Loading...
Larger font
Smaller font
Copy
Print
Contents

ಪರ್ವತ ಪ್ರಸಂಗ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಟ್ಟಬೇಡಿರಿ.”

    ಭೂಲೋಕದಲ್ಲಿ ಕೂಡಿಟ್ಟ ಐಸ್ವರ್ಯವು ಅಸ್ಥಿರವಾದದ್ದು; ಕಳ್ಳಕಾಕರು ಕನ್ನಾ ಕೊರೆದು ಕದ್ದುಬಿಡುವರು; ನುಸಿಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವುದು; ಬೆಂಕೆ ಮತ್ತು ಬಿರುಮಳೆಗಳು ನಿಮ್ಮ ಸ್ವತ್ತುಗಳನ್ನೆಲ್ಲಾ ಅಳಿಸಿಬಿಡುವುವು. “ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವುದಷ್ಟೆ.” ಭೂಲೋಕದಲ್ಲಿ ಗಂಟು ಮಾಡಿಟ್ಟ ಐಶ್ವರ್ಯವು ಮನಸ್ಸನ್ನೆಲ್ಲಾ ಆಕ್ರಮಿಸಿ, ಪರಲೋಕದುವುಗಳನ್ನು ವರ್ಜಿಸುವಂತೆ ಮಾಡುವುದು.MBK 91.2

    ಹಣದಾಶೆಯು ಯೆಹೂದ್ಯರ ಕಾಲದಲ್ಲಿ ಅಧಿಕವಾಗಿತ್ತು. ಪ್ರಾಪಂಚಿಕತೆಯು ಆತ್ಮದಲ್ಲಿ ದೇವರ ಮತ್ತು ಧರ್ಮದ ಸ್ಥಾನವನ್ನಾಕ್ರಮಿಸಿತು. ಈಗಲೂ ಹಾಗೆಯೇ ಇದೆ. ಧನಲೋಭವು ಜೀವನದಲ್ಲಿ ಮರಳುಗೊಳಿಸುವ ಮತ್ತು ಮುಗ್ಧಗೊಳಿಸುವ ಪರಿಣಾಮವನ್ನುಂಟುಮಾಡಿ, ಮಾನವರು ಅಧೋಗತಿಗಿಳಿಯುವ ತನಕ ಉದಾತ್ತಗುಣವನ್ನು ಬೇರೆಕಡೆಗೆ ಸೆಳೆದು ಮಾನವಕುಲವೇ ಭ್ರಷ್ಟವಾಗಿ ಪರಿಣಮಿಸುವುದು. ಸೈತಾನನ ಸೇವೆಯು ಚಿಂತಾಭರಿತವೂ, ತೊಡಕೊ ಮತ್ತು ಶ್ರಮದ ದುಡಿಮೆಯೂ ಆಗಿದೆ. ಮನುಷ್ಯರು ಭೂಮಿಯ ಮೇಲೆ ಗಂಟುಮಾಡಲು ಪಡುವ ಶ್ರಮೆಯೆಲ್ಲಾ ಅಲ್ಪಾವಧಿಯದು ಮಾತ್ರ.MBK 91.3

    “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿ ಹಿಡಿದು ಕಿಲುಬು ಹತ್ತಿ ಕೆಟ್ಟುಹೋಗುವುದಿಲ್ಲ; ಅಲ್ಲಿ ಕಳ್ಳರು ಕನ್ನಾ ಕೊರೆಯುವುದೂ ಇಲ್ಲ, ಕದಿಯುವುದೂ ಇಲ್ಲ. ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವುದಷ್ಟೆ.” MBK 92.1

    “ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ.” ಎಂಬುದೇ ನಮಗೆ ಕೊಡಲ್ಪಟ್ಟಿರುವ ಎಚ್ಚರಿಕೆ. ಪರಲೋಕದ ಐಶ್ವರ್ಯವನ್ನು ಸಂಪಾದಿಸುವುದು ನಿಮ್ಮ ಪ್ರಯೋಜನಕ್ಕಾಗಿಯೇ. ನಿಮ್ಮಲ್ಲಿರುವುದರಲ್ಲೆಲ್ಲಾ, ಇವು ಮಾತ್ರವೇ ನಿಜವಾಗಿಯೂ ನಿಮ್ಮವಾಗಿವೆ. ಪರಲೋಕದಲ್ಲಿ ಮಾಡಿಟ್ಟ ಗಂಟು ನಾಶವಾಗದು. ಅಗ್ನಿಯೂ ಪ್ರಳಯವೂ ಅದನ್ನು ನಾಶಮಾಡಲಾರದು, ಯಾವ ಕಳ್ಳನೂ ಅಪಹರಿಸನು, ನುಸಿಹಿಡಿದು ಕಿಲುಬು ಹತ್ತಿ ನಾಶವಾಗದು; ಯಾಕಂದರೆ ಅದು ದೇವರ ಆಶ್ರಯದಲ್ಲಿದೆ.MBK 92.2

    ಕ್ರಿಸ್ತನು ಎಲ್ಲಾ ಗಣನೆಗೂ ಅಮೂಲ್ಯವಾದ್ದೆಂದು ಪರಿಗಣಿಸುವ ಐಶ್ವರ್ಯವು ಯಾವುದೆಂದರೆ, “ದೇವಜನರೆಂಬ ಆತನ ಸ್ವಾಸ್ಥ್ಯದ ಮಹಿಮಾತಿಶಯವೆ.” ಎಫೆಸ 1: 18, ಯೇಸುವಿನ ಶಿಷ್ಯರು ಆತನ ರತ್ನಗಳೆಂದೂ, ಅಮೂಲ್ಯವೂ ಮತ್ತು ಅತಿಶಯವೂ ಆದ ಐಶ್ವರ್ಯವೆಂದು ಕರೆಯಲ್ಪಟ್ಟಿದ್ದಾರೆ. ಆತನು ಹೇಳುವುದೇನಂದರೆ: “ಅವರು ಕಿರೀಟದಲ್ಲಿನ ರತ್ನಗಳಂತೆ....ಥಳಥಳಿಸುವರು.” “ಮನುಷ್ಯರನ್ನು ಅಪರಂಜಿಗಿಂತಲೂ ಮಾನವರನ್ನು ಓಫೀರಿನ ಬಂಗಾರಕ್ಕಿಂತಲು ಅಪರೂಪವಾಗಿರುವಂತೆ ಮಾಡುವೆನು.” ಜೆಕರ್ಯ 9: 16; ಯೆಶಾಯ 13: 12. ಕ್ರಿಸ್ತನು ತನ್ನ ಜನರನ್ನು ಅವರ ಪರಿಶುದ್ಧತೆ ಮತ್ತು ಪರಿಪೂರ್ಣತೆಯಲ್ಲಿ, ತನ್ನ ಶ್ರಮೆಯ, ವಿನಯದ ಮತ್ತು ಪ್ರೀತಿಯ ಪ್ರತಿಫಲವೆಂದೂ, ಮತ್ತು ತನ್ನ ಮಹಿಮೆಯ ಅನುಬಂಧವೆಂದು ಪರಿಗಣಿಸುತ್ತಾನೆ,-ಕ್ರಿಸ್ತನು ನಾನಾ ದಿಕ್ಕುಗಳಲ್ಲಿಯೂ ಪ್ರಸರಿಸುವ ಮಹಿಮೆಗಳಿಗೆಲ್ಲಾ ಕೇಂದ್ರಸ್ಥಾನವಾಗಿದ್ದಾನೆ.MBK 92.3

    ನಾವು ಆತನೊಡಗೂಡಿ ರಕ್ಷಣೆಯ ಮಹಾ ಉದ್ಯಮದಲ್ಲಿಯೂ ಮತ್ತು ಆತನು ತನ್ನ ಶ್ರಮೆಯಿಂದಲೂ ಮರಣದಿಂದಲೂ ಸಂಪಾದಿಸಿರುವ ಐಶ್ವರ್ಯದಲ್ಲಿಯೂ ಭಾಗಿಗಳಾಗುವಂತೆ ಕರೆಯಲ್ಪಟ್ಟಿದ್ದೇವೆ. ಅಪೋಸ್ತಲನಾದ ಪೌಲನು ಥೆಸಲೋನಿಕ ಸಭೆಯ ಕ್ರೈಸ್ತರಿಗೆ ಬರೆದದ್ದೇನಂದರೆ: ನಮ್ಮ ಕರ್ತನಾದ ಯೇಸು ಪ್ರತ್ಯಕ್ಷನಾಗುವಾಗ ಆತನ ಮುಂದೆ ನಮ್ಮ ಭರವಸವೂ ನಮ್ಮ ಸಂತೋಷವೂ ನಾವು ಹೊಗಳಿಕೊಳ್ಳುವ ಜಯಮಾಲೆಯು ಯಾರು? ನೀವೇ ಅಲ್ಲವೇ? ನಿಜವಾ ಗಿಯೂ ನೀವೇ ನಮ್ಮ ಗೌರವವೂ ಸಂತೋಷವೂ ಆಗಿದ್ದೀರಿ.” 1 ಥೆಸಲೋನಿಕ 2: 19, 2೦. ಇಂಥಾ ಐಶ್ವರ್ಯಕ್ಕಾಗಿ ನಾವು ದುಡಿಯಬೇಕೆಂದೇ ಕ್ರಿಸ್ತನು ನಮಗೆ ಆಜ್ಞೆಯಿಡುತ್ತಾನೆ. ಗುಣವೇ ಜೀವಮಾನದ ಮಹಾ ಫಲವಾಗಿದೆ. ಪರಲೋಕದ ಕಡೆಗೆ ಮನಸ್ಸಾಕರ್ಷಿಸುವಂತೆ ಕ್ರಿಸ್ತನ ಕೃಪೆಯಿಂದ ಒಂದು ಆತ್ಮದಲ್ಲಿ ಫಲಿಸಿದ ಒಂದು ನುಡಿಯೂ, ನಡತೆಯೂ ಕ್ರಿಸ್ತನ ಗುಣಗಳನ್ನು ಉಂಟುಮಾಡಲು ಪಟ್ಟ ಪ್ರಯಾಸವೂ, ಪರಲೋಕದಲ್ಲಿ ನಮ್ಮ ಗಂಟುಮಾಡಿಡುವುದಾಗಿದೆ.MBK 92.4

    ಗಂಟೂ ಇರುವಲ್ಲೇ ಮನಸ್ಸೂ ಇರುವುದಷ್ಟೆ. ಇತರರ ಪ್ರಯೋಜನಾರ್ಥವಾಗಿ ನಾವು ಪಡುವ ಪ್ರಯಾಸದಿಂದ, ನಮಗೇ ಪ್ರಯೋಜನವನ್ನು ತಂದುಕೊಳ್ಳುತ್ತೇವೆ. ತನ್ನ ಹಣವನ್ನೂ ಸಮಯವನ್ನೂ ಸುವಾರ್ತಾಸೇವೆಗಾಗಿ ಕೊಡುವವನೂ, ತನ್ನ ಆಸಕ್ತಿಯನ್ನೂ ಪ್ರಾರ್ಥನೆಯನ್ನು ಆ ಸೇವೆಗಾಗಿಯೂ ಮತ್ತು ಅದರ ಮೂಲಕವಾಗಿ ಉದ್ಧರಿಸಬೇಕಾಗಿರುವ ಆತ್ಮಗಳಿಗಾಗಿಯೂ ಮಾಡುವವನಾಗಿದ್ದಾನೆ; ಅವನ ಪ್ರಿತಿಯು ಇತರರಿಗೆ ಪ್ರವಹಿಸುತ್ತದೆ, ಮತ್ತು ಅವರಿಗಾಗಿ ಇನ್ನೂ ಅಧಿಕವಾಗಿ ಒಳ್ಳೇದನ್ನು ಮಾಡುವಂತೆ, ದೈವಭಕ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾನೆ.MBK 93.1

    ಅಂತ್ಯಕಾಲದಲ್ಲಿ ಲೋಕದ ಐಶ್ವರ್ಯವೆಲ್ಲಾ ನಶಿಸಿಹೋಗುವಾಗ, ಪರಲೋಕದಲ್ಲಿ ತನ್ನ ಗಂಟುಮಾಡಿ ಇಟ್ಟಿರುವವನು, ತನ್ನ ಜೀವನವು ಸಂಪಾದಿಸಿರುವ ಲಾಭವನ್ನು ಕಂಡುಕೊಳ್ಳುವನು. ನಾವು ಕ್ರಿಸ್ತನ ಉಪದೇಶಕ್ಕೆ ಕಿವಿಗೊಟ್ಟಿದ್ದರೆ, ಆತನ ಮಹಿಮೆಯ ಸಿಂಹಾಸನದ ಬಳಿನಾವು ಸೇರುವಾಗ, ನಮ್ಮ ಮೂಲಕವಾಗಿ ರಕ್ಷಿಸಲ್ಪಟ್ಟ ಆತ್ಮಗಳನ್ನು ಕಂಡುಕೊಳ್ಳುವೆವು, ಮತ್ತು ಒಬ್ಬನು ಇನ್ನೂ ಅನೇಕರನ್ನು ರಕ್ಷಿಸಿದ್ದಾನೆಂದು ಅರಿತುಕೊಳ್ಳುವೆವು, ಇವರೂ ಬೇರೆ ಇತರರೂ, ನಮ್ಮ ಸೇವೆಯ ಫಲವಾಗಿ ಮಹಾ ಸಮೂಹವು ಯೇಸುವಿನ ಪಾದಗಳಲ್ಲಿ ತಮ್ಮ ಕಿರೀಟಗಳನ್ನಿರಿಸಿ ನಿರಂತರವೂ ಆತನನ್ನು ಸ್ತುತಿಸುವುದನ್ನು ನೋಡುತ್ತೇವೆ. ಕ್ರಿಸ್ತನ ಸೇವಕರು ರಕ್ಷಿಸಲ್ಪಟ್ಟು ರಕ್ಷಕನ ಮಹಿಮೆಯಲ್ಲಿ ಪಾಲುಗಾರರಾಗಿರುವವರನ್ನು ನೋಡಿ ಎಷ್ಟೋ ಸಂತೋಷಪಡುವರಲ್ಲವೇ! ಆತ್ಮಗಳ ರಕ್ಷಣಾರ್ಥವಾಗಿ ನಂಬಿಗಸ್ಥರಾಗಿ ದುಡಿದವರಿಗೆ ಪರಲೋಕವು ಎಷ್ಟೋ ರಮ್ಯವಾಗಿರುವುದಲ್ಲವೆ!MBK 93.2

    “ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದರಿಂದ ಮೇಲಿರುವವುಗಳನ್ನೇ ಹುಡುಕಿರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಆಸನಾರೂಡನಾಗಿದ್ದಾನೆ.” ಕೊಲೊಸ್ಸೆ 3: 1.MBK 93.3