Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 32. - ಸೋಸುವಿಕೆ

    ಕೆಲವರು ದೃಢವಿಶ್ವಾಸದಿಂದಿದ್ದು ಯಾತನೆಯ ಕೂಗಿನಿಂದ ದೇವರಲ್ಲಿ ವಿಜ್ಞಾವಿಸುತ್ತಿದ್ದುದನ್ನು ನಾನ ಕಂಡೆನು. ಅವರು ದೃಢ ಹಾಗೂ ಶ್ರದ್ಧಾಪೂರ್ವಕದಿಂದದ್ದುರೂ ಮುಖಗಳು ಬಿಳುಚಿಕೊಂಡು ತೀವ್ರ ಆತಂಕಕ್ಕೊಳಗಾಗಿದ್ದು ಹೃದಯಾಂತರಾಳದಲ್ಲಾಗುತ್ತಿದ್ದ ಹೆಣಗಾಟವನ್ನು ತೋರಿಸುತ್ತಿತ್ತು. ಹಣೆಯ ಮೇಲೆ ದೊಡ್ಡ ದೊಡ್ಡ ಬೇವರಿನ ಹನಿಗಳು ಉರುಳಿ ಬೀಳುತ್ತಿದ್ದವು. ಆಗಾಗ್ಗೆ ದೇವರ ಅಂಗೀಕಾರದ ಗುರುತಾಗಿ ಚಹರೆಯು ಬೆಳಗುತ್ತಿದ್ದರೂ ಮತ್ತೆ ಗಂಭೀರವಾದ ಒದ್ದಾಟ ಆತಂಕವು ನೆಲೆಸುತ್ತಿತ್ತು.GCKn 250.1

    ದುಷ್ಟದೂತರು ಇವರ ಸುತ್ತಾಲೂ ಮುತ್ತಿಕೊಂಡು ಕತ್ತೆಲೆಯನ್ನು ಹರಡಿ ವಿಷಪೂರಿತ ವಾತಾರವಣವನ್ನು ಸೃಷ್ಟಿಸಿದರು ದೇವರಲ್ಲಿ ಅಪನಂಬಿಕೆ ಹುಟ್ಟಿ ಗುಣಗುಟ್ಟುವಂತೆ ಮಾಡಲು ಅವರ ದೃಷ್ಟಿಯನ್ನು ಯೇಸುವಿನಿಂದ ಕದಲಿಸಿ ಅಂಧಕಾರದೆಡೆಗೆ ನೆಡುವಂತೆ ಮಾಡಿದರು. ಈ ದೇವಜನರ ಹೊಣೆಯನ್ನು ದೇವದೂತರಿಗೆ ವಹಿಸಿಲಾಗಿದ್ದು ಅವರು ತಮ್ಮ ರೆಕ್ಕೆಗಳನ್ನು ಆತಂಕಗೊಂಡವರ ಮೇಲೆ ಬೀಸುತ್ತಾ ದಟ್ಟೈಸುತ್ತಿದ್ದ ಅಂಧಕಾರವನ್ನು ಚದುರಿಸುತ್ತಿದ್ದರು.GCKn 250.2

    ಕೆಲವರು ಯಾತನೆಯಿಂದ ವಿಜ್ಞಾಪಿಸುವ ಕಾರ್ಯದಲ್ಲಿ ಪಾಲುಗಾರರಾಗದಿರುವುದನ್ನು ನಾನು ಕಂಡೆನು. ಆವರು ಉದಾಸೀನವಾಗಿ ತಟಸ್ಥಭಾವದಿಂದಿದ್ದರು, ಅವರಿಸುತ್ತಿದ್ದ ಅಂಧಕಾರವನ್ನು ತಡೆಯಲಿಲ್ಲ. ಅದು ದಟ್ಟವಾಗಿ ಮುಚ್ಚಿಕೊಂಡಿತು ತಮ್ಮನ್ನು ರಕ್ಷಿಸಿಕೊಳ್ಲುಲು ಯಾವ ಶ್ರಮವನ್ನೂ ಪಡೆದಿರುವವರನ್ನು ತೊರೆದು ಬಿಟ್ಟು ದೇವದೂತರು, ಅಕ್ಕರೆಯಿಂದ ಪ್ರಾರ್ಥಿಸುತ್ತಿದ್ದವರ ಕಡೆ ಹೊರಟರು. ಯಾರೆಲ್ಲಾ ತಮ್ಮ ಬಲಶಕ್ತಿಯಿಂದ ದುಷ್ಟದೂತರನ್ನು ನಿಗ್ರಹಿಸುತ್ತಾ ತಾಳ್ಮೆಯಿಂದ ದೇವರ ಸಹಾಯಕ್ಕಾಗಿ ಬೇಡುತ್ತಿದ್ದರೋ ಅವರ ಸಹಾಯಕ್ಕಾಗಿ ಧಾವಿಸುತ್ತಿದ್ದುದನ್ನು ನಾನು ಕಂಡೆನು. ನಿರ್ಲಿಪ್ತರಾದವರನ್ನು ನಾನು ಮತ್ತೆ ಕಾಣಲಿಲ್ಲ.GCKn 250.3

    ಪ್ರಾರ್ಥನಾ ವಿಜ್ಞಾಪನೆಗಳಲ್ಲಿ ನಿರತರಾಗಿದ್ದವರ ಮೇಲೆ ಆಗಾಗ್ಗೆ ಯೇಸುವಿನಿಂದ ಬೆಳೆಕಿನ ಕಿರಣಗಳು ಅವರ ಮೇಲೆ ಬೆಳಗಿ ಉತೇಜನ ನೀಡುತ್ತಿತ್ತು. ನಾನು ನೋಡಿದ ಈ ಕಂಪನ ಅಥವಾ ಸೋಸುವಿಕೆಯ ಅರ್ಥವೇನೆಂದು ಕೇಳಿದನು. ಲವೋಧಿಕೀಯರಿಗೆ ಸತ್ಯಸಾಕ್ಷಿಯ ಆಲೋಚನೆಯಿಂದ ಬಂದ ದೃಡವಚನವು ಇದನ್ನು ಉಂಟುಮಾಡುವುದೆಂದು ನನಗೆ ತೋರಿಸಲಾಯಿತು. ಈ ಸಾಕ್ಷಿಯನ್ನು ಅಂಗೀಕರಿಸಿದವರ ಹೃದಯದ ಮೇಲೆ ಪ್ರಭಾವ ಬೀರಿ ಅವರು ತಮ್ಮ ಜೀವನ ಮಟ್ಟವನ್ನು ವೃದ್ಧಿಸಿಕೊಂಡು ಅಪ್ಪಟ ಸತ್ಯವನ್ನೇ ಅರುಹುವರು ಇದನ್ನು ಕೆಲವರು ತಡೆದುಕೊಳ್ಳುಲಾಗದೆ ವಿರುದ್ಥವಾಗಿ ನಿಂತ ದೇವಜನರೊಳಗೆ ಕಂಪನವನ್ನುಂಟುಮಾಡುವರು.GCKn 251.1

    ನಿಜಸಾಕ್ಷಿಯ ಪ್ರಮಾಣಗಳಿಗೆ ಅರ್ಧದಷ್ಟು ಬೆಲೆಸಿಗಲಿಲ್ಲವೆಂಬುದನ್ನು ನಾನು ಕಂಡೆನು. ಯಾವ ಗಂಭೀರ ಸಾಕ್ಷ್ಯ ಪ್ರಮಾಣದ ಮೇಲೆ ಸಭೆಯ ಅಂತ್ಯವು ನೆಲೆಗೊಂಡಿವೆಯೋ ಅವು ಹಗುರಾಗಿ ಪರಿಗಣಿಸಲ್ಪಟ್ಟುದು ಮಾತ್ರವಲ್ಲದೆ ಪರಿಪೂರ್ಣವಾಗಿ ತಿರಸ್ಕರಿಸಲ್ಪಟ್ಟವು. ಈ ಸಾಕ್ಷ್ಯವು ಅಂಗೀಕರಿಸಿದವರಲ್ಲಿ ಅಳವಾದ ಪಶ್ಚಾತ್ತಾಪವನ್ನು ತರುವುದು, ಆಗ ಅವರು ವಿಧೇಯರಾಗಿ ಪರಿಶುದ್ಧಗೊಳಿಸಲ್ಪಡುವರು.GCKn 251.2

    ಪಟ್ಟಿಮಾಡು! ಎನ್ನುವ ದೂತನ ಧ್ವನಿಯನ್ನು ಕೇಳಿದೆನು, ತಕ್ಷಣವೇ ಹಲವಾರು ಸಂಗೀತ ವಾದ್ಯಗಳು ಒಟ್ಟಾಗಿ ಸೇರಿ ಸುಶ್ರಾವ್ಯವಾದ ಒಂದು ಧ್ವನಿಯನ್ನು ಹೊರಡಿಸುವುದನ್ನು ಕೇಳಿದೆನು. ಅದು ನಾನು ಕೇಳಿದ್ದ ಎಲ್ಲಾ ಸಂಗೀತಕ್ಕಿಂತಲೂ ಮಿಗಿಲಾಗಿತ್ತು. ಅದು ಕರುಣೆ, ಅನುಕಂಪ ,ಪವಿತ್ರಾನಂದದಿಂದ ತುಂಬಿತುಳುಕುವಂತೆ ಇದ್ದು ನನ್ನನ್ನು ಪುಳಿಕಿತಗೊಳಿಸಿತು. ದೂತನು, ಇಲ್ಲಿ ನೋಡು! ಎನಲು ನನ್ನ ಗಮನವು ಕಂಪನಕ್ಕೆ ಒಳಗಾಗಿದ್ದ ತಂಡದವರು ಕಡೆಗೆ ತಿರುಗಿತು. ಈ ಮೊದಲು ಆಳಿತ್ತಾ ಯಾತನೆಯಿಂದ ಪ್ರಾರ್ಥಿಸುತ್ತಿದ್ದವರನ್ನು ನನಗೆ ತೋರಿಸಲಾಯಿತು. ಅವರ ಸುತ್ತಾಲೂ ರಕ್ಷಕ ದೂತರ ಸಂಖ್ಯ ಧ್ವಿಗುಣಗೊಂಡಿದ್ದು ಅವರು ತಲೆಯಿಂದ ಕಾಲಿನವರೆಗೂ ಶಸ್ತ್ರಾಸ್ತ್ರಗಳನ್ನು ಧರಿಸಿದ್ದುದನ್ನು ಕಂಡೆನು. ಒಂದು ನಿಶ್ಚಿತ ಕ್ರಮದಲ್ಲಿ ಯೋಧರ ತಂಡದಂತೆ ದೃಢವಾಗಿ ಚಲಿಸುತ್ತಿದ್ದರು. ಜನರು ಮುಖಭಾವವು ತಾವು ಅನುಭವಿಸಿದ ತೀವ್ರಹೋರಾಟವನ್ನೂ, ದೀರ್ಘಶಾಂತಿಯನ್ನೂ ಬಿಂಬಿಸುತ್ತಿದ್ದವು. ಆದರೂ ಆತಂಕದ ಅಂತರಾಳದಿಂದ ಕೂಡಿದ ಮುಖಭಾವವು ಪರಲೋಕದ ಬೆಳಕು ಹಾಗೂ ಪ್ರಭೆಯಿಂದಾಗಿ ಈಗ ಬಿಂಬಿಸಿದವು. ಪಡೆದುಕೊಂಡ ವಿಜಯದ ಸಾಕ್ಷಿಯಾಗಿ ಅವರಲ್ಲಿ ತೀವ್ರ ಧನ್ಯತಾಭಾವ ಮತ್ತು ಪರಿಶುದ್ಧ ಅನಂದವೂ ನೆಲೆಗೊಂಡಿತು.GCKn 252.1

    ಈತಂಡದ ಸಂಖ್ಯೆಯು ಕಡಿಮೆಯಾಯಿತು. ಕೆಲವರು ಸೋಸುವಿಕೆಗೆ ಒಳಪಟ್ಟು ಹೊರಟುಹೋದರು. ಉದಾಸೀನವಾಗಿ ತಟ್ಟಸ್ಥಭಾವ ಹೊಂದಿದ್ದವರು ಯಾತನೆಗೊಳಗಾಗಿ, ಶಾಂತಿಯಿಂದ ವಿಜ್ಞಾಪಿಸುತ್ತಿದ್ದವರಿಗೆ ಕೊಡಲ್ಪಟ್ಟ ಜಯ ಮತ್ತು ರಕ್ಷಣೆಯಲ್ಲಿ ಪಾಲುಗಾರರಾಗಲಿಲ್ಲ. ಅವರೆಲ್ಲಾ ಕತ್ತಲೆಯಲ್ಲಿ ಬಿಡಲ್ಪಟ್ಟರು. ತತ್ ಕ್ಷಣವೇ ಇವರಿಂದ ಬಿಡಲ್ಪಟ್ಟ ಸ್ಥಳವನ್ನು ಸತ್ಯವನ್ನು ಹಿಡಿದುಕೊಂಡವರು ತುಂಬಿದರು. ಈಗಲೂ ದುಷ್ಟದೂತರು ಸುತ್ತಾಲೂ ಸೇರಿ ಒತ್ತಡ ಹೆರಿದರೂ ಸಹ ಅವರ ಮೇಲೆ ಅಧಿಕಾರ ಸಾಧಿಸಲಾಗಲಿಲ್ಲ .GCKn 253.1

    ಸರ್ವಾಯುಧ ಧರಿಸಿದ್ದವರು ಸತ್ಯವನ್ನು ಅತ್ಯಧಿಕ ಬಲದಿಂದ ಒತ್ತಿಹೇಳುವುದನ್ನು ನಾನು ಕಂಡೆನು. ಅದು ಬಹು ಪರಿಣಾಮಾಕಾರಿಯಾಯಿತು. ಬಂಧನಕ್ಕೆ ಒಳಗಾಗಿದ್ದ ಹಲವರನ್ನು ನಾನು ಕಂಡೆನು.; ಕೆಲವು ಪತ್ನಯರು ಪತಿಯಿಂದ ಬಂಧಿತರಾಗಿದ್ದರು; ಕೆಲವು ಮಕ್ಕಳು ತಂದೆತಾಯಿಯರ ನಿರ್ಬಂಧಕ್ಕೆ ಒಳಗಾಗಿದ್ದರು. ಸತ್ಯಕ್ಕೆ ಕಿವಿಗೊಡಬಾರದೆಂದು ತಡೆಹಿಡಿಯಲ್ಪಟ್ಟಿದ್ದ ಕೆಲವು ಪ್ರಾಮಾಣಿಕರು ಈಗ ಆಸಕ್ತಿಯಿಂದ ಸತ್ಯವನ್ನು ಭದ್ರವಾಗಿ ಹಿಡಿದರು. ಬಂಧುಬಾಂಧವರ ಭಯವೆಲ್ಲಾ ಕರಗಿ ಹೋಯಿತು. ಸತ್ಯವೊಂದು ಮಾತ್ರ ಅವರಿಗೆ ಗಾಢವಾಗಿ ತಮ್ಮ ಜೀವಕ್ಕಿಂತ ಹೆಚ್ಚಿನ ಪ್ರೀತಿಯುಳದ್ದೂ ಅಮೂಲದ್ದೂ ಆಯಿತು. ಈ ಸತ್ಯಕ್ಕಾಗಿ ಅವರು ಬಾಯಾರಿದ್ದರು. ಈ ಮಹಾ ಮಾರ್ಪಟಿಗೆ ಕಾರಣವೇನು? ಎಂದು ನಾನು ಕೇಳಿದೆನು. ಒಬ್ಬ ದೂತನು ಉತ್ತಾರಿಸುತ್ತಾ ಇರು ಹಿಂಗಾರು ಮಳೆ; ಕರ್ತನ ಪ್ರಸನ್ನತೆಯಿಂದಾದ ಚೈತನ್ಯ; ಮೊರನೇ ದೂತನ ಮಹಾ ಧ್ವನಿ ಎಂದನು.GCKn 253.2

    ಈ ಆಯ್ದುಕೊಂಡವರಲ್ಲಿ ಮಹಾಬಲವಿದೆ. ಇಲ್ಲಿ ನೋಡು! ಎಂದು ದೂತನು ಹೇಳಿದಾಗ ನನ್ನ ಗಮನವು ಅವಿಶ್ವಾಸಿಗಳು ಅಥವಾ ದುಷ್ಟರ ಕಡೆಗೆ ತಿರುಗಿತು. ಅವರೆಲ್ಲಾ ಚಟುವಟಿಕೆಯಿಂದಿದ್ದರು. ದೇವರ ಮಕ್ಕಳಲ್ಲಿದ್ದ ಹುರುಪು ಮತ್ತು ಚೈತನ್ಯವು ಅವರ ಕೋಪವನ್ನು ತಟ್ಟಿ ಉದ್ರೇಕಿಸಿತು. ಎಲ್ಲೆಲ್ಲೂ ಗಲಿಬಿಲಿ ತುಂಬಿತು, ದೇವರ ಪ್ರಕಾಶ ಹೊಂದಿದ್ದವರ ವಿರುದ್ದ ಕ್ರಮ ತೆಗೆದುಕೊಳ್ಳಲ್ಪಟ್ಟುದನ್ನು ನಾನು ಕಂಡೆನು. ಅಂಧಕಾರವು ಅವರ ಸುತ್ತಾಲೂ ದಟ್ಟವಾಗಿದ್ದರೂ ದೇವರಿಂದ ಸಮ್ಮತಿಸಲ್ಪಟ್ಟು ಆತನಲ್ಲಿ ನಂಬಿಕೆಯಿಟ್ಟು ದೃಢವಾಗಿದ್ದರು. ಸ್ವಲ್ಪಕಾಲ ದೇವಜನರು ಕಳವಳಗೊಂಡದ್ದನ್ನು ನಾನು ಕಂಡೆನು. ಆನಂತರ ಅವರು ಭಕ್ತಿಭಾವದಿಂದ ದೇವರಿಗೆ ಮೊರೆಯಿಡುವುದನ್ನು ಕೇಳಿದನು. ಅವರ ವಿಜ್ಞಾಪನ ಹಗಲು ಇರುಳನ್ನದೆ ಮುಂದುವರಿಯಿತು. ಓ ದೇವರೇ, ನಿನ್ನ ಚಿತ್ತವೇ ನೆರವೇರಲ್ಲಿ! ಇದು ನಿನ್ನ ನಾಮ ಮಹಿಮೆ ಪಡಿಸುವುದಾದರೆ ನಿನ್ನ ಜನರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ತೋರು! ನಮ್ಮ ಸುತ್ತಲೂ ಇರುವವರಿಂದ ವಿಮೋಚಿಸು! ಅವರು ನಮ್ಮನು ಸಾವಿಗೆ ತಳ್ಳಬೇಕೆಂದಿಂದ್ದಾರೆ; ಆದರೆ ನುನ್ನ ಕೈಗಳು ಕಾಪಾಡಬಲ್ಲವು ಎಂದು ಮೊರೆಯಿಡುತ್ತಿದ್ದುದನ್ನು ಕೇಳಿದೆನು. ಈ ಮಾತುಗಳು ಮಾತ್ರ ನನ್ನ ನೆನಪಿನಲ್ಲಿವೆ. ಅವರಿಗೆ ತಮ್ಮ ಅಯೋಗ್ಯತೆಯ ತಿಳುವಳಿಕೆ ಇತ್ತು. ದೇವರ ಚಿತ್ತಕ್ಕೆ ಒಪ್ಪಿಸಿಕೊಂಡರು, ಒಬ್ಬರೂ ಬಿಡಲ್ಪಡದೆ ಎಲ್ಲರೂ ಯಾಕೋಬನಂತೆ ಭಕ್ತಿಯಿಂದ ಹೋರಾಡುತ್ತಿದ್ದರು.GCKn 254.1

    ಇವರ ಹೃದಯಪೂರ್ವಕ ಅಳಲನ್ನು ಪ್ರಾರಂಭಿಸಿದ ಕೊಡಲೇ ದೇವದೂತರು ಅನುಕಂಪದಿಂದ ಅವರ ರಕ್ಷಣೆಗೆ ಧಾವಿಸಿದರು. ಆದರೆ ಒರ್ವ ಎತ್ತರವಾದ ಅಧಿಕಾರಯುಕ್ತ ದೂತನು ಅವರನ್ನು ಹೋಗಗೊಡಲಿಲ್ಲ. ದೇವರ ಚಿತ್ತವೂ ಇನ್ನೂ ಪರಿಪೂರ್ಣವಾಗಿಲ್ಲ. ಈ ಪಾತ್ರೆಯಲಿರುವುದನ್ನು ಅವರು ಕುಡಿಯಲೇ ಬೇಕು. ಅವರಿಗೆಲ್ಲಾ, ದೀಕ್ಷಾಸ್ನಾನದಿಂದ ಶುದ್ಧರಾಗಬೇಕೆ6ದು ಹೇಳಿದನು.GCKn 255.1

    ಕೊಡಲೆ ಭೂಮ್ಯಾಕಾಶವನ್ನು ನಡುಗಿಸುವ ದೇವರ ಧ್ವನಿಯನ್ನು ಕೇಳಿದೆನು. ಆಗ ಭಯಂಕರವಾದ ಭೂಕಂಪವಾಯಿತು. ಕಟ್ಟಡಗಳು ನಡುಗಿದವು, ಎಲ್ಲಾ ಕಡೆಯಿಂದ ಉರುಳಿಬಿದ್ದವು. ಆನಂತರ ವಿಜಯೋತ್ಸಾಹದಿಂದ ತುಂಬಿದ ಸ್ಪಷ್ಟವಾದ ಸಂಗೀತವಾದ್ಯಗಳ ಮಹಾಧ್ವನಿಯಿಂದ ಕೇಳಿದೆನು. ಕೆಲವು ಸಮಯದ ಹಿಂದೆ ನಿರ್ಬಧದಲ್ಲಿದ್ದು ನಿರಾಶೆಗೊಂಡ ಭಕ್ತರತ$ಡವನ್ನು ನಾನು ಕಂಡೆನು. ಅವರ ಬಂಧನವು ಕಳಚಿಬಿತ್ತು.ಮಹಾಪ್ರಕಾಶವು ಅವರ ಮೇಲೆ ಬೆಳಗಿತು. ಅವರು ಎಷ್ಟೋ ರಮಣೀಯವಾಗಿ ಕಂಡರು. ನಿರಾಶೆ ,ಅಸ್ಥಿರತೆಯ ಗುರುತು ಅವರಿಂದ ಅಳಿಸಲ್ಪಟ್ಟಿತು. ಪ್ರತಿ ಮುಖಗಳ ಮೇಲೆ ಆರೋಗ್ಯಕಳೆ ತುಂಬಿತು ಅವರ ಶತೃಗಳಾದ ಅನ್ಯರು ಸತ್ತವರಂತೆ ಕೆಳಗೆ ಬಿದ್ದರು. ವಿಮೋಚಿಸಲ್ಪಟ್ಟವರು ಮುಖದ ಉಜ್ವಲ ಪ್ರಕಾಶವನ್ನು ಅವರಿಂದ ತಡೆದುಕೊಳ್ಳಲಾಗಲಿಲ್ಲ. ಮೇಘಗಳಲ್ಲಿ ಯೇಸುವನ್ನು ಕಾಣುವವರೆವಿಗೂ ಈ ಮಹಿಮೆ ಪ್ರಕಾಶವು ನೆಲೆಸಿತ್ತು, ಪುಟಕ್ಕೆ ಹಾಕಲ್ಪಟ್ಟ ವಿಶ್ವಾಸಿಗಳು ಕ್ಷಣಮಾತ್ರದಲ್ಲಿ ಕಣ್ಣುಮುಚ್ಚುವಷ್ಟರೊಳಗೆ ಮಹಿಮೆಯಿಂದ ಮಹಿಮೆಗೆ ಮಾರ್ಪಾಡು ಹೊಂದಿದರು. ಆ ನಂತರ ಸಮಾಧಿಗಳು ತೆರೆಯಲ್ಪಟ್ಟವು, ನಿದ್ರೆಯಲ್ಲಿದ್ದ ಭಕ್ತರು ಎದ್ದು ಬಂದರು. ಅಮರತ್ವವನ್ನು ಧರಿಸಿಕೊಂಡು ಮರಣದ ಹಾಗೂ ಸಮಾಧಿಯ ಮೇಲೆ ಜಯಹೊಂದಿದ್ದನ್ನು ಕೂಗಿ ಹೇಳುತ್ತಾ, ಮಾರ್ಪಾಡು ಹೊಂದಿದ್ದ ಭಕ್ತರೊಡಗೂಡಿ ಅಂತರಿಕ್ಷದಲ್ಲಿ ಕರ್ತನನ್ನು ಎದುರುಗೊಳ್ಲುವುದಕ್ಕಾಗಿ ಹೋದರು; ಅ ಸಮಯದಲ್ಲಿ ಜಯ ಗೀತವು ಪ್ರತಿ ಅಮರರ ನಾಲಿಗೆಯ ಮೇಲೆ ವಿಜೃಂಭಿಸಿ ಪರಿಶುದ್ಧಗೊಳಿಸಲ್ಪಟ್ಟು ಪ್ರತಿತುಟ್ಟಿಗಳ ಮೂಲಕ ಸುಶ್ರಾವ್ಯವಾಗಿ ಮುಂದುವರೆಯಿತು.GCKn 255.2

    ಓದಿ: ಕಿರ್ತನೆ ಅಧ್ಯಾಯ 86; ಹೊಶೇಯ 6:3; ಹಗ್ಗಾಯ 2:21-23; ಮತ್ತಾಯ 10:35-39, 20:23; ಎಫೆಸದವರಿಗೆ 6:10-18; 1ಥೆಸಲೋನಿಕ 4:14-18; ಪ್ರಕಟನೆ 3:14-22 GCKn 256.1

    Larger font
    Smaller font
    Copy
    Print
    Contents