Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ
    ಹೆಚ್ಚಿನದಾಗದಿದ್ದರೆ ನೀವು ಪರಲೋಕ ರಾಜ್ಯದಲ್ಲಿ ಸೇರಲಾರಿರಿ.”

    ಶಾಸ್ತ್ರಿಗಳ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಅಸಡ್ಡೆಮಾಡುತ್ತಿದ್ದುದರಿಂದ ಕ್ರಿಸ್ತನನ್ನು ಮಾತ್ರವಲ್ಲದೆ ಆತನ ಶಿಷ್ಯರನ್ನೂ ಪಾಪಿಗಳೆಂದು ಶಾಸ್ತ್ರಿಗಳೂ ಫರಿ ಸಾಯರೂ ದೂಷಿಸಿದರು, ಮತಾಧಿಕಾರಿಗಳೆಂದು ತಾವು ಗೌರವಿಸುತ್ತಿದ್ದವರಿಂದ ದೋಷಾರೋಪಿಸಲ್ಪಡುವುದನ್ನೂ ಖಂಡಿಸಲ್ಪಡುವುದನ್ನೂ ಶಿಷ್ಯರು ನೋಡಿ ದಿಗ್ಭ್ರಾಂತರಾಗಿ ಕ್ಲೇಷಗೊಂಡರು. ಕ್ರಿಸ್ತನು ಅವರ ಕೃತ್ರಿಮವನ್ನು ಬಯಲುಪಡಿಸಿದನು. ಫರಿಸಾಯರು ಗಣ್ಯವಾದ್ದೆಂದು ತಿಳಿದ ನೀತಿಯು ಕೆಲಸಕ್ಕೆ ಬಾರದ್ದೆಂದು ಯೇಸುವು ತೋರ್ಪಡಿಸಿದನು. ತಾವು ವಿಶೇಷವಾದವರೂ ರಾಜನಿಷ್ಠೆಯುಳ್ಳವರೂ ಮತ್ತು ದೇವರ ಒಲವಿಗೆ ಪಾತ್ರರಾದವರೆಂದು ಯೆಹೂದ್ಯ ಜನಾಂಗದವರು ಸಾಧಿಸಿದರು; ಆದರೆ ಅವರ ಮತವು ರಕ್ಷಣೆಗೆ ಹೇತುವಾದ ವಿಶ್ವಾಸರಹಿತವಾದುದೆಂದು ಕ್ರಿಸ್ತನು ಸೂಚಿಸಿದನು. ಅವರ ದೈವನಿಷ್ಠೆಯ ವೇಷವೂ, ಮಾನವ ಕಟ್ಟಳೆ ಮತ್ತು ಸಂಪ್ರದಾಯಗಳೂ ಮತ್ತು ಧರ್ಮಶಾಸ್ತ್ರ ವಿಧಿಗಳನ್ನು ಅನುಸರಿಸುತ್ತೇವೆಂದು ಹೆಮ್ಮೆಯಿಂದ ಹೇಳಿಕೊಂಡ ಬಾಹ್ಯತೋರ್ಕೆಯೂ, ಅವರನ್ನು ಪವಿತ್ರರನ್ನಾಗಿ ಮಾಡಲು ಪ್ರಯೋಜನವಾಗಲಾರವು. ಅವರು ಹೃದಯದಲ್ಲಿ ನಿರ್ಮಲರಾಗಿರಲಿಲ್ಲ, ಅಥವಾ ಗುಣದಲ್ಲಿ ಶ್ರೇಷ್ಠರಾಗಿಯೂ ಕ್ರಿಸ್ತನಂತೆಯೂ ಇರಲಿಲ್ಲ.MBK 57.3

    ನ್ಯಾಯಬದ್ಧವಾದ ಒಂದು ಮತವು ಆತ್ಮವನ್ನು ದೇವರ ಅನ್ಯೋನ್ಯತೆಗೆ ತರಲು ಸಾಲದುದಾಗಿದೆ. ಫರಿಸಾಯರ ದುರ್ಭರವೂ ಕಠಿನವೂ ಆದ ಸಂಪ್ರದಾಯವೂ, ಮರುಕ, ದಯಾರ್ದ್ರ ಅಥವಾ ಪ್ರೀತಿರಹಿತ ಗುಣವೂ ಪಾಪಿಗಳಿಗೆ ಅಡಚಣೆಯಾಗಿದ್ದುವು. ಅವರು ನಿಸ್ಸಾರವಾದ ಉಪ್ಪಿನಂತಿದ್ದರು; ಯಾಕಂದರೆ ಅವರ ಪ್ರಭಾವವು ಲೋಕವನ್ನು ನೀತಿಭ್ರಷ್ಟತೆಯಿಂದ ತಪ್ಪಿಸುವ ಶಕ್ತಿಯಿಲ್ಲದೆ ಇತ್ತು. ಆತ್ಮದ ಶುದ್ಧೀಕರಣೆಗಾಗಿ “ಪ್ರೀತಿಯಿಂದ ಕೆಲಸ ನಡಿಸುವವನಂತೆಯೇ” (ಗಲಾತ್ಯ 5: 6) ಯಥಾರ್ಥವಾದ ನಂಬಿಕೆ. ಅದು ಗುಣಗಳನ್ನು ಮಾರ್ಪಡಿಸುವ ಹುಳಿಯಂತಿರುವುದು.MBK 58.1

    ಯೆಹೂದ್ಯರು ಇವೆಲ್ಲವನ್ನೂ ಪ್ರವಾದಿಗಳ ಬೋಧನೆಯಿಂದ ಕಲಿತಿರಬೇಕಾಗಿತ್ತು. ಶತಮಾನಗಳಿಗೆ ಹಿಂದೆಯೇ ದೇವರೊಡನೆ ನ್ಯಾಯಸ್ಥಾಪಿಸಲು ಆತ್ಮವು ಮೊರೆಯಿಟ್ಟು ಆತನ ಧ್ವನಿಯನ್ನೂ ಮತ್ತು ಉತ್ತರವನ್ನೂ ಪ್ರವಾದಿಯಾದ ಮೀಕನ ವಾಕ್ಯಗಳಲ್ಲಿ ಕಂಡುಕೊಂಡಿದೆ. “ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವುದನ್ನರ್ಪಿಸಿ ಮಹೋನ್ನತ ದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನೂ ಒಂದು ವರುಷದ ಕರುಗಳನ್ನೂ ತೆಗೆದುಕೊಂಡು ಬಂದು ಆತನ ಮುಂದೆ ಕಾಣಿಸಿಕೊಳ್ಳಲಿ? ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚಾನೇ?.... ಮನುಷ್ಯನೇ ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟ್; ನ್ಯಾಯವನ್ನು ಆಚರಿಸುವುದು, ಕರುಣೆಯಲ್ಲಿ ಆಸಕ್ತನಾಗಿರುವುದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವುದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು? ಮೀಕ 6: 6-8.MBK 58.2

    ಪ್ರವಾದಿಯಾದ ಹೊಶೇಯನು ಪರಿಸಾಯತ್ವದ ಮೂಲಸಾರವೇನೆಂಬುದನ್ನು ಈ ಮಾತುಗಳಲ್ಲಿ ತಿಳಿಸಿದ್ದಾನೆ: “ಇಸ್ರಾಯೇಲು ಸೊಂಪಾಗಿ ಬೆಳೆದ ದ್ರಾಕ್ಷಾಲತೆಯಾಗಿದೆ; ಹಣ್ಣು ಬಿಟ್ಟುಕೊಂಡಿದೆ.” ಹೊಶೇಯ 1೦: 1. ದೇವರ ಸೇವೆಯೆಂದು ಹೇಳಿಕೊಂಡು, ಯೆಹೂದ್ಯರು ನೆಜವಾಗಿಯೂ ಸ್ವಾರ್ಥಕ್ಕಾಗಿ ದುಡಿಯುತ್ತಿದ್ದರು. ಧರ್ಮಶಾಸ್ತ್ರವನ್ನು ಕೈಕೊಳ್ಳಲು ಅವರ ಸ್ವಂತ ಪ್ರಯತ್ನದ ಫಲವೇ ಅವರ ನೀತಿಯಾಗಿತ್ತು, ಇವೆಲ್ಲವೂ ಅವರ ಸ್ವಂತ ಇಷ್ಟದ ಪ್ರಕಾರವು ಮತ್ತು ತಮ್ಮ ಸ್ವಪ್ರಯೋಜನಕ್ಕಾಗಿಯೇ. ಆದುದರಿಂದ ಅವರಿದ್ದುದಕ್ಕಿಂತಲೂ ಲವಲೇಶವಾದರೂ ಉತ್ತಮವಾಗಿರಲಿಲ್ಲ. ತಮ್ಮನ್ನು ಪವಿತ್ರರನ್ನಾಗಿ ಮಾಡಿಕೊಳ್ಳುವ ಅವರ ಪ್ರಯತ್ನದಲ್ಲಿ, ಅಶುದ್ಧವಾದುದರಿಂದ ಶದ್ಧವಾದುದನ್ನು ತರುವ ಪ್ರಯತ್ನದಲ್ಲಿದ್ದರು. ಯೆಹೋವನ ಧರ್ಮಶಾಸ್ತ್ರವು ಆತನು ಪರಿಶುದ್ಧನಾಗಿರುವಂತೆ ಪರಿಶುದ್ಧವಾಗಿವೆ, ಆತನು ಪರಿಪೂರ್ಣನಾಗಿರುವಂತೆ ಅವುಗಳೂ ಪರಿಪೂರ್ಣವಾಗಿವೆ. ಇವು ಮಾನವರಿಗೆ ದೇವರ ನೀತಿಯಲ್ಲು ಪರಿಚಯಗೊಳಿಸುತ್ತವೆ. ಮನುಷ್ಯನಿಗೆ ತಾನೇ ಈ ಧರ್ಮಶಾಸ್ತ್ರವನ್ನು ಕೈಕೊಳ್ಳಲಾಗುವುದಿಲ್ಲ; ಯಾಕಂದರೆ ಮನುಷ್ಯನ ಸ್ವಭಾವವು ಅಂದಗೆಟ್ಟು ನೀತಿಭ್ರಷ್ಟವಾಗಿ ದೇವರ ಸೌಜನ್ಯಗಳಿಗೆ ವಿರೋಧವಾಗಿದೆ. ಸ್ವಾರ್ಥತೆಯಿಂದ ಕೂಡಿದ ಹೃದಯದ ನಡತೆಯೆಲ್ಲಾ ಅಶುದ್ಧವಾಗಿವೆ; “ನಮ್ಮ ನೀತಿಯೆಲ್ಲಾ-ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲಿಯ ಬಟ್ಟೆಯಂತಿವೆ.” ಯೆಶಾಯ 64: 6. MBK 59.1

    ಧರ್ಮಶಾಸ್ತ್ರವು ಪವಿತ್ರವಾಗಿರುವುದರಿಂದ, ಯೆಹೂದ್ಯರು ಧರ್ಮಶಾಸ್ತ್ರಗಳನ್ನು ಕೈಕೊಳ್ಳಲು ತಮ್ಮ ಸ್ವಂತ ಪ್ರಯತ್ನದಿಂದ ನೀತಿಯನ್ನು ಹೊಂದಲಾರದಾದರು. ಕ್ರಿಸ್ತನ ಶಿಷ್ಯರು ಪರಲೋಕ ರಾಜ್ಯದಲ್ಲಿ ಸೇರಬೇಕಾದರೆ ಪರಿಸಾಯರ ನೀತಿಗಿಂತಲೂ ಉತ್ತಮವಾದುದನ್ನು ಹೊಂದಿರಬೇಕಾಗಿತ್ತು. ದೇವರು ತನ್ನ ಸ್ವಂತ ಮಗನಲ್ಲಿ ಧರ್ಮಶಾಸ್ತ್ರದ ಪರಿಪೂರ್ಣ ನೀತಿಯನ್ನು ದಯಪಾಲಿಸಿದನು. ಅವರು ಕ್ರಿಸ್ತನನ್ನು ಅಂಗೀಕರಿಸಿಕೊಳ್ಳಲು ತಮ್ಮ ಹೃದಯಗಳನ್ನು ಸಂಪೂರ್ಣವಾಗಿ ತೆರೆದರೆ, ಆಗ ದೇವರ ತತ್ ಸ್ವರೂಪವೂ ಆತನ ಪ್ರೀತಿಯೂ ಅವರಲ್ಲಿ ನೆಲಸಿ ಆತನು ಅವರನ್ನು ತನ್ನ ಸ್ವಾರೂಪ್ಯಕ್ಕೆ ಮಾರ್ಪಡಿಸುವನು; ಹೀಗೆ ಧರ್ಮಶಾಸ್ತ್ರವು ತೋರುವ ನೀತಿಯನ್ನು ದೇವರ ಉಚಿತ ವರವಾಗಿ ಹೊಂದಿಕೊಳ್ಳುವರು. ಆದರೆ ಫರಿಸಾಯರಾದರೋ ಕ್ರಿಸ್ತನನ್ನು ತ್ಯಜಿಸಿ ತಾತ್ಸಾರ ಮಾಡಿದರು; “ಅವರು ದೇವರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದ್ದರಿಂದ ದೇವರ ನೀತಿಗೆ” (ರೋಮಾಯ 1೦: 1) ತಮ್ಮನ್ನು ಅಧೀನಪಡಿಸಿಕೊಳ್ಳಲಿಲ್ಲ. MBK 59.2

    ಯೇಸುವು ತನ್ನ ಉಪದೇಶವನ್ನು ಕೇಳುತ್ತಿದ್ದವರಿಗೆ ದೇವರ ಆಜ್ಞೆಗಳನ್ನು ಕೈಕೊಳ್ಳುವುದು ಅಂದರೇನೆಂದು ತೋರಿಸಲು ಪ್ರವರ್ತಿಸಿದನು,-ಇದು ಕ್ರಿಸ್ತನ ಸ್ವಭಾವವನ್ನು ತಮ್ಮಲ್ಲಿ ನಿರೂಪಿಸುವುದೇ ಆಗಿದೆ. ಪ್ರತಿದಿನವೂ ದೇವರು ಆತನ ಮೂಲಕವಾಗಿ ಅವರ ಮುಂದೆ ಶ್ರುಅತಪಡಿಸಲ್ಪಡುತ್ತಿದ್ದನು.MBK 60.1