Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಮುನ್ನುಡಿ

  ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದಪ್ರಕಾರ ಹೇಳದಿರುವುದು ಅವರಲ್ಲಿ ಬೆಳಕಿಲ್ಲದ್ದರಿಂದಲೇ.GCKn 16.1

  ಯೆಶಾಯ 8;20GCKn 16.2

  ಇದೀಗ 21ನೇ ಶತಮಾನ ಪ್ರಾರಂಭದಲ್ಲಿ ಬಹುಜನರು ಪ್ರವಾದಿಗಳಾಗಿರುವುದು ಕಂಡುಬರುತ್ತದೆ.ಅಂತರ್ಜಾಲದಲ್ಲೂ ಅವರ ಹಲವಾರು ಜಾಲವರ್ತುಲ [web-rings]ಕಾಣುತ್ತವೆಯಾದರೂ ಅವರ ಹೇಳಿಕೆಗಳು ವಿಚಿತ್ರವಾಗಿದೆ. ತಾವೇ ಹೇಳಿಕೊಂಡಂತೆ ದೇವರವಾಕ್ಯವನ್ನು ಅವರು ಹೊಂದಿರುವುದು ಹೌದೋ ಅಲ್ಲವೋ ಎಂಬುದು ನಮಗೆ ಹೇಗೆ ತಿಳಿಯುತ್ತದೆ? ಅವರ ಹೇಳಿಕೆಗಳನ್ನು ಅಜ್ಞೆಗಳಿಗೂ ಮತ್ತು ದೇವರ ವಿಷಯವಾದ ಸಾಕ್ಷಿಗಳೊಂದಿಗೆ ಹೋಲಿಕೆ ಮಾಡುವುದರಿಂದಲೇ ಅಲ್ಲವೆ! ಪೂರ್ವಕಾಲದಲ್ಲಿದ್ದ ಜನರೊಂದಿಗೆ ಮಾತಾನಾಡಿ ಅವುಗಳನ್ನು ಲಿಖಿತ ರೂಪದಲ್ಲಿ ತಂದ ಅದೇ ದೇವರು ತನ್ನ ಹೇಳಿಕೆಗಳನ್ನು ಎಂದಿಗೂ ಪ್ರತಿಷೇಧಿಸಲಾರನು.GCKn 16.3

  ಅಂತ್ಯಕಾಲದಲ್ಲರುವವರಿಗೆ ಪ್ರವಾದನೆಯ ಸಂಗತಿಗಳು ಒಂದು ದೊಡ್ಡ ಪರೀಕ್ಷೆಯಾಗಬಹುದೆಂದು ತಿಳಿದೇ, ಯೇಸುವು ನೇರವಾಗಿ ಹೀಗೆ ಪ್ರವಾದಿಸಿದನು- “ಬಹುಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೂಳಿಸುವವರು ಮತ್ತಾಯ 24;11” ಈ ಹೇಳಿಕೆಗೆ ಒತ್ತುಕೊಂಡುವಂತೆ ದೇವರು ಯೋಹಾನನಿಗೆ ‘ಪ್ರಿಯರೆ, ಅನೇಕಮಂದಿ ಸುಳ್ಳುಪವಾದಿಗಳು ಲೋಕದೊಳಗೆ ಬಂದಿರುವುದರಿಂದ ನೀವು ಅತ್ಮದ ಎಲ್ಲಾ ನುಡಿಗಳನ್ನು ನಂಬದೆ ದೇವರಿಂದ ಪ್ರೇರಿತವಾದವುಗಳೋ ಅಲ್ಲಹೋ ಎಂದು ಅವುಗಳನ್ನು ಪರೀಕ್ಷಿಸಬೇಕು” 1ಯೋಹಾನನು 4;1 ಎಂದು ತಿಳಿಸಿದರು.GCKn 16.4

  ಹೀಗಾಗಿ ಎಲೆನ್ ವೈಟ್ ರವರಿಗೂ ವಿನಾಯಿತಿ ಇಲ್ಲ. ಈ ಪುಸ್ತಕವನ್ನು ಸತ್ಯವೇದದೊಂದಿಗೆ ಹೋಲಿಸಿರಿ. ಇದು ಎಲ್ಲಾ ಪರೀಕ್ಷಿಗಳಿಗೂ ಒಳಗೊಳ್ಳುತ್ತವೋ ಇಲ್ಲವೋ? ಎಂದು ನೀವೇ ಪ್ರಮಾಣಿಸಿ ನೋಡಿ , ನಮ್ಮ ಪರಲೋಕದ ತಂದೆಗೆ ಪ್ರಾರ್ಥಿಸಿರಿ. ಅತನು ತನ್ನ ಆತ್ಮನನ್ನು ಕಳುಹಿಸಿ ಸತ್ಯಕ್ಕೆ ನಡೆಸುವನು.GCKn 17.1

  ಕಳೆದ ಇಪ್ಪತ್ತನೆಯ ಶತಮಾನದ ಕೊನೆಯ ಕೆಲವು ವರ್ಷಗಳವರೆಗೂ ‘ಕೃಸ್ತರು’ ಎನಿಸಿಕೊಂಡವರು ದೇವರ ಪ್ರಕಟಣೆಗಳನ್ನು ಹೊಂದಿದ್ದೇವೆ ಎಂದು ಸಾಧಿಸಿಕೊಂಡವರಿಗೆ ಸಂಪೂರ್ಣ ವಿರುದ್ದವಾಗಿದ್ದರು ಇವರು ಪ್ರಕಟನೆ 22;18.19ರಿಂದ ತಮ್ಮನ್ನು ಸಮರ್ಥಿಸಿಕೊಳುತ್ತಾರೆ. ‘ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ತಂದು ಹಾಕಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ತಂದುಹಾಕುವನು. ಯಾವನಾದರು ಈ ಪ್ರವಾದನಾ ಪುಸ್ತಕದಲ್ಲಿರುವ ಒಂದನ್ನಾದರು ತೆಗೆದುಬಿಟ್ಟರೆ, ಈ ಪುಸ್ತಕದಲ್ಲಿ ಬರೆದಿರುವ ಪರಿಶುದ್ಧ ಪಟ್ಟಣದಲ್ಲಿಯು ಅವನಿಗಿರುವ ಪಾಲನು ದೇವರು ತೆಗೆದು ಬಿಡುವನು’GCKn 17.2

  ಈಮೇಲಿನ ವಾಕ್ಯಗಳು ಯೋಹಾನನ ಕಾಲಾನಂತರ ಬೇರಾವ ದೇವರ ಪ್ರವಾದಿಗಳೂ ಬರಲಾರರೆಂದು ತಿಳಿಸುತ್ತದೋ? ಹಾಗಿದ್ದ ಮೇಲೆ ‘ಸುಳ್ಳುಪ್ರವಾದಿ’ಗಳ ಬಗ್ಗೆ ಎಚ್ಚರಿಯಿಂದಿರೊ ಎಂದು ಯೇಸು ಹೇಳಿದುದೇಕೆ? ಯೋಹಾನನ ಮುಖಂತರ ಪವಿತ್ರಾತ್ಮನು ‘ಆತನನ್ನುಪರೀಕ್ಷಿಸಿರಿ’ ಎಂದೇಕೆ ಹೇಳುತ್ತಿದ್ದನ್ನು? ಹೀಗಿದ್ದಲ್ಲಿ ಯೋಹಾನನ ನಂತರ ಬಂದಾ ದೇವರ ವಾಕ್ಯವನ್ನು ಹೋಂದಿದ್ದೇವೆಂದು ಹೇಳಿಕೊಂಡವರನ್ನು ನಿರ್ಲಕ್ಷಿಸುವುದು ಎಷ್ಟೋ ಸುಲುಭವಲ್ಲವೆ? ಆದರೆ ದೇವರ ಯೋಜನೆ ಇದಲ್ಲ. ನಮಗೆ ಅವಶ್ಯಕವಾಗಿರುವಾಗ ದೇವರು ಹೊಸ ಸತ್ಯಗಳನ್ನು ತಿಳಿಸುತ್ತಾ ಅತನ ಚಿತ್ತವನ್ನು ಅರುಹುತ್ತಾನೆ. ಸತ್ಯಹೃದಯದವರು, ಇದು ಎಷ್ಟ್ಟರ ಮಟ್ಟಿಗೆ ಸರಿ ಎಂದು ಅವಲೋಕಿಸಿ ಸಂತೋಷದಿಂದ ಅಂಗಿಕರೀಸಿ ಹಿಂಭಾಲಿಸುತ್ತಾರೆ. ಹೌದು! ಜೊತೆಜೊತೆಗೆ ಸೈತಾನನೂ ಕೆಲಸ ಮಾಡುತ್ತಿರುತ್ತಾನೆ ಒಂದು ವೇಳೆ ಅವನನ್ನು ಅನುಮತಿಸದ್ದಿರೆ ದೇವರು ಅನ್ಯಾಯಗಾರನೆಂದು ಆತನು ದೂಷಿಸಬಹುದು.GCKn 18.1

  1ಕೊರಿಂಥದವರಿಗೆ 12 ರಲ್ಲಿ ಪೌಲನ ಮುಖಂತರ ಪವಿತ್ರಾತ್ಮನು ಕೆಲವು ಬಹುಮುಖ್ಯವಾದ ಮತ್ತು ಅಗಾಗ್ಗೆ ಉಪೇಕ್ಷೆಗೊಳಗಾದ ಪ್ರಶ್ನೆಗಳನ್ನು ಕೇಳಿದ್ದಾನೆ. ಎಲ್ಲಾರು ಅಪೋಸ್ತಲರೋ? ಎಲ್ಲಾರು ಪ್ರವಾದಿಗಳೋ? ಎಲ್ಲಾರು ಅದ್ಬುತ ಕಾರ್ಯಮಾಡುವವರೋ? ಎಲ್ಲಾರು ಗುಣಪಡಿಸುವ ವರವಿದೆಯೋ? ಎಲ್ಲಾರು ಭಾಷೆಗಳನ್ನಾಡುವರೋ? ಕೊನೆಯಲ್ಲಿ ಒಂದು ಅತ್ಯುತ್ತಮ ಮಾರ್ಗವನು ತೋರುವನೆಂದು ಸ್ಪಷ್ಟಡಿಸುತ್ತಾ ಪೀತಿ ಇಲ್ಲದ್ದಿದರೆ ಈ ವರಗಳಿಂದ ನಮಗೆ ಯಾವ ಯಾವ ಪ್ರಯೋಜನವಿಲ್ಲ ಎಂದಿದ್ದಾನೆ 14ನೇ ಅದ್ಯಾಯದಲ್ಲಿ ಇನೂ ಒಂದು ಹೆಜ್ಜೆಮುಂದೆ ಹೋಗುತ್ತಾ “ಪೀತಿಯನ್ನು ಅಭ್ಯಾಸ ಮಾಡಿಕೊಳ್ಳಿರಿ, ಆದರೂ ಪವಿತ್ರಾತ್ಮನಿಂದುಂಟಾಗುವ ವರಗಳನ್ನು ಅವುಗಳೂಳಗೆ ವಿಶೇಷವಾಗಿ ಪ್ರವಾದಿಸುವ ವರವನ್ನೇ ಅ ಸಕ್ತಿಯಿಂದ ಅಪೇಕ್ಷಿಸಿರಿ” “ಆದ್ದರಿಂದ ಸಹೋದರೆರೇ, ಪ್ರವಾದಿಸಲು ಅಪೇಕ್ಷಿಸಿರಿ ಮತ್ತು ವಾಣಿಗಳನ್ನಾದಡುಲು ಹಿಂಜರಿಯದಿರಿ”. “ಪವಿತ್ರಾತ್ಮನನ್ನು ನಿಂದಿಸಬೇಡಿರಿ; ಪ್ರವಾದನೆಗಳನ್ನು ಹೀನೈಸಬೇಡಿರಿ; ಆದರೆ ಎಲ್ಲವನ್ನೂ ಶೋದಿಸಿ ಒಳ್ಳೇದನೇ ಭದ್ರವಾಗಿ ಹಿಡಿದುಕೊಳ್ಳಿರಿ” ‘1ಥೆಸಲೋನಿಕದವರಿಗೆ 5;19-21. GCKn 18.2

  ಸಂಯುಕ್ತ ಸಂಸ್ಥಾನದ ಬಹಿಯೋದ ಲೋವೆಟ್ಸ್ ಗ್ರೂವ್ ಎಂಬಲ್ಲಿ 1858ರ ವಸಂತ ಕಾಲದಲ್ಲಿ ಎಲೆನ್ ವೈಟಳಿಗೆ ‘ಮಹಾವಿವಾದ’ ದರ್ಶನವು ಕೊಡಲ್ಪಟ್ಟಿತು. ಈ ದರ್ಶನವು ಹನ್ನೊಂದು ವರ್ಷಗಳ ಮೊದಲೇ ಕೊಡಲ್ಪಟ್ಟಿದ್ದು, ಈ ಸಮಯದಲ್ಲಿ ಸೈತಾನನಿಂದ ನಾನಾ ತೆರನಾದ ಅಡ್ಡಿಬಂದರೂ ಸಹ ದರ್ಶಿಸಿದ್ದನ್ನೆಲ್ಲಾ ಬರೆದಿಡಬೇಕೆಂದು ತಿಳಿಸಲಾಯಿತ್ತು. ಇದರಲ್ಲಿ ಮುಖ್ಯವಾಗಿ 30ನೇ ಅದ್ಯಾಯವು 1847 ರಲ್ಲಿ ಪ್ರಕಟಗೊಂಡರೆ ‘little flock’[ಚಿಕ್ಕಹಿಂಡು] 1851ರಲ್ಲಿಯೂ Christian experience & views [ಕ್ರೈಸ್ತೀಯ ಅನುಭವ ಮತ್ತು ದೃಷ್ಟಿ] ಮತ್ತು ಹೆಚ್ಚೋಲೆ ಪುಸ್ತಕಗಳು 1854ರಲ್ಲಿ ಪ್ರಕಟವಾಯಿತ್ತು. ಇವಲ್ಲವೂ ಪವಿತ್ರಾತ್ಮನಿಂದ ಪ್ರೇರೆಪಿಸಲ್ಪಟ್ಟ ಒರ್ವ ದುರ್ಬಲ ದೈವಭಕ್ತೆಯಿಂದ ಲಿಖಿತವಾದವುಗಳಾಗಿವೆ. 1858ರಲ್ಲಿ ಒಟ್ಟಾಗಿ ಪ್ರಕಟಿಸಲ್ಪಟ್ಟವು.GCKn 19.1

  ನಮ್ಮ ಈ ಲೋಕದಲ್ಲಿ ಯುದ್ದಗಳು, ಅಪರಾದಗಳು ,ಅಪವಿತ್ರ ಲೈಂಗಿಕತೆ ಮಾತ್ರವಲ್ಲದೆ ಧಾರ್ಮಿಕ ನಂಬಿಕೆಗಳಲ್ಲೂ ಸಮಸ್ಯೆಗಳು ಏಕಿವೆ? ಎಂದು ಹಲವರು ಪ್ರಶ್ನೆಸುತ್ತಾರೆ. ಈಪ್ರಶ್ನೆಗಳಿಗೆ ಉತ್ತರವೂ ಮಾನವ ಜನಿಸಿ ಅಸ್ತಿವ್ವಕ್ಕೆ ಬರುವ ಮೊದಲೇ ಕ್ರಿಸ್ತನಿಗೂ ಮತ್ತು ಸೈತಾನನಿಗೂ ನಡುವೆ ಸಂಭವಿಸಿದ ಮಹಾವಿವಾದವನ್ನು ಅರ್ಥಮಾಡಿಕೊಂಡಲ್ಲಿ ಸಮರ್ಪಕ ಉತ್ತರವು ಸಿಗುತ್ತದೆ.GCKn 20.1

  ಓದುಗರೆ, ಸತ್ಯವೇದ ಆಧಾರದಿಂದ ಬರೆಯಲ್ಪಟ್ಟ ಈ ಪುಸ್ತಕದ ಅದ್ಯಯನದಿಂದ “ಎಲ್ಲವನ್ನೂ ಸಾಬೀತು” ಪಡಿಸಿಕೊಳ್ಳುವಾಗ ದೇವರು ನಿಮ್ಮಲ್ಲರನ್ನು ಆಶೀರ್ವದಿಸಲಿ.GCKn 20.2

  ಸೂಚನೆ ;ಪ್ರತಿ ಅದ್ಯಾಯದ ಕೊನೆಯಲ್ಲಿ ಕೊಡಲ್ಪಟ್ಟಿರುವಂಥ ಜೀವನ ಚರಿತ್ರೆ, ಮುನ್ನುಡಿ, ಪದ ಪಟ್ಟಿ, ಆಕರ ಸೂಚನೆಗಳು, ಎಲೆನ್ ವೈಟ್ ರವರ ಅಥವಾ ಮೂಲಗ್ರಂಥಗಳಲ್ಲಿ ಲಿಖಿತವಾದವುಗಳಲ್ಲ.GCKn 20.3

  Larger font
  Smaller font
  Copy
  Print
  Contents