ಅಧ್ಯಾಯ 12. - ಸುವಿನ ಶಿಷ್ಯರು
ಶಿಷ್ಯರು, ಕ್ರೂಜೆಗೆ ಹಾಕಲ್ಪಟ್ಟು ಜೀವಿತನಾಗಿ ಎದ್ದುಬಂದವನ ಬಗೆಗೆ ಬಹು ಪ್ರಬಲವಾಗಿ ಬೋಧಿಸುತ್ತಿದ್ದರು. ರೋಗಗಳನ್ನು ಗುಣಪಡಿಸಿದರು, ಒಬ್ಬ ಹುಟ್ಟು ಕುಂಟನನ್ನು ಸ್ವಸ್ಥಪಡಿಸಿದರು, ಅವನು ಜನರೆಲ್ಲರ ಎದುರಿಗೆ ದೇವರನ್ನು ಕೊಂಡಾಡುತ್ತಾ, ನಡೆಯುತ್ತಾ, ಹಾರುತ್ತಾ ಇದ್ದನು. ಈ ಸುದ್ದಿಯು ಹರಡಲು ಜನರೆಲ್ಲಾ ಶಿಷ್ಯರನ್ನು ಒತ್ತರಿಸುತ್ತಾ ಆವರಿಸಿಕೊಂಡರು. ಈ ಕಾರ್ಯವು ಸಂಭವಿಸಿದುದಕ್ಕೆ ಬಹು ಆಶ್ಚರ್ಯದಿಂದ ವಿಸ್ಮಯ ತುಂಬಿದವರಾಗಿ ಬೆರಾಗಾದರು.GCKn 105.1
ಯೇಸು ಮರಣಹೊಂದಿದ ಮೇಲೆ ಇನ್ನಾವ ಅದ್ಬುತ ಕಾರ್ಯ ಜನರ ಮದ್ಯದಲ್ಲಿ ನಡೆಯಲಾರದೆಂದೂ, ಅವರ ಉದ್ವೇಗವೆಲ್ಲಾ ಸತ್ತುಹೋಗಿ ತಮ್ಮ ಹಿಂದಿನ ಸಂಸ್ಕಾರಗಳಿಗೆ ಅಧೀನರಾಗುವರೆಂದು ಮಹಾಯಾಜಕರು ಯೋಚಿಸಿದರು. ಆದರೆ ಇಗೋ! ಎಲ್ಲರ ಮಧ್ಯೆ ಶಿಷ್ಯರು ಅದ್ಬುತ ಕಾರ್ಯಗಳನ್ನು ಸಾಧಿಸುವವರಾದರು, ಜನರು ಬಹು ದಿಗ್ಭ್ರಮೆಯಿಂದ ಅವರೆಡೆಗೆ ಬೆರಗಾಗಿ ನೋಡಲಾರಂಭಿಸಿದರು. ಯೇಸುವನ್ನು ಶಿಲುಬೆಗೆ ಹಾಕಿದ್ದಾಯಿತು, ಇವರಿಗೆ ಇನ್ನೆಲ್ಲಿಂದ ಈ ಶಕ್ತಿಯು ಸಿದ್ದಿಸಿದೆ ಎಂದು ಆಶ್ಚರ್ಯಗೊಂಡರು. ಯೇಸುವು ಜೀವಂತನಾಗಿದ್ದಾಗ ಶಿಷ್ಯರಿಗೆ ಈ ಬಲವನ್ನು ಅನುಗ್ರಹಿಸಿದ್ದನು; ಆತನು ಸತ್ತ ನಂತರ ಅದ್ಬುತಕಾರ್ಯಗಳು ಅಂತ್ಯವಾಗುವುದು ಎಂದುಕೊಂಡರು. ಪೇತ್ರನು ಅವರ ಗಲಿಬಿಲಿಯನ್ನು ಅರ್ಥಮಾಡಿಕೊಂಡವನಾಗಿ ‘ಇಸ್ರಾಯೇಲ್ ಜನರೇ, ನೀವು ಯಾಕೆ ಇದಕ್ಕಾಗಿ ಆಶ್ಚರ್ಯ ಪಡುತ್ತೀರಿ? ನೀವು ನಮ್ಮನು ದೃಷ್ಟಿಸುವುದೇನು? ನಾವು ಸ್ವಂತ ಶಕ್ತಿಯಿಂದಗಲೀ, ಪವಿತ್ರೆಯಿಂದಗಲೀ ಇವನನ್ನು ನಡೆಯುವಂತೆ ಮಾಡಿದ್ದೇವೆಂದು ಭಾವಿಸಬೇಡಿರಿ. ನಮ್ಮ ಪಿತೃಗಳಾದ ಅಬ್ರಹಾಮ, ಇಸಾಕ, ಯಾಕೋಬರ ದೇವರು ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ. ನೀವಂತೂ ಆತನನ್ನು ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ ಪರಿಶುದ್ದನೂ, ನೀತಿವಂತನೂ ಆಗಿರುವಾತನನ್ನು ಬೇಡವೆಂದು ಹೇಳಿ ಕೊಲೆಗಾರನನ್ನು ಬಿಡಿಸಬೇಕೆಂದು ಬೇಡಿಕೊಂಡು ಜೀವನಾಯಕನನ್ನು ಕೊಲ್ಲಿಸಿದಿರಿ. ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯವಾಗಿ ನಾವೇ ಸಾಕ್ಷಿಗಳು. ಕುಂಟನಾಗಿದ ಈ ಮನುಷ್ಯನು ನೆಟ್ಟಗಾದುದಕ್ಕೆ ಆತನು ಯೇಸುವಿನ ಮೇಲೆ ನಂಬಿಕೆಯಿಟ್ಟದ್ದೇ ಕಾರಣ ಎಂದು ಹೇಳಿದನು. ಮಹಾಯಾಜಕರಿಗೂ ಹಿರಿಯರಿಗೂ ಈ ಮಾತುಗಳನ್ನು ಕೇಳಿ ಸಹಿಸಲಾಗಲಿಲ್ಲ. ಶಿಷ್ಯರನ್ನು ಹಿಡಿದು ಸೆರೆಗೆ ಹಾಕಿದರು. ಆದರೆ ಶಿಷ್ಯರು ಒಂದೇ ಒಂದು ಉಪನ್ಯಾಸ ಕೇಳಿದವರಲ್ಲಿ ಸಾವಿರಾರು ಜನರು ನಂಬಿದರು, ಕ್ರಿಸ್ತನ ಪುನರುತ್ಥಾನ ಮತ್ತು ಆರೋಹಣದ ಮೇಲೆ ಭರವಸೆ ಇಟ್ಟರು. ಆದರೆ ಮಹಾಯಾಜಕರಿಗೂ ಹಿರಿಯರಿಗೂ ತಳಮಳ ಉಂಟಾಯಿತು. ಜನರ ಮನಸ್ಸು ತಮ್ಮಕಡೆಗೆ ತಿರುಗಿಸಲು ಯೇಸುವನ್ನು ಕೊಲ್ಲಿಸಿದ್ದರು. ಆದರೆ ವಿಷಯವು ಮೊದಲಿಗಿಂತ ಮಿರಿಹೋಯಿತು ದೇವಕುಮಾರನ ಕೊಲೆಗಾರರೆಂದು ಶಿಷ್ಯರನ್ನು ಪ್ರತ್ಯಕ್ಷವಾಗಿ ಅವರನ್ನು ಖಂಡಿಸಲಾರಂಭಿಸಿದರು. ಇದು ಇನ್ನೂ ಎಷೋ ಮಟ್ಟಿಗೆ ಬೆಳೆಯೂತ್ತದೋ ಅಥವಾ ಜನರು ತಮ್ಮನು ಹೇಗೆ ಗಣಿಸಬಹುದೆಂದು ಇತ್ಯರ್ಥಮಾಡಲಾಗಲಿಲ್ಲ. ಶಿಷ್ಯರನ್ನು ಬಹು ಸಂತೋಷದಿಂದ ಸಾಯಿಸಬಹುದಾಗಿತ್ತು ಆದರೆ ತಮ್ಮಮೇಲೆ ಕಲ್ಲೆಸೆಯ ಬಹುದೆಂದು ಭಯಗೊಂಡರು. ಅವರು ಶಿಷ್ಯರನ್ನು ನ್ಯಾಯಮಂಡಲಿಗೆ ಕರೆದರು. ನೀತಿವಂತನ ರಕ್ತಕ್ಕಾಗಿ ಹಾತೊರೆದಿದ್ದವರು ಅಲ್ಲಿದ್ದರು. ಪೇತ್ರನನ್ನು ಯೇಸುವಿನ ಶಿಷ್ಯನೆಂದು ಗುರುತಿಸಲು ಅವನು ಆಣೆ ಪ್ರಮಾಣ ಮಾಡಿ ಬೊಂಕಿದ್ದನ್ನು ಅವರು ಕೇಳಿದ್ದರು. ಈಗ ಅವರು ಪೇತ್ರನನ್ನು ಬೆದರಿಸಬಹುದು ಎಂದು ಕೊಂಡರು; ಆದರೆ ಪೇತ್ರನು ಪರಿವರ್ತನೆ ಹೊಂದಿದ್ದನು. ಈ ಸನ್ನಿವೇಶದಲ್ಲಿ ಯೇಸುವನ್ನು ಮಹಿಮೆಪೆಡಿಸುವ ಅವಕಾಶ ಒಂದು ಪೇತ್ರನಿಗೆ ಕೊಡಲ್ಪಟ್ಟಿತು. ಆತುರಗಾರನಾಗಿ, ಹೇಡಿಯಾಗಿ ತಾನೇ ಬೊಂಕಿದ ಹೆಸರನ್ನು ಘನಪಡಿಸುವುದರ ಮೂಲಕ ಕಳಂಕವನ್ನು ತೊಳೆದುಕೊಳ್ಳುವಂತಾಯಿತು. ಹೇಡಿತನದ ಯಾವ ಭಯವು ಪೇತ್ರನ ಎದೆಯಲ್ಲಿಡಗಿರಲಿಲ್ಲ; ಪವತ್ರತ್ಮಾನ ಬಲದಿಂದ ಯಾವ ಹೆದರಿಕೆಯೂ ಇಲ್ಲದೆ ನೀವು ಕೊಲ್ಲಿಸಿದ ಹಾಗೂ ದೇವರು ಸತ್ತವರೂಳಗಿಂತ ಎಬ್ಬಿಸಲ್ಪಟ್ಟ ನಜರೇತಿನ ಯೇಸುಕ್ರಿಸ್ತನ ನಾಮ ಬಲದಿಂದಲೇ ನಾನು ನಿಮ್ಮ ಮುಂದೇ ನೆಟ್ಟಗೆ ನಿಂತ್ತಿರುವೇನೆಂದು ಪವಿತ್ರ ದೈರ್ಯದಿಂದ ಸಾರಿ ಹೇಳಿದನು. ಮನೆಕಟ್ಟುವವರಾದ ನೀವು ಹೀನೈಸಿದ ಕಲ್ಲು ಆತನು ;ಆತನೇ ಮುಖ್ಯವಾದ ಮೂಲೆಗಲ್ಲಾದನು. ಬರಬೇಕಾದ ರಕ್ಷಣೆಯೂ ಇನ್ನಾರಲ್ಲಿಯೂ ಇಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆ ಆಗುವುದಿಲ್ಲ ಎಂದನು.GCKn 105.2
ಪೇತ್ರ ಯೋಹಾನರು ದೈರ್ಯದಿಂದ ಮಾತನಾಡುವುದನ್ನು ನೋಡಿ ಜನರು ಆಶ್ಚರ್ಯಗೊಂಡರು. ಅವರು ಯೇಸುವಿನ ಸಂಗಡ ಇದ್ದವರು ಎಂಬುದನ್ನು ಮನಸ್ಸಿಗೆ ತಂದುಕೊಂಡರು. ಕೊಲೆಗಾರರಿಂದ ಯೇಸುವು ಹಿಂಸೆಗೊಳಗಾಗಿದ್ದ ಸಂದರ್ಭದಲ್ಲಿ ಕಂಡುಬಂದ ಅದೇ ಧೀನ, ಅಭಯ ಮುಖಭಾವದ ಹೋಲಿಕೆ ಅವರಲ್ಲಿ ಕಾಣುವುದನ್ನು ಮನಗಂಡರು .ಪೇತ್ರನು ಬೊಂಕಿದ ಮೇಲೆ ಒಂದೇ ಒಂದು ದುಃಖ ಹಾಗೂ ಕರುಣೆಯ ದೃಷ್ಟಿಯಿಂದ ಯೇಸು ಅವನನ್ನು ಖಂಡಿಸಿದನು. ಈಗ ಅವನೇ ಸ್ವಾಮಿಯ ಜೊತೆಗೆ ತನ್ನನ್ನು ಗುರುತಿಸಿಕೊಂಡನು. ಪೇತ್ರನು ಆಶೀರ್ವದಿಸಲ್ಪಟ್ಟನು ಮತ್ತು ಅಂಗೀಕರಿಸಲ್ಪಟ್ಟನು. ಯೇಸುವಿನ ಅಂಗೀಕಾರದ ಚಿಹ್ನಿಯಾಗಿ ಪವಿತ್ರತ್ಮಾನು ಅವನಲ್ಲಿ ತುಂಬಿಕೊಡನು.GCKn 108.1
ಮಹಾಯಾಜಕರಿಗೆ, ತಮಗಿದ್ದ ದ್ವೇಷವನ್ನು ಎಲ್ಲಾರ ಮುಂದೆ ಪ್ರಕಟಿಸಲು ದೈರ್ಯವಿಲ್ಲದಾಯಿತು. ಆ ಮೇಲೆ ಸಭೆಯಿಂದ ಹೊರೆಗೆ ಹೋಗಿರೆಂದು ಅಪ್ಪಣೆ ಕೊಟ್ಟು, ಈ ಮನುಷ್ಯರಿಗೆ ನಾವೇನು ಮಾಡೋಣ? ಪ್ರಸಿಧ್ದವಾದ ಸೂಚಕಕಾರ್ಯವು ಇವರ ಮೂಲಕ ನಡೆಯಿತೆಂದು ಯೇರುಸಲೇಮಿನಲ್ಲಿ ವಾಸವಾಗಿರುವವರೆಲ್ಲರಿಗೂ ಗೊತ್ತಾಗಿದೆಯಷ್ಟೇ, ಅದು ಅಗಲಿಲ್ಲ ಎನ್ನುವುದಕ್ಕಾಗದು ಎನ್ನುತ್ತ ತಮ್ಮತಮ್ಮೂಳಗೆ ಮಾತಾಡಿಕೊಂಡರು. ಈ ಒಳ್ಳೆಯಕಾರ್ಯವು ಹರಡುವುದು ಎಂದು ಅವರು ಭಯಗೊಂಡರು, ಹೀಗೆ ಹಬ್ಬಿದರೆ ನಮ್ಮ ಸ್ಥಾನಕ್ಕೆ ಧಕ್ಕೆ ಉಂಟಾಗುವುದು ಮತ್ತು ಯೇಸುವಿನ ಕೊಲೆಗಾರರೆಂದು ನಾವು ಕಾಣಲ್ಪಡುವೆವು ಎಂದು ಭಾವಿಸಿ, ಆ ಹೆಸರನ್ನೆತ್ತಿ ಯಾರ ಸಂಗಡಲೂ ಮಾತನಾಡಬಾರದೆಂದು ಬೆದರಿಸೋಣ ಎಂದು ಮಾತನಾಡಿದರೆ ನೀವು ಸಾಯುವಿರಿ ಎಂದಷ್ಟೇ ಹೇಳಲಾಯಿತು. ಆದರೆ ಪೇತ್ರನು, ನಾನು ಕಂಡು ಕೇಳಿದ್ದನು ಮಾತ್ರ ಮಾತನಾಡುತ್ತೇನೆಂದು ದೈರ್ಯದಿಂದ ಹೇಳಿದನು.GCKn 108.2
ಯೇಸುವಿನ ಬಲದಿಂದ, ಶಿಷ್ಯರು ತಮ್ಮ ಬಳಿಗೆ ಬಂದ ಎಲ್ಲಾ ತೊಂದರೆಗೆ ಈಡಾದವರುನ್ನೂ, ರೋಗಿಗಳನ್ನೂ ವಾಸಿಮಾಡುತ್ತಾ ಬಂದರು. ಮಹಾಯಾಜಕರೂ ಹಿರಿಯರೂ ಅವರೊಡನಿದ್ದವರೆಲ್ಲರಲ್ಲಿ ಗಾಬರಿ ತುಂಬಿತು. ಕ್ರೂಜೆಗೆ ಹಾಕಲ್ಪಟ್ಟು, ಎದ್ದು ಪರಲೋಕಕ್ಕೇರಿದ ರಕ್ಷಕನ ಹೆಸರಿನ ಪಟ್ಟಿಯಲ್ಲಿ ನೂರಾರು ಜನರು ಸೇರಿಕೊಡರು. ಅವರ ಶಿಷ್ಯರನ್ನು ಸೆರೆಗೆ ಹಾಕಿದರು. ಜನರ ಉದ್ರೇಕವು ಇನ್ನು ಮುಂದೆ ಕುಂದಿಹೋಗುವುದೆಂದುಕೊಂಡರು. ಸೈತಾನನು ಗೆದ್ದನು, ದುಷ್ಟದೂತರು ಸಂಭ್ರಮಿಸಿದರು; ಆದರೆ ಸೆರೆಮನೆಯ ಬಾಗಿಲನ್ನು ತೆರೆಯಲು ದೇವದೂತರು ಕಳುಹಿಸಲ್ಪಟ್ಟರು ಮಹಾಯಜಕರ ಹಿರಿಯರ ಅಪ್ಪಣೆಗೆ ಪ್ರತಿಯಾಗಿ, ಶಿಷ್ಯರಿಗೆ ನೀವು ಹೋಗಿ ದೇವಾಲಯದಲ್ಲಿ ನಿಂತುಕೊಂಡು ಈ ಸಜೀವವಾದ ಮಾತುಗಳನ್ನೆಲ್ಲಾ ಜನರಿಗೆ ಹೇಳಿರಿ ಎಂದರು. ಸಭಾಮಂಡಲಿಯವರನ್ನು ಕೂಡಿಸಿ ಅವರನ್ನು ಕರೆತರುವುದಕ್ಕೆ ಸೆರೆಮನೆಗೆ ಕಳುಸಿದರು. ಓಲೇಕಾರರು ಸೆರಮನೆ ಭಾಗಿಲನ್ನು ತೆರೆದರು, ಆದರೆ ಸೆರೆಗೆ ದೊಬ್ಬಿದವರನ್ನು ಕಾಣದಾದರು. ಅವರು, ಮಹಾಯಾಜಕರು ಹಾಗೂ ಹಿರಿಯರಿಗೆ -ಕಾವಲಿನ ಮನೆ ಪೂರ್ಣಭದ್ರವಾಗಿ ಮುಚ್ಚಿದ್ದುದನ್ನು, ಕಾವಲುಗಾರರು ಬಾಗಿಲಲ್ಲಿ ನಿಂತಿರುವುದನ್ನೂ ಕಂಡೆವು; ಆದರೆ ತೆರೆದಾಗ ಒಳಗೆ ಒಬ್ಬರನ್ನೂ ಕಾಣಲಿಲ್ಲ ಎಂದರು. ಹೀಗಿರಲಾಗಿ ಯಾರೋ ಒಬ್ಬನು - ಬಂದು ಅಗೋ ನೀವು ಸೆರೆಮನೆಯಲ್ಲಿಟ್ಟಿದ್ದ ಆ ಮನುಷ್ಯರು ದೇವಾಲಯದಲ್ಲಿ ನಿಂತುಕೊಂಡು ಜನರಿಗೆ ಉಪದೇಶ ಮಾಡುತ್ತಿದ್ದಾರೆಂದು ಹೇಳಿದನು. ಅಗ ಅಧಿಪತಿಯು ಓಲೇಕಾರರ ಸಂಗಡ ಹೋಗಿ ನೋಡಿ, ಜನರು ತಮಗೆ ಕಲ್ಲೆಸೆದಾರೆಂದು ಭಯಪಟ್ಟು ಅವರನ್ನು ಬೆದರಿಸಲಿಲ್ಲ. ಯಾವ ಹಿಂಸೆಗೂ ಒಳಪಡಿಸದೆ ಕರೆದುಕೊಂಡು ಬಂದರು .ಅವರನ್ನು ತಂದು ಹಿರೀಸಭೆಯ ಮುಂದೆ ನಿಲ್ಲಿಸಲು ಮಹಾಯಾಜಕರು ವಿಚಾರಣೆ ಮಾಡಿದರು. ನೀವು ಆ ಹೆಸರನ್ನೆತ್ತಿ ಉಪದೇಶ ಮಾಡಲೇಬಾರದೆಂದು ಹೇಳರಿಲ್ಲವೇ? ಆದರೆ ನೀವು ಯೆರುಸಲೇಮಿನ್ನೆಲ್ಲಾ ನಿಮ್ಮ ಉಪದೇಶದಿಂದ ತುಂಬಿಸಿದಿರಿ ಆ ಮನುಷ್ಯನ ರಕ್ತಕ್ಕೆ ನಮ್ಮನು ಹೊಣೆಮಾಡಿದ್ದೀರಿ ಎಂದರು.GCKn 109.1
ಅವರೆಲ್ಲಾ ಕಪಟಿಗಳು; ದೇವರು ಮೆಚ್ಚಿಕೆಗಿಂತ ಜನರ ಮೆಚ್ಚಿಕೆಗೆ ಪ್ರಾಶಸ್ತ್ಯಕೊಟ್ಟವರು. ಅವರು ಹೃದಯವು ಕಠಿಣವಾಗಿದ್ದೂ ಅಪೋಸ್ತಲರಕಾರ್ಯಗಳು ಅವರನ್ನು ಹುಚ್ಚೆಬ್ಬಿಸಿದ್ದವು. ಶಿಷ್ಯರು, ಯೇಸುವಿನ ಕ್ರೂಜಾಮರಣ, ಪುನರುತ್ಥಾನ ಹಾಗೂ ಆರೋಹಣದ ಬಗ್ಗೆ ಬೋಧಿಸಿದರೆ ಅವರ ಕಳಂಕೆಕ್ಕೆ ಒಳಗಾಗಿ ಕೊಲೆಗಾರರೆಂದು ಸಾಬೀತಾಗುವುದೆಂದು ಅವರಿಗೆ ತಿಳಿದಿತ್ತು. ಯೇಸುವಿನ ರಕ್ತ ನಮ್ಮ ಮೇಲೆ ಹಾಗೂ ನಮ್ಮGCKn 110.1
ಮಕ್ಕಳ ಮೇಲೆಯೂ ಇರಲಿ ಎಂದವರು ಈಗ ಕ್ರಿಸ್ತನ ರಕ್ತವನ್ನು ತಮ್ಮ ಮೇಲೆ ಅಪಾದಿಸಿಕೊಳ್ಳಲು ಹಿಮ್ಮೆಟ್ಟಿದರು.GCKn 111.1
ಅಪೋಸ್ತಲರಾದರೋ ದೈರ್ಯದಿಂದ ಮನುಷ್ಯರು ದೇವರ ಮಾತನ್ನು ಕೇಳಬೇಕೆಂದು ಪ್ರಚಾರ ಮಾಡಿದರು. ಪೇತ್ರನು —ನೀವುಕೊಂದು ಶಿಲುಬೆ ಯಲ್ಲಿ ತೂಗುಹಾಕಿದ ಯೇಸುವನ್ನು ನಮ್ಮ ಪಿತೃಗಳ ದೇವರು ಸತ್ತವರೊಳಗಿಂದ ಎಬ್ಬಿಸಿದನು. ಇಸ್ರಾಯೇಲರಿಗೆ ಪಾಪಕ್ಷಮಾಪಣೆಯನ್ನು ಪಶ್ಚಾತ್ತಾಪವನ್ನು ನೀಡಲೋಸುಗ ದೇವರು ತನ್ನ ಬಲಗೈಯಿಂದ ಆತನನು ರಾಜನನ್ನಾಗಿಯೂ, ರಕ್ಷಕನನ್ನಾಗಿಯೂ ಘನಪಡಿಸಿದನು. ಈ ಎಲ್ಲಾ ಸಂಗತಿಗಳಿಗೆ ನಾವು ಮತ್ತು ದೇವರಿಗೆ ವಿದೇಯರಾದವರಿಗೆ ಕೊಡಲ್ಪಡುವ ಪವಿತ್ರತ್ಮಾನೂ ಸಾಕ್ಷಿಗಳಾಗಿದ್ದೇವೆ ಎಂದನು. ಕೊಲೆಗಾರರು ಕೌದ್ರರಾದರು. ಅಪೋಸ್ತಲರನ್ನು ಕೊಲ್ಲಿಸಿ ತಮ್ಮ ಕೈಗಳನ್ನು ರಕ್ತದಿಂದ ನೆನಸಿಕೊಳ್ಳಲು ಇಚ್ಚಿಸಿದರು ಇದನು ಹೇಗೆ ಸಾಧಿಸಬೇಕೆಂದು ಯೋಚಿಸುತ್ತಿರುವಾಗ, ದೇವದೂತನೊಬ್ಬನು ಕಳುಸಿಲ್ಪಟ್ಟ ಗಮಾಲಿಯೇಲನೆಂಬಾತನ ಹೃದಯವನ್ನು ಸಿದ್ದಗೊಳಿಸಿ, ಮಹಾಯಜಕರಿಗೂ ಹಿರಿಯರಿಗೂ ಬುದ್ದಿವಾದ ಕೊಡುವಂತೆ ಒಪ್ಪಿಸಲಾಯಿತು. ಗಮಾಲಿಯೇಲನು — ಈ ಮನುಷ್ಯರನ್ನು ಅವರ ಪಾಡಿಗೆ ಬಿಟ್ಟು ದೂರವಾಗಿರಿ; ನೀವು ಮನುಷ್ಯರ ವಿಷಯದಲ್ಲಿ ಮಾಡಬೇಕೆಂದಿರುವುದರ ಬಗ್ಗೆ ಎಚ್ಚರಿಕೆಯುಳ್ಳವರಾಗಿರ್ರಿ; ಈ ಯೋಚನೆಯು ದೇವರಿಂದಾಗಿದ್ದರೆ ಅದನ್ನು ಕೆಡಿಸುವುದಕ್ಕೆ ನಿಮ್ಮಿಂದ ಆಗುವುದಿಲ್ಲ; ಒಂದುವೇಳೆ ದೇವರ ಮೇಲೆ ಯುದ್ದಮಾಡುವವರಾಗಿ ಕಾಣಿಸಿಕೊಡೀರಿ ಎಂದನು. ದುಷ್ಟ ದೂತರು ಅಪೋಸ್ತಲರನ್ನು ಕೊಲ್ಲಲು ಯಾಜಕರು, ಹಿರಿಯರನ್ನು ಪ್ರೇರೇಪಿಸಿದರು. ಆದರೆ ದೇವರು ಅವರ ಮದ್ಯದಲ್ಲೇ ಸಮಾನ ಗೌರವ ಹೊಂದಿದ ವ್ಯಕ್ತಿಯ ದ್ವನಿಯನ್ನು ಎಬ್ಬಿಸಿ ಶಿಷ್ಯರ ಪರಮಾತನಾಡಲು ದೂತನನ್ನು ಕಳುಹಿಸಿದರು.GCKn 111.2
ಅಪೋಸ್ತಲರ ಕೆಲಸಗಳು ಇನ್ನೂ ಮುಗಿಯಲಿಲ್ಲ. ಅವರು ಕಂಡು ಕೇಳಿದುದರ ಬಗ್ಗೆ ಯೇಸುವಿನ ಸಾಕ್ಷಿಗಳಾಗಿರಲು ರಾಜರ ಮುಂದೆ ತರಲ್ಪಡಬೇಕು. ಮಹಾಯಜಕರು ಹಿರಿಯರು ಅವರನ್ನು ಬಿಡುಗಡೆ ಮಾಡುವ ಮುನ್ನ ಹೊಡೆದು, ಹೇಗೂ ಮಾತನಾಡಬಾರದೆಂದು ಅಪ್ಪಣೆಕೊಟ್ಟು ಹೊರಡಿಸಿದರು. ತಾವು ಆ ಹೆಸರಿನ ನಿಮಿತ್ತವಾಗಿ ಅವಮಾವ ಪಡುವುದಕ್ಕೆ ಯೋಗ್ಯರನಿಸಿಕೊಂಡು, ಮಂಡಲಿಯಿಂದ ಶಿಷ್ಯರು ಹೊರಟು ಹೋದರು. ಅವರು ಎಡಬಿಡದೆ ದೇವಾಲಯದಲ್ಲಿಯೂ, ತಮ್ಮನ್ನು ಅಹ್ವಾನಿಸಿದ ಪ್ರತಿ ಮನೆಮನೆಯಲ್ಲಿಯೂ ಉಪದೇಶ ಮಾಡುತ್ತಾ ತಮ್ಮ ಸೇವೆಯಲ್ಲಿ ಮುಂದುವರಿದರು. ದೇವರ ವಾಕ್ಯವು ಬೇಳೆಯುತ್ತಾ ಹೋಯಿತು. ಸೈತಾನನು ಮಹಾಯಜಕರು ಹಾಗೂ ಹಿರಿಯರನ್ನು ಪ್ರೇರಿಸಿ ರೋಮ್ ಪಹರೆಯವರನ್ನು ಕೊಂಡುಕೊಂಡು ಅವರ ಮೂಲಕ ತಾವು ಮಲಗಿರುವಾಗ ಶಿಷ್ಯರು ಯೇಸುವನ್ನು ಕದ್ದುಕೊಂಡು ಹೋದರೆಂದು ಸುಳ್ಳೇ ನುಡಿಸಿದರು; ಈ ಸುಳ್ಳಿನಿಂದ ಸತ್ಯವನ್ನು ಮರೆಮಚಲು ನಿರೀಕ್ಷಿಸಿದರು; ಆದರೆ ಇಗೋ! ಅವರ ಸುತ್ತಲು ಯೇಸುವಿನ ಪುನರುತ್ಥಾನದ ಪುರಾವೆಗಳು ಚಿಲುಮೆಯಂತೆ ಪುಟಿದವು. ಶಿಷ್ಯರು ನಿರ್ಭಯವಾಗಿ ಪ್ರಚಾರ ಮಾಡಿ ತಾವು ಕಂಡುಕೇಳಿದನ್ನು ಸಾಕ್ಷಿಕೊಡುತ್ತಾ ಯೇಸುವಿನ ಹೆಸರಿನಲ್ಲಿ ಸೂಚಾಕ ಕಾರ್ಯಗಳನ್ನು ಮಾಡಲಾರಂಭಿಸಿದರು. ದೇವಕುಮಾರನ ಮೇಲೆ ಶಕ್ತಿಪ್ರಯೋಗ ಮಾಡಲು ಮಾಹಾಯಜಕರಿಗೆ ಅನುಮತಿ ದೊರೆತಾಗ ದೈರ್ಯವಾಗಿ ಯೇಸುವಿನ ರಕ್ತವನ್ನು ಹೊಣೆಯಾಗಿ ಅಂಗೀಕರಿಸಲು ಸಮ್ಮತಿಸಿದವರ ಮೇಲೆ ಹೊರಿಸಿದರು.GCKn 112.1
ನಾನು ನೋಡಿದ್ದೇನೆಂದರೆ - ದೇವದೂತರು ಈ ಸಂತತಿಯಲ್ಲಿ ಬರುವ ಕ್ರಿಸ್ತನ ಶಿಷ್ಯರನ್ನು ಲಂಗರಿನಂತಿರುವ ಈ ಶುದ್ದ ಪ್ರಮುಖ ಸತ್ಯಗಳಿಗೆ ಬಂಧಿಸಿ ವಿಶೇಷ ಸುಕ್ಷೇಮವನ್ನು, ಕಾವಲನ್ನೂ ಕೊಡಲು ದೇವರು ಯೋಜಿಸಿದರು. ಯೇಸುವಿನ ಕ್ರೂಜಾಮರಣ, ಪುನರುತ್ಥಾನ ಮತ್ತು ಆರೋಹಣಕ್ಕೆ ಸಾಕ್ಷಿಗಳಾಗಿದ್ದ ಅಪೋಸ್ತಲರ ಮೇಲೆ ಪವಿತ್ರತ್ಮಾನು ನೆಲೆಗೊಂಡಿದ್ದನ್ನು. ಮುಖ್ಯವಾದ ಸತ್ಯವು ಇಸ್ರಾಯೇಲ್ ಮಕ್ಕಳ ನಿರೀಕ್ಷಯಗಿತ್ತು. ಅವರು ಒಂದೇ ನಿರೀಯಾದ ಲೋಕರಕ್ಷಕನನ್ನು ಎಲ್ಲರು ಎದುರು ನೋಡಬೇಕಾಗಿದ್ದು ಎಲ್ಲರೂ ಯೇಸುವು ಜೀವತ್ಯಾಗ ಮಾಡಿ ಸಿದ್ದಪಡಿಸಿದ ಮಾರ್ಗದಲೇ ನಡೆದು ದೇವರ ಆಜ್ಞೆಗಳಿಗೆ ವಿಧೇಯರಾಗಿ ಜೀವಿಸಬೇಕಾಯಿತು. ಯಾವ ಕಾರ್ಯಕ್ಕಾಗಿ ಯಹೂದ್ಯರು ಯೇಸುವನ್ನು ಹಗೆಮಾಡಿ ಕೊಂದರೋ ಅದೇ ಕಾರ್ಯವನ್ನು ಮುದುವರಿಸಲು ಶಿಷ್ಯರಿಗೆ ಕೊಟ್ಟ ಶಕ್ತಿಯಲ್ಲಿ ಯೇಸುವಿನ ವಿವೇಕ ಮತ್ತು ಸದ್ಗುಣವನ್ನು ನಾನು ಕಂಡೆನು. ಸೈತಾನನ ಕಾರ್ಯದ ಮೇಲೆ ಅವರಿಗೆ ಅಧಿಕಾರ ಕೊಡಲ್ಪಟ್ಟಿತು. ಹೀನೈಸಲ್ಪಟ್ಟು ದುಷ್ಟರ ಹಸ್ತದಿಂದ ಕೊಲ್ಲಲ್ಪಟ್ಟ ಯೇಸುವಿನ ನಾಮದ ಮೂಲಕ ಅದ್ಬುತಕಾರ್ಯವನ್ನೂ, ಸೂಚಕಕಾರ್ಯವನ್ನೂ, ಶಿಷ್ಯರು ನಡೆಸಿದರು. ಯೇಸುವೇ ಈ ಲೋಕದ ರಕ್ಷಕನೆಂಬ ಶುದ್ದ ಸತ್ಯವನ್ನು ಆತನ ಮರಣದ ಮತ್ತು ಪುನರುತ್ಥಾನದ ಸಮಯದಲ್ಲಿ ಆವರಿಸಿದ ಬೆಳಕಿನ ಪ್ರಭಾವಳಿ ಹಾಗೂ ತೇಜೋವಲಯವು ಅಮರಗೊಳಿಸಿತು.GCKn 113.1
ಓದಿ; ಅಪೋಸ್ತಲರ ಕೃತ್ಯಗಳು ಅಧ್ಯಾಯ 3-5GCKn 114.1