Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಚಿಕಾಗೋ ಮತ್ತು ಲಾಸ್ ಏಂಜಲೀಸ್ ನಗರಗಳು

    ಚಿಕಾಗೋ ಹಾಗೂ ಇತರ ಮಹಾನಗರಗಳಲ್ಲಿ ನಡೆಯಲಿರುವ ವಿಪತ್ತುಗಳ ಬಗ್ಗೆ ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಿದನು. ಅವುಗಳಲ್ಲಿ ದುಷ್ಟತನ ಮಿತಿಮೀರಿದಾಗ, ದೇವರ ಕೃಪಾಹಸ್ತವು ಹಿಂತೆಗೆಯಲ್ಪಟ್ಟಾಗ ಭಯಂಕರವಾದ ಮಳೆ ಹಾಗೂ ಸುನಾಮಿಯಂತ ಚಂಡಮಾರುತ ಉಂಟಾಗುತ್ತದೆ. ಬೆಂಕಿ ಅನಾಹುತ ಮತ್ತು ಭೂಕಂಪದಿಂದ ಕಟ್ಟಡಗಳು ನಾಶವಾದವು. ಇದಾದ ಕೆಲವು ಸಮಯದ ನಂತರ ದೇವರು ಚಿಕಾಗೋ ನಗರದ ದೊಡ್ಡ ಕಟ್ಟಡಗಳನ್ನು ದರ್ಶನದಲ್ಲಿ ಶ್ರೀಮತಿ ವೈಟಮ್ಮನವರಿಗೆ ತೋರಿಸಿದನು. ಅಡ್ವೆಂಟಿಸ್ಟರು ಚಿಕಾಗೋ ಹಾಗೂ ಇತರ ದೊಡ್ಡ ನಗರಗಳಲ್ಲಿ ಆಸ್ತಿ ಮಾಡುವುದಕ್ಕೆ ತಮ್ಮ ಅಪಾರವಾದ ಹಣವನ್ನು ವಿನಿಯೋಗಿಸಬಾರದೆಂಬುದಕ್ಕೆ ಅವುಗಳ ನಾಶವು ಒಂದು ಎಚ್ಚರಿಕೆಯ ಪಾಠವಾಗಿದೆ. ಇದೇ ರೀತಿಯಾದ ಎಚ್ಚರಿಕೆಯು ಲಾಸ್ ಏಂಜಲೀಸ್ ನಗರದ ಬಗ್ಗೆಯೂ ಅವರಿಗೆ ಕೊಡಲಟ್ಟಿತು. ದೊಡ್ಡ ನಗರಗಳಲ್ಲಿ ಹೆಚ್ಚು ಹಣ ಖರ್ಚು ಮಾಡಿ ಕಟ್ಟಡಗಳನ್ನು ಕಟ್ಟಬಾರದೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ಪದೇ ಪದೇ ದರ್ಶನದಲ್ಲಿ ಸಲಹೆ ನೀಡಿದ್ದಾನೆ (ದಿ ಪಾಲ್‌ಸನ್ ಕಲೆಕ್ಷನ್ 50, 1906).ಕೊಕಾಘ 65.5

    Larger font
    Smaller font
    Copy
    Print
    Contents