Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಏನೂ ತಿಳಿಯದ ಅವಿದ್ಯಾವಂತರನ್ನೂ ಸಹ ದೇವರು ತನ್ನ ಸೇವೆಯಲ್ಲಿ ಉಪಯೋಗಿಸುತ್ತಾನೆ

    ಯೇಸುಕ್ರಿಸ್ತನನ್ನು ಸ್ವಂತರಕ್ಷಕನೆಂದು ಅಂಗೀಕರಿಸುವವರು ಈ ಕೊನೆಯ ಕಾಲದ ಶೋಧನೆ ಹಾಗೂ ಕಷ್ಟಸಂಕಟಗಳನ್ನು ಎದುರಿಸಿ ನಿಲ್ಲುವರು. ಕ್ರಿಸ್ತನ ಮೇಲಣ ದೃಢನಂಬಿಕೆಯಿಂದ ಬಲಗೊಂಡ, ಅವಿದ್ಯಾವಂತರಾದ ಶಿಷ್ಯರೂ ಸಹ, ಅವಿಶ್ವಾಸಿಗಳು ಹಾಕುವ ಪ್ರಶ್ನೆಗಳು ಮತ್ತು ಸಂದೇಹಗಳನ್ನು ಎದುರಿಸಿ ನಿಲ್ಲುವರು. ಅಪಹಾಸ್ಯಗಾರರ ಕುತರ್ಕಗಳಿಗೆ ತಕ್ಕ ಉತ್ತರ ನೀಡಿ ಅವರನ್ನು ನಾಚಿಕೆ ಪಡಿಸುವರು.ಕೊಕಾಘ 119.1

    ಯೇಸುಸ್ವಾಮಿಯು ತನ್ನ ಶಿಷ್ಯರಿಗೆ ಅವರ ವಿರೋಧಿಗಳು ಎದುರಿಸಲಾಗದಂತ ಅಥವಾ ನಿರಾಕರಿಸಲಾಗದಂತ ಮಾತಿನ ಶಕ್ತಿ ಮತ್ತು ವಿವೇಕವನ್ನು ಕೊಡುವನು. ಆಲೋಚನಾ ಶಕ್ತಿಯಿಂದ ಸೈತಾನನ ವಂಚನೆಯನ್ನು ಜಯಿಸಲಾಗದವರು, ಜ್ಞಾನಿಗಳೆನಿಸಿಕೊಂಡವರಿಗೆ ದಿಗ್ಭ್ರಮೆ ಹುಟ್ಟಿಸುವಂತ ದೃಢವಾದ ಸಾಕ್ಷಿ ಕೊಡುವರು. ಅವಿದ್ಯಾವಂತರ ಬಾಯಿಂದ ಎಂತಹ ವಿವೇಕವನ್ನು ಮತ್ತು ನಂಬಿಕೆ ಹುಟ್ಟಿಸುವಂತ ವಾಕ್ಯಗಳು ಬರುತ್ತವೆಂದರೆ, ಅವರ ಸಾಕ್ಷಿಯಿಂದ ಸಾವಿರಾರು ಜನರು ಸತ್ಯವನ್ನು ಅಂಗೀಕರಿಸಿಕೊಳ್ಳುವರು (ಲಾಸ್ಟ್ ಡೇ ಈವೆಂಟ್ಸ್, ಪುಟ 205).ಕೊಕಾಘ 119.2

    ಜ್ಞಾನಿಗಳೆನಿಸಿಕೊಂಡವರಲ್ಲಿ ಇಲ್ಲದಂತ ಈ ಶಕ್ತಿಯು ಅವಿದ್ಯಾವಂತರಲ್ಲಿ ಯಾಕಿರಬೇಕು? ಇವರು ಕ್ರಿಸ್ತನ ನಂಬಿಕೆಯ ಮೂಲಕ ಪರಿಶುದ್ಧವಾದ ಸಪ್ತ ಸತ್ಯದ ವಾತಾವರಣದಲ್ಲಿರುತ್ತಾರೆ. ಆದರೆ ಜ್ಞಾನಿಗಳು ಸತ್ಯವನ್ನು ನಿರಾಕರಿಸಿದ್ದಾರೆ. ಸಾಮಾನ್ಯ ಮನುಷ್ಯರು ಕ್ರಿಸ್ತನ ಸಾಕ್ಷಿಗಳಾಗಿದ್ದಾರೆ. ಇಂತವರು ಯಾವುದೇ ಚರಿತ್ರೆಯನ್ನಾಗಲಿ ಅಥವಾ ಉನ್ನತವಾದ ವಿಜ್ಞಾನವನ್ನಾಗಲಿ ತಿಳಿದವರಲ್ಲ. ಆದರೆ ಅವರು ದೇವರ ವಾಕ್ಯದಿಂದ ಬಲವಾದ ಸಾಕ್ಷಾಧಾರ ಪಡೆದುಕೊಳ್ಳುತ್ತಾರೆ. ಪವಿತ್ರಾತ್ಮನಿಂದ ಪ್ರೇರಿತರಾದ ಈ ಸಾಮಾನ್ಯ ಜನರು ಹೇಳುವ ಸತ್ಯವು ಬಹಳಷ್ಟು ಪರಿಶುದ್ಧವೂ ಮತ್ತು ಗಮನಾರ್ಹವೂ ಆಗಿದ್ದು, ಅವರ ಸಾಕ್ಷಿಯು ನಿರಾಕರಿಸಲಾಗದಷ್ಟು ಬಲವಾಗಿರುತ್ತದೆ (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 8, ಪುಟಗಳು 187, 188, 1905).ಕೊಕಾಘ 119.3