Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಅಧ್ಯಾಯ 40. - ಎರಡನೆಯ ಪುನರುತ್ಥಾನ

    ಯೇಸು, ದೂತ ಪರಿವಾರದ ಬೆಂಗಾವಲಿನೊಂದಿಗೆ ಪಟ್ಟಣವನ್ನು ಬಿಟ್ಟು ಹೊರಟನು, ವಿಮೋಚಿಸಲ್ಪಟ್ಟ ಭಕ್ತರು ಆತನನ್ನು ಸರಣಿಯಲ್ಲಿ ಹಿಂಬಾಲಿಸಿದರು. ಯೇಸು ತನ್ನ ರಾಜಗಾಂಭೀರ್ಯದಿಂದ ಸತ್ತ ದುಷ್ಟರನ್ನು ಕರೆದನು; ಅವರೋ ತಾವು ಮರಣಿಸಿದಾಗ ಇದ್ದಂತಹ ರೋಗಿಷ್ಟ, ಬಲಹೀನಾವಸ್ಥೆಯಲ್ಲಿ ಎದ್ದುಬಂದರು. ಎಂಥಹ ನೋಟ! ಎಂಥಹ ದೃಶ್ಯ! ಮೊದಲನೇಯ ಪುನರುತ್ಥಾನದಲ್ಲಿ ಭಾಗಿಯಾದವರು ಅಮರತ್ವದ ಪರಿಪೂರ್ಣ ಶುಭ್ರ ಕಾಂತಿಯಿಂದ ಕೂಂಡಿದರು; ಆದರೆ ಎರಡನೆಯ ಪುನರುತ್ಥಾನದಲ್ಲಿ ಪ್ರತಿಯೊಬ್ಬರ ಮೇಲೆ ಶಾಪದ ಗುರುತು ಪಡಿಯಚ್ಚಾಗಿತ್ತು. ರಾಜರು, ಪ್ರಭುಗಳು, ವಿದ್ಯಾ- ಅವಿದ್ಯಾವಂತರು ಬಹು ತುಚ್ಚು ಮತ್ತು ಹೀನಸ್ಥಿತಿಯಲ್ಲಿ ಎದ್ದು ಬಂದರು. ಅವರೆಲ್ಲರೂ ಮನುಷ್ಯಕುಮಾರನನ್ನು ಕಂಡರು; ಯೇಸುವನ್ನು ಕಡೆಗಣಿಸಿದವರು, ಹೀಯ್ಯಳಿಸಿದವರು, ಛಡಿಯಿಂದ ಥಳಿಸಿದವರು, ಪವಿತ್ರಹಣೆಯ ಮೇಲೆ ಮುಳ್ಳಿನ ಕಿರೀಟ ಇರಿಸಿದವರು, ಮುಂತಾದವರೆಲ್ಲಾ ಆತನು ರಾಜಗಾಂಭೀರ್ಯದಲ್ಲಿರುವುದನ್ನು ದರ್ಶಿಸಿದರು. ಆತನ ವಿಚಾರಣೆಯ ಸಂಧರ್ಭದಲ್ಲಿ ಉಗುಳಿದವರು ಈಗ ಆತನ ಚೂಪುನೋಟದ ಉಜ್ವಲ ಚಹರೆಯಿಂದ ತಪ್ಪಿಸಿಕೊಳ್ಳುವಂತೆ ಮುಖತಿರುಗಿಸಿದರು, ಯಾರು ಆತನ ಕೈಕಾಲುಗಳಿಗೆ ಮೊಳೆಗಳನ್ನು ಜಡಿದರೋ ಅವರು ಆ ಕ್ರೂಜೆಯ ಗುರುತುಗಳನ್ನು ಕಂಡರು. ಆತನ ಪಕ್ಕೆಗಳಿಗೆ ಈಟಿಯಿಂದ ತಿವಿದರು. ಆ ಕ್ರೂರ ತಿವಿತದ ಗುರುತನ್ನು ಕಂಡರು. ಮತ್ತು ಅವರು, ಈತನೇ ನಾವು ಶಿಲುಭೆಗೆ ಹಾಕಿದವನು, ಯಾತನೆಯನ್ನು ಪಡುತ್ತಿರುವಾಗ ಕುಚೋದ್ಯಮಾಡಲ್ಪಟ್ಟವನು ಎಂದು ಮನಗಂಡರು. ಆನಂತರ ಒಂದು ಅಂತ್ಯವಾಗದ ಗೊಳಟವು ಕೇಳಿಬಂದು ರಾಜಾಧಿರಾಜನೂ ಕರ್ತರ ಕರ್ತನಿಂದ ತಪ್ಪಿಸಿಕೊಂಡು ಓಡುತ್ತಿರುವುದು ಕಂಡಿತು.GCKn 291.1

    ತಾವು ಕಡೆಗಾಣಿಸಿದವನ್ನು ಮಹಾ ಪ್ರಜ್ವಲ ಪ್ರಭಾವದಿಂದ ತಮ್ಮನ್ನು ಮರೆಮಾಡಿಕೊಳ್ಳಲು ಬೆಟ್ಟೆಗಳು ಬಂಡೆಗಳ ಸಂದುಗಳಿಗೆ ಓಡಿದರು. ಇತರರು. ಆತನ ಪ್ರಭವಾಮಹಿಮೆಯ ತೇಜಸ್ಸಿನಿಂದ ಬರುವಾಗ ಒಂದೇ ಧ್ವನಿಯಿಂದ ಸ್ಪಷ್ಟವಾಗಿ ‘ಕರ್ತನ ಹೆಸರಿನ ಮೇಲೆ ಬರುವವನು ಧನ್ಯನು’ ಎಂದು ಕೂಗುತ್ತಿದ್ದರು.GCKn 292.1

    ಯೇಸು ಮತ್ತು ಪವಿತ್ರದೂತರು ಮತ್ತು ಪಟ್ಟಣಕ್ಕೆ ಹಿಂತಿರುಗಲು ಭಕ್ತರೊಡಗೂಡಿ ಹೋಗುವಾಗ ನಾಶವಾಗುವ ದುಷ್ಟ ಪ್ರಲಾಪ, ಗೋಳಾಟವು ಪರಿಸರದಲ್ಲಿ ತುಂಬಿಹೋದವು. ಆಗ ನಾನು, ಸೈತಾನನು ಮತ್ತೆ ಕಾರ್ಯಪ್ರವೃತ್ತನಾಗುವುದನ್ನು ಕಂಡೆನು. ಅವನ್ನು ತನ್ನ ಪ್ರಜೆಗಳ ಮದ್ಯೆಚಲಿಸುತ್ತಾ ನಿರ್ಬಲರಾಗಿದ್ದವರನ್ನು ಸಬಲನಾಗಿಸಿದನು. ಅವರಿಗೆ- ‘ನಾನು ಮತ್ತು ನನ್ನ ದೂತರು ಶಕ್ತಿಸಾಮರ್ಥತುಂಬಿದವರೆಂದು ಹೇಳಿದನು. ಅದೇ ತಾನೇ ಮರಣದಿಂದ ಎಬ್ಬಿಸಲ್ಪಟ್ಟು ಕೋಟ್ಯಾನುಕೋಟಿ ಜನರನ್ನು ತೋರಿಸಿದನು. ಅವರಲ್ಲಿ ಮಹಾಯುದ್ಧವೀರರೂ , ಯುದ್ಧ ಕಲಾನಿಪುಣರಾದ ಪ್ರಭುಗಳೂ, ರಾಜ್ಯಗಳನ್ನು ದಮನ ಗೊಳಿಸಿದ ಜಯಶಾಲಿಗಳಿದ್ದರು. ಯಾವ ಯುದ್ಧದಲೂ ಪರಾಜಯ ಹೊಂದದ — ಮಹಾಕಾಯಗಳೂ, ಶೌರ್ಯಶಾಲಿಗಳೂ ಇದ್ದರು. ಅವರ ಮದ್ಯೆ ತನ್ನ ಇರುವಿಕೆಯಿಂದ ಥರಥರನೆ ನಡುಗುವಂತೆ ಮಾಡಿದ ಬಹು ಅಹಂಕಾರಿ ಮಹಾಕಾಂಕ್ಷಿಯಾದ ನೆಪೋಲಿಯನಿದ್ದನು. ಬಹು ಎತ್ತರವಾಗಿ ದಷ್ಟಪುಷ್ಟರೂ, ಘನಯೋಗ್ಯರಾಗಿದ್ದು ಅಹಂಕಾರ ಪ್ರತಿಷ್ಠೆ ತುಂಬಿದ್ದೂ, ಕಾಳಗದಲ್ಲಿ ಸೋತುಹೋಗವರೂ ಇದ್ದರು. ಅವರು ಜಯಶಾಲಿಗಳಾಗುವ ತೃಷೆಯಿಂದಲೇ ಪ್ರಾಣಬಿಟ್ಟವರು. ಅದೇ ಆಲೋಚನೆಗಳನ್ನೇ ಹೊಂದಿದವರಾಗಿ ಎದ್ದು ಬಂದರು. ಸೈತಾನನು ತನ್ನ ದೂತರು, ರಾಜರು, ಜಯಶಾಲಿಗಳು, ಧೀರ್ಘದೇಹಿಗಳೊಂದಿಗೆ ಸಮಾಲೋಚಿಸಿದನು. ಆನಂತರ ಅವನು ಪಟ್ಟಣದ ಕಡೆಗೆ ನೋಡುತ್ತಾ — ಈ ಪಟ್ಟಣದಲ್ಲಿರುವ ಸಮೂಹವು ಅಲ್ಪಸಂಖ್ಯೆಯಲ್ಲಿರುವುದಲ್ಲದೆ ತ್ರಾಣವಿಲ್ಲದವರಾಗಿದ್ದಾರೆ. ಆದ್ದರಿಂದ ನಾವು ಹೋಗಿ ಅಲ್ಲಿನ ಪ್ರಜೆಗಳನ್ನು ದೊಬ್ಬಿ ತಾವೇ ಮಹಾ ಶೃಂಗಾರಭರಿತ, ಸಂಪಧ್ಬರಿತ ಪಟ್ಟಣವನ್ನು ವಶಪಡಿಸಿಕೊಳ್ಳಬಹುದು ಎಂದನು’. GCKn 292.2

    ಸೈತಾನನು ಅವರನ್ನು ವಂಚಿಸುವುದರಲ್ಲಿ ಸಫಲನಾದನು. ತಕ್ಷಣವೇ ಅವರೆಲ್ಲಾ ಯುದ್ದಕ್ಕೆ ಸನ್ನದ್ಧರಾಗುತ್ತಾ ಶಸ್ತ್ರಾಸ್ತ್ರಗಳನ್ನು ಜೋಡಿಸಿಕೊಂಡರು; ನಂತರ ಸೈತಾನನ ಮುಂದಾಳತ್ವದಲ್ಲಿ ಇಡೀ ಸಮೂಹ ಮುಂದುವರೆಯಿತು. ರಾಜರೂ, ನುರಿತ ಭಟರು ಸೈತಾನನನ್ನ ಹಿಂಬಾಲಿಸಿದರು. ಮಿಕ್ಕ ಸಮೂಹವು ರಚನಾಕ್ರಮಕ್ಕೆ ಅನುಗುಣವಾಗಿ ಒಬ್ಬರಾದ ಮೇಲೆ ಒಬ್ಬರಂತೆ ದಂಡಾಗಿ ಹೊರಟರು. ಪ್ರತಿ ಪಡೆಗೂ ಒರ್ವ ನಾಯಕನಿದ್ದು ವ್ಯವಸ್ಥಿತ ಕ್ರಮದಿಂದ ಸಮತಟ್ಟಾಗಿಲ್ಲದ ಭೂನೆಲದಲ್ಲಿ ಪಥಸಂಚಲನೆಯಿಂದ ಪವಿತ್ರಪಟ್ಟಣದೆಡೆಗೆ ಸಾಗಿಹೋದರು. ಯೇಸು ಪಟ್ಟಣದ ಬಾಗಿಲನ್ನು ಮುಚ್ಚಿಬಿಟ್ಟನು. ದುಷ್ಟ ಸೈನ್ಯವು ಸುತ್ತುವರೆದು ಯುದ್ಧದ ವ್ಯೂಹರಚನೆಗೆ ಅನುಗುಣವಾಗಿ ನಿಂತವು. ಅವರು ಮಹಾಭಯಂಕರ ಹೋರಾಟವನ್ನು ಎದುರು ನೋಡಿದರು. ಯೇಸು, ದೂತಗಣ ಮತ್ತು ಭಕ್ತರು, ತಮ್ಮ ತಲೆಯ ಮೇಲೆ ಹೊಳೆಯುವ ಮುಕುಟ ತೊಟ್ಟು ಪಟ್ಟಣದ ಗೋಡೆಯ ಮೇಲೆ ಏರಿಹೋದರು. ಯೇಸುವು, ತನ್ನ ಪ್ರಭುತ್ವದ ಗಾಂಭೀರ್ಯದಿಂದ ಏರುಧ್ವನಿಯಲ್ಲಿ ಇಗೋ! ಪಾಪಿಗಳೆ, ನೀತಿವಂತ ಪ್ರತಿಫಲ! ಮತ್ತು ಇಗೋ! ವಿಮೋಚಿಸಲ್ಪಟ್ಟವರೆ, ದುಷ್ಟರ ಪ್ರತಿಪಲ! ಎಂದಾಗ ಆ ದುಷ್ಟ ಸಮೂಹವು ಪಟ್ಟಣದ ಗೋಡೆಯ ಮೇಲಿದ್ದ ಶುದ್ಧಪಡೆಯನ್ನು ಕಂಡಿತು. ಅವರ ಕಿರೀಟದ ಕಾಂತಿಯನ್ನೂ ಯೇಸುವಿನ ಸ್ವರೂಪವನ್ನು ಪ್ರತಿಬಿಂಬಿಸುತ್ತಿದ್ದ ಮಹಾಪ್ರಭಾವವನ್ನೂ ಕಂಡರು, ನಂತರ ರಾಜಾಧಿರಾಜನ, ಕರ್ತರಕರ್ತನ, ಅನುಪಮ ತೇಜಸ್ಸನ್ನೂ ಸಾಮರ್ಥ್ಯವನ್ನೂ ಕಂಡಾಗ ಅವರ ಎದೆಕುಂದಿತು. ತಾವು ಕಳೆದುಕೊಂಡ ಮಹಿಮ ಮತ್ತು ಸಂಪತ್ತು ಅರಿವಿಗೆ ಬಂದು ಪಾಪದ ಸಂಬಳ ಮರಣ ಎಂಬ ಸತ್ಯವನ್ನು ಅರ್ಥಮಾಡಿಕೊಂಡರು. ತಾವು ಅತಿತುಚ್ಚ ಅಸಹ್ಯಕರ ಅವಲಕ್ಷಣದ ಸ್ಥಿತ್ಯಾವಸ್ಥೆಯಲ್ಲಿ ಮಹಾಪಟ್ಟಣದ ಹೊರಗಿರುವಾಗ ತಾವೇ ಕಡೆಗಣಿಸಿದ ಪರಿಶುದ್ಧ ಆನಂದಭರಿತ ಸಮೂಹವು ನಿತ್ಯಜೀವ, ಘನಮಾನ, ಅಮರತ್ವ ಧರಿಸಿರುವುದನ್ನು ದರ್ಶಿಸಿದರು.GCKn 293.1

    ಓದಿ: ಮತ್ತಾಯ 23:29; ಪ್ರಕಟನೆ 6:15-16; 20:7-9, 22:12-15GCKn 295.1

    Larger font
    Smaller font
    Copy
    Print
    Contents