Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "undefined".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ಅಧ್ಯಾಯ 01. - ಸೈತಾನನ ಬೀಳುವಿಕೆ

  ಕರ್ತನು ನನಗೆ ದಯಪಾಲಿಸಿದ ದರ್ಶದಲ್ಲಿ, ಪರಲೋಕದಲ್ಲಿ ಕ್ರಿಸ್ತನ ನತಂರದ ಸ್ಥಾನದಲ್ಲಿದ ಸೈತಾನನನ್ನು ತೋರಿಸಲಾಯಿತು. ಅವನು ಕಾನಿವಾತ್ವ ದೂತನಾಗಿ, ಮೃದು ಸ್ವಭಾವ ತೋರುವ ಮುಖಭಾವದಿಂದ ಇತರ ದೂತರಂತೆ ಸಾದ ಆನಂದ ತುಂಬಿದವನ್ನಾಗಿದ್ದನು. ಅತ್ಯುತ್ತಮ ಜ್ಞಾನ ಸೂಚಿಸುವ ಅಗಲವೂ ಉನ್ನತವೂ ಆದ ಹಣೆಯುಳ್ಳವನಾಗಿ ಉದಾತ್ತ ಘನಗಾಂಭೀರ್ಯ ವ್ಯಕ್ತಿತ್ವದ ಪರಿಪೂರ್ಣನಾಗಿದ್ದನು .GCKn 21.1

  ದೇವರು ತನ್ನ ಮಗನಿಗೆ, ನಾವು ನಮ್ಮ ಸ್ವರೂಪದಲ್ಲಿ ಮನುಷ್ಯನನ್ನು ಸೃಷ್ಟಿಸೋಣ ಎಂದಾಗ ಸೈತಾನನಿಗೆ ಯೇಸುವಿನ ಮೇಲೆ ಅಸೊಯೆ ಉಂಟಾದುದನ್ನು ನಾನು ಕಂಡೆನು. ಮಾನವನ ಸೃಷ್ಟಿಯಲ್ಲಿ ತನ್ನ ಅಭಿಪ್ರಾಯವನು ತೆಗೆದುಕೊಳ್ಳಬಹುದಾಗಿತ್ತು ಎಂಬ ಆಶೆ ಅವನಿಗಿತ್ತು. ಪರಲೋಕದಲ್ಲಿ ದೇವರು ಮಗ್ಗುಲ ಸ್ಥಾನದಲ್ಲಿದ್ದು ಮನ್ನಣೆ ಪಡೆಯಬೇಕೆಂಬ ಅಪೇಕ್ಷೆ ಹೊಂದಿದನು. ಇದೀಗ ಅವನಲ್ಲಿ ದ್ವೇಷ ಹಗೆತನ ತುಂಬಿತು. ಇದುವರೆಗೂ ಸಕಲವೂ ಬಹು ಕ್ರಮಬದ್ದವಾಗಿ, ಹೊಂದಣಿಕೆಯುಳ್ಳದ್ದಾಗಿಯಾ ಇದ್ದು ದೇವರ ಪ್ರಭುತ್ವಕ್ಕೆ ಪರಿಪೂರ್ಣ ಒಳಪಟ್ಟಿತ್ತು .ದೇವರ ಚಿತ್ತ ಹಾಗೂ ನಿಯಮದ ವಿರುದ್ದ ಧಂಗೆಯೇಳುವುದು ಮಹಾಪರಾಧವಾಗಿತ್ತು. ಪ್ರತಿ ದೂತಗಣಗಳು ಪ್ರಧಾನದೂತನ ನಾಯಕತ್ವದಡಿಯಲ್ಲಿ ನಡೆಸಲ್ಪಟ್ಟಿದ್ದರು. ಸೈತಾನನು ಅತ್ಯಾಶೆ ಮಹತ್ವಾಕಾಂಕ್ಷೆಯಿಂದ ದೇವರು ಪ್ರಭುತ್ವಕ್ಕೆ ವಿರುದ್ದ ಅಪ್ರತ್ಯಕ್ಷವಾಗಿ ಯೇಸುವಿನ ಅಧಿಕಾರಕ್ಕೆ ಒಳಪಡಿಲು ನಿರಾಕರಿಸಿದನು. ಇಡೀ ಪರಲೋಕವೇ ಕ್ಷೋಭೆಗೆ ಒಳಗಾದಂತೆ ತೋರಿತು. ದೂತರು ಮರಗಟ್ಟಿಹೋದರು. ದೂತಗಣಗಳಲ್ಲಿ ಕೆಲವರು ದೇವರು ಸೈತಾನನ ದಂಗೆಯಲ್ಲಿ ಅನುಕಂಪ ತೋರಿದರು. ಮತ್ತೆ ಕೆಲವರು ದೇವರು ತನ್ನ ಮಗನಿಗೆ ಅನುಗ್ರಹಿಸಿದ ಅಧಿಕಾರ ಹಾಗೂ ಗೌರವದಲ್ಲಿ ತೃಪರಾಗಿದ್ದರು. ಹೀಗೆ ದೂತರಲ್ಲಿ ವಾದ ವಿವಾದವು ಕಂಡುಬಂತು. ಸೈತಾನನು ಮತ್ತು ಅನುಯಾಯಿಗಳು ದೇವರು ಯೇಸುವಿಗೆ ನೀಡಿದ ಅಸೀಮಿತ ಬಲ್ಲ, ಅಧಿಕಾರ, ಗೌರವ ಪಾತ್ರ ಉನ್ನತ ಸ್ಥಾನವನ್ನು ನೀಡಿದುದರ ಹಿಂದಿರುವ ವಿವೇಕದ ಉದ್ದೇಶ ತಿಳಿಯಲು ಉತ್ಸುಕರದಾರು. ದೇವಪುತ್ರನ ಆಳ್ವಿಕೆಯ ವಿರುದ್ಧ ಪ್ರತಿಭಟ್ಟಿಸಿದ್ದರು. ಇವರ ಪಿರ್ಯಾದನ್ನು ತೀರ್ಮಾನಿಸಲು ಎಲ್ಲಾ ದೂತರೂ ತಂದೆಯ ಮುಂದೆ ಹಾಜರಗಲು ಕರೆ ನೀಡಲಾಯಿತ್ತು. ನಂತರ ದಂಗೆ ಪಾಲ್ಗೊಂಡ ಸೈತಾನನೂ ಹಾಗೂ ಎಲ್ಲಾ ದೂತರನ್ನು ಪರಲೋಕದಿಂದ ತಳ್ಳಿಬಿಡಬೇಕೆಂದು ಕಡೆಗೆ ತೀರ್ಮಾನಿಸಲಾಯಿತ್ತು. ತದ ನಂತರ ಪರಲೋಕದಲ್ಲಿ ದೂತರ ಮದ್ಯೆ ಕದನ ಪ್ರಾರಂಭವಾಯಿತ್ತು. ದೇವಪುತ್ರ ಮತ್ತು ಆತನ ಚಿತ್ತಕ್ಕೆ ಒಡಂಬಟ್ಟವರ ಮೇಲೆ ಜಯಸಾದಿಸಲು ಸೈತಾನನು ಅಪೇಕ್ಷಿಸಿದನು. ಆದರೆ ಒಳ್ಳೆಯ ದೂತಗಣಗಳು ಜಯಶಾಲಿಳಾದರು, ಸೈತಾನನೂ, ಅವನ ದೂತರು ಪರಲೋಕದಿಂದ ಕೆಳಗೆ ದೊಬ್ಬಲ್ಪಟ್ಟರು .GCKn 21.2

  ಪರಲೋಕದ ಪವಿತ್ರತೆ ಮತ್ತು ಮಹಿಮೆಯನ್ನು ನಿರಂತರವಾಗಿ ಕಳೆದುಕೊಂಡು ಅರಿವೂ ಸೈತಾನ ಹಾಗೂ ಅವನ ಗುಂಪಿಗೆ ಉಂಟಾಯಿತು. ಅನಂತರ ಮನಮರುಗಿ ಪಶ್ಚಾತಪಟ್ಟು ಮತ್ತೊಮೆ ತಮ್ಮ ಮೊದಲಿನ ಸ್ಥಾನ ಇಲ್ಲದೆ ಬೇರಾವುದಾದರೂ ಸ್ಥಾನ ದಯಪಾಲಿಸಿದಾರೆ ಒಪ್ಪಿಕೊಳ್ಳಲು ಸಿದ್ದರಾದರು. ಆದೆರೆ ಇಲ್ಲ ! ಪರಲೋಕವನ್ನು ವಿಪತ್ತಿಗೆ ದೂಡಲಾಗದು.. ಸೈತಾನನನ್ನು ಮತೇ ಸೇರಿಸಿದ್ದಾದರೆ ಇಡೀ ಪರಲೋಕವೇ ಕಳಂಕಿತವಾಗುವುದು ಏಕೆಂದರೆ ಪಾಪದ ಉತ್ಪತಿ ಆದದ್ದೇ ಅವನಲ್ಲಿ, ದಂಗೆಯ ಬೀಜಗಳು ಅವನಲ್ಲಿವೆ. ಅವರ ಪಾಪ, ಹಗೆತನ, ದೋಷ, ಹೊಟ್ಟೆಕಿಚ್ಚು, ಅಗಾಧವಾದದ್ದು, ಸೈತಾನನ, ಸಂಗಡಗರು ಪಶ್ಚಾತಪಟ್ಟು ಕಣ್ಣೀರು ಸುರಿಸುತ್ತಾ ದೇವರ ಸನ್ನಿಧಿ ಅನುಗ್ರಹಿಸಬೇಕೆಂದು ದೈನ್ಯರಾಗಿ ಬೇಡಿದರು. ದುಷ್ಟತ್ವವನ್ನು ಅಳಿಸಲು ದೇವರಿಂದ ಅಸಾದ್ಯವಾಯಿತು . ಅದು ತನ್ನ ಅಂತಿಮ ಶಿಕ್ಷೆಗಾಗಿ ಕಾದಿರಬೇಕು!GCKn 23.1

  ಇನ್ನು ತಾನು ದೇವರ ಅನುಗ್ರಹಕ್ಕೆ ಪಾತ್ರನಾಗಲು ಸಾದ್ಯವಿಲ್ಲ ಎಂದೂ ಸೈತಾನನಿಗೆ ತಿಳಿದಾಗ ಅವನ ಕೇಡಿಗತನ ಹಗೆ ಪ್ರಕಟವಾಗಲು ಪ್ರಾರಂಭಿಸಿತು. ತನ್ನ ದೂತರೊಡಗೂಡಿ ದೇವರ ಸರ್ಕಾರವನ್ನು ಹತ್ತಿಕ್ಕುವ ಯೋಜನೆ ಬಗ್ಗೆ ಸಮಲೋಚಿಸಿದನು. ಆದಾಮ ಹವ್ವರನ್ನು ರಮ್ಯವಾದ ತೋಟದಲ್ಲಿಟ್ಟಾಗ ಅವರನ್ನು ನಾಶಮಾಡಲು ಯೋಚಿಸಿದನು. ಈ ಜೋಡಿಯು ದೇವರಿಗೆ ವಿದೆಯರಾಗಿದ್ದಿದ್ದರೆ ಪರಮಾನಂದವನ್ನು ಎಂದಿಗೂ ಕಳೆದುಕೊಳ್ಳುತ್ತಿರಲ್ಲಿಲ. ಅವಿದೇಯರಾಗಿ ದೇವರ ಅನುಗ್ರಹವನ್ನು ಕಳೆದುಕೊಳ್ಳದ್ದಿದರೆ ಸೈತಾನನು ಬಲಪ್ರಯೋಗವನ್ನು ಮಾಡಲಾಗುತ್ತಿರಲಿಲ್ಲ. ಅವನು ಮತ್ತು ದೂತರು ಅದಾಮ ಹವ್ವರನ್ನು ಪೇತ್ಯಕ್ಷ ಪ್ರಭಾವಕ್ಕೆ ಒಳಗಾಗಿಸಲು ಅವರನ್ನು ಅವೀದೆರಾಗಿಸಿ ದೇವರು ಕಾಠಿಣ್ಯಕ್ಕೆ ಒಳಪಡಿಸಲು ಯೋಜನೆಯೊಂದನ್ನು ಹಾರಿಕೊಳ್ಳಬೇಕಾಯಿತು. ಆದ್ದರಿಂದ ಸೈತಾನನು ಬೇರೆ ರೂಪವನ್ನು ಧರಿಸಿ ಅವರ ಅಸಕ್ತಿಗೆ ಕೆರಳಿಸುವ ತೀರ್ಮಾನವಯಿತು. ದೇವರ ಸತ್ಯತೆಯು ವಿರುದ್ದ ನುಸುಳಿ, ಆತನು ಹೇಳಿದಂತೆ ಆಗುವುದೇ, ಎಂಬ ಸಂಶಯವನ್ನು ಹುಟ್ಟುಹಾಕಿ. ಕುತೂಹಲ ಕೆರಳಿಸಿ, ಸೈತಾನನಂತೆ ದೇವರ ಗ್ರಹಿಸಲಾರದ ಯೋಜನೆಗೆ ತಲೆಹಾಕಿ ‘ಒಳ್ಳೆದ್ದರ ಕೆಟ್ಟದರ ಅರುಹುನ್ನುಂಟುಮಾಡುವ ಮರದ ನಿರ್ಬಂಧದ ಬಗೆಗೆ ವಿಮರ್ಶಿಸುವಂತೆ ಮಾಡಿದನು.GCKn 23.2

  ಓದಿ: ಯೆಶಾಯ 14;12,20 ;ಯೆಹೆಜ್ಕೇಲ 28;1-19; ಪ್ರಕಟಣೆ 12;7-9GCKn 24.1

  Larger font
  Smaller font
  Copy
  Print
  Contents