Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕಾರ್ಯರೂಪದಲ್ಲಿ ತೋರಿಸುವ ಉಪಕಾರದ ಪ್ರಾಮುಖ್ಯತೆ

    ಕೊನೆಯ ದಿನಗಳಲ್ಲಿ ನಾವು ಮಾಡುವ ನಿರ್ಧಾರಗಳು ಕಾರ್ಯರೂಪದಲ್ಲಿ ತೋರಿಸುವ ನಮ್ಮ ಉಪಕಾರ ಬುದ್ಧಿಯ ಪ್ರಾಮುಖ್ಯತೆಯನ್ನು ತೋರಿಸುತ್ತವೆ. ನಾವು ಮಾಡುವ ಪ್ರತಿಯೊಂದು ಉಪಕಾರವನ್ನೂ ಯೇಸುಕ್ರಿಸ್ತನು ತನಗೆ ಮಾಡಿದ ಔದಾರ್ಯವೆಂದು ತಿಳಿಯುವನು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 399).ಕೊಕಾಘ 127.1

    ಜನಾಂಗಗಳು ಕ್ರಿಸ್ತನ ಮುಂದೆ ನಿಂತುಕೊಳ್ಳುವಾಗ, ಎರಡು ಗುಂಪಿನ ಜನರು ಮಾತ್ರ ಅಲ್ಲಿರುವರು. ಅವರು ನಿತ್ಯಜೀವಕ್ಕೆ ಬಾದ್ಯರೇ ಇಲ್ಲವೆ ನರಕಕ್ಕೆ ಬಾಧ್ಯರೋ ಎಂಬುದನ್ನು ಬಡವರಿಗೆ ಹಾಗೂ ಕಷ್ಟಸಂಕಟದಲ್ಲಿರುವವರಿಗೆ ಉಪಕಾರ ಮಾಡಿದರೋ ಅಥವಾ ನಿರ್ಲಕ್ಷ್ಯ ತೋರಿಸಿದರೋ ಎಂಬುದರ ಮೇಲೆ ದೇವರು ನಿರ್ಧರಿಸುತ್ತಾನೆ. ಯಾಕೆಂದರೆ ಅಂತವರಿಗೆ ತೋರಿಸಿದ ದಯೆ, ಉಪಕಾರವು ಆತನಿಗೆ ಮಾಡಿದಂತಾಗುತ್ತದೆ. ನಿರ್ಲಕ್ಷ್ಯ ತೋರಿಸಿದ್ದರೆ, ಕ್ರಿಸ್ತನನ್ನು ನಿರ್ಲಕ್ಷಿಸಿದಂತೆ ಆಗುತ್ತದೆ.ಕೊಕಾಘ 127.2

    ಅನ್ಯಜನರಲ್ಲಿ ಅನೇಕರು ಅಜ್ಞಾನದಿಂದ ದೇವರನ್ನು ಆರಾಧಿಸುತ್ತಾರೆ. ಅವರಿಗೆ ಸತ್ಯದ ಬೆಳಕು ಯಾರಿಂದಲೂ ಕೊಡಲ್ಪಟ್ಟಿರುವುದಿಲ್ಲ. ಆದಾಗ್ಯೂ ಅವರು ನಾಶವಾಗುವುದಿಲ್ಲ. ದೇವರ ಲಿಖಿತವಾದ ಆಜ್ಞೆಗಳ ಬಗ್ಗೆ ಅವರು ಅಜ್ಞಾನಿಗಳಾಗಿದ್ದರೂ, ನಿಸರ್ಗದಲ್ಲಿ ದೇವರು ತಮ್ಮೊಂದಿಗೆ ಮಾತಾಡಿದ್ದನ್ನು ಅವರು ಕೇಳಿದ್ದಾರೆ ಹಾಗೂ ಆಜ್ಞೆಗಳಿಗೆ ತಕ್ಕಹಾಗೆ ನಡೆದುಕೊಂಡಿದ್ದಾರೆ. ಅವರು ಮಾಡುವ ಕಾರ್ಯಗಳು ದೇವರಾತ್ಮನು ಅವರ ಹೃದಯಗಳಲ್ಲಿ ಪ್ರೇರೇಪಿಸಿದ್ದಾನೆಂಬುದಕ್ಕೆ ಸಾಕ್ಷಾ ಧಾರವಾಗಿದೆ. ಆದುದರಿಂದ ಅವರು ದೇವರ ಮಕ್ಕಳೆಂದು ಎಣಿಸಲ್ಪಡುವರು (ಲಾಸ್ಟ್ ಡೇ ಈವೆಂಟ್ಸ್, ಪುಟ 218).ಕೊಕಾಘ 127.3

    ಅನ್ಯಜನರಲ್ಲಿ ಹಾಗೂ ದೇಶಜನಾಂಗಗಳಲ್ಲಿ ಹೀನಾಯವಾಗಿ ಎಣಿಸಲ್ಪಟ್ಟವರು ನಮ್ಮ ರಕ್ಷಕನಾದ ಕ್ರಿಸ್ತನು “ಈ ನನ್ನ ಸಹೋದರರಲ್ಲಿ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ, ಅದನ್ನು ನನಗೂ ಮಾಡಿದ ಹಾಗಾಯಿತು’ ಎಂದು ಹೇಳುವುದನ್ನು ಹೇಳಿದಾಗ (ಮತ್ತಾಯ 25:40) ಅವರು ಎಷ್ಟೊಂದು ಆಶ್ಚರ್ಯಪಟ್ಟು ಸಂತೋಷಗೊಳ್ಳುವರು! ಅದೇ ರೀತಿ ತನ್ನ ಮಾತುಗಳನ್ನು ಕೇಳಿ ಆಶ್ಚರ್ಯಾನಂದ ಪಡುವ ತನ್ನ ಅನುಯಾಯಿಗಳನ್ನು ನೋಡಿ ಅನಂತ ಪ್ರೀತಿಸ್ವರೂಪಿಯಾದ ಕರ್ತನ ಹೃದಯವು ಎಷ್ಟೊಂದು ಹರ್ಷಗೊಳ್ಳುವುದು! (ಡಿಸೈರ್ ಆಫ್ ಏಜಸ್ 637, 638, 1898).ಕೊಕಾಘ 127.4