿರುತ್ತಾನೆ. ಮಾನವನ ಹೃದಯ ಮತ್ತು ಬಯಕೆಗಳನ್ನು “ಯೆಹೋವನು ಮನುÀ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ” ಮನುÀ್ಯರ ಹೃದಯಗಲ ಆಶೆಯನ್ನೂ, ಸಂತೋÀ ವ್ಯಸನಗಳನ್ನೂ, ವೋಸ ಕಪಟತನಗಳನ್ನೂ ದೇವರು ಬಲ್ಲವನಾಗಿರುತ್ತಾನೆ. ಮಾನವನ ಹೃದಯ ಮತ್ತು ಬಯಕೆಗಳನ್ನು ಆತನು ಬಲ್ಲನು. ನಿನ್ನ ಆತ್ಮ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ನೀನು ಆತನ ಬಳಿಗೆ ಹೋಗು. ಕೀರ್ತನೆಗಾರನು “ದೇವಾ ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಅಲೋಚನೆಗಳನ್ನು ಗೊತ್ತುಮಾಡು, ನಾನು ನಾಶವಾದ ಮಾರ್ಗದಲ್ಲಿರುತ್ತೇನೋ ನೋಡಿ ಸನಾತನ ಮಾರ್ಗದಲ್ಲಿ ನನ್ನನ್ನು ನಡಿಸು” ಎಂದು ಹೇಳುವಂತೆ ನಿನ್ನ ಹೃದಯದ್ವಾರಗಳನ್ನು ತೆರೆದು ಹೇಳು. ಆನೇಕರು ಜ್ಞಾನಮಾರ್ಗದ ಮತವನ್ನು ಸ್ವೀಕರಿಸುತ್ತಾರೆ; ಅವರಲ್ಲಿ ಒಂದು ಬಗೆಯಾದ ಭಕ್ತಿಯಿದೆ; ಆದರೆ ಹೃದಯವು ಅದರಿಂದ ಶುದ್ಧವಾಗಲಾರದು. ಇದು ನಿಮ್ಮ ಪ್ರಾರ್ಥನೆಯಾಗಿರಲಿ. “ದೇವರೇ ನನ್ನಲ್ಲಿ ಶುದ್ಧ ಹೃದಯವನ್ನು ನಿರ್ಮಿಸು, ನನಗೆ ಸ್ಥಿರ ಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನಪಡಿಸು” ನಿನ್ನ ಆತ್ಮನ ವಿಚಾರ ಸತ್ಯಪರನಾಗಿರು. ಹೀಗೆ ನೀನು ದೇವರ ಸಂಗಡ ಮಾತ್ರ ತೀರ್ಮಾನಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ. ಇದನ್ನು ನಿತ್ಯ ಜೀವಕ್ಕಾಗಿ ತೀರ್ಮಾನಿ ಸಿಕೊ. ಈ ವಿಚಾರ ನೀನು ಬರೀ ಊಹೆಯ ನಿರೀಕ್ಷೆಯನ್ನು ಮಾತ್ರ ಮಾಡಿದರೆ ಸಾಲದು, ಅದರಿಂದ ಯಾವ ಪ್ರಯೋಜನವೂ ಆಗದೆ ನಿತ್ಯನಾಶನವಾದೀತು.LI 29.2

  ದೇವರ ವಾಕ್ಯವನ್ನು ಪ್ರಾರ್ಥನಾಪೂರ್ವಕವಾಗಿ ಅಭ್ಯಾಸಿಸು. ಇದರಿಂದ ನೀನು ದೇವರ ನಿಯಮಗಳನ್ನೂ ಕ್ರಿಸ್ತನ ಜೀವಮಾನವನ್ನೂ ಪರಿಶುದ್ಧತ್ವದ ಮಾಹಾ ಸೂತ್ರಗಳನ್ನೂ ಕಲಿತುಕೊಳ್ಳು”. ಹೀಗಲ್ಲದೆ ದೇವರನ್ನು ಯಾರೂ ಕಾಣಲಾರರು. ಮನುÀ್ಯನು ಪಾಪಿÀ್ಟನೆಂದು ಮನಗಾಣಿಸಿ ರಕ್ಷಣಾ ಮಾರ್ಗವನ್ನು ದೇವರ ಆಜ್ಞೆಗಳು ಸ್ವÀ್ಟವಾಗಿ ಪ್ರಕಟಿಸುತ್ತವೆ. ಅದನ್ನು ದೇವರ ದೇವರ ವಾಕ್ಯವನ್ನು ಪ್ರಾರ್ಥನಾಪೂರ್ವಕವಾಗಿ ಅಭ್ಯಾಸಿಸು. ಇದರಿಂದ ನೀನು ದೇವರ ನಿಯಮಗಳನ್ನೂ ಕ್ರಿಸ್ತನ ಜೀವಮಾನವನ್ನೂ ಪರಿಶುದ್ಧತ್ವದ ಮಾಹಾ ಸೂತ್ರಗಳನ್ನೂ ಕಲಿತುಕೊಳ್ಳು”. ಹೀಗಲ್ಲದೆ ದೇವರನ್ನು ಯಾರೂ ಕಾಣಲಾರರು. ಮನುÀ್ಯನು ಪಾಪಿÀ್ಟನೆಂದು ಮನಗಾಣಿಸಿ ರಕ್ಷಣಾ ಮಾರ್ಗವನ್ನು ದೇವರ ಆಜ್ಞೆಗಳು ಸ್ವÀ್ಟವಾಗಿ ಪ್ರಕಟಿಸುತ್ತವೆ. ಅದನ್ನು ದೇವರ ಧ್ವನಿಯೆಂದು ಗ್ರಹಿಸಿ ಅದಕ್ಕೆ ಲಕ್ಷ್ಯ ಕೊಡು. ಪಾಪದ ಭೀಕರತೆಯನ್ನು ನೀನು ತಿಳಿದು ಕೊಂಡರೆ ಆಗ ನಿನ್ನ ನಿಜಸ್ಥಿತಿಯು ನಿನಗೆ ಗೊತ್ತಾಗುವುದು. ಅದರೆÀ ನೀನು ನಿರಾಶನಾಗಬೇಡ. ಯಾಕಂದರೆ ಪಾಪಿಗಳನ್ನು ರಕ್ಷಿಸಲು ಯೇಸುಕ್ರಿಸ್ತನು ಬಂದನು. ದೇವರು ಸ್ವತ: ತಾನೇ “ಲೋಕವನ್ನು ಕ್ರಿಸ್ತನಲ್ಲಿ ತನಗೆ ಸಮಾಧಾನ ಪಡಿಸಿಕೊಳ್ಳುತ್ತಿದ್ದಾನೆ” ಇದೆಂತರ ಅದ್ಭುತವಾದ ಪ್ರೀತಿ. ದೇವರು ತನ್ನ ಪ್ರೀತಿಯಿಂದ ತನ್ನ ಮಕ್ಕಳನ್ನು ತನ್ನ ಬಳಿಗೆ ಕರೆಯುವವನಾಗಿದ್ದಾನೆ. ಅಪರಾಧಿಗಳ ವಿಚಾರ ದೇವರು ಕರುಣೆ ಮತ್ತು ತಾಳ್ಮೆಗಳನ್ನು ತೋರಿಸುತ್ತಾನೆ. ಆತನು ತನ್ನ ಮಕ್ಕಳನ್ನು ಎÀ್ಟು ಪ್ರೀತಿಸುತ್ತಾನೆಂದರೆ, ಭೂಲೋಕದ ತಂದೆತಾಯಿಗಳೂ ಸಹ ತಮ್ಮ ಮಕ್ಕಳನ್ನು ಅÀ್ಟರ ಮಟ್ಟಿಗೆ ಪ್ರೀತಿಸಲಾರರು. ಅಪರಾಧಿಗಳ ಪರವಾಗಿ ಕ್ರಿಸ್ತನು ವಾದಿಸುವವನಾಗಿರುತ್ತಾನೆ. ದೇವರ ವಾಗ್ದಾನಗಳೂ, ಎಚ್ಚರಿಕೆಗಳೂ ಆತನ ಅಪ್ರಮೇಯವಾದ ಪ್ರೀತಿಯನ್ನು ಸಾರುತ್ತಿರುವವು. ಸೈತಾನನು ನಿನ್ನ ಬಳಿಗೆ ಬಂದು ನಿನ್ನನ್ನು ಪಾಪಾತ್ಮನೆಂದು ಹೇಳುವುದಾದರೆ ಆಗ ನೀನು ಆತನಿಗೆ ಕ್ರಿಸ್ತನು ನಿನಗಾಗಿ ಮಾಡಿರುವುದನ್ನು ಹೇಳು. ಕ್ರಿಸ್ತನ ಬೆಳಕೇ ನಿನಗೆ ಸಹಾಯ ಮಾಡುವುದು. ನಿನ್ನ ಪಾಪಗಳನ್ನು ಕ್ರಿಸ್ತನ ಬಳಿ ಅರಿಕೆ ಮಾಡು ಮತ್ತು “ಪಾಪಿಗಳನ್ನು ರಕ್ಷಿಸಲು ಕ್ರಿಸ್ತನು ಭೂಲೋಕಕ್ಕೆ ಬಂದನು” ಎಂಬುದನ್ನು ನೀನು ಸೈತಾನನಿಗೆ ತಿಳಿಸು. ಇಬ್ಬರು ಸಾಲಗಾರರ ವಿಚಾರದಲ್ಲಿ ಕ್ರಿಸ್ತನು ಸೀವೋನನನ್ನು ಒಂದು ಪ್ರಶ್ನೆ ಕೇಳಿದನು. ಒಬ್ಬನು ಬಹಳ ಹಣ ಕೊಡಬೇಕಾಗಿತ್ತು, ಮತ್ತೊಬ್ಬನು ಸ್ವಲ್ಪ ಹಣ ಕೊಡಬೇಕಾಗಿತ್ತು. ಸಾಹುಕಾರನಾದರೋ ಅವರಿಬ್ಬರಿಂದಲೂ ಹಣವನ್ನು ತೆಗೆದುಕೊಳ್ಳದೆ ಋಣಮುಕ್ತರನ್ನಾಗಿ ಮಾಡಿ ದನು. ಈ ಸಾಲಗಾರರ ಪೈಕಿ ಯಾರು ಧಣಿಯನ್ನು ಅಧಿಕವಾಗಿ ಪ್ರೀತಿಸುತ್ತಾರೆ? “ಯಾರಿಗೆ ಹೆಚ್ಚಾಗಿ ಬಿಡಲ್ಪಟ್ಟಿತೋ ಅವನೇ” ಎಂದು ಸೀವೋನನು ಹೇಳಿದನು. ನಾವು ಘೋರ ಪಾಪಿಗಳು, ಕ್ರಿಸ್ತನು ನಮಗಾಗಿ ಸತ್ತನು; ಆತನ ತ್ಯಾಗದ ಪುಣ್ಯವು ನಮಗೆ ಸಾಕು. ಆ ಯಜ್ಞವು ನಮ್ಮ ಪರವಾಗಿ ದೇವರಿಗೆ ಅರ್ಪಿಸಲ್ಪಟ್ಟಿತು. ಯಾರಿಗೆ ಹೆಚ್ಚು ಕ್ಷಮಿಸಲ್ಪಟ್ಟಿದೆಯೇ ಅವರು ದೇವರನ್ನು ಅಧಿಕವಾಗಿ ಪ್ರೀತಿಸುತ್ತಾರೆ, ಅವರು ಆತನ ಸಿಂಹಾಸನದ ಹತ್ತಿರ ನಿಂತು ಆತನ ಪ್ರೀತಿಗೋಸ್ಕರವೂ, ಆತನ ಯಜ್ಞಕ್ಕೋಸ್ಕರವೂ ಆತನನ್ನು ಸ್ತುತಿಸುವರು. ದೇವರ ಪ್ರೀತಿಯನ್ನು ನಾವು ಹೆಚ್ಚು ಹೆಚ್ಚಾಗಿ ತಿಳಿದುಕೊಂಡ ಹಾಗೆಲ್ಲಾ ನಮ್ಮ ಪಾಪದ ಭೀಕರತೆಯೂ ನಮಗೆ ಹೆಚ್ಚಾಗಿಯೇ ತಿಳಿಯಬರುವುದು. ಕ್ರಿಸ್ತನು ಅಗಮ್ಯವಾದ ಲೋಕವವನ್ನು ಬಿಟ್ಟು ನಮಗಾಗಿ ಎÀ್ಟು ದೂರ ಬಂದಿರುವನೆಂದೂ, ಆತನ ತ್ಯಾಗದ ಮಹಿಮೆಯು ಎಂಥಾದ್ದೆಂದೂ, ನಾವು ತಿಳಿದುಕೊಂಡಾಗ ನಮ್ಮ ಹೃದಯವು ಕರಗಿ ನೀರಾಗಿ ಮಾನಸಾಂತರವು ನಮ್ಮಲ್ಲಿ ಅವಿರ್ಭವಿಸುವುದು.LI 30.1

  Larger font
  Smaller font
  Copy
  Print
  Contents