Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  “ನಿಮ್ಮ ವೈರಿಗಳನ್ನು ಪ್ರೀತಿಸಿರಿ.”

  ರಕ್ಷಕನು ಕಲಿಸಿದ “ಕೆಡುಕನ್ನು ಅದುರಿಸಬೇಡ” ಎಂಬ ಪಾಠವು ಸೇಡು ತೀರಿಸಿಕೊಳ್ಳುವ ಸ್ವಭಾವವುಳ್ಳ ಯೆಹೂದ್ಯರಿಗೆ ಕರ್ಣಕಠೋರವಾಗಿತ್ತು, ಮತ್ತು ಅವರು ತಮ್ಮತಮ್ಮೊಳಗೆ ಅದಕ್ಕೆ ವಿರುದ್ಧವಾಗಿ ಗೊಣಗುಟ್ಟಿದರು. ಆದರೆ ಈಗ ಯೇಸುವು ಅದಕ್ಕಿಂತಲೂ ಅಧಿಕ ಕಠಿಣವಾದುದನ್ನು ವ್ಯಕ್ತಪಡಿಸುತ್ತಾನೆ.MBK 77.1

  “ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆ ಮಾಡಬೇಕೆಂದು ಹೇಳಿಯದೆ ಎಂಬದಾಗಿ ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವುದೇನಂದರೆ ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ. ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ಮಕ್ಕಳಾಗುವಿರಿ.” MBK 77.2

  ಶಸ್ತ್ರಿಗಳು ಇದನ್ನು ನಿರುತ್ಸಾಹ ಮತ್ತು ನಿಷ್ಠುರವಾದ ನಿರ್ಬಂಧಾಜ್ಞೆಯೆಂದು ಅಪಾರ್ಥ ಕಲ್ಪಿಸಿದ್ದರು. ತಾವು ಬೇರೆಲ್ಲಾ ಜನರಿಗಿಂತಲೂ ಶ್ರೇಷ್ಠರೂ ಇಸ್ರಾಯೇಲರಾಗಿ ಹುಟ್ಟಿದ ಪುಣ್ಯದಿಂದ ದೇವರ ವಿಶೇಷ ಪ್ರೀತಿಗೆ ಪಾತ್ರರೆಂದು ನೆನಸಿದರು; ಆದರೆ ಹೀನಯಿಸಿದ ಸುಂಕದವರಿಗಿಂತಲೂ ಮತ್ತು ಪಾಪಿಗಳಿಗಿಂತಲೂ ಶ್ರೇಷ್ಠರೆನಿಸಿಕೊಳ್ಳಬೇಕಾದರೆ ಕ್ಷಮಾಗುಣಪೂರಿತವಾದ ಪ್ರೀತಿಯೇ ಸಾಕ್ಷಿಯಾಗಿರಬೇಕೆಂದು ಯೇಸು ತೋರಿಸಿಕೊಟ್ಟನು.MBK 77.3

  ಪ್ರಪಂಚದ ಪ್ರಭುವಾದಾತನನ್ನು “ನಮ್ಮ ತಂದೆ” ಯೆಂಬ ಹೊಸ ಹೆಸರಿನಿಂದ ತನ್ನ ಬೋಧನೆಯನ್ನು ಕೇಳುತ್ತಿದ್ದವರಿಗೆ ತೋರ್ಪಡಿಸಿದನು. ದೇವರ ಹೃದಯವು ಅವರಿಗಾಗಿ ಎಷ್ಟು ಹಂಬಲಿಸುತ್ತದೆಂದು ಅವರು ತಿಳಿದುಕೊಳ್ಳಬೇಕೆಂದು ಇಚ್ಛಿಸಿದನು. ದೇವರು ತಪ್ಪಿಹೋದ ಪ್ರತಿಯೊಂದು ಆತ್ಮಕ್ಕಾಗಿಯೂ ತವಕಿಸುತ್ತಾನೆಂದು ಆತನು ಹೇಳುತ್ತಾನೆ; “ತಂದೆಯು ಮಕ್ಕಳನ್ನು ಕನಿಕರಿಸು ವಂತೆ ಯೆಹೋವನು ತನ್ನಲ್ಲಿ ಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ.” ಕೀರ್ತನೆ 1೦3: 13. ದೆವರ ವಿಷಯವಾದ ಇಂಥಾ ಭಾವನೆಯು ಸತ್ಯವೇದದಲ್ಲೇ ಹೊರತು ಬೇರಾವ ಮತದಿಂದಲೂ ಲೋಕಕ್ಕೆ ಕೊಡಲ್ಪಡಲಿಲ್ಲ. ವಿಧರ್ಮೀಯರು ಜನರಿಗೆ ದೇವರು ಪ್ರೀತಿಸ್ವರೂಪನ್ದು ಕಲಿಸದೆ ಭಯಂಕರನೆಂದು ತೋರ್ಪಡಿಸುತ್ತಾರೆ,-ತನ್ನ ಪ್ರೀತಿಯ ವರವನ್ನು ತನ್ನ ಮಕ್ಕಳ ಮೇಲೆ ಹೇರಳವಾದ ಆಶೀರ್ವಾದಗಳನ್ನು ಸುರಿಸುವ ತಂದೆಯೆನ್ನದೆ, ಬಲಿಗಳಿಂದ ತಣಿಸಬೇಕಾದ ಕ್ರೂರ ದೇವರೆಂದು ಭಾವಿಸುವರು. ಇಸ್ರಾಯೇಲ ಜನರೂ ಕೂಡ, ತಂದೆಗೆ ಸಮಾನವಾದ ಪ್ರೀತಿಯು ಆದಿಯಲ್ಲಿಯೇ ಬಂದದ್ದೂ ಮತ್ತು ಲೋಕಕ್ಕೆ ಇದೊಂದು ನೂತನ ವರವೆಂದೂ ಪ್ರವಾದಿಗಳು ಬೋಧಿಸಿದ ಅಮೂಲ್ಯ ತತ್ವಗಳ ವಿಷಯದಲ್ಲಿ ವಿವೇಚನಾಹೀನರಾಗಿದ್ದರು.MBK 77.4

  ದೇವರನ್ನು ಸೇವಿಸಿದವರು ಮಾತ್ರವೇ ಆತನು ಪ್ರೀತಿಸುತ್ತಾನೆಂದು ಯೆಹೂದ್ಯರು ಭಾವಿಸಿದರು,-ಅವರ ಭಾವನೆಯಲ್ಲಿ, ಶಾಸ್ತ್ರಿಗಳ ವಿಧಿನಿಯಮಗಳನ್ನು ಅನುಸರಿಸಿದವರನ್ನು ಮಾತ್ರ ಪ್ರೀತಿಸುವನೆಂದೂ,-ಉಳಿದ ಲೋಕದವರೆಲ್ಲರೂ ಆತನ ಕೋಪಕ್ಕೆ ಮತ್ತು ಶಾಪಕ್ಕೂ ಅಧೀನರೆಂದು ಭಾವಿಸಿದರು. ಹಾಗಲ್ಲವೆಂದು ಯೇಸು ಹೇಳಿದನು; ಲೋಕವೆಲ್ಲಾ, ಕೆಟ್ಟವರೂ ಒಳ್ಳೆಯವರೂ, ಆತನ ಪ್ರೀತಿಯ ಸೂರ್ಯನ ಪ್ರಸನ್ನತೆಯಲ್ಲಿದ್ದಾರೆ. ಈ ಸತ್ಯವನ್ನು ಪ್ರಕೃತಿಯಲ್ಲೇ ಕಲಿಯಬೇಕಿತ್ತು; ಯಾಕಂದರೆ “ಕೆಟ್ಟವರ ಮೇಲೆಯೂ ಒಳ್ಲೆಯವರಮೆಲೆಯೂ ತನ್ನ ಸೂರ್ಯನು ಮೂಡುವಂತೆ ಮಾದುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆ ಸುರಿಸುತ್ತಾನೆ.” MBK 78.1

  ಭೂಮಿಯು ವರ್ಷವರ್ಷವೂ ಸಂಪದಭಿವೃದ್ಧಿಯನ್ನೀಯುವುದೂ ಮತ್ತು ಸೂರ್ಯನನ್ನು ಸುತ್ತಿಬರುವುದೂ ತನ್ನ ಸ್ವಂತ ಶಕ್ತಿಯಿಂದಲ್ಲ, ದೇವರ ಹಸ್ತವು ಗ್ರಹಗಳನ್ನು ನಡಿಸುತ್ತಾ, ಆಕಾಶದಲ್ಲಿ ಅವುಗಳ ಗಮನ ಗತಿಯಲ್ಲಿ ಕ್ರಮವಾಗಿಟ್ಟಿದ್ದಾನೆ. ಆತನ ಶಕ್ತಿಯಿಂದಲೇ ಗ್ರೀಷ್ಮ ಶಿಶಿರ ಋತುಗಳೂ, ಬಿತ್ತನೆಯ ಕಾಲವೂ ಸುಗ್ಗಿಯ ಕಾಲವೂ, ಹಗಲು ರಾತ್ರಿಯೂ ಪ್ರತಿಯೊಂದೂ ತಮ್ಮ ನಿಯಮಿತ ಅನುಕ್ರಮವನ್ನು ಅನುಸರಿಸುತ್ತವೆ. ಆತನ ವಾಕ್ಯದಿಂದಲೇ ಸಸ್ಯಾದಿಗಳು ಸೊಂಪಾಗಿ ಬೆಳೆಯುತ್ತವೆ, ಎಲೆಗಳೊಡೆಯುತ್ತವೆ, ಮತ್ತು ಪುಷ್ಪಗಳು ವಿಕಸಿಸುತ್ತವೆ. ನಾವು ಹೊಂದಿರದ ಪ್ರತಿಯೊಂದು ಒಳ್ಳೆಯದೂ, ಪ್ರತಿಯೊಂದೂ ಸೂರ್ಯರಶ್ಮಿಯೂ ಮತ್ತು ವೃಷ್ಟಿಯೂ, ಆಹಾರದ ಪ್ರತಿಯೊಂದು ತುತ್ತೂ, ಜೀವನದ ಪ್ರತಿಯೊಂದು ಕ್ಷಣವೂ, ಆತನ ಪ್ರೀತಿಯ ದಾನವಾಗಿದೆ.MBK 78.2

  ನಾವು ಇನ್ನೂ ಮಮತೆಯಿಲ್ಲದವರೂ ತೃಪ್ತಿಕರವಲ್ಲದ ಗುಣವುಳ್ಳವರೂ ಆಗಿರುವಾಗಲೇ, ನಾವು “ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರು ಆಗಿರುವಾಗಲೇ ನಮ್ಮ ಪರಮ ತಂದೆಯು ನಮ್ಮ ಮೇಲೆ ಕನಿಕರವುಳ್ಳವನಾಗಿದ್ದನು.” ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಜನೋಪಕಾರವೂ ಪ್ರತ್ಯಕ್ಷವಾದಾಗ ನಾವು ಮಾಡಿದ ಪುಣ್ಯಕ್ರಿಯೆಗಳಿಂದಲ್ಲ, ಆತನ ಕರುಣೆಯಿಂದಲೇ....ನಮ್ಮನ್ನು ರಕ್ಷಿಸಿದನು” ತೀತನು 3: 3-5. ಆತನಿಂದ ಹೊಂದಿದ ಪ್ರೀತಿಯು ನಮ್ಮನ್ನೂ, ನಮಗೆ ಇಷ್ಟರಾದವರಿಗೆ ಮಾತ್ರವಲ್ಲ, ಆದರೆ ನಡತೆಯಲ್ಲಿ ನ್ಯಾನತೆ ದೋಷವುಳ್ಳವರಿಗೂ ಮತ್ತು ಪಾಪಿಷ್ಟರಿಗೂ ದಯಾವಂತರೂ ಸೌಮ್ಯರೂ ಆಗಿರುವಂತೆ ಮಾಡುವುದು.MBK 79.1

  ದೇವರ ಸ್ವಭಾವದಲ್ಲಿ ಭಾಗಿಗಳಾಗಿರುವವರೇ ಆತನ ಮಕ್ಕಳು. ಲೋಕದಲ್ಲಿ ನಮ್ಮ ಸ್ಥಾನವೂ, ಜನನವೂ, ಕುಲವೂ ಅಥವಾ ಮತದಲ್ಲಿನ ಸದವಕಾಶಗಳೂ ನಾವು ದೇವರ ಕುಟುಂಬದ ಸದಸ್ಯರೆಂದು ಸಮರ್ಥಿಸುವುದಿಲ್ಲ; ಆದರೆ ಅದು ಪ್ರೀತಿಯಿಂದಲೇ, ಮಾನವ ಕುಲವನ್ನೇ ಆವರಿಸಿರುವ ಪ್ರೀತಿಯಿಂದಲೇ ಸಾಧ್ಯವಾಗುತ್ತದೆ.MBK 79.2

  ತಮ್ಮ ಹೃದಯಗಳನ್ನು ದೇವರಾತ್ಮನಿಗೆ ಸಂಪೂರ್ಣವಾಗಿ ಮುಚ್ಚದಿರುವ ಪಾಪಿಗಳೂ, ನಲ್ಮೆಗೆ ಪ್ರತಿವರ್ತಿಸುವರು; ದ್ವೇಷಕ್ಕೆ ದ್ವೇಷವನ್ನೇ ತೋರ್ಪಡಿಸಿದರೂ, ಪ್ರೀತಿಗೆ ಪ್ರೀತಿಯನ್ನು ತೋರಿಸುವುದು. ಕೃತಘ್ನರಿಗೂ ಮತ್ತು ಕೆಡುಕರಿಗೂ ದಯೆತೋರಿಸುವುದು, ಪ್ರತ್ಯಪಕಾರದ ನಿರೀಕ್ಷಣೆಯಿಲ್ಲದೆ ಒಳ್ಳೇದನ್ನೂ ಮಾಡುವುದೂ ಪರಲೋಕ ರಾಜತ್ವದ ಲಾಂಛನವಾಗಿದೆ, ಮತ್ತು ಉನ್ನತಾಧಿಪತಿಯ ಮಕ್ಕಳು ತಮ್ಮ ಉನ್ನತ ಅಂತಸ್ತನ್ನು ವ್ಯಕ್ತಪಡಿಸುವುದರ ಕುರುಹಾಗಿದೆ.MBK 79.3