Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು.”

    ಒಬ್ಬನು ಇಬ್ಬರು ಯಜಮಾನರಿಗೆ ಸೇವೆ ಮಾಡುವುದಿಲ್ಲವೆಂದು ಯೇಸುಸ್ವಾಮಿಯು ಹೇಳಲಿಲ್ಲ, ಆದರೆ ಮಾಡಲಾರನೆಂದು ಹೇಳುತ್ತಾನೆ. ದೇವರ ಮೇಲಣ ಆಸಕ್ತಿಗೂ, ಧನದ ಮೇಲಣ ಆಸಕ್ತಿಗೂ ಯಾವ ಸಂಪರ್ಕವೂ ಸಹಾನುಭೂತಿಯೂ ಇಲ್ಲ. ಕ್ರೈಸ್ತನ ಆತ್ಮ ಸಾಕ್ಷಿಯು ಎಲ್ಲಿ, ತಡೆಯೆಂದೂ, ಆತ್ಮ ತ್ಯಾಗ ಮಾಡೆಂದೂ, ನಿಲ್ಲೆಂದೂ ಹೇಳುತ್ತದೋ, ಅಲ್ಲಿಯೇ ಪ್ರಾಪಂಚಿಕ ವ್ಯಕ್ತಿಯು ಸ್ವಾರ್ಥಪರತೆಯ ಒಲವಿನಲ್ಲಿ ಲೋಲುಪ್ತನಾಗಲು ಎಲ್ಲೆಯನ್ನು ಅತಿಕ್ರಮಿಸುವನು. ಎಲ್ಲೆಯ ಒಂದು ಕಡೆಯಲ್ಲಿ ಆತ್ಮ ತ್ಯಾಗಿಯಾದ ಕ್ರಿಸ್ತನ ಹಿಂಬಾಲಕನಿದ್ದಾನೆ; ಮತ್ತೊಂದು ಕಡೆ ಭೋಗಾಸಕ್ತನಾದ ಲೋಕಪ್ರಿಯನು, ಮನೋದ್ರೇಕಗಳಿಗೆ ಗುಲಾಮನಾಗಿ ತಿಳಿಗೇಡಿತನದಲ್ಲಿ ತಲ್ಲೀನನಾಗಿ, ನಿಷೇಧಕರವಾದ ಆನಂದಸಾಗರದಲ್ಲಿ ಆಸಕ್ತನಾಗಿದ್ದಾನೆ. ಎಲ್ಲೆಯ ಆ ಕಡೆಗೆ ಕ್ರೈಸ್ತನು ಹೋಗಲಾರನು.MBK 96.1

    ಯಾವನೊಬ್ಬನೂ ಯಾವ ಪಕ್ಷವನ್ನೂ ವಹಿಸದೆ ತಟಸ್ಥನಾಗಿರಲಾರನು; ದೇವರನ್ನೂ ಪ್ರೀತಿಸದೆ, ನೀತಿಯ ವಿರೋಧಿಯನ್ನೂ ಸೇವಿಸದೆ ಇರುವ ಮಧ್ಯವರ್ಗದವರು ಅಲ್ಲಿ ಇಲ್ಲ. ಕ್ರಿಸ್ತನು ತನ್ನ ಮಾನವ ಪ್ರತಿನಿಧಿಗಳಲ್ಲಿ ಜೀವಿಸಿ, ಅವರ ಸಾಮರ್ಥ್ಯಗಳ ಮೂಲಕ ಕೆಲಸಮಾಡಿ ಅವರ ಅರ್ಹತೆಯ ಮೂಲಕವಾಗಿ ಕಾರ್ಯ ಸಾಧಿಸಬೇಕು. ಅವರ ಚಿತ್ತವು ಆತನ ಚಿತ್ತಕ್ಕೆ ಅಧೀನಪಡಿಸಲ್ಪಡಬೇಕು; ಆತನ ಆತ್ಮದೊಡನೆ ಕಾರ್ಯ ಸಾಧಿಸಬೇಕು. ಆಗ ಜೀವಿಸುವವರು ಅವರಲ್ಲ, ಆದರೆ ಅವರಲ್ಲಿರುವ ಕ್ರಿಸ್ತನೇ. ದೇವರಿಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸದವನು ಮತ್ತೊಂದು ಶಕ್ತಿಯ ಅಂಕೆಯಲ್ಲಿದ್ದಾನೆ, ನೇರ ವಿಮುಖವಾದ ಗುಣಗಳುಳ್ಳ ಮತ್ತೊಂದು ಶಬ್ದಕ್ಕೆ ಕಿವಿಗೊಡುತ್ತಾನೆ. ಅರ್ಧಬರ್ಧ ಸೇವೆಯು ಮಾನವ ನಿಯೋಗಿಯನ್ನು ವಿರೋಧಿಯಾದ ಸೈತಾನನ ಪಕ್ಷಕ್ಕೆ ಯಶಸ್ವಿಯಾಗಿ ಅಂಧಕಾರದ ಸೈನ್ಯದಿಮ್ದ ಜಯಿಸಲ್ಪಟ್ಟ ಮಿತ್ರನೆಂದು ಪರಿಗಣಿಸುವುದು. ಯಾರು ಕ್ರಿಸ್ತನ ಸಿಪಾಯಿಗಳೆಂದು ಹೇಳಿಕೊಂಡು ಸೈತಾನನ ವಂಚನೆಯಲ್ಲಿ ಅವನೊಡನೆ ಸಹಾಯಕರಾಗುತ್ತಾರೋ, ಅಂಥವರು ತಾವು ಕ್ರಿಸ್ತವಿರೋಧಿಗಳೆಂದು ತೋರ್ಪಡಿಸುತ್ತಾರೆ. ಅವರು ಪವಿತ್ರ ಭರವಸೆಗಳನ್ನು ವಿಶ್ವಾಸ ಘಾತಕತನದಿಮ್ದ ಬಿಟ್ಟುಕೊಡುತ್ತಾರೆ. ಸೈತಾನನಿಗೂ ಮತ್ತು ನಿಜವಾದ ಸಿಪಾಯಿಗಳಿಗೂ ಸಂಬಂಧವನ್ನು ಕಲ್ಪಿಸುತ್ತಾರೆ, ಹೀಗೆ ಇಂಥಾ ಮಧ್ಯಸ್ಥಿಕೆಯಿಂದ ಕ್ರಿಸ್ತನ ಸಿಪಾಯಿಗಳ ಹೃದಯಗಳನ್ನು ಸೂರೆಮಾಡಲು ವಿರೋಧಿಯು ಅವಿಶ್ರಾಂತವಾಗಿ ದುಡಿಯುತ್ತಾನೆ.MBK 96.2

    ನಮ್ಮ ಭೂಮಿಯಲ್ಲಿ ದುರ್ಮಾರ್ಗಿಯಾದ ಪಾಪಿಯ ದುಷ್ಟಜೀವನವೂ ಅಥವಾ ನೀತಿಭ್ರಷ್ಟನಾದ ಜಾತಿಹೀನನೂ ಪಾಪದ ಭದ್ರವಾದ ಕೊತ್ತಳವಲ್ಲ; ಸದ್ಗುಣಿಯೂ, ಪ್ರಾಮಾಣಿಕನೂ, ಉತ್ತಮನೂ ಎಂದು ಕಾಣಿಸಿದರೂ, ಒಂದೇ ಒಂದು ಪಾಪವು ಘೋಷಿಸಲ್ಪಟ್ಟು ಒಂದೇ ಒಂದು ಅಕ್ರಮವು ನೆಲೆಸಿರುವ ಜೀವ್ಯವೇ ಬಲವಾದ ದುರ್ಗವಾಗಿದೆ. ರಹಸ್ಯವಾಗಿ ಯಾವದಾದರೊಂದು ಪ್ರಚಂಡ ಶೋಧನೆಯೊದನೆ ಹೋರಾಡುತ್ತಿರುವ ಆತ್ಮವು ಕಡಿದಾದ ಎಲ್ಲೆಯ ಅಂಚಿನಲ್ಲಿ ನಡುಗುತ್ತಾ ನಿಂತಿರುವ ಉದಾಹರಣೆಯೇ ಪಾಪಕ್ಕೆ ಮಹಾ ಶಕ್ತಿಯುಳ್ಳ ಸೆಳೆತವಾಗಿದೆ. ಜೀವನದಲ್ಲಿ ಉನ್ನತ ಭಾವನಾಸಂಪನ್ನನಾಗಿ, ಸತ್ಯವಂತನೂ, ಶ್ರೇಷ್ಠನೂ ಆಗಿದ್ದು, ಇನ್ನೂ ಬೇಕೆಂದು ದೇವರ ಪರಿಶುದ್ಧ ಆಜ್ಞೆಗಳಲ್ಲೊಂದನ್ನು ಮೀರುವವನು ಆತನ ಶ್ರೇಷ್ಠದಾನಗಳನ್ನು ಪಾಪದ ಸಾಧನವಾಗಿ ಮಾರ್ಪಡಿಸುವವನಾಗಿದ್ದಾನೆ. ಮನೋಧರ್ಮ, ತಾಲಾಂತು, ಸಹಾನುಭೂತಿ, ಉದಾರಗುಣ ಮತ್ತು ದಯಾಪರತೆ ಇವೆಲ್ಲವೂ ಇತರ ಆತ್ಮಗಳನ್ನು ಈ ಜೀವನದಲ್ಲೂ ಮುಂದೆ ಬರುವ ಜೀವನದಲ್ಲೂ ನಾಶನಕ್ಕೆ ಎಳೆಯುವ ಸೈತಾನನ ಉರ್ಲುಗಳಾಗಿ ಮಾರ್ಪಡಬಹುದು.MBK 97.1

    “ಲೋಕವನ್ನಾಗಲೀ ಲೋಕದಲ್ಲಿರುವವುಗಳನ್ನಾಗಲೀ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕು ಬಾಳಿನ ಡಂಬ ಈ ಮೊದಲಾದುವುಗಳೆಲ್ಲವೂ ತಂದೆಯಿಂದ ಹುತ್ತದೆ ಲೋಕದಿಮ್ದ ಹುಟ್ಟಿದವುಗಳಾಗಿವೆ” 1 ಯೋಹಾನ 2:15, 16.MBK 97.2