Loading...
Larger font
Smaller font
Copy
Print
Contents

ಕ್ರಿಸ್ತನು ಮತ್ತು ಆತನ ದೂತರಿಗೂ ಹಾಗೂ ಸೈತಾನ ಮತ್ತು ಆತನ ದೂತರಿಗೂ ನಡುವಣ

 - Contents
 • Results
 • Related
 • Featured
No results found for: "undefined".
 • Weighted Relevancy
 • Content Sequence
 • Relevancy
 • Earliest First
 • Latest First

  ಅಧ್ಯಾಯ 15. - ಯಹೂದ್ಯರು ಪೌಲನನ್ನು ಕೊಲ್ಲಲು ತೀರ್ಮಾನಿಸಿದ್ದು

  ಪೌಲನು ತನಗಾದ ಅನುಭವವನ್ನು ವಿವರಿಸಿದಾಗ ಆದ ಪ್ರಭಾವವು ಮಹಾಯಾಜಕರೂ ಹಿರಿಯರೂ ಹಗೆಗೊಳ್ಳುವಂತೆ ಮಾಡಿದವು. ಈತನು ಧೀರನಾಗಿ ಯೇಸುವನ್ನು ಬೋಧಿಸುತ್ತಾ ಅದ್ಬುತಕಾರ್ಯಗಳನ್ನು ಮಾಡುವುದನ್ನು ಜನಸಮೂಹವು ಕಂಡು ತಮ್ಮ ಅಚಾರಗಳನ್ನು ತೊರೆದು ಅವರನ್ನು ದೇವಕುಮಾರನ ಕೊಲೆಗಡುಕರೆಂದು ನೋಡಲಾರಂಭಿಸಿದರು. ಅವರ ಕೋಪವು ಉರಿದೆದ್ದಿತು. ಈ ಉದ್ರೇಕವನ್ನು ನಿಷ್ಕ್ರೀಯ ಗೊಳಿಸಲು ಏನು ಮಾಡಬೇಕೆಂದು ಯೋಚಿಸಲು ಸಭೆ ಸೇರಿದರು. ಒಂದೇ ಒಂದು ಪರಿಯಾರವೆಂದರೆ ಪೌಲನನ್ನು ಕೊಲ್ಲುವುದು ಎಂದು ಒಪ್ಪಿಕೊಂಡರು. ಇವರ ಒಳತೋಟಿಗಳನ್ನೆಲ್ಲಾ ಬಲ್ಲ ದೇವರು ಪೌಲನ ಸೇವೆ ಸುಗಮವಾಗಿ ಪೂರ್ತಿಗೊಳ್ಳುವ ಸಲುವಾಗಿ ಯೇಸುವಿನ ನಾಮದಲ್ಲಿ ಹಿಂಸೆಯನ್ನು ಅನುಭವಿಸಲು ಜೀವಂತವಾಗಿಬೇಕೆಂದು ತನ್ನ ದೂತರನ್ನು ಕಾವಲಿಗೆ ನೇಮಿಸಿದನು.GCKn 123.1

  ಯಹೂದ್ಯರು ಪೌಲನ ಪ್ರಾಣಕ್ಕೆ ಹೊಂಚುಹಾಕುತ್ತಿರುವುದು ಅವನಿಗೆ ತಿಳಿಸಲ್ಪಟ್ಟಿತು. ನಂಬದೆ ಹೋದ ಯಹೂದ್ಯರು ರಾತ್ರಿ ಹಗಲು ದಮಸ್ಕದ ಬಾಗಿಲಲ್ಲಿ ಪೌಲನ ಬರುವಿಕೆಯನ್ನು ಕಾಯುವಂತೆಯೂ; ಅವರು ತಕ್ಷಣ ಕೊಲ್ಲಲೆಂದು ಸೈತಾನನು ಅವರನ್ನು ನಡೆಸಿದನು. ಆದರೆ ಶಿಷ್ಯರು ರಾತ್ರಿಕಾಲದಲ್ಲಿ ಅವನನ್ನು ಹೆಡಿಗೆಯಲ್ಲಿ ಕೂಡಿಸಿ ಗೋಡೆಯ ಮೇಲಿಂದ ಇಳಿಸಿ ಕಳುಹಿಸಿಬಿಟ್ಟರು, ಯಹೂದ್ಯರು ತಮ್ಮ ಸನ್ನಾಹ ವಿಫಲಗೊಂಡದ್ದನ್ನು ತಿಳಿದು ನಾಚಿಕೊಂಡರು ಮತ್ತು ಸೈತಾನನ ಗುರಿತಪ್ಪಿತು. ಪೌಲನು ಶಿಷ್ಯರೊಂದಿಗೆ ಸೇರಿಕೊಳ್ಳಲು ಯೆರುಸಲೇಮಿಗೆ ಬಂದಾನು; ಅವರಲ್ಲಿರು ದಿಗಿಲುಗೊಂಡರು. ಅವನನ್ನು ಶಿಷ್ಯನೆಂದು ಒಪ್ಪಿಕೊಳ್ಳಲು ಹಿಂತೆಗೆದರು. ದಮಸ್ಕದಲ್ಲಿ ಯಹೂದ್ಯರು ಅವನ ಪ್ರಾಣ ಬೇಟೆಯಾಡಿದರು ಮತ್ತು ಅವನ ಸಹೋದರರೇ ಅವನನ್ನು ಸೇರಿಸಿಕೊಳ್ಳಲಿಲ್ಲ; ಆದರೆ ಬಾರ್ನಬನು ಅವನನ್ನು ಅಪೋಸ್ತಲರ ಬಳಿಗೆ ಕರೆದುಕೊಂಡು ಹೋಗಿ, ಅವನು ದಾರಿಯಲ್ಲಿ ಕರ್ತನನ್ನು ಕಂಡುಕೊಂಡದ್ದನ್ನೂ, ದಮಸ್ಕದೊಳಗೆ ಯೇಸುವಿನ ಹೆಸರಿನಲ್ಲಿ ದೈರ್ಯದಿಂದ ಮಾತನಾಡಿದ್ದನ್ನು ಹೇಳಿದನು.GCKn 123.2

  ಆದರೆ ಪೌಲನನ್ನು ನಾಶಗೊಳಿಸಲು ಸೈತಾನನು ಯಹೂದ್ಯರನ್ನು ಪ್ರಚೋದಿಸಿದನು. ಯೇಸುವು ಅವನನ್ನು, ಯೆರುಸಲೇಮಿನಿಂದ ಹೊರಟು ಹೋಗಬೇಕೆಂದು ಆಜ್ಞಾಪಿಸಿದನು. ಹಾಗೆ ಅವನು ಪಟ್ಟಣಗಳಿಗೆ ಹೋಗುತ್ತಾ, ಯೇಸುವಿನ ವಿಷಯ ಸಾರುತ್ತಾ, ಅದ್ಬುತಕಾರ್ಯ ಮಾಡುತ್ತಿರಲು ಅನೇಕರು ಪರಿವರ್ತನೆ ಹೊಂದಿದರು. ಒಬ್ಬ ಹುಟ್ಟು ಕುಂಟನನ್ನು ಸ್ವಸ್ಥಮಾಡಿದಾಗ, ವಿಗ್ರಹಾರಾಧಕರಾಗಿದ್ದ ಜನರು ಅದನ್ನು ಕಂಡು ಶಿಷ್ಯರಿಗೆ ಬಲಿ ಅರ್ಪಿಸಲು ಮುಂದಾದರು. ಪೌಲನು ದುಃಖಿತನಾಗಿ ನಾವು ನಿಮ್ಮಂತೆ ಮನುಷ್ಯರೇ, ನೀವು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ದೇವರನ್ನು ಮಾತ್ರ ಆರಾಧಿಸಬೇಕು ಎಂದನು. ಅವರು ಮುಂದೇನೋ ಪೌಲನು ದೇವರನ್ನು ಮಹಿಮೆಪಡಿಸಿದನು; ಆದರೂ ಜನರನ್ನು ತಡೆಯುವುದು ಕಷ್ಟವಾಯಿತು. ಆದರೆ ಸತ್ಯವೇದದಲ್ಲಿನ ನಂಬಿಕೆಯ ಜ್ಞಾನವು, ಆತನು ಆರಾಧನೆಗೂ ಘನಮಾನಕ್ಕೂ ಯೋಗ್ಯನು ಎಂಬ ಪ್ರಥಮ ಜ್ಞಾನವು ಅವರ ಮನಸ್ಸಿನ ಮೇಲೆ ಪಡಿಮೂಡಲಾರಂಭಿಸುತ್ತಿತ್ತು; ಅವರು ಪೌಲನನ್ನು ಕೇಳುವವರಾಗಿರುವಾಗ ಸೈತಾನನು, ಪಟ್ಟಣದಲ್ಲಿದ್ದ ಇತರ ನಂಬದ ಯಹೂದ್ಯರನ್ನು ಎಬ್ಬಿಸಿ ಪೌಲನಿಂದ ಸಂಭವಿಸಿದ ಒಳ್ಳೆಯ ಕಾರ್ಯಗಳನ್ನು ಮಟ್ಟಹಾಕಿ ನಾಶಗೊಳಿಸಬೇಕೆಂದು ಒತ್ತಾಯಿಸಿದನ. ಅವರು ಪೌಲನ ವಿರುದ್ದ ಸುಳ್ಳು ವರದಿಗಳನ್ನು ಹೇಳಿ ವಿಗ್ರಹಾರಾಧಕರ ಬುದ್ಧಿಯನ್ನು ವಿಚಲಗೊಳಿಸುವಂತೆ ಯಹೂದ್ಯರು ಪ್ರೇರೇಪಿಸಿದರು, ಜನರ ಆಶ್ಚರ್ಯ ಹಾಗೂ ಮೆಚ್ಚಿಕೆಯೂ ಈಗ ಹಗೆಗೆ ತಿರುಗಿತು, ಕೆಲವು ಕ್ಷಣದ ಹಿಂದೆ ಶಿಷ್ಯರನ್ನು ಆರಾಧಿಸಲು ಸಿದ್ದವಾಗಿದ್ದವರು ಪೌಲನನ್ನು ಕೊಲ್ಲುವುದಕ್ಕೆ ಕಲ್ಲೆಸೆದರು. ಅವನನ್ನು ಸತ್ತಿದ್ದಾನೆಂದು ಭಾವಿಸಿ ಊರಹೊರಕ್ಕೆ ಎಳೆದುಬಿಟ್ಟರು, ಆದರೆ ಶಿಷ್ಯರು ಪೌಲನ ಸುತ್ತಲೂ ನಿಂತುಕೊಂಡು ಶೋಕಿಸುತ್ತಿರುವಾಗ ಅವನು ಎದ್ದನು. ಅವರು ಸಂತೋಷಗೊಂಡು ಅವನೊಂದಿಗೆ ಪಟ್ಟಣದೊಳ್ಳಕ್ಕೆ ಹೋದರು .GCKn 124.1

  ಪೌಲನು ಯೇಸುವಿನ ವಿಷಯವಾಗಿ ಬೋಧಿಸುತ್ತಿರುವಾಗ ಗಾರುಡಗಾರ್ತಿಯಾದ ಒರ್ವ ಮಹಿಳೆ ಅವರ ಹಿಂದೆ ಹೋಗುತ್ತಾ ದುರಾತ್ಮತುಂಬಿದವಳಾಗಿ, ಈ ಮನುಷ್ಯರು ಪರತ್ಪರನಾದ ದೇವರ ದಾಸರು, ನಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ ಎಂದು ಆನೇಕ ದಿವಸ ಕೂಗುತ್ತಿದ್ದಳು. ಈ ಕೂಗು ಜನರನ್ನು ಸತ್ಯದ ಮಾರ್ಗದಿಂದ ವಿರುದ್ದ ಸೆಳೆಯುವುದೆಂದು ಪೌಲನು ಬೇಸರಗೊಂಡನು. ಈ ಸ್ತ್ರೀಯನ್ನು ಮುಂದಿಟ್ಟು ಜನರ ಮನಸ್ಸಿನ ಮೇಲಿರುವ ಶಿಷ್ಯರ ಪ್ರಭಾವನ್ನು ನಾಶಪಡಿಸಬೇಕೆಂಬುದು ಸೈತಾನನ ಗುರಿಯಾಗಿತ್ತು. ಆದರೆ ಪೌಲನಲ್ಲಿದ್ದ ಆತ್ಮವು ಪ್ರಚೋದಿಸಿದ್ದರಿಂದ ಅವನು ಆ ಸ್ತ್ರೀಯೆಡೆಗೆ ತಿರುಗಿ ದೆವ್ವಕ್ಕೆ — ಅವಳನ್ನು ಬಿಟ್ಟು ಹೋಗು ಎಂದು ಕ್ರಿಸ್ತನಲ್ಲಿ ಅಪ್ಪಣೆ ಕೊಂಡುತ್ತೇನೆ ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು,GCKn 125.1

  ಶಿಷ್ಯರ ಹಿಂದೆ ಕೂಗುತ್ತಿರುವಾಗ ಅವಳ ಯಾಜಮಾನರುಗಳಿಗೆ ಬಹು ಸಂತೋಷವಾಗಿತ್ತು; ಆದರೆ ಆ ದೆವ್ವವು ಅವಳನ್ನು ಬಿಟ್ಟು ಹೋಗಿ ಅವಳು ಕ್ರಿಸ್ತನ ಧೀನ ಶಿಷ್ಯಳಾದದ್ದು ಅವರಿಗೆ ರೊಚ್ಚಿಗೆಬ್ಬಿಸಿತು. ಅವಳು ಕಣಿಹೇಳುವುದರಿಂದ ಅವರಿಗೆ ಬಹಳ ಹಣ ಸಂಗ್ರಹವಾಗುತ್ತಿತ್ತು, ಈಗ ಆದಾಯಕ್ಕೆ ಕಲ್ಲುಬಿತ್ತು. ಸೈತಾನನ ಗುರಿ ಸೋತುಹೋಯಿತು; ಆದರೆ ಅವನ ಶಿಷ್ಯರು ಪೌಲ ಸೀಲರನ್ನು ಹಿಡಿದು ಅಧಿಕಾರಿಗಳೂ ಅಧಿಪತಿಗಳ ಬಳಿಗೆ ಚಾವಾಡಿಗೆ ಎಳೆದುಕೊಂಡು ಹೋದರು. ಇವರು ಯಹೂದ್ಯರಗಿದ್ದು ಪಟ್ಟಣದಲ್ಲಿ ಗಲಿಬಿಲಿ ಉಂಟುಮಾಡುತ್ತಾರೆ ಎನ್ನುತ್ತಾ ಜನರು ದೊಂಬಿಗೂಡಿಸಿ ಎದುರು ಬಿದ್ದರು. ಅಧಿತಿಪತಿಗಳು ಇವರು ವಸ್ತ್ರಗಳುನ್ನು ಹರಿದು ತೆಗೆದು ಛಡಿಗಳಿಂದ ಹೊಡೆಯಬೇಕೆಂದು ಆಜ್ಞಾಪಿಸಿದರು. ಅವರಿಗೆ ಪೆಟ್ಟು ಹಾಕಿಸಿ ಹೊಡೆಸಿದ ಮೇಲೆ ಸೆರೆಮನೆಯೊಳಗೆ ತಳ್ಳಿ ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಾಜಮಾನನಿಗೆ ಖಂಡಿತವಾಗಿ ಹೇಳಿದರು, ಈ ಅಪ್ಪಣೆಯಿಂದ ಅವನು ಸೆರೆಮನೆಯೊಳಗೆ ದೊಬ್ಬಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. ಆದರೆ ಸೆರೆಮನೆ ಕೋಣೆಗಳೊಳಗೆ ದೇವದೂತರು ಒಡನಾಡಿಗಳಾಗಿದ್ದರು. ಈ ಬಂಧನವು ದೇವರ ಮಹಿಮೆಯನ್ನು ಸಾರಿತು. ಅವರ ಕೆಲಸದಲ್ಲಿಯೂ ಆತನು ಆಯ್ದುಕೊಂಡ ಸೇವಕರೊಂದಿಗೂ ದೇವರು ನೆಲೆಸಿರುವನೆಂದು ಜನರಿಗೆ ತೋರಿಸಲು, ಆತನು ಸೆರೆಮನೆ ಗೋಡೆಯನ್ನು ಕದಲಿಸಿ ಅದರ ಗಟ್ಟಿಕಬ್ಬಿಣದ ಸರಳುಗಳನ್ನೂ ಬಹು ಸುಲಭವಾಗಿ ಕಳಚಿ ಬೀಳುಸುವ ಸಶಕ್ತವಾಗಿದ್ದಾನೆ ಎಂದು ತೋರಿಸಿದನು.GCKn 126.1

  ಆ ಮಧ್ಯರಾತ್ರಿ ಪೌಲಸೀಲರು ಪ್ರಾರ್ಥನೆಮಾಡುವವರಾಗಿ ದೇವರಿಗೆ ಸ್ತೋತ್ರಗಾನವನ್ನು ಹಾಡುತ್ತಿದ್ದರು. ಅಕಸ್ಮಾತ್ತಾಗಿ ಮಹಾ ಭೂಕಂಪ ಉಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು; ಆಗ ನಾನು ಕಂಡಿದ್ದೇನೆಂದರೆ, ದೇವದೂತನು ಅವರ ಕೈಗಳ ಕೋಳವನ್ನು ಬಿಚ್ಚಿದನು ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚತ್ತು ಕದಗಳು ತೆರೆದಿರುವುದನ್ನು ಕಂಡು ಭೀತನಾದನು, ಸೆರೆಯಲ್ಲಿದ್ದವರು ಓಡಿಹೋದರು, ತನಗೆ ಮರಣ ಶಿಕ್ಷೆ ಆಗುವುದೆಂದು ಭಾವಿಸಿದನು. ಅವನ್ನು ತನ್ನನ್ನೇ ಕೊಂದುಕೊಳ್ಳಲು ಹವಣಿಸಿದಾಗ, ಪೌಲನು ಮಹಾಶಬ್ದದಿಂದ ಕೂಗಿ ನೀನೇನೂ ಕೇಡುಮಾಡಿಕೊಳ್ಳಬೇಡ, ನಾವಲ್ಲರೂ ಇಲ್ಲೆ ಇದ್ದೇವೆ ಅಂದನು. ದೈವಶಕ್ತಿಯು ಸೆರೆಯಾವನನ್ನು ಪರಿವರ್ತಿಸಿತು. ಅವನು ದೀಪತರಬೇಕೆಂದು ಒಳಕ್ಕೆ ಹಾರಿ ನಡುಗುತ್ತಾ ಪೌಲಸೀಲರ ಮುಂದೆ ಬಿದ್ದನು. ಮತ್ತು ಅವರನು ಹೊರಗೆ ಕರೆದುಕೊಂಡು ಬಂದು ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನುಮಾಡಬೇಕೆಂದು ಕೇಳಲು, ಕರ್ತನಾದ ಯೇಸುಕ್ರಿಸ್ತನಲ್ಲಿ ನಂಬಿಕೆಯಿಡು, ಆಗ ನೀನು ರಕ್ಷಣೆಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು ಎಂದರು ತರುವಾಯ ಅವನ ಮನೆಯವರನ್ನೆಲ್ಲಾ ಕೊಡಿಸಿದನು ಮತ್ತು ಪೌಲ ಯೇಸುವಿನ ವಿಷಯವನ್ನು ಅವರುಗೆ ಬೋಧಿಸಿದನು.GCKn 127.1

  ಸೆರೆಯವನ ಹೃದಯವು ಆ ಸಹೋದರರೊಂದಿಗೆ ಸಮ್ಮಿಲನಗೊಂಡಿತು. ಅವನು, ಅವರ ಗಾಯಗಳನು ತೊಳೆದನು. ಆ ರಾತ್ರಿಯೇ ಅವನೊಟ್ಟಿಗೆ ಮನೆಯವರೂ ದೀಕ್ಷಾಸ್ನಾನ ಮಾಡಿಸಿಕೊಂಡರು. ಬಹು ಉಲ್ಲಾಸದಿಂದ ಅವನು ದೇವರನ್ನು ನಂಬಿದನು ಅವರನ್ನು ಮನೆಗೆಕರೆದುಕೊಂಡು ಹೋಗಿ ಊಟಮಾಡಿಸಿದನು .GCKn 128.1

  ಸೆರೆಮನೆಯ ಕದಗಳು ತೆರೆದದ್ದು, ಸೆರೆಯಜಮಾನನ ಹಾಗೂ ಅವನ ಮನೆಯವರೆಲ್ಲರ ದೀಕ್ಷಾಸ್ನಾನದ ಅದ್ಬುತ ಸುದ್ದಿಯು, ದೇವರ ಮಹಿಮಾಶಕ್ತಿಯು ಎಲ್ಲೆಡೆ ಹರಡುವಂತೆ ಮಾಡಿತು. ಅಧಿಪತಿಗಳು ಇದನ್ನು ಕೇಳಿ ಭಯಗೊಂಡು, ಸೆರೆ ಯಜಮಾನನಿಗೆ ಹೇಳಿ ಕಳಿಸಿ ಪೌಲಸೀಲರನ್ನು ಬಿಡುಗಡೆಮಾಡಬೇಕೆಂದು ಬೇಡಿಕೊಂಡರು, ಆದರೆ ಪೌಲನು ಗುಪ್ತವಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. ಅವನು ಅವರಿಗೆ — ಅವಾರ ವಿಚಾರಮಾಡದೆ ರೋಮಾಪುರದ ಹಕ್ಕುದಾರನಾದ ನಮ್ಮನು ಬಹಿರಂಗವಾಗಿ ಹೊಡೆಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಎಂದು ಪ್ರಶ್ನಿಸಿದನು, ಹಾಗೆ ಎಂದಿಗೂ ಆಗಕೂಡದು; ಅವರೇ ನಮ್ಮನ್ನು ಬಂದು ಹೊರಗೆ ಕರೆದುಕೊಂಡು ಹೋದರೆ ಸರಿ ಎಂದನು. ದೇವರ ಶಕ್ತಿಪ್ರದರ್ಶನವು ಗುಪ್ತವಾಗಿ ಸಂಭವಿಸಬಾರದೆಂಬುದು ಪೌಲಸೀಲರ ಅನಿಸಿಕೆಯಾಗಿತ್ತು. ಜವಾನರು ಈ ಮಾತುಗಳನ್ನು ಅಧಿಪತಿಗೆ ತಿಳಿಸಿದರು; ರೋಮಾಪುರದ ಹಕ್ಕುದಾರರು ಎಂಬುವುದು ತಿಳಿದಾಗ ಅವರು ಭಯಪಟ್ಟರು; ಮತ್ತು ಪೌಲಸೀಲರ ಬಳಿಗೆ ಅವರಾಗೆ ಬಂದು, ವಿನಯವಾಗಿ ಒಪ್ಪಿಸಿ ಹೊರಕ್ಕೆ ಕರೆದುಕೊಂಡು ಬಂದು — ನೀವು ಊರನ್ನು ಬಿಟ್ಟುಹೋಗಿರಿ ಎಂದು ಬೇಡಿಕೊಂಡರು.GCKn 128.2

  ನೋಡಿ: ಅಪೋಸ್ತಲರ ಕೃತ್ಯಗಳು ಅಧ್ಯಾಯ 14 ಮತ್ತು 16GCKn 129.1