Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಿನ್ನ ಬಲಗೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಬಿಸಾಟು ಬಿಡು.”

    ವ್ಯಾಧಿಯು ದೇಹಕ್ಕೆಲ್ಲಾ ಹರಡಿ ಪ್ರಾಣವನ್ನೇ ಕಳೆದುಕೊಳ್ಳುವುದನ್ನು ತಪ್ಪಿಸಲು, ಒಬ್ಬ ಮನುಷ್ಯನು ತನ್ನ ಬಲಗೈಯನ್ನಾದರೂ ಕಳೆದುಕೊಳ್ಳಲು ಇಷ್ಟಪಡುವನು. ಇದಕ್ಕಿಂತಲೂ ಆತ್ಮದ ಜೀವವನ್ನು ಗಂಡಾಂತರಕ್ಕೊಳಗಾಗಿಸುವುದಕ್ಕೆ ಎಷ್ಟೋ ಹೆಚ್ಚಾಗಿ ಅರ್ಪಣೆ ಮಾಡಲು ಇಷ್ಟಪಡುವವನಾಗಿರಬೇಕು.MBK 65.1

    ಸೈತಾನನಿಂದ ಗುಲಾಮತ್ವಕ್ಕೊಳಪಟ್ಟು ನೀತಿಭ್ರಷ್ಟರಾದ ಆತ್ಮಗಳು ಸುವಾರ್ತೆಯ ಮೂಲಕ ರಕ್ಷಿಸಲ್ಪಟ್ಟು, ದೇವರ ಮಕ್ಕಳ ಮಹತ್ವವುಳ್ಳ ಸ್ವಾತಂತ್ರದಲ್ಲಿ ಪಾಲುದಾರರಾಗಬೇಕು. ಪಾಪದ ಫಲವಾದ ಅನಿವಾರ್ಯ ಸಂಕಟದಿಂದ ಮಾತ್ರ ಪಾರಾಗಿಸುವುದು ದೇವರ ಉದ್ದೇಶವಲ್ಲ, ಆದರೆ ಪಾಪದಿಂದ ರಕ್ಷಿಸುವುದೇ ಆತನ ಉದ್ದೇಶವಾಗಿದೆ. ಕಳಂಕವಾದ ಮತ್ತು ವಿರೂಪಗೊಂಡ ಆತ್ಮವು “ಯೆಹೋವನ ಪ್ರಸನ್ನತೆಯಿಂದ” ಭೂಷಿತವಾಗುವಂತೆಯೂ, “ತನ್ನ ಮಗನ ಸ್ವಾರೂಪ್ಯವುಳ್ಳವರಾಗುವುದಕ್ಕೂ” ಶುದ್ಧೀಕರಿಸಲ್ಪಟ್ಟು ಮಾರ್ಪಡಬೇಕು. “ದೇವರ್ಯ್ ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧ ಮಾಡಿರುವಂಥದೆಲ್ಲವನ್ನು ಕಣ್ಣು ಕಾಣಲಿಲ್ಲ, ಕಿವಿ ಕೇಳಲಿಲ್ಲ, ಆದರ ಭಾವನೆಯು ಮನುಷ್ಯನ ಹೃದಯದಲ್ಲಿ ಹುಟ್ಟಲಿಲ್ಲ” ಕೀರ್ತನೆ 9೦: 17: ರೋಮಾಯ 8: 29; 1 ಕೊರಿಂಥ 2: 9. ದೇವರ ಸ್ವಾರೂಪ್ಯಕ್ಕೆ ಪುನಃ ಸ್ಥಾಪಿಸಲ್ಪಟ್ಟಾಗ ಮನುಷ್ಯನು ಸಾಧಿಸಿದ ಪ್ರಭಾವವುಳ್ಳ ಅಂತ್ಯವನ್ನು ನಿತ್ಯತೆಯು ಮಾತ್ರವೇ ಪ್ರದರ್ಶಿಸಬಲ್ಲುದು.MBK 65.2

    ಈ ಅತ್ಯುಚ್ಚ ಭಾವನೆಯನ್ನು ಮುಟ್ಟಬೇಕಾದರೆ, ಆತ್ಮಕ್ಕೆ ಅಡ್ಡಿಯಾಗಿರುವವುಗಳು ತ್ಯಜಿಸಲ್ಪಡಬೇಕು. ಇಚ್ಛೆಯಿಂದಲೇ ಪಾಪದ ಹಿಡಿತವು ನಮ್ಮಲ್ಲಿ ಭದ್ರವಾಗಿರುತ್ತದೆ. ಇಚ್ಛೆಯಡಕವು ಒಂದು ಕಣ್ಣನ್ನು ಕೀಳುವುದು ಅಥವಾ ಒಂದು ಕೈಯನ್ನು ಕಡಿಯುವುದರಿಂದ ಸೂಚಿತವಾಗಿದೆ. ನಮ್ಮ ಇಚ್ಛೆಗಳನ್ನು ದೇವರಿಗೆ ಅಧೀನ ಮಾಡುವುದು ಜೀವನದಲ್ಲಿ ಕುಂಟನಾಗಿಯೋ ಅಥವಾ ಅಂಗಹೀನನಾಗಿಯೋ ಇರುವುದೆಂದು ಅನೇಕ ಸಾರಿ ನಮಗೆ ತೋರುತ್ತದೆ. ಆದರೆ ನಿತ್ಯಜೀವಕ್ಕೆ ಸೇರುವುದಕ್ಕೆ ಆತ್ಮಜಿಜ್ಞಾಸೆಯು ಕುಂಟಾಗಿಯೂ, ಗಾಯಗೊಂಡು, ಅಂಗಹೀನವಾಗಿರುವುದು ಉತ್ತಮವಾದುದೆಂದು ಕ್ರಿಸ್ತನು ಹೇಳುತ್ತಾನೆ. ನೀನು ಯಾವುದನ್ನು ದುರದೃಷ್ಟವೆಂದು ನೆನಸುತ್ತೀಯೋ ಅದೇ ಅತ್ಯುಚ್ಚ ಹಿತಕ್ಕೆ ಬಾಗಿಲಾಗಿದೆ.MBK 65.3

    ದೇವರು ನಿತ್ಯಜೀವದ ಬುಗ್ಗೆಯಾಗಿದ್ದಾನೆ, ನಾವು ಆತನೊಡನೆ ಸಂಪರ್ಕದಿಂದಿರುವುದರಿಂದ ಮಾತ್ರವೇ ಆ ನಿತ್ಯಜೀವವನ್ನು ಹೊಂದಬಹುದು. ದೇವರಿಂದ ಬೇರ್ಪಟ್ಟು, ಸ್ವಲ್ಪ ಕಾಲಕ್ಕೆ ನಾವು ಜೀವದಿಂದಿರಬಹುದು, ಆದರೆ ನಾವು ನಿತ್ಯಜೀವವನ್ನು ಹೊಂದಿಲ್ಲ. “ಭೋಗಿಯಾಗಿರುವ ವಿಧವೆಯು ಬದುಕಿರುವಾಗಲೂ ಸತ್ತವಳೇ.” 1 ತಿಮೋಥೆ 5: 6. ನಮ್ಮ ಇಚ್ಛೆಗಳನ್ನು ದೇವರಿಗೆ ಅಧೀನ ಮಾಡುವುದರಿಂದ ಮಾತ್ರವೇ, ನಮಗೆ ಜೀವವನ್ನು ಕೊಡಲು ಆತನಿಗೆ ಸಾಧ್ಯವಾಗುತ್ತದೆ. ಆತ್ಮಾರ್ಪಣೆಯಿಂದ ಆತನ ಜೀವ್ಯವನ್ನು ಹೊಂದುವುದರ ಮೂಲಕವೇ ನಾನು ತೋರಿಸಿದ ರಹಸ್ಯವಾದ ಪಾಪಗಳು ಜಯಿಸಲಾಗುವುವೆಂದು ಕ್ರಿಸ್ತನು ಹೇಳಿದನು. ನಿನ್ನ ಹೃದಯದಲ್ಲಿ ಇವುಗಳನ್ನು ಗುಪ್ತವಾಗಿ ಹುದುಗಿಸಿಟ್ಟುಕೊಂಡು, ಮಾನವರ ಕಣ್ಣುಗಳಿಗೆ ಮರೆಮಾಡಬಹುದು, ಆದರೆ ದೇವರ ಸನ್ನಿಧಿಯಲ್ಲಿ ಹೇಗೆ ನಿಲ್ಲುವಿ?MBK 66.1

    ನೀವು ಸ್ವಾರ್ಥಕ್ಕೆ ಅಂಟಿಕೊಂಡು ನಿಮ್ಮ ಅಭಿಲಾಷೆಗಳನ್ನು ದೇವರಿಗೆ ಅಧೀನ ಪಡಿಸಲು ತಾತ್ಸಾರ ಮಾಡಿದರೆ, ನೀವು ಮರಣವನ್ನೇ ಆರಿಸಿಕೊಳ್ಳುರ್ರೀರಿ. ಪಾಪವು ಎಲ್ಲಿದ್ದರೂ ಅಲ್ಲಿ ದೇವರು ದಹಿಸುವ ಅಗ್ನಿಯಾಗಿದ್ದಾನೆ. ನೀವು ಪಾಪವನ್ನೇ ಆರಿಸಿಕೊಂಡು, ಅದರಿಂದ ಬೇರ್ಪಡಿಸಲು ತಿರಸ್ಕರಿಸಿದರೆ, ಪಾಪವನ್ನು ದಹಿಸುವ ದೇವರ ಪ್ರಸನ್ನತೆಯು ನಿಮ್ಮನ್ನು ದಹಿಸಿಬಿಡಬೇಕು.MBK 66.2

    ನಿಮ್ಮನ್ನು ದೇವರಿಗೆ ಒಪ್ಪಿಸಲು ತ್ಯಾಗವು ಅವಶ್ಯವಾಗಿದೆ; ಆದರೆ ಕನಿಷ್ಠವಾದ ಈ ತ್ಯಾಗವು ಉತ್ಕೃಷ್ಟವಾದ್ದಕ್ಕಾಗಿಯೂ, ಲೌಕೀಕವದದ್ದು ಆತ್ಮೀಯವಾದ್ದಕ್ಕೂ, ನಾಶವಾಗತಕ್ಕದ್ದು ನಿತ್ಯವಾದ್ದಕ್ಕೂ ಆಗಿದೆ. ನಮ್ಮ ಇಚ್ಛೆಗಳು ನಾಶವಾಗಬೇಕೆಬುದು ದೇವರ ಎಣಿಕೆಯಲ್ಲ; ಅದು ಇರುವುದರಿಂದ ಮಾತ್ರವೇ ದೇವರು ನಮಗೆ ಮಾಡಬೇಕೆಂದು ಹೇಳುವುದನ್ನು ನೆರವೇರಿಸಲು ಸಾಧ್ಯವಾಗುತ್ತದೆ. ನಮ್ಮ ಇಚ್ಛೆಯು ಆತನ ಅಧೀನಕ್ಕೊಪ್ಪಿಸಲ್ಪಡಬೇಕು, ಆಗ ಅದು ಯಾವ ದೋಷವೂ ಇಲ್ಲದಂತೆ ಶುದ್ಧೀಕರಿಸ್ಲಟ್ಟು ಕರುಣೆಯಿಂದ ದೇವರೊಡನೆ ಐಕ್ಯಗೊಂಡು ನಮ್ಮ ಮೂಲಕವಾಗಿ ಆತನ ಪ್ರೀತಿಯನ್ನೂ ಮತ್ತು ಶಕ್ತಿಯನ್ನೂ ಪ್ರವಾಹ ವಾಗಿ ಆತನು ಹೊಯ್ಯುವಂತೆ, ಮರಳಿ ಹೊಂದುವೆವು. ಹಟಮಾರಿ ಹೃದಯದವರಿಗೆ ಈ ತ್ಯಾಗವು ಎಷ್ಟು ಕರಕರೆಯನ್ನು, ನೋವನ್ನು ಉಂಟುಮಾಡುವುದಾದರೂ ಇದು ಅವರ ಹಿತಕ್ಕಾಗಿಯೇ.MBK 66.3

    ಯಾಕೋಬನು ಕುಂಟನಾಗಿ ಸಹಾಯಶೂನ್ಯನಾಗಿ ಬಿದ್ದು ಒಡಂಬಡಿಕೆಯ ದೂತನ ಎದೆಯನ್ನು ಅಪ್ಪಿಕೊಳ್ಳುವವರೆಗೂ ಜಯಸಾಧಕವಾದ ವಿಶ್ವಾಸವನ್ನು ಗ್ರಹಿಸಲೂ ಮತ್ತು ದೇವರೊಡನೆ ರಾಜಪುತ್ರನೆಂಬ ಬಿರುದನ್ನು ಹೊಂದಲೂ ಸಾಧ್ಯವಾಗಲಿಲ್ಲ. ಅವನು “ತನ್ನ ತೊಡೆಯ ನಿಮಿತ್ತ ಕುಂಟಿಕೊಂಡು ನಡೆ” ದಾಗಲೇ (ಆದಿಕಾಂಡ 32: 31) ಏಸಾವನ ಜನರು ಅವನ ಮುಂದೆ ಸ್ತಬ್ಧರಾದರು, ಮತ್ತು ದೊಡ್ಡ ರಾಜವಂಶಸ್ಥನಾದ ಪರೋಹನು ಅವನ ಆಶೀರ್ವಾದವನ್ನು ಹಂಬಲಿಸಿದನು. ಹಾಗೆಯೇ ನಮ್ಮ ರಕ್ಷಣಾಕರ್ತನು “ಬಾಧೆಗಳ ಮೂಲಕ ಸಿದ್ಧಿಗೆ ಬಂದನು” (ಇಬ್ರಿಯ 2: 1೦), ಮತ್ತು ನಂಬಿಕೆಯ ಪುತ್ರರು “ನಿರ್ಬಲರಾಗಿದ್ದು ಬಲಿಷ್ಠರಾದರು,” “ಪರರ ದಂಡುಗಳನ್ನು ಓಡಿಸಿಬಿತ್ತರು” ಇಬ್ರಿಯ 11: 34. ಹಾಗೆಯೇ “ಕುಂಟರೂ ಸುಲಿಗೆ ಮಾಡಿದರು” (ಯೆಶಾಯ 33: 23), ಮತ್ತು “ಕುಂಟನೂ ದಾವೀದನಂತಿರುವನು, ದಾವೀದನ ವಂಶವು.....ಯೆಹೋವನ ದೂತನ ಹಾಗೆ” ಅವರಿಗೆ ಮುಂದಾಳಾಗಿದ್ದರು. (ಜೆಕರ್ಯ 12: 8)MBK 67.1