Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ?”

    “ನೀನು ಆ ದೋಷಗಳನ್ನು ನಡಿಸುತ್ತೀಯಲ್ಲಾ” ಎಂಬ ವಾಕ್ಯವೂ, ತನ್ನ ಸಹೋದರನನ್ನು ಟೀಕಿಸಿ ತೆಗಳುವುದು ಯುಕ್ತವೆಂದು ನೆನಸುವವನು ತನ್ನ ಪಾಪಗಳ ಮಹತ್ವವನ್ನು ಗ್ರಹಿಸುವಂತೆ ಮಾಡುವುದಿಲ್ಲ. ಯೇಸುವು ಹೇಳಿದ್ದೇನಂದರೆ “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ?” MBK 125.3

    ಆತನ ವಾಕ್ಯಗಳು ಇತರರಲ್ಲಿ ತಪ್ಪು ಹುಡುಕಲು ಚುರುಕಾದವರನ್ನು ವರ್ಣಿಸುತ್ತದೆ. ಗುಣದಲ್ಲಾಗಲಿ, ಜೀವನದಲ್ಲಾಗಲಿ ಏನಾದರೊಂದು ಕೊರತೆಯನ್ನು ಕಂಡುಹಿಡಿದ್ದೇನೆಂದು ನೆನಸುವಾಗ, ಅದನ್ನು ಬಹಿರಂಗವಾಗಿ ತೋರ್ಪಡಿಸುವ ಪ್ರಯತ್ನದಲ್ಲಿ ಬಹು ಶ್ರದ್ಧೆಯುಳ್ಳವನಾಗಿದ್ದಾನೆ; ಆದರೆ ಕ್ರಿಸ್ತನಿಗನುಸಾರವಲ್ಲದ ಇಂಥ ಗುಣಗಳನ್ನು ವೃದ್ಧಿಪಡಿಸುವ ಕಾರ್ಯವನ್ನು ಟೀಕಿಸಿದ ದೋಷದೊಡನೆ ತಾಳೆ ನೋಡುವುದಾದರೆ ರವೆಗೂ ತೊಲೆಗೂ ಹೇಗೋ ಅಷ್ಟು ಅಂತರವಿರುವುದು. ಒಬ್ಬನಲ್ಲಿ ಸಹನೆಯ ಮತ್ತು ಪ್ರೀತಿಯ ಗುಣವಿಲ್ಲದುದೇ ಅಣುವನ್ನು ಒಂದು ದೊಡ್ಡ ಲೋಕವನ್ನಾಗಿ ಮಾಡುವುದಕ್ಕೆ ಕಾರಣವಾಗಿದೆ. ಕ್ರಿಸ್ತನಿಗೆ ತಮ್ಮನ್ನು ಸಂಪೂರ್ಣವಾಗಿ ಅಧೀನಪಡಿಸಿದ ಪಶ್ಚಾತ್ತಾಪದ ಅನುಭವವಿಲ್ಲದವರು, ತಮ್ಮ ಜೀವನದಲ್ಲಿ ರಕ್ಷಕನ ಕೋಮಲವರ್ಧಕ ಪರಿಣಾಮವನ್ನು ವ್ಯಕ್ತಪಡಿಸದವರಾಗಿದ್ದಾರೆ. ಅವರು ಸುವಾರ್ತೆಯ ವಿನೀತ, ಉದಾರಚರಿತ ಸ್ವಭಾವವನ್ನು ಅಪಾರ್ಥಪಡಿಸುತ್ತಾರೆ, ಮತ್ತು ಕ್ರಿಸ್ತನು ಯಾರಿಗಾಗಿ ಸತ್ತನೋ ಆ ಅಮೂಲ್ಯ ಆತ್ಮಗಳನ್ನು ಘಾತಿಸುವವರಾಗಿದ್ದಾರೆ. ನಮ್ಮ ರಕ್ಷಕನು ಉಪಯೋಗಿಸಿದ ಸಂಕೇತದ ಮೇರೆಗೆ ಇತರರಲ್ಲಿ ತಪ್ಪು ಹುಡುಕುವ ಸ್ವಭಾವದಲ್ಲಿ ತಲ್ಲೀನನಾಗಿರುವವನು ತಾನು ದೂಷಿಸಿದವನಿಗಿಂತಲೂ ಹೆಚ್ಚಿನ ಪಾಪವನ್ನು ಮಾಡುವವನಾಗಿದ್ದಾನೆ; ಹೇಗಂದರೆ ಅವನು ಅದೇ ಪಾಪವನ್ನು ಮಾಡುವುದಲ್ಲದೆ, ಅದಕ್ಕೆ ಅಹಂಕಾರವನ್ನೂ ಮತ್ತು ದೋಷದೃಷ್ಟಿಯ ಪಾಪಗಳನ್ನು ಕೂಡಿಸುವವನಾಗಿದ್ದಾನೆ.MBK 125.4

    ಕ್ರಿಸ್ತನೊಬ್ಬನೇ ನಿಜವಾದ ಗುಣಗಳ ಮಾನದಂಡವಾಗಿದ್ದಾನೆ, ಆದದರಿಮ್ದ ತನ್ನನ್ನು ಇತರರಿಗೆ ಒಂದು ಮಾನದಂಡವಾಗಿ ಹೋಲಿಸುವವನು, ತನ್ನನ್ನು ಕ್ರಿಸ್ತನ ಸ್ಥಾನದಲ್ಲಿರಿಸಿಕೊಳ್ಳುವವನಾಗಿದ್ದಾನೆ. ತಂದೆಯು “ತೀರ್ಪುಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ” ಯೋಹಾನ 5: 22, ಯಾದ್ದರಿಮ್ದ, ಇತರರ ಗುನಗಳನ್ನು ವಿಮರ್ಷಿಸುವುದಕ್ಕೆ ಸ್ವಾತಂತ್ರ್ಯ ವಹಿಸುವವನು ಮರಳಿ ದೇವಕುಮಾರನ ವಿಶೇಷ ಹಕ್ಕನ್ನು ದುರಾಕ್ರಮಣ ಮಾಡುವವನಾಗಿದ್ದಾನೆ. ಈ ಭಾವೀ ನ್ಯಾಯಾಧೀಶರೂ ಮತ್ತು ಗುಣದೋಷ ಪರೀಕ್ಷಕರೂ, “ಯಾವುದು ಪೂಜೆ ಹೊಂದುತ್ತದೋ, ಅದನ್ನೆಲ್ಲಾ ನಾಶನಕ್ಕೆ ಅಧೀನನಾದ ಆ ಪುರುಷನು ಎದುರಿಸಿ ಅದಕ್ಕಿಂತ ಮೇಲಾಗಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ತಾನು ದೇವರೆಂದು ಹೇಳಿಕೊಂಡು ದೇವರ ಗರ್ಭಗುಡಿಯಲ್ಲೇ ಕೂತುಕೊಳ್ಳು” (2 ಥೆಸಲೋನಿಕ 2: 4) ವ, ಅಂತ್ಯ ಕ್ರಿಸ್ತನ ಪಕ್ಷವನ್ನು ವಹಿಸುವವರಾಗಿದ್ದಾರೆ.MBK 126.1

    ಅತಿ ಸಂತೋಷರಹಿತ ಫಲಿತಾಂಶವನ್ನೆಸಗುವ ಪಾಪವು ಯಾವುದೆಂದರೆ ಪರಿಸಾಯತ್ವವನ್ನು ಸೂಚಿಸುವ ನೀರಸವೂ, ವಿಮರ್ಶಾತ್ಮಕವೂ ಮತ್ತು ಕ್ಷಮಾರಹಿತವಾದ ಸ್ವಭಾವವೇ. ಮಮತೆಹೀನ ಮತಾರಾಧನೆಯಲ್ಲಿ, ಕ್ರಿಸ್ತನಿರುವುದಿಲ್ಲ; ಆತನ ಪ್ರಸನ್ನತೆಯ ಸೂರ್ಯಪ್ರಭೆಯು ಅಲ್ಲಿಲ್ಲ. ಕಾರ್ಯೋದ್ಯುಕ್ತತೆಯೂ ಅಥವಾ ಕ್ರಿಸ್ತರಹಿತ ಉತ್ಸಾಹವೂ ಕೊರತೆಯನ್ನು ಪರಿಹರಿಸಲಾರವು. ಇತರರ ತಪ್ಪುಗಳನ್ನು ಹುಡುಕುವುದರಲ್ಲಿ ಮಹತ್ವದ ತೀವ್ರ ಗ್ರಹಣಶಕ್ತಿಯಿರಬಹುದು, ಆದರೆ ಇಂಥಾ ಸ್ವಭಾವಾಸಕ್ತರಾಗಿರುವವರಿಗೆ ಯೇಸುವು ಹೇಳುವುದೇನಂದರೆ, “ಕಪಟಿಯೇ, ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವುದಕ್ಕೆ ಚೆನ್ನಾಗಿ ಕಾಣಿಸುವುದು.” ದೋಷಯುಕ್ತನಾದವನೇ, ಮೊದಲು ತಪ್ಪನ್ನು ಶಂಕಿಸುವವನು. ಇತರರನ್ನು ದೂಷಿಸುವುದಕ್ಕೆ ಪ್ರಯತ್ನಿಸುವುದರಿಮ್ದ ತನ್ನ ಸ್ವಂತ ಹೃದಯದಲ್ಲಿರುವ ಪಾಪವನ್ನು ಗುಪ್ತವಾಗಿಡಲು ಅಥವಾ ನೆವಹೇಳಲು ಪ್ರಯತ್ನಿಸುವವನಾಗಿದ್ದಾನೆ. ಪಾಪದ ಮೂಲಕವಾಗಿಯೇ ಮನುಷ್ಯರಿಗೆ ಕೆಟ್ಟದ್ದರ ಅರಿವು ಉಂಟಾಯಿತು; ಆದಿ ದಂಪತಿಗಳು ಪಾಪಮಾಡಿದ ತಕ್ಷಣದಲ್ಲೇ ಒಬ್ಬರನ್ನೊಬ್ಬರು ದೂಷಿಸಲು ಪ್ರಾರಂಭಿಸಿದರು; ಹೀಗೆ ಕ್ರಿಸ್ತನ ಕೃಪೆಯಿಂದ ಸ್ವಾಧೀನ ಪಡಿಸಲ್ಪಡದ ಮಾನವ ಸ್ವಭಾವವೂ ಮಾಡುವುದು ಸ್ವಭಾವಸಿದ್ಧವಾಗಿದೆ.MBK 126.2

    ಮಾನವರು ಈ ರೀತಿಯಲ್ಲಿ ಆಪಾದನೆ ಮಾಡುವ ಸ್ವಭಾವದಲ್ಲಿ ಮಗ್ನರಾಗಿರುವಾಗ, ತಮ್ಮ ಸಹೋದರರಲ್ಲಿ ಇರಬಹುದಾದ ಕೊರತೆಯನ್ನು ತೋರಿಸುವುದರಲ್ಲೇ ತೃಪ್ತಿಹೊಂದುವುದಿಲ್ಲ. ತಾವು ಮಾಡಬೇಕೆಂದು ನೆನಸಿದ ಕಾರ್ಯವನ್ನು ಒಬ್ಬನು ಮಾಡುವಂತೆ ಸೌಮ್ಯಪ್ರಯತ್ನಗಳು ನಿಷ್ಫಲವಾದರೆ, ಆಗ ಅವರು ಬಲಾತ್ಕಾರವನ್ನು ಅವಲಂಬಿಸುತ್ತಾರೆ. ತಮ್ಮ ಸಾಮರ್ಥ್ಯದಲ್ಲಿ ಸಾಧ್ಯವಾದಮಟ್ಟಿಗೂ ತಮ್ಮ ಆಲೋಚನೆಗಳೇ ಸರಿಯೆಂದು ಅವುಗಳನ್ನು ಅನುಸರಿಸುವಂತೆ ಜನರನ್ನು ನಿರ್ಬಂಧಪಡಿಸುತ್ತಾರೆ. ಕ್ರಿಸ್ತನ ಕಾಲದಲ್ಲಿ ಯೆಹೂದ್ಯರ್ಯ್ ಹೀಗೆ ಮಾಡಿದರು, ಮತ್ತು ಸಭೆಯೂ ಸಹ ಬಹುಕಾಲದಿಮ್ದಲೂ, ಕ್ರಿಸ್ತನ ಕೃಪೆಯನ್ನುಲ್ಲಂಘಿಸಿ, ಜನರನ್ನು ಬಲಾತ್ಕರಿಸಿದೆ. ಪ್ರೀತಿಯ ಪ್ರಭಾವದಲ್ಲಿ ತಾನು ನಿರ್ಗತಿಕವಾದ್ದರಿಮ್ದ ಸಭೆಯು ತನ್ನ ಮತತತ್ವಗಳನ್ನೂ ಮತ್ತು ಆಜ್ಞೆಗಳನ್ನೂ ನಿರ್ಬಂಧದಿಂದ ಸಾಗಿಸುವಂತೆ ರಾಜಕೀಯ ಶಕ್ತಿಯ ಶರಣು ಹೊಕ್ಕಿತು. ಇಲ್ಲಿಯೇ ಮತಸಂಬಂಧವಾಗಿ ನಿಯಮಿತವಾದ ಶಾಸನಗಳ ಮರ್ಮವೂ, ಮತ್ತು ಹೇಬೆಲನ ಕಾಲದಿಮ್ದ ಇಂದಿನವರೆಗೂ ಸಂಭವಿಸಿದ ಕಿರುಕುಳದ ಮರ್ಮವೂ ಅಡಗಿದೆ.MBK 127.1

    ಕ್ರಿಸ್ತನು ಮನುಷ್ಯರನ್ನು ತನ್ನಿಂದ ತರುಬುವುದಿಲ್ಲ, ಆದರೆ ತನ್ನ ಬಳಿಗೆ ಬರಸೆಳೆಯುತ್ತಾನೆ. ಆತನು ಉಪಯೋಗಿಸುವ ಬಲಾತ್ಕಾರವಾದರೂ ಮಮತೆಯ ಬಲಾತ್ಕಾರವೇ. ಸಭೆಯು ತನ್ನ ಆಸರೆಗಾಗಿ ಪ್ರಾಪಂಚಿಕ ಒತ್ತಾಸೆಯನ್ನು ಹಾರೈಸುವಾಗ, ಅದು ಕ್ರಿಸ್ತನ ಶಕ್ತಿಯನ್ನು ತಾತ್ಸಾರ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿದೆ-ಮಮತೆಯ ನಿರ್ಬಂಧವನ್ನು ಕಳಕೊಂಡಿದೆ.MBK 127.2

    ಆದರೆ ಪ್ರಾಮುಖ್ಯವಾಗಿ ಗಹನವಾದ ಪ್ರಸಂಗವು ಪ್ರತಿಯೊಬ್ಬ ಸಭಾಂಗಿಯಲ್ಲಿದೆ, ಇಲ್ಲಿತಾನೆ ಚಿಕಿತ್ಸೆಯನ್ನೆಸಗಬೇಕು. ಅಪಾದಕನು ತಾನೇ ಮೊದಲು ತನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆಯುವಂತೆಯೂ, ದೋಷಾರೋಪಣ ಸ್ವಭಾವಎಜಿಸುವಂತೆಯೂ ಇತರರನ್ನು ತಿದ್ದಲು ಪ್ರಯತ್ನಿಸುವ ಮುನ್ನ ತನ್ನ ಪಾಪವನ್ನು ಒಪ್ಪಿಕೊಂಡು ಬಿಟ್ಟುಬಿಡುವಂತೆಯೂ ಕ್ರಿಸ್ತನು ಎಚ್ಚರಿಸುತ್ತಾನೆ. “ಒಳ್ಳೆಯ ಮರವು ಹಳುಕು ಫಲವನ್ನು ಕೊಡುವುದಿಲ್ಲ; ಹಾಗೆಯೇ ಹುಳುಕು ಮರವು ಒಳ್ಳೆಯ ಫಲವನ್ನು ಕೊಡುವುದಿಲ್ಲ.” ಲೂಕ 6: 43, ನೀನು ಅಭ್ಯಾಸಿಸುತ್ತಿರುವ ದೋಷಾರೋಪಣ ಸ್ವಭಾವವು, ಹುಳುಕು ಫಲವಾಗಿದೆ, ಮತ್ತು ಮರವೂ ಸಹ ಹುಳುಕೆಂದು ತೋರಿಸುತ್ತದೆ. ಸ್ವನೀತಿಯಲ್ಲಿ ನೀನು ಬೆಳೆಯುವುದು ವ್ಯರ್ಥವಾದದ್ದು. ಹೃದಯದ ಮಾರ್ಪಾಡೇ ನಿನಗೆ ಅವಶ್ಯವಾದುದು. ಇತರರನ್ನು ತಿದ್ದಲು ಅರ್ಹನಾಗುವ ಮೊದಲು ಈ ಅನುಭವವು ನಿನ್ನಲ್ಲುಂಟಾಗಬೇಕು; ಯಾಕಂದರೆ “ಹೃದಯದಲ್ಲಿ ತುಂಬಿರುವುದೇ ಬಾಯಲ್ಲಿ ಹೊರಡುವುದು” ಮತ್ತಾಯ 12: 34.MBK 128.1

    ಯಾವುದಾದರೊಂದು ಆತ್ಮಕ್ಕೆ ವಿಷಮಸ್ಥಿತಿಯ ಸಮಯವೊದಗುವಾಗ, ನೀನು ಅವನಿಗೆ ಸಲಹೆಯನ್ನೋ ಅಥವಾ ಬುದ್ಧಿವಾದವನ್ನೋ ಹೇಳಲು ಪ್ರಯತ್ನಿಸುವಾಗ, ನಿನ್ನ ಮಾದರಿಯಲ್ಲೂ ಮತ್ತು ಸ್ವಭಾವದಲ್ಲೂ ನೀನು ಎಷ್ಟು ಲಾಭ ಪಡೆದಿರುವಿಯೋ, ಅಷ್ಟೇ ಒಳ್ಳೇದಕ್ಕೆ ನಿನ್ನ ಮಾತುಗಳೂ ಪರಿಣಾಮಕಾರಿಯಾಗುವುವು. ನೀನು ಒಳ್ಳೇದನ್ನು ಮಾಡಲು ಮುಂಚೆ ನೀನೇ ಒಳ್ಳೆಯವನಾಗಿರಬೇಕು. ಕ್ರಿಸ್ತನ ಕೃಪೆಯಿಂದ ನಿನ್ನ ಹೃದಯವು ದೀನಭಾವವನ್ನು ಹೊಂದಿ, ಪರಿಶುದ್ಧಪಡಿಸಲ್ಪಟ್ಟು ಮೃದುವಾಗುವವರೆಗೂ ನೀನು ಇತರರನ್ನು ಮಾರ್ಪಡಿಸುವ ಪರಿಣಾಮವನ್ನೆಸಗಲಾರೆ. ನಿನ್ನಲ್ಲಿ ಇಂಥಾ ಬದಲಾವಣೆಯುಂಟಾದಾಗ ಗುಲಾಬಿಗಿಡವು ತನ್ನ ಸುವಾಸನಾಪೂರಿತ ಹೂವನ್ನು ಕೊಡುವ ಹಾಗೂ, ಅಥವಾ ದ್ರಾಕ್ಷೆಯ ಬಳ್ಳಿಯ ಕೆನ್ನೀಲಿ ವರ್ಣದ ಹಣ್ಣುಗೊಂಚಲುಗಳನ್ನು ಬಿಡುವಂತೆಯೂ, ನೀನೂ ಇತರರಿಗೆ ಆಶೀರ್ವಾದದಾಯಕವಾಗಿ ಜೀವಿಸುವುದು ಸ್ವಭಾವಸಿದ್ಧವಾಗುವುದು.MBK 128.2

    “ಮಹಿಮೆಯ ನಿರೀಕ್ಷೆಯಾದ” ಕ್ರಿಸ್ತನು ನಿನ್ನೊಳಗಿದ್ದರೆ, ಇತರರ ತಪ್ಪುಗಳನ್ನು ಹೊರಗೆಡಹಲು ಹೊಂಚುತಿರಲು ನೀನು ಇಚ್ಛಿಸುವುದಿಲ್ಲ. ದೋಷಾರೋಪಿಸಿ ನಿಂದಿಸುವುದಕ್ಕೆ ಪ್ರಯತ್ನಿಸುವುದಕ್ಕೆ ಬದಲಾಗಿ, ಅವರಿಗೆ ಸಹಾಯ ಮಾಡುವುದೂ ಆಶೀರ್ವದಿಸುವುದೂ, ಮತ್ತು ರಕ್ಷಿಸುವುದೂ ನಿನ್ನ ಪ್ರಧಾನ ಉದ್ದೇಶವಾಗಿ ರುವುದು. ತಪ್ಪಿನಲ್ಲಿರುವವರೊಡನೆ ವ್ಯವಹರಿಸುವಾಗ “ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.” (ಗಲಾತ್ಯ 6: 1), ಎಂಬ ಕಟ್ಟಳೆಗೆ ಗಮನ ಕೊಡುವಿ. ನೀನು ಅನೇಕ ಸಾರಿ ತಪ್ಪು ಮಾಡಿರುವುದು ಜ್ಞಾಪಕಕ್ಕೆ ಬರುವುದು, ಆಗ ಒಳ್ಳೇ ಮಾರ್ಗದಿಂದ ಓರೆಯಾಗಿ ಮತ್ತೊಮ್ಮೆ ಅದನ್ನು ಕಂಡುಕೊಳ್ಳಲು ಎಷ್ಟೋ ಪ್ರಯಾಸವಾಗಿತ್ತು. ನೀನು ನಿನ್ನ ಸಹೋದರನನ್ನು ಇನ್ನೂ ಅಧಿಕವಾದ ಅಂಧಕಾರಕ್ಕೆ ದೂಡದೆ ದಯಾರ್ದ್ರ ಹೃದಯದಿಮ್ದ ಅವನಿಗೆ ಸಂಭವಿಸಿರುವ ಅಪಾಯವನ್ನು ತಿಳಿಸುವಿ.MBK 128.3

    ಅಡಿಗಡಿ ಕಲ್ವೇರಿಯ ಕ್ರೂಜೆಯನ್ನು ಧ್ಯಾನಿಸುವವನು, ರಕ್ಷಕನನ್ನು ತನ್ನ ಪಾಪಗಳೇ ಶಿಲುಬೆಗೇರಿಸಿದವೆಂದು ಜ್ಞಪ್ತಿಮಾಡಿಕೊಂಡು, ತನ್ನ ಪಾಪದ ಅಂತರವನ್ನು ಇತರರ ಪಾಪಗಳಿಗೆ ಹೋಲಿಸಲು ಯತ್ನಿಸುವುದಿಲ್ಲ. ಮತ್ತೊಬ್ಬನ ಮೇಲೆ ದೋಷಾರೋಪಿಸಲು ನ್ಯಾಯಾಸನವನ್ನು ಹತ್ತುವುದಿಲ್ಲ. ಕಲ್ವೇರಿಯ ಕ್ರೂಜೆಯ ನೆರಳಲ್ಲಿ ನಡೆಯುವವರು ಮತ್ತೊಬ್ಬರ ತಪ್ಪನ್ನು ಟೀಕಿಸುವ ಅಥವಾ ಆತ್ಮಮಹೋತ್ಕರ್ಷ ಸ್ವಭಾವರಹಿತರಾಗಿರುವರು.MBK 129.1

    ನೀನು ತಪ್ಪು ಮಾಡುವ ನಿನ್ನ ಸಹೋದರನನ್ನು ಉದ್ದರಿಸಬೇಕಾದರೆ, ನಿನ್ನ ಆತ್ಮಗೌರವವನ್ನೂ ಮತ್ತು ನಿನ್ನ ಜೀವವನ್ನೇ ಅರ್ಪಿಸಿದರೆ, ಆಗ ಮಾತ್ರವೇ ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ತೆಗೆಯುವಿ, ಮತ್ತು ನಿನ್ನ ಸಹೋದರನಿಗೆ ಸಹಾಯಮಾಡಲು ಸಿದ್ಧನಾಗಿರುವಿ. ತರುವಾಯ ನೀನು ಅವನನ್ನು ಸಂಧಿಸಿ, ಅವನ ಹೃದಯವನ್ನು ಸ್ಪರ್ಶಿಸಬಹುದು. ವಾಗ್ದಂಡನೆಯಿಂದಲೂ ಮತ್ತು ನಿಂದನೆಯಿಂದಲೂ ಯಾರೂ ತಪ್ಪಾದ ಮಾರ್ಗದಿಂದ ಉದ್ಧರಿಸಲ್ಪಡಲಿಲ್ಲ; ಆದರೆ ಹೀಗೆ ಅನೇಕರು ಕ್ರಿಸ್ತನ ಸನ್ನಿಧಿಯಿಂದ ತರುಬಲ್ಪಟ್ಟು, ತಮ್ಮ ಹೃದಯಗಳನ್ನು ಮಾನಸಾಂತರಕ್ಕೆ ಮಾರ್ಗವಿಲ್ಲದಂತೆ ಬಂಧಿಸಲು ಪ್ರೇರಿಸಲ್ಪಟ್ಟವರಿದ್ದಾರೆ. ಮೃದುಸ್ವಭಾವವೂ, ಸೌಮ್ಯವೂ, ಲಾಭದಾಯಕವೂ ಆದ ವರ್ತನೆಯು, ತಪ್ಪು ಮಾಡುವವನನ್ನು ಉದ್ಧರಿಸಿ, ರಾಶಿಪಾಪಗಳನ್ನು ಮುಚ್ಚಿಬಿಡುವುದು. ನಿನ್ನ ಸ್ವಭಾವದಲ್ಲಿ ಪ್ರಕಟವಾದ ಕ್ರಿಸ್ತನು, ನೀನು ಸಂಪರ್ಕಗೊಳ್ಳುವರೆಲ್ಲರ ಮೇಲೂ ಮಾರ್ಪಾಟಿನ ಪ್ರಭಾವವನ್ನೆಸಗುವನು. ಕ್ರಿಸ್ತನು ಪ್ರತಿ ನಿತ್ಯವೂ ನಿನ್ನಲ್ಲಿ ವ್ಯಕ್ತವಾಗಲಿ, ಆಗ ಆತನು ನಿನ್ನ ಮೂಲಕವಾಗಿ ತನ್ನ ವಾಕ್ಯದ ಸೃಷ್ಟಿಚೈತನ್ಯವನ್ನು ವ್ಯಕ್ತಪಡಿಸುವನು,-ಸೌಮ್ಯವೂ, ಪ್ರೇರಕವೂ, ನಮ್ಮ ಕರ್ತನಾದ ದೇವರ ರಮ್ಯತೆಯಲ್ಲಿ ಇತರ ಆತ್ಮಗಳನ್ನು ಪುನಃ ಸೃಜಿಸುವ ಮಹಾ ಪರಿಣಾಮವನ್ನು ಶ್ರುತಿಪಡಿಸುವನು.MBK 129.2