Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಸಂಶಯ ನಿವಾರಣೋಪಾಯ

    ಅನೇಕರು ಮುಖ್ಯವಾಗಿ ಕ್ರೈಸ್ತ ಜೀವಮಾನದಲ್ಲಿ ತರುಣ ರಾಗಿರುವವರು ಅನೇಕ ವೇಳೆಗಳಲ್ಲಿ ವಿವಿಧವಾದ ಸಂದೇಹಗಳಿಂದ ತೊಂದರೆಪಡುವವರಾಗಿರುತ್ತಾರೆ. ಸತ್ಯವೇದದ ಅನೇಕ ಭಾಗಗಳನ್ನು ಅವರು ವಿವರಿಸಲಾರರು ಮತ್ತು ತಿಳಿದುಕೊಳ್ಳಲಾರರು. ಇವುಗಳನ್ನು ಸೈತಾನನು ತನ್ನ ವಶಕ್ಕೆ ತೆಗೆದುಕೊಂಡು ಇವು ದೇವರಿಂದ ಬಂದ ಪ್ರಕಟನೆಗಳೇ ಇಲ್ಲವೇ ಎಂಬ ಸಂದೇಹಗಳನ್ನು ಹುಟ್ಟಿಸಿ, ಅವರ ನಂಬಿಕೆಯನ್ನೇ ಅಲ್ಲಾಡಿಸಲು ಪ್ರಯತ್ನಪಡುತ್ತಾನೆ. ಇಂಥವರು ಮಾಡುವ ಪ್ರಶ್ನೆಗಳು ಯಾವುವೆಂದರೆ ‘ನನಗೆ ಸರಿಯಾದ ದಾರಿಯು ಗೊತ್ತಾಗುವುದು ಹೇಗೆ?’ ಸತ್ಯವೇದವು ನಿಜವಾದ ದೇವರ ವಾಕ್ಯವಾಗಿದ್ದರೆ ಈ ಸಂಶಯಗಳಿಂದಲೂ ಕಳವಳಗಳಿಂದಲೂ ಪಾರಾಗುವುದು ಹೇಗೆ?LI 95.1

    ಸಾಕಾದÀ್ಟು ಸಾಕ್ಷಿಗಳನ್ನು ಕೊಡುವುದಕ್ಕೆ ವೊದಲೇ ನಾವು ಆತನನ್ನು ನಂಬಬೇಕೆಂದು ಆತನು ಬಯಸುವುದಿಲ್ಲ. ಆತನ ಇರುವಿಕೆ, ಆತನ ಗುಣ, ಆತನ ವಾಕ್ಯಗಳ ಸತ್ಯ ಸಂಧತೆ ಇವುಗಳು ಕಾರಣ ಸಹಿತವಾಗಿ ರುಜುವಾತು ಮಾಡಲ್ಪಟ್ಟಿವೆ. ಮತ್ತು ಇದಕ್ಕೆ ಬೇಕಾದÀ್ಟು ಸಾಕ್ಷಿಗಳಿರುತ್ತವೆ. ಹೀಗಿದ್ದರೂ ಸಂಶಯಕ್ಕೆ ಅಸ್ಪದವಿಲ್ಲದೇ ಇಲ್ಲ ಅಂದರೆ ಸಂಶಯಕ್ಕೆ ಅವಕಾಶವಿದೆ. ನಮ್ಮ ನಂಬಿಕೆಯು ಸಾಕ್ಷಿಗಳ ಮೇಲೆ ಆತುಕೊಂಡಿರಬೇಕೇ ಹೊರತು ತೋರಿಕೆಯ ಮೇಲೆ ಆತುಕೊಂಡಿರಬಾರದು. ಸಂಶಯಪಡಲು ಇÀ್ಟಪಡುವವರಿಗೆ ಕಾರಣಗಳೂ ಇದ್ದೇ ಇರುತ್ತವೆ. ಆದರೆ ಸತ್ಯವನ್ನು ತಿಳಿದುಕೊಳ್ಳ ಬೇಕೆಂದಿರುವವರಿಗೆ ಅವರ ನಂಬಿಕೆಗೆ ಸಾಕಾದÀ್ಟು ದೃÁ್ಟಂತಗಳು ದೊರೆಯುತ್ತವೆ. ಒಂದು ಪರಿಮಿತಿಗೆ ಒಳಪಟ್ಟ ಮನುÀ್ಯರು ಪರಿಮಿತಿಗೆ ಒಳಪಡದ ದೇವರ ಗುಣವನ್ನಾಗಲಿ ಆತನ ಕಾರ್ಯಗಳನ್ನಾಗಲಿ ಪೂರ್ಣವಾಗಿ ತಿಳಿದುಕೊಳ್ಳಲಾರರು. ಮಹಾ ಜ್ಞಾನಿಗೂ ಮತ್ತು ಮಹಾ ವಿದ್ವಾಂಸನಿಗೂ ಸಹ ದೇವರು ಯಾವಾಗಲೂ ಒಂದು ಗುಟ್ಟಾಗಿಯೇ ಕಾಣಬರುವನು. “ದೇವರ ಅಗಾಧಗಳನ್ನು ಕಂಡುಕೊಳ್ಳಬಲ್ಲಿಯಾ? ಸರ್ವಶಕ್ತನನ್ನು ಸಂಪೂರ್ಣವಾಗಿ ಗ್ರಹಿಸಕೊಳ್ಳಬಹುದೋ?” ಆಹಾ (ಆತನÀ ಜ್ಞಾನವು) ಆಕಾಶದ ಹಾಗೆ ಉನ್ನತವಾಗಿದೆ; ನೀನು ಮಾಡುವುದೇನು? ಪಾತಾಳಕ್ಕಿಂತ ಆಳವಾಗಿದೆ ನೀನು ತಿಳಿದುಕೊಳ್ಳುವುದೇನು?1 ಅಪೋಸ್ತಲನಾದ ಪೌಲನು ಆಶ್ಚರ್ಯದಿಂದ ಹೀಗೆ ಹೇಳುತ್ತಾನೆ --- “ಆಹಾ ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎÉ್ಟೂೀ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎÉ್ಟೂೀ ಅಗಮ್ಯ! ಆತನ ಮಾರ್ಗಗಳನ್ನು ಕಂಡುಹಿಡಿಯುವುದು ಎÉ್ಟೂೀ ಅಸಾಧ್ಯ” ಆದರೆ “ವೋಡಗಳು ಮತ್ತು ಕಾರ್ಗತ್ತಲು ಆತನ ಸುತ್ತಲು ಇದ್ದಾಗ್ಯೂ ನೀತಿ ನ್ಯಾಯಗಳು ಆತನ ಸಿಂಹಾಸನದ ಅಸ್ತಿವಾರವಾಗಿವೆ.”LI 95.2

    ನಮ್ಮ ಒಳ್ಳೆಯದಕ್ಕಾಗಿ ಆತನ ಉದ್ದೇಶಗಳನ್ನು ಎÀ್ಟು ತಿಳಿದುಕೊಳ್ಳಬೇಕೋ ಅÀ್ಟನ್ನೂ ನಾವು ತಿಳಿದುಕೊಳ್ಳಲು ಸಾಧ್ಯ. ಅದಕ್ಕೆ ಮೀರಿದ ದೇವರ ಸರ್ವಶಕ್ತಿ ಮತ್ತು ಪ್ರೀತಿಯ ಸಹಾಯಗಳು ನಮಗೆ ದೊರಕುತ್ತದೆಂದು ನಂಬಬೇಕು. ಪೂರ್ತಿಯಾಗಿ ದೇವರ ಗುಣವನ್ನು ತಿಳಿದುಕೊಳ್ಳುವುದು ಎÀ್ಟು ಅಸಾಧ್ಯವೋ ಅÀ್ಟರಮಟ್ಟಿಗೂ ಪರಿಮಿತಿಗೆ ಒಳಪಟ್ಟ ಮನುÀ್ಯನ ಆತನ ವಾಕ್ಯವನ್ನು ತಿಳಿದುಕೊಳ್ಳುವುದು ಅಸಾಧ್ಯವಾಗಿದೆ. ಪಾಪದ ಉತ್ಪತ್ತಿ, ಕ್ರಿಸ್ತನ ಅವತಾರ, ಪುನರ್ಜನ್ಮ, ಪುರನುತ್ಥಾನ ಮತ್ತು ಸತ್ಯವೇದದಲ್ಲಿರುವ ಅನೇಕ ಸಂಗತಿಗಳು ಆಗಾದ ಮರ್ಮಗಳಾಗಿ ಮಾವನು ತಿಳಿದುಕೊಳ್ಳುವುದು ಅಸಾಧ್ಯವೆಂದು ಹೇಳಿ ಸಂಶಯ ಪಡಬೇಕಾದ ಪ್ರಮೇಯವಿಲ್ಲ. ಪ್ರಕೃತಿಯಲ್ಲೂ ನಾವು ಕಂಡುಹಿಡಿಯಲಾರದ ಅನೇಕ ಮರ್ಮಗಳು ನಮಗೆ ಕಂಡುಬರುತ್ತಲೇ ಇರುತ್ತವೆ. ಅತ್ಯಂತ ಕೀಳುತರಹ ಪ್ರಾಣಿಯ ಜೀವಮಾನವನ್ನು ಬುದ್ಧಿಶಾಲಿಯಾದ ತತ್ವಜ್ಞಾನಿಯೂ ಕೂಡ ವಿವರಿಸಲು ಅಶಕ್ತನಾಗಿರುತ್ತಾನೆ. ನಮ್ಮ ಜ್ಞಾನಕ್ಕೆ ಮೀರಿದ ಅದ್ಭುತಗಳನ್ನೇ ನಾವು ಎಲ್ಲೆಲ್ಲೂ ನೋಡುತ್ತೇವೆ. ಪ್ರಕೃತಿಯ ಸಂಗತಿಗಳೇ ಹೀಗಿರುವಾಗ ಆತ್ಮೀಯ ಪ್ರಪಂಚದಲ್ಲಿ ಅಡಗಿರುವ ಅದ್ಭುತಗಳ ವಿಚಾರ ನಾವು ಆಶ್ಚರ್ಯಪಡಬೇಕೇ? ಈ ಬಗೆಯ ತಿಳಿಗೇಡಿತನಕ್ಕೆ ಮನುÀ್ಯನ ಸಂಕುಚಿತವಾದ ಮತ್ತು ಬಲಹೀನವಾದ ಮನಸ್ಸೇ ಕಾರಣ. ದೇವರು ಸತ್ಯವೇದದ ಮೂಲಕ ಅವುಗಳ ಆತನ ಲಕ್ಷಣಗಳನ್ನು ಸೂಚಿಸುತ್ತವೆಂದು ಸಾಕಾದÀ್ಟು ನಿದರ್ಶನಗಳನ್ನು ಕೊಟ್ಟಿದ್ದಾನೆ. ಅವುಗಳ ಮರ್ಮವನ್ನು ನಾವು ತಿಳಿದುಕೊಳ್ಳಲಾರೆವೆಂದು ನೆಪವನ್ನು ಹೂಡಿ ಸಂದೇಹಕ್ಕೆ ಅವಕಾಶ ಕೊಡಬಾರದು.LI 96.1

    ಅಪೋಸ್ತಲನಾದ ಪೇತ್ರನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿÀಯಗಳನ್ನು ಕುರಿತು ಬರೆಯುವಾಗ ಹೀಗೆ ಬೋಧಿಸಿದ್ದಾನೆ - “...................... ಕೆಲವು ಮಾತುಗಳು ತಿಳಿಯುವುದಕ್ಕೆ ಕÀ್ಟವಾಗಿವೆ. ವಿದ್ಯಾಹೀನರೂ ಚಪಲಚಿತ್ತರೂ ಹೇಗೆ ನಮಗಿರುವ ಮಿಕ್ಕಾದ ಗ್ರಂಥಗತಪ್ಪಾದ ಅರ್ಥ ಮಾಡಿಕೊಂಡಿದ್ದಾರೋ ಹಾಗೆಯೇ ಇವುಗಳಿಗೂ ತಪ್ಪಾದ ಅರ್ಥ ಮಾಡಿಕೊಂಡು ತಮಗೆ ನಾಶನವನ್ನುಂಟುಮಾಡಿಕೊಳ್ಳುತ್ತಾರೆ.”1 ಸತ್ಯವೇದದಲ್ಲಿರುವ ಕÀ್ಟವಾದ ಸಂಗತಿಗಳನ್ನೇ ಸಂಶಯಗ್ರಸ್ತರು ಪ್ರಧಾನವನ್ನಾಗಿ ಮಾಡಿಕೊಂಡು ಅದಕ್ಕೆ ವಿರೋಧವಾಗಿ ವಾದಿಸುತ್ತಾರೆ. ಇವರು ಹೀಗೆ ಮಾಡುವುದರಿಂದ ಸತ್ಯವೇದವು ದೈವಪ್ರೇರಿತವಾದ ಗ್ರಂಥವೆಂದು ಸಿದ್ಧಾಂತ ಮಾಡಿ ತೋರಿಸಲು ಮತ್ತು ಅವಕಾಶವಾಗಿದೆ. ನಾವು ಸುಲಭವಾಗಿ ತಿಳಿದುಕೊಳ್ಳುವ ಸಂಗತಿಗಳನ್ನು ಒಳಗೊಂಡು ದೇವರ ವಿಚಾರವಾದ ಸಂಗತಿಗಳಿಲ್ಲದಿದ್ದಲ್ಲಿ ದೇವರ ಮಹಿಮೆಯನ್ನು ಪರಿಮಿತಿಗೆ ಒಳಪಟ್ಟ ಮನುÀ್ಯನು ಗ್ರಹಿಸಿಕೊಳ್ಳಲು ಸಾಧ್ಯವಾಗಿದ್ದಲ್ಲಿ ಆಗ ಸತ್ಯವೇದದಲ್ಲಿ ನಿಜವಾಗಿಯೂ ದೈವಾಧಿಕಾರದ ವಾಣಿಗಳು ಇಲ್ಲವೆಂದು ಹೇಳಬಹುದು. ಅದರಲ್ಲಿ ಅಡಗಿರುವ ಸಂಗತಿಗಳ ಮಹತ್ವ ಮತ್ತು ಗೂಡಾರ್ಥಗಳೇ ಅದು ದೇವರ ವಾಕ್ಯವೆಂದು ನಮ್ಮಲ್ಲಿ ನಂಬಿಕೆಯನ್ನು ಹುಟ್ಟಿಸಬೇಕು.LI 97.1

    ಸತ್ಯವೇದವು ಸತ್ಯವನ್ನು ಸಾಮಾನ್ಯ ರೂಪದಲ್ಲೂ ಮಾನವ ಅವಶ್ಯಕತೆ ಮತ್ತು ಆಶೆಗಳಿಗೆ ಹೊಂದಿಕೆಯಾಗಿಯೂ ಇರುವಂತೆ ಪ್ರಕಟಿಸಿರುವುದರಿಂದ ಇದು ಮಹಾ ವಿದ್ವಾಂಸರನ್ನು ಆಶ್ಚರ್ಯಗೊಳಿಸಿ ಅವರ ಗಮನವನ್ನು ಆಕರ್ಷಿಸುತ್ತದೆ. ಮತ್ತು ದೀನರೂ ವಿದ್ಯಾಹೀನರೂ ಆದ ಮನುÀ್ಯರೂ ಸಹ ಅದರಲ್ಲಿ ತೋರಿಸಿರುವ ರಕ್ಷಣೆಯ ಹಾದಿಯನ್ನು ತಿಳಿದುಕೊಳ್ಳುವಂತೆ ಮಾಡುತ್ತದೆ. ಹೀಗಿದ್ದಾಗ್ಯೂ ಸಾಮಾನ್ಯ ರೂಪದಲ್ಲಿ ಬರೆಯಲ್ಪಟ್ಟಿರುವ ಸತ್ಯಾಂಶಗಳ ಉನ್ನತವಾದ, ಶಾಶ್ವತವಾದ ಮತ್ತು ಮಾನವಜ್ಞಾನಕ್ಕೆ ನಿಲುಕದ ಸಂಗತಿಗಳನ್ನು ವಿವರಿಸುತ್ತವೆ. ಹೀಗಿರುವುದರಿಂದಲೇ ಅದು ದೇವರಿಂದ ಪ್ರೇರಣೆಯನ್ನು ಹೊಂದಿ ಬಂದಿತೆಂದು ನಾವು ಸ್ವೀಕರಿಸಬಹುದು. ರಕ್ಷಣೆಯ ಹಂಚಿಕೆಯು ಈ ರೀತಿ ನಮಗೆ ಸರಾಗ ಮಾಡÀLI 97.2

    ಲ್ಪಟ್ಟು ಪಶ್ಚತ್ತಾಪದಿಂದ ದೇವರ ಬಳಿಗೆ ಬರುವ ರೀತಿಯನ್ನು ಕ್ರಿಸ್ತನ ಬಳಿಗೆ ವಿಶ್ವಾಸದಿಂದ ಪ್ರವೇಶಿಸುವ ಹಾದಿಯನ್ನೂ ತೋರಿಸಿ ದೇವರು ನೇಮಿಸಿರುವ ರೀತಿಯಲ್ಲಿ ನಾವು ರಕ್ಷಣೆ ಹೊಂದಲು ಸಹಾಯ ಕೊಡುತ್ತದೆ. ನಾವು ಇÀ್ಟೂ ಸುಲಭವಾಗಿ ಗ್ರಹಿಸಿಕೊಳ್ಳುವ ಈ ಸತ್ಯಾಂಶಗಳಲ್ಲಿಯೂ ಗುಪ್ತವಾಗಿರುವ ದೈವಮಹಿಮೆಯು ಮನುÀ್ಯನನ್ನು ತಲ್ಲಣಗೊಳಿಸುವ ಗೂಡಾರ್ಥಗಳಿಂದ ಕೂಡಿರುತ್ತದೆ. ಆದರೆ ಪೂಜ್ಯಭಾವನೆಯಿಂದಲೂ ನಂಬಿಕೆಯಿಂದಲೂ ಹುಡುಕುವವನಿಗೆ ದೈವಪ್ರೇರಣೆಯನ್ನು ಕೊಡುತ್ತದೆ. ಇದನ್ನು ಹೆಚ್ಚುಹೆಚ್ಚಾಗಿ ಪರಿಶೋಧಿಸಿದ ಹಾಗೆಲ್ಲಾ ಅದು ದೇವರ ವಾಕ್ಯವೆಂಬ ದೃಢತೆಯೂ ಹೆಚ್ಚಾಗುತ್ತದೆ, ಅಲ್ಲದೆ ಮನುÀ್ಯ ಜ್ಞಾನವು ದೈವಪ್ರಕಟನೆಯ ಮಹಿಮೆ ಎದುರಿಗೆ ಅಡ್ಡ ಬೀಳುತ್ತದೆ. ನಾವು ಅದರ ಅಗಾಧ ಸತ್ಯಗಳನ್ನು ಪೂರ್ಣವಾಗಿ ತಿಳಿದುಕೊಳ್ಳಲಾರೆವೆಂದು ಒಪ್ಪಿಕೊಳ್ಳುವುದೇ ಮಿತಿಯಿಲ್ಲದ ದೇವರನ್ನು ಮಿತಿಗೆ ಒಳಪಟ್ಟ ಮನಸ್ಸು ಪೂರ್ತಿ ತಿಳಿದುಕೊಳ್ಳಲಾರದೆಂದು ಹೇಳಿದ ಹಾಗಾಯಿತು. ಮಿತಿಯಾದ ಮಾನವ ಜ್ಞಾನವನ್ನು ಹೊಂದಿದ ಮನವು ಸರ್ವಜ್ಞಾನಿಯ ಉದ್ದೇಶಗಳನ್ನು ಗ್ರಹಿಸಿಕೊಳ್ಳಲಾರದು.LI 98.1

    ಗೂಢವಾದ ಸಂಗತಿಗಳ ಅರ್ಥಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲದಿರುವುದನ್ನೇ ಕಾರಣ ಮಾಡಿಕೊಂಡು ಅವಿಶ್ವಾಸಿಗಳಾದವರೂ, ನಾಸ್ತಿಕರೂ ಇದನ್ನು ತಿರಸ್ಕರಿಸುತ್ತಾರೆ. ಸತ್ಯವೇದವನ್ನು ನಂಬುವವರೆಲ್ಲರೂ ಈ ಅಪಾಯದಿಂದ ಪಾರಾಗಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಅಪೋಸ್ತಲನು ಹೀಗೆ ಹೇಳುತ್ತಾನೆ. “ಜೀವ ಸ್ವರೂಪನಾದ ದೇವರನ್ನು ಬಿಟ್ಟು ಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿವ್ಮೊಳಗೆ ಯಾವನಲ್ಲಿಯೂ ಇರಬಾರದು.” ಸತ್ಯವೇದದಲ್ಲಿರುವ ಬೋಧನೆಗಳನ್ನು ಆಳವಾಗಿ ಯೋಚಿಸುವುದೂ, “ಇನ್ನೂ ರಹಸ್ಯವಾಗಿರುವ ಭವಿÀತ್ಕಾರ್ಯಗಳನ್ನು” ದೇವರ ಆಳವಾದ ಸಂಗತಿಗಳನ್ನು ಅದರಲ್ಲಿ ಪ್ರಕಟವಾಗಿರುವÀ್ಟರ ಮಟ್ಟಿಗೆ, ಹುಡುಕುವುದೂ ನ್ಯಾಯವಾಗಿದೆ. “ದೇವರ ಅಗಾಧವಾದ ವಿಚಾರಗಳು” ಆತನಿಗೆ ಸಂಬಂಧಪಟ್ಟಿವೆ ಮತ್ತು “ದೇವರು ತನ್ನ ಆತ್ಮದ ಮೂಲಕ ಪ್ರಕಟಿಸಿರುವುದು” ನಮಗೆ ಸಂಬಂಧಪಟ್ಟಿದೆ.2 ಹೀಗೆ ಸಂಶೋಧನೆ ಮಾಡುವ ಕೆಲಸವನ್ನು ಸೈತಾನನು ಬುಡಮೇಲು ಮಾಡುತ್ತಾನೆ. ಸತ್ಯವೇದದ ಸತ್ಯಾಂಶ ಗಳನ್ನು ಮನುÀ್ಯರು ಯೋಚಿಸುತ್ತಾ ಕುಳಿತಿರುವಾಗ ಗರ್ವವು ಬೆಳೆಯುವುದರಿಂದ ತಮಗೆ ತೃಪ್ತಿಯಾಗುವ ರೀತಿಯಿಂದ ಸತ್ಯವೇದದ ಎಲ್ಲಾ ಭಾಗಗಳಿಗೆ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೆ, ತಾಳ್ಮೆಯನ್ನು ಕಳೆದುಕೊಂಡು ಬಿದ್ದು ಹೋಗುತ್ತಾರೆ. ದೈವಪ್ರಕಟನೆಯ ವಾಕ್ಯಗಳನ್ನು ನಾವು ತಿಳಿದುಕೊಳ್ಳಲಾರೆನೆಂದು ಹೇಳುವುದು ಕೇವಲ ನಿಕೃÀ್ಟವೆಂದು ಅವರು ಭಾವಿಸುತ್ತಾರೆ. ದೇವರು ತನಗೆ ಸಂಬಂಧಿಸಿದ ಸತ್ಯಾಂಶಗಳನ್ನು ಪ್ರಕಟಿಸುವವರೆವಿಗೆ ಕಾದಿರಲು ಅವರಿಗೆ ಶಾಂತಿಯಾದ ಮನಸ್ಸಿಲ್ಲ. ಯಾವ ಸಹಾಯವೂ ಇಲ್ಲದೆ ತಮ್ಮ ಸ್ವಬುದ್ಧಿಯಿಂದ ಅವುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲವೆಂದು ಊಹಿಸಿ ಹಾಗೆ ಪ್ರಯತ್ನಿಸಿ ತಿಳಿದುಕೊಳ್ಳಲಾರದೆ, ಸತ್ಯವೇದದ ಅಧಿಕಾರವನ್ನು ಅಲ್ಲಗಳೆಯುತ್ತಾರೆ. ಸತ್ಯವೇದದ ಆಧಾರದಿಂದಲೇ ದೊರಕಿದವೆಂದು ಹೇಳುವ ಮತ್ತು ಜನಾನುರಾಗವನ್ನು ಪಡೆದಿರುವ ಬೋಧನೆಗಳೂ ಮತ್ತು ಸಿದ್ದಾಂತಗಳೂ ಇರುವುದೂ ನಿಜ; ಆದರೆ ಸತ್ಯವೇದದಲ್ಲಿ ದೈವಪ್ರೇರಣೆಯ ಅಭಿಪ್ರಾಯಕ್ಕೆ ವಿರುದ್ಧವಾಗಿವೆ. ಈ ಸಂಗತಿಗಳು ಅನೇಕರ ಸಂದೇಹಕ್ಕೂ ಗಲಿಬಿಲಿಗೂ ಕಾರಣಗಳಾಗಿರುತ್ತವೆ. ಹೀಗಿರುವುದರಿಂದ ಈ ತಪ್ಪನ್ನು ನಾವು ದೇವರ ಮೇಲೆ ಹಾಕಲಾಗುವುದಿಲ್ಲ; ಇದಕ್ಕೆ ಜನರ ತಪ್ಪು ಭಾವನೆಯೇ ಕಾರಣವಾಗಿದೆ.LI 98.2

    ಸೃಷ್ಟಿಸಲ್ಪಟ್ಟ ಮನುÀ್ಯರು ದೇವರನ್ನು ಆತನ ಎಲ್ಲಾ ಕೈಕೆಲಸಗಳನ್ನೂ ತಿಳಿದುಕೊಳ್ಳುವ ಪೂರ್ಣಜ್ಞಾನದ ಅಂತಸ್ತಿಗೆ ಮುಟ್ಟಲು ಸಾಧ್ಯವಾದರೆ, ಮತ್ತು ಮುಟ್ಟಿದರೆ ಮುಂದಕ್ಕೆ ಅವರಿಗೆ ಸತ್ಯಾನ್ವೇÀಣ ಮಾಡುವ ಕೆಲಸವೇ ಇರುವುದಿಲ್ಲ. ಜ್ಞಾನಾರ್ಜನೆ ಮಾಡಬೇಕಾದ ಅಗತ್ಯವಿರುವುದಿಲ್ಲ. ಮತ್ತು ಮನಶ್ಯಕ್ತಿಯನ್ನಾಗಲಿ ಹೃದಯಶಕ್ತಿಯನ್ನಾಗಲಿ ವಿಕಸಿತ ಮಾಡಿಕೊಳ್ಳ ಬೇಕಾದುದೇ ಇರುವುದಿಲ್ಲ. ಈ ರೀತಿಯಾಗುವುದಾದರೆ ದೇವರು ಸರ್ವಶ್ರೇÀ್ಠನಾಗಿರದೆ ಕೇವಲ ಸಾಮಾನ್ಯ ಮನುÀ್ಯನಂತಾಗುವನು. ಮತ್ತು ಮನುÀ್ಯನು ಪೂರ್ಣಜ್ಞಾನದ ಪರಮಾವಧಿಯನ್ನು ಮುಟ್ಟಿ ಮುಂದುವರಿಯಲು ಇನ್ನು ಮಾರ್ಗವೇ ಇಲ್ಲದಂತಾಗುವುದು. ಇಂತಹ ಸ್ಥಿತಿಯಲ್ಲಿ ದೇವರು ನಮ್ಮನ್ನು ಇಡದೇ ಇರುವುದಕ್ಕಾಗಿ ಆತನಿಗೆ ಸ್ತೋತ್ರವಾಗಲಿ. ದೇವರು ಅನಂತನು ಮತ್ತು “ತನ್ನಲ್ಲೇ ಜ್ಞಾನವಿದ್ಯಾ ಸಂಬಂಧವಾದ ನಿಕ್ಷೇಪಗಳ ನ್ನೆಲ್ಲಾ ಅಡಗಿಸಿಕೊಂಡಿದ್ದಾನೆ.” ಮನುÀ್ಯನು ಯುಗಯುಗಗಳವರೆಗೆ ಆತನನ್ನು ಹುಡುಕುತ್ತಾ ವಿದ್ಯೆಯಲ್ಲಿ ಮುಂದುವರೆಯುತ್ತಾ ಹೋದರೂ ಅತನಲ್ಲಿ ಅಡಿಗಿರುವ ನಿಧಿಯನ್ನು ಅಂದರೆ ಆತನ ಜ್ಞಾನ, ಶಕ್ತಿ, ಒಳ್ಳೇತನಗಳು ಏನೆಂದು ಅರಿಯಲಾರರು. ಆತನು ಎಂದೆಂದಿಗೂ ಗೂಢವಾದ ದ್ರವ್ಯವಾಗಿಯೇ ಇರುವನು.LI 99.1

    ದೇವರು ಈ ನಮ್ಮ ಜೀವಮಾನದಲ್ಲಿ ಆತನ ವಾಕ್ಯದ ಸತ್ಯಗಳು ನಮಗೆ ಯಾವಾಗಲೂ ಪ್ರಕಟವಾಗುತ್ತಿರಬೇಕೆಂದು ಇÀ್ಟಪಡುತ್ತಾನೆ. ಇದನ್ನು ಪಡೆಯಲು ಒಂದೇ ಒಂದು ಮಾರ್ಗವಿದೆ. ದೇವರ ವಾಕ್ಯವನ್ನು ಪ್ರಕಟಮಾಡಿದ ಪವಿತ್ರಾತ್ಮನಿಂದಲೇ ಇದು ಸಾಧ್ಯ. “ದೇವರ ಆಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವುದಿಲ್ಲ. ಆ ಆತ್ಮನು ಎಲ್ಲಾ ವಿÀಯಗಳನ್ನೂ ದೇವರ ಅಗಾಧವಾದ ವಿÀಯಗಳನ್ನೂ ಕೂಡ ಪರಿಶೋಧಿಸುವವನಾಗಿದ್ದಾನೆ.” ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿÀಯಗಳಲ್ಲಿ ಸತ್ಯಕ್ಕೆ ಸೇರಿಸುವನು. “.....................ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುತ್ತಾ ನನ್ನನ್ನೇ ಮಹಿಮೆಪಡಿಸುವನು.”LI 100.1

    ಮನುÀ್ಯನು ತನ್ನ ವಿವೇಚನಾಶಕ್ತಿಯನ್ನು ಉಪಯೋಗಿಸಲೆಂದು ದೇವರು ಇÀ್ಟಪಡುತ್ತಾನೆ; ಸತ್ಯವೇದದ ಪರಿಶೋಧನೆಯು ಇತರ ಪುಸ್ತಕಗಳ ಪರಿಶೋಧನೆಗಳಿಗಿಂತಲೂ ಹೆಚ್ಚಾಗಿ ಮನುÀ್ಯನ ಬುದ್ಧಿಶಕ್ತಿಯ ಮಟ್ಟವನ್ನು ಉತ್ತರಿಸಿ ಬಲಪಡಿಸುತ್ತದೆ. ಆದರೆ ಸಕಾರಣಗಳನ್ನು ಅಲ್ಲಗೆÀಳೆಯುªವಿಚಾರದಲ್ಲಿ ಎಚ್ಚರವಾಗಿರಬೇಕು; ನಾವು ಈ ರೀತಿ ಮಾಡುವುದಕ್ಕೆ ನಮ್ಮ ಬಲಹೀನತೆಯೇ ಕಾರಣವಾಗಿದೆ. ಸತ್ಯವೇದದಲ್ಲಿರುವ ಯಾವುದೇ ಒಂದು ಸಾಮಾನ್ಯಭಾಗದ ಅರ್ಥವಾದರೂ ನಮಗೆ ಅರ್ಥವಾಗದಿದ್ದರೆ, ನಾವು ಒಂದು ಸಣ್ಣ ಮಗುವಿನ ಸ್ವಭಾವವನ್ನೂ ನಂಬಿಕೆಯನ್ನೂ ಹೊಂದಿ ಕಲಿತುಕೊಳ್ಳಲು ಸಿದ್ಧರಾಗಿರಬೇಕು. ಮತ್ತು ಪವಿತ್ರಾತ್ಮನ ನಡೆಯಿಸುವಿಕೆಗಾಗಿ ಬೇಡುತ್ತಿರಬೇಕು. ದೇವರ ಶಕ್ತಿ, ಆತನ ಜ್ಞಾನವನ್ನು ನಾವು ತಿಳಿದುಕೊಳ್ಳಲು ಅಶಕ್ತರಾಗಿರುವುದನ್ನು ಗಮನಿಸಿ ದೈನ್ಯ ಭಾವದಿಂದ ಆನತ ಸನ್ನಿದಿಗೆ ಪ್ರವೇಶಿಸುತ್ತೇವೋ ಅನ್ನುವ ರೀತಿಯಲ್ಲಿ ಸತ್ಯವೇದವನ್ನು ತೆರೆಯಬೇಕು. ನಾವು ಸತ್ಯವೇದವನ್ನು ಓದಲು ಪ್ರಾರಂಭಿಸಿದಾಗ ನಮ್ಮ ವಿವೇಚನಾಶಕ್ತಿಗಿಂತಲೂ ಅದು ಹೆಚ್ಚಿನ ಅಧಿಕಾರವನ್ನು ಹೊಂದಿದೆ ಎಂದು ಒಪ್ಪಿಕೊಂಡು, ನಮ್ಮ ಹೃದಯವೂ ಮತ್ತು ಜ್ಞಾನವೂ ‘ಇರುವಾತನೂ’ ಆದ ಆತನ ಎದುಗಿನಲ್ಲಿ ಬಗ್ಗಿ ನಮಸ್ಕರಿಸಬೇಕು.LI 100.2

    ಹೊರಗಿನ ತೋರಿಕೆಯ ಪ್ರಕಾರ ಕÀ್ಟಕರವೂ ಮತ್ತು ಗೂಢವೂ ಆದ ಅನೇಕ ಸಂಗತಿಗಳಿವೆ. ಯಾರು ಈ ರೀತಿ ಅವುಗಳನ್ನು ಗ್ರಹಿಸಲು ಯತ್ನಿಸುತ್ತಾರೋ ಅಂಥವರಿಗೆ ದೇವರು ತಾನೇ ಅವುಗಳನ್ನು ಸ್ಪÀ್ಟಮಾಡಿ, ಸುಲಭವಾಗಿ ಗ್ರಹಿಸಿಕೊಳ್ಳುವಂತೆ ಮಾಡುತ್ತಾನೆ; ಆದರೆ ಪವಿತ್ರಾತ್ಮನು ನಮ್ಮನ್ನು ನಡಿಸದೇ ಹೋದರೆ ನಾವು ಸದಾ ದೇವರ ವಾಕ್ಯಗಳಿಗೆ ತಪ್ಪಾದ ಅರ್ಥವನ್ನು ಮಾಡಿ, ಅವುಗಳನ್ನು ತಾರುಮಾರು ಮಾಡುತ್ತೇವೆ. ಸತ್ಯವೇದವನ್ನು ಬಹಳವಾಗಿ ಓದಿದರೂ ಕೆಲವು ಸಂದರ್ಭಗಳಲ್ಲಿ ಲಾಭಕ್ಕೆ ಪ್ರತಿಯಾಗಿ ನÀ್ಟವೇ ಪ್ರಾಪ್ತವಾಗುವುದು. ದೇವರ ವಾಕ್ಯವನ್ನು ನಾವು ಭಕ್ತಿಯಿಲ್ಲದೆಯೂ, ಪ್ರಾರ್ಥನೆ ಮಾಡದೆಯೂ ಓದಲು ತೆರೆಯುವುದಾದರೆ ಮತ್ತು ಆತನ ಚಿತ್ತಕ್ಕೆ ನಮ್ಮ ಚಿತ್ತಗಳು ಸರಿಹೊಂದಿ ಕೊಂಡಿರದಿದ್ದರೆ ನಮ್ಮಲ್ಲಿ ಪ್ರೀತಿಯ ಯೋಚನೆಗಳಿಲ್ಲದಿದ್ದರೆ ಮಾತ್ರ ನಮ್ಮ ಮನಸ್ಸುಗಳಲ್ಲಿ ಸಂಶಯವು ತಲೆದೋರತ್ತದೆ.LI 101.1

    ಇಂತಹ ಸ್ಥಿತಿಯಲ್ಲಿ ನಾವು ದೇವರ ವಾಕ್ಯವನ್ನು ಓದುವಾಗ ಸಂಶಯಗಳು ಬಲವಾಗುತ್ತವೆ. ಸೈತಾನನು ನಮ್ಮ ಯೋಚನೆಗಳನ್ನು ತನ್ನ ಹತೋಟಿಗೆ ತೆಗೆದುಕೊಂಡು ತಪ್ಪಾದ ವ್ಯಾಖ್ಯಾನಗಳನ್ನು ನಮ್ಮ ಮನಸ್ಸಿಗೆ ತರುತ್ತಾನೆ. ಯಾವಾಗ ಮನುÀ್ಯನು ಮಾತಿನಿಂದಲೂ ಮತ್ತು ಕ್ರಿಯೆಯಿಂದಲೂ ದೇವರ ಸಂಗಡ ಹೊಂದಿಕೆಯಾಗುವುದಿಲ್ಲವೋ ಆಗ ಆತನು ಎÉ್ಟೀ ವಿದ್ವಾಂಸನಾಗಲಿ ಸತ್ಯವೇದದ ವಚನಗಳಿಗೆ ತಪ್ಪು ಅರ್ಥ ಮಾಡಿಕೊಳ್ಳುತ್ತಾನೆ; ಮತ್ತು ಯಾರೇ ಆಗಲಿ ಸ್ವಂತ ವ್ಯಾಖ್ಯಾನದ ಮೇಲೆ ಆತುಕೊಳ್ಳುವುದು ಕ್ಷೇಮಕರವಲ್ಲ. ಸತ್ಯವೇದದಲ್ಲಿ ತಪ್ಪುಗಳನ್ನೇ ಹುಡುಕುವವರಿಗೆ ಆತ್ಮೀಯ ದೃಷ್ಟಿಯಿರುವುದಿಲ್ಲ.LI 101.2

    ಪಾಪದ ಮೇಲಿರುವ ಪ್ರೀತಿಯೇ ಅನೇಕ ಸಮಯಗಳಲ್ಲಿ ಅಪನಂಬಿಕೆಗೂ ಸಂಶಯಕ್ಕೂ ಕಾರಣವಾಗಿರುತ್ತದೆ. ದೇವರ ವಾಕ್ಯದ ಬೋಧನೆಗಳೂ ನಿಬಂ ಧನೆಗಳೂ ಅಹಂಕಾರಿಗಳಗೂ, ಪಾಪಪ್ರಿಯರಿಗೂ ಅವುಗಳ ಕಟ್ಟಳೆಗಳನ್ನು ಕೈಕೊಳ್ಳಲು ಮನಸ್ಸಿಲ್ಲದವರಿಗೂ ಅದರ ಅಧಿಕಾರದ ವಿಚಾರ ಸಂಶಯಪಡುವವರಿಗೂ ಇವು ದುಸ್ಸಹನೀಯಗಳಾಗಿವೆ. ಸತ್ಯವನ್ನು ತಿಳಿದುಕೊಳ್ಳಲು ನಮಗೆ ಸಹಜವಾದ ಆಶೆಯು ಇರಬೇಕು; ಮತ್ತು ಅದನ್ನು ಕೈಕೊಳ್ಳಲು ಬೇಕಾದ ಮನಸ್ಸು ಇರಬೇಕು. ಈ ಭಾವನೆಯನ್ನು ಇರಿಸಿಕೊಂಡು ಸತ್ಯವೇದವನ್ನು ಓದುವವರು ಇದು ದೇವರ ವಾಕ್ಯವೇ ಹೌದೆಂಬುದನ್ನು ನಾನಾ ಸಾಕ್ಷ್ಯಗಳಿಂದ ತಿಳಿದುಕೊಳ್ಳುತ್ತಾರೆ. ಆಗ ಅವರಿಗೆ ಸತ್ಯವೇದದ ಸತ್ಯಾಂಶಗಳು ಅರ್ಥವಾಗಿ ಅವುಗಳಿಂದಲೇ ಅವರು ಬುದ್ಧಿಶಾಲಿಗಳಾಗಿ ರಕ್ಷಣೆಗೆ ಅರ್ಹರಾಗುತ್ತಾರೆ.LI 101.3

    ಕ್ರಿಸ್ತನು ಈ ರೀತಿಯಾಗಿ ಹೇಳುತ್ತಾನೆ - “ಆತನ ಚಿತ್ತದಂತೆ ಯಾರಿಗೆ ನಡೆಯುವುದಕ್ಕೆ ಮನಸ್ಸದೆಯೊ ಅವರಿಗೆ ಈ ಬೋಧನೆಯು ದೇವರಿಂದ ಬಂದದ್ದೊ ....................ನಾನೇ ಕಲ್ಪನೆ ಮಾಡಿ ........................ ಗೊತ್ತಾಗುವುದು.”1 ನಿನಗೆ ಗೊತ್ತಾಗದಿರುವ ಸಂಗತಿಗಳ ವಿಚಾgನಿರರ್ಥಕವಾದ ವಾದವನ್ನು ಹೂಡದೆ, ನಿನಗೆ ಈಗಾಗಲೇ ಸಿಕ್ಕಿರುವ ಬೆಳಕಿನ ವಿಚಾರ ಯೋಚಿಸು, ಆಗ ನಿನಗೆ ಹೆಚ್ಚಿನ ಬೆಳಕು ಸಿಕ್ಕುವುದು. ಕ್ರಿಸ್ತನ ಕರುಣೆಯಿಂದ ನಿನಗೆ ಸ್ಪÀ್ಟಮಾಡಲ್ಪಟ್ಟಿರುವ ನಿನ್ನ ಕರ್ತವ್ಯವನ್ನು ಮಾಡು, ತದನಂತರ ನಿನಗೆ ಸಂಶಯಾತ್ಮಕವಾದ ಮತ್ತು ತಿಳಿಯದಿರುವ ಕರ್ತವ್ಯಗಳನ್ನು ಮಾಡಲು ಸಾಧ್ಯವಾಗುವುದು.LI 102.1

    ಘನವಿದ್ವಾಂಸರಿಗಾಗಲಿ ಕೇವಲ ವಿದ್ಯಾಹೀನರಿಗಾಗಲಿ ಒಂದು ಸಾಕ್ಷಿಯು ಎಲ್ಲರಿಗೂ ತಿಳಿಯುವ ರೀತಿಯಲ್ಲಿ ಕೊಡಲ್ಪಟ್ಟಿರುತ್ತದೆ. ಅದೇ ಅನುಭವಸಾಕ್ಷಿ ಎಂಬುದು. ದೇವರು ತನ್ನ ವಾಕ್ಯದ ಮತ್ತು ವಾಗ್ದಾನಗಳ ಸತ್ಯತೆಯನ್ನು ನಾವೇ ಸ್ವತ: ಪರೀಕ್ಷಿಸಿ, ನಮಗೆ ನಾವೇ ಸಿದ್ಧಾಂತ ಮಾಡಿಕೊಳ್ಳಬೇಕೆಂದು ಅಪೇಕ್ಷಿಸಿ ನಮ್ಮನ್ನು ಅಹ್ವಾನಿಸುತ್ತಾನೆ. ಆತನ ಮಾತು ಇಲ್ಲಿ ಇದೆ. “ಯೆಹೋವನು ಸರ್ವೋತ್ತಮನೆಂದು ಅನುಭವದಿಂದ ತಿಳಿದುಕೊಳ್ಳಿರಿ.” ಇತರರ ಮಾತುಗಳ ಮೇಲೆ ನಾವು ಆತುಕೊಂಡಿರದೆ, ನಾವೇ ನಮ್ಮ ಅನುಭವದಿಂದ ದೇವರ ವಾಕ್ಯವನ್ನೂ, ದೇವರನ್ನೂ ತಿಳಿದುಕೊಳ್ಳಬೇಕು. ಆತನು ಹೀಗೆ ಹೇಳಿದ್ದಾನೆ - “ಬೇಡಿಕೊಳ್ಳಿರಿ ನಿಮಗೆ ದೊರಕುವುದು” ಆತನ ವಾಗ್ದಾನವು ನೆರವೇರು ವುದು. ಅವು ಎಂದಗೂ ನಿರರ್ಥಕವಾಗಲಾರವು ಮತ್ತು ನಿರರ್ಥಕವಾಗಿರುವುದೂ ಇಲ್ಲ. ಕ್ರಿಸ್ತನ ಬಳಿಗೆ ನಾವು ಎಳೆಯಲ್ಪಟ್ಟು ಆತನ ಸಂಪೂರ್ಣವಾದ ಪ್ರೀತಿಯಲ್ಲಿ ಸಂತೋಷಿಸಿದರೆ ಆತನ ಪ್ರಸನ್ನತೆಯ ಬೆಳಕಿನಲ್ಲಿ ಕತ್ತಲೆಯೂ ಸಂಶಯಗಳೂ ಪರಿಹಾರವಾಗುವುವು. ಶ್ರೀ ಪೌಲನು ಹೀಗೆ ಹೇಳುತ್ತಾನೆ - “ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು.” ಮರಣದಿಂದ ಪಾರಾಗಿ ಜೀವಕ್ಕೆ ಸೇರಿದ ಪ್ರತಿಯೊಬ್ಬನೂ ಈ ರೀತಿ ಹೇಳಲು ಸಾಧ್ಯ. ‘ನನಗೆ ಸಹಾಯವು ಅಗತ್ಯವಾಗಿದ್ದಿತು; ಅದು ಕ್ರಿಸ್ತನಿಂದ ದೊರಕಿತ್ತು. ನನಗೆ ಬೇಕಾದುದೆಲ್ಲಾ ಆತನಿಂದ ದೊರೆಯಿತು. ನನ್ನ ಆತ್ಮದ ಹಸಿವು ತೃಪ್ತಿಯಾಯಿತು. ಸತ್ಯವೇದವು ಈಗ ಕ್ರಿಸ್ತನ ಪ್ರಕಟಣೆಯಾಗಿದೆ. ಕ್ರಿಸ್ತನಲ್ಲಿ ನೀನು ಏತಕ್ಕೆ ನಂಬಿಕೆಯಿಟ್ಟಿದ್ದೀ ಎಂದು ಕೇಳುತ್ತೀಯ? ಹೌದು, ಆತನೇ ನನಗೆ ರಕ್ಷಕನಾಗಿರುತ್ತಾನೆ. ನಾನು ಏತಕ್ಕಾಗಿ ಸತ್ಯವೇದವನ್ನು ನಂಬುತ್ತೇನೆಂದು ಒಬ್ಬನು ನನ್ನನ್ನು ಕೇಳಬಹುದು. ಹೌದು, ಅದು ನನ್ನ ಆತ್ಮನಿಗೆ ದೈವವಾಕ್ಯವಾಗಿದೆ ಎಂದುಕೊಂಡಿರುತ್ತೇನೆ.’ ಸತ್ಯವೇದವು ಸತ್ಯವೆಂದೂ ಕ್ರಿಸ್ತನು ದೈವಕುಮಾರನೆಂದೂ ನಮಗೆ ಸಾಕ್ಷ್ಯವು ದೊರೆಯಬಹುದು. ವೋಸದ ಮತ್ತು ಕಟ್ಟು ಕಥೆಗಳನ್ನು ನಾವು ನಂಬುವುದಿಲ್ಲವೆಂಬುದು ನಮಗೆ ಗೊತ್ತು. ಪೇತ್ರವು ಸಹೋದರರನ್ನು ಹೀಗೆ ಪ್ರಬೋಧಿಸುತ್ತಾನೆ - “ನೀವು ಕೃಪೆಯಲ್ಲಿಯೂ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸುಕ್ರಿಸ್ತನ ವಿÀಯವಾದ ಜ್ಞಾನದಲ್ಲಿಯೂ ಅಭಿವೃದ್ಧಿಯನ್ನು ಹೊಂದುತ್ತಾ ಇರ್ರಿ.” ದೇವಜನರು ಕೃಪೆಯಲ್ಲಿ ಬೆಳೆಯುತ್ತಾ ಹೋದಹಾಗೆಲ್ಲಾ ಅವರು ಸದಾ ಸತ್ಯವೇದವನ್ನು ಪೂರ್ಣವಾಗಿ ಗ್ರಹಿಸುತ್ತಾ ಬರುವರು. ಇವರು ಪರಿಶುದ್ಧ ಬರಹಗಳಲ್ಲಿ ಹೊಸ ಬೆಳಕನ್ನೂ ಸೌಂದರ್ಯವನ್ನೂ ಕಂಡುಕೊಳ್ಳುವರು. ಈ ಅಂಶವು ಸಭಾಚರಿತ್ರೆಗಳಲ್ಲಿ ವೊದಲಿಂದಲೂ ಸತ್ಯವಾಗಿದೆ. ಮತ್ತು ಇದೇ ರೀತಿಯಾಗಿಯೇ ಇದು ಮುಂದುವರಿಯುತ್ತಾ ಇರುವುದು.LI 102.2

    ಭವಿÀ್ಯತ್ತಿನ ವಿಚಾರ ನಾವು ನಂಬಿಕೆಯಿಂದಿರಬೇಕು; ಜ್ಞಾನದ ಬೆಳವಣಿಗೆಗೆ ಆತನ ವಚನಗಳನ್ನು ಆಧಾರ ಮಾಡಿಕೊಳ್ಳಬೇಕು. ಮನುÀ್ಯನ ಶಕ್ತಿಸಾಮಥ್ರ್ಯಗಳು ದೇವರ ಸಂಗಡ ಮಿಳಿತವಾಗಿ ನಮ್ಮ ಆತ್ಮನ ಪ್ರತಿಶಕ್ತಿಯು ಬೆಳಕಿನ ಮೂಲಕಾರಣವಾದ ದೇವರ ಸಂಗಡ ಸಂಪರ್ಕವನ್ನು ಪಡೆದುಕೊಳ್ಳವುದು. ದೇವರ ಪರಿಪಾಲನೆಯ ವಿÀಯವಾಗಿ ನಮಗೆ ಕಂಡುಬರುವ ಗಲಿಬಿಲಿ ಗಾಬರಿಗಳು ಪರಿÁ್ಕರವಾಗುತ್ತಿರುತ್ತವೆಂದು ಹರ್ಷಿಸುವ; ನಾವು ತಿಳಿಯಲಸಾಧ್ಯವಾದ ಸಂಗತಿಗಳು ಆಗ ನಮಗೆ ಗೋಚರಕ್ಕೆ ಬರುತ್ತವೆ. ಮತ್ತು ಯಾವ ವಿÀಯಗಳು ವೊದಲು ನಮಗೆ ಗಲಿಬಿಲಿಗೂ ಅಪನಂಬಿಕಗೂ ಕಾರಣಗಳಾಗಿ, ಸದುದ್ದೇಶವಿಲ್ಲದವುಗಳ ಹಾಗೆ ಕಂಡುಬರುತ್ತಿದ್ದವೋ ಅಂತಹ ವಿÀಯಗಳು ದೇವರೊಡನೆ ನಮಗುಂಟಾಗುವ ಸಹವಾಸದಿಂದ, ಸಂಪೂರ್ಣವಾಗಿಯೂ, ಸಂದೇಹದ ಹೊದಿಕೆಗಳಿಲ್ಲದ್ದಾಗಿಯೂ ಕಂಡುಬರುವುವು. “ಈವಾಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ ದೇವರ ಮುಖವು ವೊಬ್ಬಾಗಿ ಕಾಣಿಸುತ್ತದೆ; ಆವಾಗ ಮುಖಾಮುಖಿಯಾಗಿ ಆತನನ್ನು ನೋಡುವೆವು.”LI 103.1

    Larger font
    Smaller font
    Copy
    Print
    Contents