Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ 14. - ಸೌಲನ ಪರಿವರ್ತನೆ

    ಸೌಲನು, ಯೇಸುವಿನ ಬಗೆಗೆ ಬೋಧಿಸುತ್ತಿರುವ ಗಂಡಸರಾಗಲೀ ಹೆಂಗಸರಾಗಲೀ ಸರಿಯೇ, ಬೇಡಿಹಾಕಿಸಿ ಯೆರುಸಲೇಮಿಗೆ ತರುವಂತೆ ಅಧಿಕಾರ ನೀಡುವ ಓಲೆ ತೆಗೆದುಕೊಂಡು ಧಮಸ್ಕಕ್ಕೆ ಪ್ರಯಣ ಮಾಡಿದಾಗ, ದುಷ್ಟದೂತರು ಹಿಗುತ್ತಾ ಅವನನ್ನು ಸುತ್ತುವರಿದರು. ಅವನು ಪ್ರಯಣ ಮಾಡುತ್ತಾ ಇರುವಾಗ ಆಕಾಶದಿಂದ ಒಂದು ಬೆಳಕು ಫಕ್ಕನೆ ಅವನ ಸುತ್ತಲೂ ಮಿಂಚಿತು. ಅದು ದುಷ್ಟದೂತರು ಓಡಿಹೋಗುವಂತೆ ಮಾಡಿದ್ದಲ್ಲದೆ ಸೌಲನು ತತ್ ಕ್ಷಣವೇ ನೆಲಕ್ಕೆ ಬೀಳುವಂತೆ ಮಾಡಿತು. ಆಗ ಒಂದು ವಾಣೆಯು ಕೇಳಿ ಬಂತು — ಸೌಲನೇ, ಸೌಲನೇ ನನ್ನನ್ನು ಯಾಕೇ ಹಿಂಸೆಪಡಿಸುತ್ತೀ ಎಂದಾಗ ಅವನು - ಕರ್ತನೆ ,ನಿನಾರು ಎಂದು ಕೇಳಲು ಕರ್ತನು — ‘ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು’ ಎಂದಿತು, ಮುಳ್ಳನು ಒದೆಯುವುದು ನಿನಗೆ ಕಷ್ಟವಾಗುತ್ತದೆ ಎನಲು ಸೌಲನು ನಡುಗುವವನಾಗಿ ಆಶ್ಚರ್ಯದಿಂದ “ಕರ್ತನೆ ನಾನು ನಿನಗೇನು ಮಾಡಬೇಕೆನ್ನುತೀ” ಎಂದು ಪ್ರಶ್ನಿಸಿದನು ಕರ್ತನು ‘ನೀನೆದ್ದು ಊರೊಳಕ್ಕೆ ಹೋಗು, ನೀನು ಮಾಡಬೇಕಾದದ್ದು ಅಲ್ಲಿ ತಿಳಿಸಲ್ಪಡುವುದು’ ಎಂದು ಹೇಳಿದನು.GCKn 119.1

    ಅವನ ಜೊತೆಯಲ್ಲಿ ಪ್ರಯಣ ಮಾಡುತ್ತಿದ್ದವರು ದ್ವನಿಯನ್ನು ಮಾತ್ರ ಕೇಳಿ ಯಾರನ್ನೂ ಕಾಣದೆ ಮೂಕರಂತೆ ನಿಂತರು. ಆ ಬೆಳಕು ಮಾಯವಾಗಲು ಸೌಲನು ನೆಲದಿಂದ ಎದ್ದು ಕಣ್ಣು ತೆರೆದಾಗ ಯಾರೂ ಕಾಣಿಸಲಿಲ್ಲ. ಆಕಾಶದ ತೀಕ್ಷ್ಣಪ್ರಕಾಶವೂ ಅವನನ್ನು ಕುರುಡನನ್ನಾಗಿಸಿತು. ಜೊತೆಯಲ್ಲಿದ್ದವರು ಅವನ್ನನ್ನು ಕೈಹಿಡಿದು ಧಮಸ್ಕದೊಳಗೆ ಕರೆದುಕೊಂಡು ಹೋದರು. ಅವನು ಮೂರುದಿವಸ ಕಣ್ಣುಕಾಣದೆ ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ ,ಸೌಲನು ಸೆರೆಯಾಗಿ ತೆಗೆದುಕೊಂಡು ಹೋಗಬೇಕೆಂದಿದ್ದ ಒರ್ವನಲ್ಲಿಗೆ ಕರ್ತನು ತನ್ನ ದೂತನನ್ನು ಕಳುಹಿಸಿದನು ಮತ್ತು ಕರ್ತನು ದರ್ಶನದಲ್ಲಿ ಅವನಿಗೆ — ನೀನೆದ್ದು ನೆಟ್ಟನೆ ಬೀದಿ ಎಂಬಲ್ಲಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬುವವನನ್ನು ವಿಚಾರಿಸು; ಇಗೋ ಅವನು ಪ್ರಾರ್ಥನೆಮಾಡುತ್ತಿದ್ದಾನೆ ಮತ್ತು ಅನನೀಯನೆಂಬ ಒಬ್ಬ ಮನುಷ್ಯನು ಒಳಗೆ ಬಂದು ತನ್ನ ಮೇಲೆ ಕೈಹಿಡುವುದನ್ನೂ, ಅವನ ಕಣ್ಣುಗಳು ಕಾಣುವುದನ್ನೂ ಪೌಲನು ದರ್ಶಿಸಿದ್ದಾನೆ ಎಂದು ಹೇಳಲಾಯಿತುGCKn 119.2

    ಈ ವಿಷಯದಲ್ಲಿ ಎಲೋ ತಪ್ಪಿದೆ ಎಂದೂ ಭಾವಿಸುತ್ತಾ ಅನನೀಯನು ಕರ್ತನೊಂದಿಗೆ, ತಾನು ಸೌಲನ ವಿಷಯವಾಗಿ ಕೇಳಿದ್ದನ್ನು ಪ್ರಸ್ಥಾಪಿಸಿದನು. ಆದರೆ ಕರ್ತನು ಅನನೀಯರಿಗೆ — ನೀನು ಹೋಗು; ಆ ಮನುಷ್ಯನು ಅನ್ಯಜನರಿಗೂ, ಅರಸಗಳಿಗೂ ಇಸ್ರಾಯೇಲರಿಗೂ ನನ್ನ ಹೆಸರನ್ನು ತಿಳಿಸುವುದಕ್ಕಾಗಿ ಆರಿಸಿಕೊಂಡ ಸಾಧನವಾಗಿದ್ದಾನೆ ಅವನು ನನ್ನ ನಿಮಿತ್ತ ಎಷ್ಟು ಹಿಂಸೆಯನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುವೆನು ಎಂದು ಹೇಳಿದನು. ಅನನೀಯನು ಕರ್ತನ ಮಾರ್ಗದರ್ಶನವನ್ನು ಅನುಸರಿಸಿದನು, ಆ ಮನೆಯಾಳಕ್ಕೆ ಹೋಗಿ ಅವನ ಮೇಲೆ ತನ್ನ ಕೈಗಳನ್ನಿಟ್ಟು — ಸಹೋದರನಾದ ಸೌಲನೇ, ನೀನು ಬಂದ ದಾರಿಯಲ್ಲಿ ಕಾಣಿಸಿಕೊಂಡ ಕರ್ತನಾದ ಯೇಸು ನಿನಗೆ ಕಣ್ಣು ಕಾಣುವಂತೆಯೂ ನೀನು ಪವಿತ್ರಾತ್ಮ ಭರಿತನಾಗುವಂತೆಯೂ ನನ್ನನ್ನು ನೀನ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಿದನುGCKn 120.1

    ಆ ಕ್ಷಣವೇ ಸೌಲನ ಕಣ್ಣು ಕಾಣಿಸಿದವು, ಅವನು ಎದ್ದು ದೀಕ್ಷಾಸ್ನಾನ ಮಾಡಿಸಿ ಕೊಂಡನು. ಅನಂತರ ಸಬಾಮಂದಿರಗಳಲ್ಲಿ ಯೇಸುವಿನ ವಿಷಯವಾಗಿ ಆತನೇ ದೇವಕುಮಾರನೆಂದು ಸಾರುವುದಕ್ಕೆ ಪ್ರಾರಂಭಿಸಿದನು. ಕೇಳಿದ ಜನರು ಬಹು ಆಶ್ಚರ್ಯದಿಂದ ಕೊಡಿದವರಾಗಿ, ಆ ಹೆಸರು ಹೇಳಿದವರುನ್ನು ಯೆರುಸಲೇಮಿನಲ್ಲಿ ನಾಶಮಾಡುತ್ತಿದ್ದವನು ಇವನೇ ಅಲ್ಲವೇ? ಅಂಥವರನ್ನು ಬೇಡಿಹಾಕಿಸಿ ಮಹಾಯಾಜಕರ ಬಳಿಗೆ ತೆಗೆದುಕೊಂಡು ಹೋಗಬೇಕೆಂದೇ ಇಲ್ಲಿಗೆ ಬಂದವನಲ್ಲವೇ ಎಂದು ಮಾತನಾಡಿಕೊಂಡರು. ಅದೇ ಸೌಲನು ಅಧಿಕ ಸಾಮರ್ಥ್ಯವುಳ್ಳವನಾಗಿ ಯಹೂದ್ಯರನ್ನು ದಿಗ್ಭ್ರಮೆಗೊಳಿಸಿದನು. ಅವರು ಮತ್ತೆ ತೊಂದರೆಗೂಳ್ಳಗಾದರು. ಪವಿತ್ರಭರಿತನಾಗಿ ಸೌಲನು ತನ್ನ ಅನುಭವವನ್ನು ವಿವರಿಸಿದನು. ಸೌಲನು ಯೇಸುವಿನ ವಿರುದ್ದವಾಗಿದ್ದ ಸತ್ಯವು ಎಲ್ಲರಿಗೂ ತಿಳಿದಿತ್ತು, ಆತನ ಹೆಸರಿನಲ್ಲಿ ನಂಬಿಕೆಯಿಟ್ಟವರನ್ನು ಬೇಟೆಯಾಡಿ ಮರಣಕ್ಕೆ ಈಡುಮಾಡುವಲ್ಲಿ ಸೌಲನಿಗಿದ್ದ ಆಸಕ್ತಿಯೂ ಎಲ್ಲರಿಗೂ ತಿಳಿದಿತ್ತು. ಈತನ ಅದ್ಬುತವಾದ ಪರಿವರ್ತನೆಯು ಯೇಸುವನ್ನು ದೇವಕುಮಾರನೇ ಎಂದು ಬಹುಜನರು ಒಪ್ಪಿಕೊಳ್ಳುವಂತೆ ಮಾಡಿತು. ಸೌಲನು ಜನರಿಗೆ ತನ್ನ ಅನುಭವವನ್ನು ವಿವರಿಸುತ್ತಿದ್ದನು ತಾನು ಗಂಡಸರಾಗಲೀ ಹೆಂಗಸರಾಗಲೀ ಸರಿಯೆ ಅವರನ್ನು ಹಿಂಸೆಪಡಿಸಿ ಬಂಧಿಸಿ ಮರಣಕ್ಕೆ ಒಪ್ಪಿಸಿಕೊಡಲು ಧಮಸ್ಕಕ್ಕೆ ಪ್ರಯಣಮಾಡುತ್ತಿರುವಾಗ, ಇದ್ದಕ್ಕಿದ್ದಂತೆ ಆಕಾಶ ದಿಂದ ಮಹಾಪ್ರಕಾಶವು ಅವನ ಸುತ್ತಲೂ ಬೆಳಗಿತೆಂದು, ಯೇಸು ಅವನಿಗೆ ತನ್ನನ್ನು ಪ್ರಕಟಿಸಿ ತಾನೇ ದೇವಕುಮಾರನೆಂದು ತನಗೆ ಬೋದಿಸಿದನು ಎಂದನು. ಸೌಲನು ಧೀರನಾಗಿ ಯೇಸುವಿನ ಬಗ್ಗೆ ಉಪದೇಶಸುವಾಗ ಪ್ರಭಾಲವಾದ ಪ್ರಭಾವವು ಅವನಲ್ಲಿತ್ತು. ಅವನಿಗೆ ವೇದದಲ್ಲಿ ಬಹು ಪಾಂಡಿತ್ಯವಿತ್ತು. ಪರಿವರ್ತನೆಯಾದ ನಂತರ ಯೇಸುವಿನ ಪ್ರವಾದನೆ ಮೇಲೆ ದಿವ್ಯ ಬೆಳಕು —ಬೆಳಗಿತು ಅದು. ಸತ್ಯವನ್ನು ಸ್ಪಷ್ಟವಾಗಿ ,ದೈರ್ಯವಾಗಿ ಎತ್ತಿಹಿಡಿಯಲು ನೆರವಾಯಿತು. ವೇದಶಾಸ್ತ್ರದ ಬಗ್ಗೆ ಅಪಾರ್ಥವಿದ್ದರೆ ತಿದ್ದಿಕೊಡುವಂತೆ ಪ್ರೇರೆಪಿಸಿತು. ದೇವರ ಆತ್ಮನು ಅವನಲ್ಲಿ ನೆಲೆಗೊಂಡಿದ್ದುದರಿಂದ ತನ್ನ ಕೇಳುಗರನ್ನು ಕ್ರಿಸ್ತನ ಮೊದಲನೇ ಬರುವಣವು ಹೇಳಲ್ಪಟ್ಟಿದ್ದ ಪ್ರವಾದನಾ ಕಾಲಕ್ಕೆ ದೈರ್ಯ ಹಾಗೂ ಕಡ್ಡಾಯದಿಂದ ತೆಗೆದು ಕೊಂಡು ಹೋಗಿ ಶಾಸ್ತ್ರವು ನೆರವೇರುವುದನ್ನು, ಅದರಲ್ಲಿ ಕ್ರಿಸ್ತನ ಹಿಂಸೆ ಮರಣ ಮತ್ತು ಪುನರುತ್ಥಾನ ವಿರುವುದನ್ನು ಸಿದ್ಥಾಂತಪಡಿಸಿದನು .GCKn 121.1

    ಓದಿ: ಅಪೋಸ್ತಲರ ಕೃತ್ಯ ಅಧ್ಯಾಯ 9GCKn 122.1