Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”

    ಯೆಹೂದ್ಯರು ತಮ್ಮ ನೀತಿವರ್ತನೆಯನ್ನು ಕುರಿತು ಮಿತಿಮೀರಿದ ದುರಭಿಮಾನವುಳ್ಳವರಾಗಿ ಅನ್ಯಜನಾಂಗಗಳ ವಿಷಯ ಲೋಲುಪತೆಯ ಅಭ್ಯಾಸವನ್ನು ಅತ್ಯಂತ ಜಿಗುಪ್ಸೆಯಿಂದ ಕಾಣುತ್ತಿದ್ದರು. ಪ್ರಭುತ್ವದ ಆಜ್ಞೆಯ ಮೇರೆಗೆ ಪಾಲೆಸ್ತೀನ ದೇಶಕ್ಕೆ ತರಲ್ಪಟ್ಟಿದ್ದ ರೋಮ ಅಧಿಕಾರಿಗಳ ಪ್ರಸನ್ನತೆಯು ಜನರಿಗೆ ಅವಿಚ್ಛಿನ್ನ ವಿಘ್ಹ್ನವಾಗಿತ್ತು; ಈ ವಿದೇಶೀಯರೊಡನೆ ಅಜ್ಞಾನಿಗಳ ಪದ್ಧತಿಗಳೂ, ಕಾಮತೃಷೆ, ವಿಷಯಲೋಲುಪತೆ ಮುಂತಾದುವು ತಂಡತಂಡವಾಗಿ ಬಂದುವು. ಕಪೆರ್ನೌಮಿನಲ್ಲಿ, ರೋರ್ಮ ಅಧಿಕಾರಿಗಳು ತಮ್ಮ ವಿಲಾಸಿನಿಯರಾದ ಪ್ರೇಯಸಿಯರೊಡನೆ ಸಾರ್ವಜನಿಕ ಪ್ರದರ್ಶನ ಸ್ಥಳಗಳನ್ನೂ ಮತ್ತು ವಿಹಾರ ಪಥಗಳನ್ನೂ ಹಾವಳಿ ಮಾಡುತ್ತಿದ್ದರು, ಮತ್ತು ಪದೇ ಪದೇ ಪ್ರಶಾಂತವಾದ ಸರೋವರದಲ್ಲಿ ಇವರ ವಿಹಾರ ದೋಣಿಯು ಚಲಿಸುತ್ತಾ ಇವರ ಕ್ರೀಡಾಲೋಲುಪ್ತತೆಯ ಧ್ವನಿಯು ಆ ಶಾಂತವಾತಾವರಣವನ್ನೇ ಭೇದಿಸಿಕೊಂಡು ಕೇಳುತ್ತಿತ್ತು. ಈ ಪಂಗಡದವರ ವಿಷಯದಲ್ಲಿ ಯೇಸುವಿನ ಕಠೋರ ದೋಷೋದ್ಘಾಟನೆಯನ್ನು ಕೇಳಬೇಕೆಂದು ಕೂಡಿದ್ದ ಜನರು ಇಚ್ಛಿಸಿದರು; ಆದರೆ ಆತನ ವಾಕ್ಯಗಳನ್ನು ಕೇಳುತ್ತಾ ಅವರ ಸ್ವಂತ ಹೃದಯದ ಪಾಪಕೃತ್ಯಗಳು ಅನಾವೃತವಾದಾಗ ಅವರ ಆಶ್ಚರ್ಯವೇನು!MBK 64.1

    ದುಷ್ಟತನದ ಯೋಚನೆಯು ಪ್ರೀತಿಸಲ್ಪಟ್ಟು ಎಷ್ಟೇ ರಹಸ್ಯವಾಗಿ ಪಾಲಿಸಲ್ಪಡುತ್ತಿರಲಿ, ಅದು ಹೃದಯದಲ್ಲಿ ಪಾಪವು ಇನ್ನೂ ಆಳುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಯೇಸು ಹೇಳಿದನು. ಆತ್ಮವು ಇನ್ನೂ ಕಟುವಿಷದಲ್ಲಿಯೂ ಮತ್ತು ಅಧರ್ಮದ ಗುಲಾಮತ್ವದಲ್ಲಿದೆ. ಯಾವನು ಅಪವಿತ್ರವಾದ ದೃಷ್ಯಗಳಲ್ಲಿ ತಲ್ಲೀನನಾಗಿ ಸುಖನುಭವವನ್ನು ಹೊಂದುತ್ತಾನೋ, ಯಾವನು ಪಾಪಯೋಚನೆಯಲ್ಲಿ ಲೋಲುಪ್ತನಾಗಿರುವನೋ, ಕಾಮತೃಷೆಯಿಂದ ಕೂಡಿದ ನೋಟದಲ್ಲಿ ತಲ್ಲೀನನಾಗಿರುವನೋ ಅವನು ತನ್ನ ಆತ್ಮ ಕೊಠಡಿಯಲ್ಲಿ ಬಚ್ಚಿಟ್ಟಿರುವ ದುಷ್ಟತನದ ನಿಜಸ್ವಭಾವವನ್ನು, ಅದರ ಲಜ್ಜೆಯ ಭಾರದೊಡನೆಯೂ ಮತ್ತು ಹೃದಯ ಭೇದಕ ಯಾತನೆಯೊಡನೆಯೂ ಬಹಿರಂಗ ಪಾಪದಲ್ಲಿ ಕಾಣಬಹುದು. ಶೋಧನೆಯುಂಟಾಗುವ ಸಮಯದಲ್ಲಿ ಒಬ್ಬನು ಘೋರಪಾಪಕ್ಕೆ ಬೀಳುವುದು ಆಗ ವ್ಯಕ್ತವಾದ ದುಷ್ಟತನವನ್ನು ಉಂಟುಮಾಡುವುದಿಲ್ಲ, ಆದರೆ ಹೃದಯದಲ್ಲಿ ಗುಪ್ತವಾಗಿ ಹುದುಗಿದ್ದ ಪಾಪವನ್ನು ವಿಕಸಿಸುತ್ತದೆ ಅಥವಾ ಬಹಿರಂಗಪಡಿಸುತ್ತದೆ. ಒಬ್ಬ ಮನುಷ್ಯನು “ತನ್ನ ಒಳಗಿನ (ಹೃದಯದ) ಯೋಚನೆಯಂತೆಯೇ ಇದ್ದಾನೆ” ಯಾಕಂದರೆ ಹೃದಯದೊಳಹಿಂದ “ಜೀವಧಾರೆಗಳು ಹೊರಡುವುವು” ಜ್ಞಾನೋಕ್ತಿ 23: 7; 4: 23.MBK 64.2