Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 20. - ಸುಧಾರಣೆಯು

  ದೈವಭಕ್ತರನ್ನು ತಾಳಿಕೊಳ್ಳಲಾಗದ ಚಿತ್ರಹಿಂಸೆ ಹಾಗೂ ಮರಣಕ್ಕೆ ಒಳಪಡಿಸಿದರೂ ಎಲ್ಲೆಲ್ಲೂ ಸಜೀವ ಸಾಕ್ಷಿಗಳ ಉದ್ಭವವಾಗುತ್ತಿತ್ತು. ದೇವದೂತರು ಅವರ ಭರವಸೆಗೆ ಒಪ್ಪಿಸುತ್ತಿದ್ದ ಕಾರ್ಯವನ್ನು ಮಾಡುತ್ತಿದ್ದರು. ಕತ್ತಲಲ್ಲಿದ್ದಾಗ್ಯೂ ಹೃದಯಾಂತರಾಳದಿಂದ ನಿಷ್ಠರಾಗಿದ್ದವರನ್ನು ಕಡುಕತ್ತಲಿನ ಸ್ಥಳದಿಂದ ಹುಡುಕಿ ತೆಗೆಯುತ್ತಿದ್ದರು. ಅವರೆಲ್ಲರೂ ತಪ್ಪುತಿಳುವಳಿಕೆಯಿಂದ ಕೂಡಿದ್ದರೂ, ದೇವರು ಸೌಲನನ್ನು ಹೆಕ್ಕಿತೆಗೆದಂತೆ ತನ್ನ ಸತ್ಯವನ್ನು ಎತ್ತಿಹಿಡಿಯಲು ಮುಕ್ತಿಪಾತ್ರೆಗಳನ್ನಾಗಿ ಪ್ರಯೋಗಿಸುತ್ತಾ ಹೊರತೋರಿಕೆಯ ಜನರ ಪಾಪವನ್ನು ಒತ್ತಿಹೇಳಲು ತಮ್ಮ ಸ್ವರವನ್ನು ಎತ್ತಿಹಿಡಿಯುವ ಸಲುವಾಗಿ ಆರಿಸಿಕೊಳಲ್ಪಟ್ಟರು, ವಿವಿಧ ಸ್ಥಳಗಳಿಂದ ಮಾರ್ಟಿನ್ ಲೂಥರ್, ಮಲನ್ಕ್ ಥಾನ್, ಮತ್ತು ಇತರರನ್ನು ದೇವರವಾಕ್ಯಕ್ಕಾಗಿ ಬಾಯಾರಿ ಸಜೀವಸಾಕ್ಷಿಗಳಾಗುವಂತೆ ದೇವದೂತರು ಅವರನ್ನು ಪ್ರೇರೇಪಿಸಿದರು. ಸತೃವು ಪ್ರವಾಹದಂತೆ ರಭಸವಾಗಿ ನುಗಿದ್ದಾನೆ ಆತನ ವಿರುದ್ದ ನಮ್ಮ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು. ಬಿರುಗಾಳಿಗೆ ಎದೆಯೊಡ್ಡಲು , ಬಿದ್ದುಹೋದ ಸಭೆಯ ಸಿಟ್ಟಿಗೆ ಎದುರಾಗಿ ನಿಲ್ಲಲು ಹಾಗೂ ತಮ್ಮ ಪವಿತ್ರ ವೃತಿಗೆ ಪ್ರಾಮಾಣಿಕರನ್ನು ಬಲಗೊಳಿಸಲು ದೇವರು ಲೂಥರನನ್ನು ಆರಿಸಿಕೊಂಡನು. ಈತನು ದೇವರಿಗೆ ಎದುರುಬೀಳುವುದಕ್ಕೆ ಸದಾ ಭಯಪಡುವವನಾಗಿದ್ದನು. ತನ್ನ ಕ್ರಿಯಗಳ ಮೂಲಕ ದೇವರ ಮೆಚ್ಚುಗೆ ಪಡೆಯಲು ಪ್ರಯತ್ನಿಸುತ್ತಿದ್ದನು; ಆದರೆ ಪರಲೋಕದಿಂದ ಬೆಳಕಿನ ಕಿರಣವೊಂದು ಬಂದು ಆತನ ಮನಸ್ಸಿನಲ್ಲಿದ್ದ ಕತ್ತಲೆಯನ್ನು ಒಡಿಸಿ, ಕ್ರಿಯೆಯಿಂದಲ್ಲದೆ ಕ್ರಿಸ್ತನ ರಕ್ತದ ಯೋಗ್ಯತೆಯಿಂದ ಮಾತ್ರ ಸತ್ಯದ ಕಡೆಗೆ ನಡೆಸಲ್ಪಡುವವರೆಗೆ ಅವನಿಗೆ ತೃಪ್ತಿಯಾಗಲಿಲ್ಲ; ಪೋಪರಿಂದಗಾಲೀ ಅಥವಾ ಪಾಪನಿವೇದನೆ ಕೇಳುವ ಪಾದ್ರಿಗಳಿಂದಗಲೀ ಬರದೆ, ಯೇಸುಕ್ರಿಸ್ತನ ಮೂಲಕ ಮಾತ್ರ ತಾನಾಗೇ ದೇವರನ್ನರಸುತ್ತಾ ಬರಬೇಕಾಯಿತು. ಲೂಥರನಿಗೆ ಈ ತಿಳುವಳಿಕೆಯು ಎಷ್ಟು ಅಮೂಲ್ಯವಾದ್ದಗಿದೆ! ಅವನ ಕಗ್ಗತ್ತಲ ಜ್ಞಾನದ ಮೇಲೆ ಬಿದ್ದ ಬೆಳಕು ಮೂಢಭಕ್ತಿಯನ್ನು ಹೊಡೆದೋಡಿಸಿದ್ದು, ಪ್ರಾಪಂಚಿಕ ಸಂಪತ್ತಿಗಿಂತಲೂ ಮಿಗಿಲಾದ ಹೊಸಬೆಳಕು ಅಮೂಲ್ಯವಾದ್ದದೆಂದು ಅವನು ಪರಿಗಣಿಸಿದನು, ದೇವರವಾಕ್ಯವು ನೂತನವಾದದ್ದು, ಅದು ಎಲ್ಲವನ್ನು ಮಾರ್ಪಡಿಸಿತು. ಯಾವ ಪುಸ್ತಕದಲ್ಲಿ ರಮ್ಯತೆಯನ್ನು ಕಾಣದೆ ಓದಲು ಭಯಪಡುತ್ತಿದ್ದನ್ನೂ ಅದೀಗ ಅವನಿಗೆ ಸಜೀವವಾಗಿತ್ತು. ಅದು ಅವನ ಹರ್ಷ, ಸಂತೈಕೆ ಹಾಗೂ ಧನ್ಯಬೋಧಕನಾಯಿತು, ಅವನ ಅಧ್ಯಾಯವನ್ನು ಯಾವುದೂ ತಡೆಗಟ್ಟಲಾಗಲಿಲ್ಲ .ಅವನ ಮರಣಕ್ಕೆ ಹೆದುರುತ್ತಿದ್ದನು; ಆದರೆ ದೇವವಾಕ್ಯವನ್ನು ಓದುತ್ತಾ ಹೋದಂತೆಲ್ಲಾ ಅವನ ಭಯ ಹರಿದು ಹೋಗಿ ದೇವರನ್ನು ಪ್ರೀತಿಸಿ ಪ್ರಶಂಸಿಸುವವನಾದನು. ತನಗಾಗಿ ದೇವರ ವಾಕ್ಯವನ್ನು ಹುಡುಕಿದನು. ಅದರಲ್ಲಿರುವ ಮಹಾಸಂಪತ್ತನ್ನು ಆಸ್ವಾದಿಸಿದನು, ಅನಂತರ ಸಭೆಯ ವಿಷಯಕ್ಕಾಗಿ ಅದರಲ್ಲಿ ಹುಡುಕಿದನು. ರಕ್ಷಣೆಗಾಗಿ ತಾನು ಆತುಕೊಂಡವರ ಪಾಪಗಳಿಂದ ಅವನಿಗೆ ನಿರಾಶೆಯಾಯಿತು. ಅವನನ್ನು ಸುತ್ತುವರೆದಿದ್ದ ಕತ್ತಲೆಯೇ ಬಹು ಜನರಿಗೆ ಆವರಿಸಿಕೊಂಡಿರುವುದನ್ನು ಕಂಡುಕೊಂಡನು. ಲೋಕದ ಪಾಪವನ್ನು ಪರಿಹಾರಿಸುವ ಕುರಿಮರಿಯನ್ನು ಅವರಿಗೆ ತೋರಿಸಬೇಕೆಂದು ಬಹು ಕಾತುರದಿಂದ ಅವಕಾಶಕ್ಕಾಗಿ ಕಾದುಕೊಂಡನು. ಪೋಪನ ಸಭೆಯ ಪಾಪದೋಶಗಳ ವಿರುದ್ದ ತನ್ನ ದ್ವನಿಯೆತ್ತಿ ಸಾರುತ್ತಾ, ಕ್ರಿಯೆಯಿಂದಲೇ ರಕ್ಷಣೆ ಎಂದು ನಂಬುತ್ತಿದ್ದ, ಕತ್ತಲೆಯಾವರಿಸಿದ್ದ ಸಾವಿರಾರು ಮಂದಿಯ ಕತ್ತಲೆ ಸರಪಳಿಯನ್ನು ಕಿತ್ತೆಸೆಯಲು ಶ್ರದ್ದಾಪೂರ್ವವಾಗಿ ಆಶಿಸಿದನು. ದೇವರ ಕೃಪೆಯ ನಿಜಸಂಪತ್ತನ್ನೂ, ಯೇಸುಕ್ರಿಸ್ತನ ಮೂಲಕ ದೊರಕುವ ರಕ್ಷಣೆಯ ಶ್ರೇಷ್ಠತೆಯ ಕಡೆಗೆ ಜನರ ಮನಸ್ಸಿನ್ನು ತಿರುಗಿಸಲು ಅಪೇಕ್ಷಿಸಿ ತನ್ನ ಉಚ್ಛದ್ವನಿಯನ್ನೆತ್ತಿ ಪವಿತ್ರಾತ್ಮನ ಶಕ್ತಿಯಿಂದ ಪ್ರಸ್ತುತ ಸಭೆಯ ಹಿರಿಯರ ಪಾಪಗಲ ವಿರುದ್ದ ಸಾರಲಾರಂಭಿಸಿದನು; ಯಾಜಕರಿಂದ ವೈರುದ್ಯತೆಯ ಬಿರುಗಾಳಿ ಎದ್ದಾಗ ಅವನ ಸ್ಥೈರ್ಯ ಕುಸಿಯಲಿಲ್ಲ; ಏಕೆಂದರೆ ಅವನು ದೇವರ ಬಲವಾದ ಹಸ್ತದ ಮೇಲೆ ಆತುಕೊಂಡಿದ್ದು, ಜಯಸಾಧನೆಗೆ ಆತನನ್ನು ನಂಬಿಕೆಯಿಂದ ಆಶ್ರಯಿಸಿದನು. ತನ್ನ ಸಮರವು ಹೆಚ್ಚು ಹತ್ತಿರ ಸರಿಯಲಾರಂಭಿಸಿದಾಗ ಪಾದ್ರಿಗಳ ರೋಷವೇಶವು ಅವನೆಡೆಗೆ ಧಗ್ಗನೆ ಉರಿಯಿತು. ಅವರ ಸುಧಾರಣೆಯನ್ನು ಇಚ್ಚಿಸಲಿಲ್ಲ, ಅವರು ಸರಾಗವಾಗಿದ್ದು ಚೆಲ್ಲಾಟವಾಡುತ್ತಾ ದುಷ್ಟತನದಲ್ಲಿ ಸಂಭ್ರಮಿಸುವುದನ್ನು ಆಯ್ದುಕೊಂಡರು, ಸಭೆಯನ್ನು ಅಂಧಕಾರದಲ್ಲಿಡುವುದು ಅವರ ಉದ್ದೇಶವಾಗಿತ್ತು. ಲೂಥರನು ಸತ್ಯದ ಪಕ್ಷವಾದಿಯಾಗಿ ದೈರ್ಯದಿಂದ ಪಾಪವನ್ನು ಖಂಡಿಸುವುದರಲ್ಲಿ ಬಹು ಹುರುಪಿನಿಂದ ಕೂಡಿ ಛಲವಾದಿಯಾಗಿದ್ದುದನ್ನು ನಾನು ಕಂಡೆನು. ಅವನು ದುಷ್ಟರು ಹಾಗೂ ದ್ವವಗಳಿಗೆ ಲಕ್ಷ್ಯಕೊಡಲಿಲ್ಲ ಎಲ್ಲರಿಗಿಂತಲೂ ಬಲಿಷ್ಠನಾದವನು ತನ್ನ ಕಡೆಗಿರುವನೆಂದು ಅವನು ಅರಿತಿದ್ದನು. ಲೂಥರನು ಅಸಕ್ತಿ, ಕಿಚ್ಚು, ಧೈರ್ಯ, ಸ್ಥೈರ್ಯ, ತುಂಬಿದವನಾಗಿ ಕೆಲವು ಸಂಧರ್ಭಗಳಲ್ಲಿ ದುಡುಕಿನಿಂದ ಮಿತಿಮಿರುತ್ತಿದ್ದನ್ನು; ಅದರೆ ದೇವರು ಮೆಲನ್ಕ್ ಥಾನನನ್ನು ಆರಿಸಿಕೊಂಡನು ಈತನು ಲೂಥರನ ಗುಣಾತಿಶಯಗಳಿಗೆ ವಿರುದ್ದವಾಗಿದ್ದನು. ಸುಧಾರಣೆಕಾರ್ಯದಲ್ಲಿ ಲೂಥರನ ಸಹಾಯಕನಾದನು. ಮೆಲನ್ಕ್ ಥಾನನು ಮೃದು ಸ್ವಭಾವದವನೂ, ಬೀತನೂ ಮುಂಜಾಗ್ರತೆಯುಳ್ಳವನೂ ಮತ್ತು ಮಹಾತಾಳ್ಮೆ ತುಂಬಿದವನಾಗಿ ದೇವರ ಪ್ರಿಯನಾಗಿದ್ದನು. ಶಾಸ್ತ್ರದಲ್ಲಿ ಬಹು ಜ್ಞಾನವುಳವನಾಗಿದ್ದು, ಇವನ ವಿವೇಕವೂ, ತೀರ್ಪುನಿರ್ಣಯವು ಅತ್ಯುನ್ನತವಾದದ್ದಾಗಿತ್ತು ಇವನು ದೇವರ ವಿಷಯದ ಮೇಲಿನ ಪ್ರೀತಿಯಲ್ಲಿ ಲೂಥರನಿಗೆ ಸಮಾನನಾಗಿದ್ದನು. ಈ ಎರಡೂ ಹೃದಯಗಳನ್ನೂ ದೇವರು ಬೆಸೆದರು; ಎಂದೆಂದೂ ಬೇರ್ಪಡಿಸಲಾಗದಂತೆ ಅವರು ಗೆಳೆಯರಾದರು. ಮೆಲೆನ್ಕ್ ಥಾನನು ಭಯಬೀತನ್ನೂ ನಿಧಾನಸ್ಥನಾಗಿ ಅಪಾಯದಲ್ಲಿರುವಾಗ ಲೂಥರನು ಅವರಿಗೆ ಸಹಾಯಕನಾಗಿದ್ದನು. ಲೂಥರನು ದುಡುಕಿನಿಂದ ಕಾರ್ಯಮಾಡುವಾಗ ಮೆಲೆನ್ಕ್ ಥಾನನು ಅವನಿಗೆ ಸಹಾಯಕನಾಗಿದ್ದನು. ಲೂಥರನುಬ್ಬನಿಗೇ ಕಾರ್ಯವಹಿಸಿದಾಗ ದೇವರ ಉದ್ಧೇಶದ ನಿಮಿತ್ತವು ತೊಂದರೆಗೆ ಸಿಲುಕದಂತೆ ಮೆಲೆನ್ಕ್ ಥಾನನ ಮುಂಜಾಗ್ರತೆ ಕೆಲಸಮಾಡುತ್ತಿತ್ತು; ಒಂದುವೇಳೆ ಮೆಲನ್ಕ್ ಥಾನನೊಬ್ಬನಿಗೇ ಕೆಲಸವಹಿಸಿದರೆ ಅವನ ನಿಧಾನತ್ವದಿಂದ ಕಾರ್ಯಮುಂದೆ ಸಾಗದೆ ಜಡವಾಗುತ್ತಿತ್ತು. ಸುಧಾರಣೆಯ ಕಾರ್ಯನಿರ್ವಹಣೆಗೆ ಈ ಇಬ್ಬರು ವ್ಯೆಕ್ತಿಗಳನ್ನು ನಿಯೋಜಿಸುವಲ್ಲಿನ ದೇವರ ವಿವೇಕವನ್ನು ನನಗೆ ತೋರಿಸಲಾಯಿತುGCKn 161.1

  ಆನಂತರ ಅಪೋಸ್ತಲರ ಕಾಲಾವಧಿಗೆ ನನ್ನನ್ನು ಕರೆದು ತೋರಿಸಲಾಯಿತು. ದೇವರು ಆಯ್ದುಕೊಂಡ ಸಂಗಡಿಗರಲ್ಲಿ ಹುರುಪು, ಉತ್ಸಾಸ ತುಂಬಿದ ಪೇತ್ರನು, ಸಾಧುತ್ವ, ತಾಳ್ಮೆ ಧೀನಸ್ವಭಾವದ ಯೋಹಾನನನ್ನೂ ನಾನು ಕಂಡೆನು. ಕೆಲವು ಭಾರಿ ಪೇತ್ರನು ಉದ್ರೇಕ ತುಂಬಿದ ಒರಟನಾಗಿದ್ದನು. ಈ ಗುಣಗಳಿಂದ ಮಿತಿಮೀರುವಾಗ ಪ್ರಿಯ ಶಿಷ್ಯನು ಆಗಾಗ್ಗೆ ಪೇತ್ರನನ್ನು ತಡೆಯುತ್ತಿದ್ದನು. ಆದರೆ ಇದು ಅವನಲ್ಲಿ ಪರಿವರ್ತನೆ ತರಲಿಲ್ಲ. ಪೇತ್ರನು ಕರ್ತನನ್ನು ಬೊಂಕಿದ್ದು — ಪಶ್ಚಾತ್ತಾಪಪಟ್ಟು, ಮನ ಪರಿವರ್ತನೆ ಹೊಂದಿದ ಮೇಲೆ ಅವನಿಗೆ ಬೇಕಾದದ್ದು ಯಾವುದೆಂದರೆ ಅವನ ದುಡುಕನ್ನು ಹುರುಪನ್ನು ತಡೆಹಿಡಿಯಲು ಯೋಹಾನನ ಲಘು ಹಿಡಿತದ ಅವಶ್ಯಕತೆ. ಯೋಹಾನಿಗೆ ಮಾತ್ರ ಕ್ರಿಸ್ತನ ಕಾರ್ಯಸಾಧನೆ ವರಿಸಿದ್ದರೆ ಅದು ಆಗಾಗ್ಗೆ ಕುಂಠಿತವಾಗುತ್ತಿತ್ತು. ಪೇತ್ರನ ಹುರುಪು ಯೋಹಾನನಿಗೆ ಅವಶ್ಯವಾಗಿತ್ತು. ಅವನ ದಿಟ್ಟತನ ಹಾಗೂ ಶಕ್ತಿಯು ಅವರನ್ನು ತೊಂದರೆಗಳಿಂದ ಬಿಡಿಸುತ್ತಿತ್ತು. ಮತ್ತು ಶತೃಗಳನ್ನು ನಿಷ್ಕ್ರೀಯೆಗೊಳಿಸುತ್ತಿತ್ತು. ಯೋಹಾನನು ತನ್ನ ದೀರ್ಘಶಾಂತಿ ಹಾಗೂ ಆಳವಾದ ಭಕ್ತಿಯಿಂದ ಕ್ರಿಸ್ತನ ನಿಮಿತ್ತಕ್ಕೆ ಬಹು ಜನರನ್ನು ಒಲಿಸುತ್ತಿದ್ದನು. ಅವರ ಸಾಧನೆಯಲ್ಲಿ ಜಯಗಳಿಸುತ್ತಿದ್ದನು.GCKn 165.1

  ಸುಧಾರಣೆಯನ್ನು ಮುದುವರಿಸಲು ದೇವರು ಪೋಪಸಭೆಯ ಪಾಪದೋಷಗಳಿಗೆ ವಿರುದ್ದ ಜನರನ್ನು ಎಬ್ಬಿಸಿದನು. ಈ ಸಜೀವಸಾಕ್ಷಿಗಳನ್ನು ಮಟ್ಟಹಾಕಲು ಸೈತಾನನು ಯೋಜಿಸಿದನು; ಆದರೆ ದೇವರು ತನ್ನವರ ಸುತ್ತ ತಡೆಗಟ್ಟು ಹಾಕಿದರು. ಕೆಲವರು ತಮ್ಮರಕ್ತಸಾಕ್ಷಿಗಳಾಗಿ ಆತನನು ಮಹಿಮೆಪಡಿಸಲು ಅನುಮತಿಸಲ್ಪಟ್ಟರು; ಆದರೆ ಲೂಥರ್ ಮತ್ತು ಮೆಲನ್ಕ್ ಥಾನರಂಥ ಬಲಶಾಲಿಗಳಾದ ಇತರರು ಪೋಪರ. ಪಾದ್ರಿಗಳ, ಅರಸರ ಪಾಪಗಳ ವಿರುದ್ದ ಸಜೀವವಾಗಿ ಸಾರುತ್ತಾ ಅತ್ಯುತ್ತಮ ದೇವರ ನಾಮಕ್ಕೆ ಮಹಿಮೆಯನ್ನು ಉಂಟುಮಾಡಿದರು. ಲೂಥರನ ದ್ವನಿಗೆ ಅವರು ನಡುಗಿದರು. ಈ ಆಯ್ದುಕೊಂಡ ವ್ಯಕ್ತಿಗಳ ಮೂಲಕ ಬೆಳಕಿನ ಕಿರಣವು ಕತ್ತಲೆಯನ್ನು ಓಡಿಸಲು ಪ್ರಾರಂಭಿಸಿತು, ಬಹು ಜನರು ಬೆಳಕನ್ನು ಸಂತೋಷವಾಗಿ ಸ್ವೀಕರಿಸಿ ಅದರಲ್ಲಿ ಮುನ್ನಡೆಯಲಾರಂಭಿಸಿದರು. ಒಬ್ಬಸಾಕ್ಷಿಯು ಹತನಾದರೆ ಅವನ ಸ್ಥಾನದಲ್ಲಿ ಇಬ್ಬರು ಅಥವಾ ಹಲವರು ಉದ್ಭವಿಸುತ್ತಿದ್ದರು.GCKn 166.1

  ಆದರೆ ಸೈತಾನನು ಅತೃಪ್ತನಾದನು. ಅವನಿಗೆ ಮಾನವರ ಶರೀರದ ಮೇಲೆ ಮಾತ್ರ ಹಕ್ಕು ಇದ್ದಿತು. ವಿಶ್ವಾಸಿಗಳು ತಮ್ಮ ವಿಶ್ವಾಸ ನಿರೀಕ್ಷೆಯನ್ನು ಬಿಟ್ಟುಬಿಡುವಂತೆ ಮಾಡಲು ಅವನಿಗೆ ಅಸಾದ್ಯವಾಯಿತು,ಮರಣಮುಖದಲ್ಲೂ ಸಹ, ನೀತಿವಂತನ ಪುನರುತ್ಥಾನದಲ್ಲಿ ಅಮರರಾಗುವ ಭರವಸೆಯ ನಿರೀಕ್ಷೆ ಪ್ರಕಾಶಿಸಿ ವಿಶ್ವಾಸಿಗಳು ವಿಜೇತರಾದರು. ಸುಧಾರಕರಿಗೆ ಸಾಮಾನ್ಯ ಶರೀರ ಬಲಕ್ಕಿಂತ ಹೆಚ್ಚಾದ ಬಲವಿತ್ತು. ಅವರು ಒಂದು ಕ್ಷಣವೂ ನಿಧ್ರಿಸಲು ಯತ್ನಿಸಲಿಲ್ಲ. ರಕ್ಷಿಸುವ ಕ್ರೈಸ್ತೀಯ ಶಸ್ತ್ರಾಸ್ತ್ರಗಳಿಂದ ತಮ್ಮನ್ನು ಅಲಂಕರಿಸಿಕೊಂಡರು. ಅಧ್ಯಾತ್ಮಿಕ ಶತೃಗಳ ವಿರುದ್ದ ಹೋರಾಡಲು ಸಿದ್ದರಾದದ್ದು ಮಾತ್ರವಲ್ಲದೆ ವ್ಯಕ್ತಿಗಳ ರೂಪದಲ್ಲಿದ ಸೈತಾನನು — ನಿಮ್ಮ ನಂಬಿಕೆಯನ್ನು ಬಿಟ್ಟುಬಿಡಿರಿ ಇಲ್ಲವಾದರೆ ಮರಣಹೊಂದೀರಿ ಎಂದು ಸತತವಾಗಿ ಉಚ್ಛಕಂಠದಿಂದ ಕೂಗುತ್ತಿದ್ದವರು ವಿರುದ್ದ ಹೋರಾಡಲು ಸಿದ್ದರಾದರು. ಈ ಲೋಕದ ಅರ್ಥದಷ್ಟು ಜನರು ಕ್ರಿಸ್ತನ ಹೆಸರನ್ನು ಹೊಂದಿದ್ದವರೂ, ಆತನ ಉದ್ದೇಶಕ್ಕೆ ಹೇಡಿಗಳಾಗಿದ್ದವರಿಗಿಂತ ಕೆಲವು ಕ್ರೈಸ್ತರು ಮಾತ್ರ ನಂಬಿಕೆಯಿಂದ ದೇವರಲ್ಲಿ ಸಶಕ್ತರಾಗಿ ಆತನ ದೃಷ್ಟಿಯಲ್ಲಿ ಅಮೂಲ್ಯರೆನಿಸಿಕೊಂಡರು. ಸಭೆಯು ಚಿತ್ರಹಿಂಸೆಗೊಳಗಾದಾಗ ಅವರ ಪ್ರೀತಿ ಐಕ್ಯತೆಯಲ್ಲಿ ನೆಲೆಗೊಂಡಿದ್ದರು. ದೇವರಲ್ಲಿ ಸದೃಢರಾಗಿದ್ದರು. ಅವರೊಂದಿಗೆ ಪಾಪಿಗಳು ಐಕ್ಯರಾಗಲು ಅನುಮತಿಸಲಿಲ್ಲ; ವಂಚಕರೂ,ವಂಚಿಸಲ್ಪಟ್ಟವರೂ ಅವರೊಂದಿಗಿರಲಿಲ್ಲ. ಕ್ರಿಸ್ತನಿಗಾಗಿ ಸರ್ವಸ್ವವನ್ನೂ ತ್ಯಾಗಮಾಡುವವರು ಮಾತ್ರ ಆತನ ಶಿಷ್ಯರು. ಅವರು ದೀನರೂ, ಅಲ್ಪರೂ ಆಗಿ ಕ್ರಿಸ್ತನಂತೆಯೇ ಇರಲು ಇಚ್ಛಿಸುವವರಾಗಿದ್ದಾರೆ.GCKn 167.1

  ನೋಡಿ; ಲೂಕ 22:61,62; ಯೋಹಾನ 18:10; ಅಪೋಸ್ತಲರಕೃತ್ಯ ಅಧ್ಯಾಯ 3 ಮತ್ತು 4 ಹೆಚ್ಚಿನ ಅಧ್ಯಯನಕ್ಕಾಗಿ ವಿಶ್ವಕೋಶದಲ್ಲಿನ “the reformation” ” ಸುಧಾರಣೆ” ಎಂಬುದನ್ನು ನೋಡಿರಿGCKn 168.1