Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಧ್ಯಾಯ-14
    ಮಹಾಶಬ್ದ

    ಎಲ್ಲಾ ಸಭೆಗಳಲ್ಲಿಯೂ ದೇವರ ಅಮೂಲ್ಯ ರತ್ನಗಳಿವೆ. ಆದುದರಿಂದ ಇತರ ಸಭೆಗಳ ಕ್ರೈಸ್ತರನ್ನು ನಾವು ಸಾರಾಸಗಟಾಗಿ ಉಗ್ರವಾಗಿ ಖಂಡಿಸಬಾರದು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 4, ಪುಟ 1184, 1893).ಕೊಕಾಘ 114.1

    ಎಲ್ಲಾ ಸಭೆಗಳಲ್ಲಿಯೂ ದೇವರ ಪ್ರತಿನಿಧಿಗಳಿದ್ದಾರೆ. ಈ ಕೊನೆಯ ದಿನಗಳಲ್ಲಿ ಅವರ ಹೃದಯಗಳಲ್ಲಿ ಮನವರಿಕೆ ಉಂಟು ಮಾಡುವಂತ ವಿಶೇಷವಾದ ಸತ್ಯವು ಅವರಿಗೆ ಇನ್ನೂ ಕೊಡಲ್ಪಟಿಲ್ಲ. ಆದುದರಿಂದ ಆವರು ಬೆಳಕನ್ನು ತಿರಸ್ಕರಿಸಿ ದೇವರೊಂದಿಗೆ ತಮ್ಮ ಸಂಬಂಧ ಕಳೆದುಕೊಂಡಿಲ್ಲ (ಟೆಸ್ಟಿಮೊನೀಸ್, ಸಂಪುಟ 6, ಪುಟ 707, 1900), ನನ್ನ ಪ್ರಜೆಗಳೇ ಬಾಬೆಲನ್ನು ಬಿಟ್ಟು ಬನ್ನಿರಿ ಎಂದು ಪ್ರಕಟನೆ 18ನೇ ಅಧ್ಯಾಯದಲ್ಲಿ ಅವರಿಗೆ ಆಹ್ವಾನ ನೀಡಲಾಗಿದೆ. ಈ ವಾಕ್ಯದಪ್ರಕಾರ ದೇವರಮಕ್ಕಳಲ್ಲಿ ಅನೇಕರು ಇನ್ನೂ ಸಹ ಬಾಬೆಲಿನಲ್ಲಿರಬೇಕು. ಕ್ರಿಸ್ತನ ಹೆಚ್ಚಿನ ಹಿಂಬಾಲಕರು ಯಾವಸಭೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ? ಅವರು ವಿವಿಧ ಪ್ರೊಟೆಸ್ಟೆಂಟ್ ಸಭೆಗಳಲ್ಲಿದ್ದಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 383, 1911).ಕೊಕಾಘ 114.2

    ಬಾಬೆಲಿನ ಹಿಡಿತದಲ್ಲಿರುವ ಪ್ರೊಟೆಸ್ಟೆಂಟ್ ಸಭೆಗಳು ಆತ್ಮೀಕ ಅಂಧಕಾರದಿಂದ ದೇವರಿಂದ ದೂರವಾಗಿದ್ದರೂ, ಕ್ರಿಸ್ತನ ಅಧಿಕ ಸಂಖ್ಯೆಯ ಹಿಂಬಾಲಕರು ಈ ಸಭೆಗಳಲ್ಲಿ ಇನ್ನೂ ಇದ್ದಾರೆ (ಪುಟ 390), ಕಥೋಲಿಕ್ಕರಲ್ಲಿಯೂ ಶುದ್ಧ ಅಂತಃಕರಣ ಹೊಂದಿರುವ ನೀತಿಬದ್ಧ ಕ್ರೈಸ್ತರು ಅನೇಕರಿದ್ದಾರೆ. ಅವರು ತಮಗೆ ದೊರೆತ ಬೆಳಕಿನಲ್ಲಿ ನಡೆಯುತ್ತಿದ್ದಾರೆ ಹಾಗೂ ದೇವರು ಅವರ ಪರವಾಗಿ ಕೆಲಸ ಮಾಡುತ್ತಾನೆ (ಟೆಸ್ಟಿಮೊನೀಸ್‌ ಸಂಪುಟ 9, ಪುಟ 243, 1909).ಕೊಕಾಘ 114.3