Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಬ್ಬತ್ತನ್ನು ಕೈಕೊಳ್ಳುವ ಎಲ್ಲರನ್ನೂ ನಾಶಗೊಳಿಸುವುದೇ ಸೈತಾನನ ಉದ್ದೇಶ

    “ಸಬ್ಬತ್ತನ್ನು ಆಚರಿಸುವ ಪಂಥದವರನ್ನು ನಾಶ ಮಾಡುವುದೇ ನಮ್ಮ ಪ್ರಮುಖ ಉದ್ದೇಶ. ನಮ್ಮ ಅಧಿಕಾರಕ್ಕೆ ಒಳಪಡದ ಎಲ್ಲರನ್ನೂ ನಿರ್ಮೂಲ ಮಾಡುವ ಕಾನೂನನ್ನು ನಾವು ಜಾರಿಗೆ ತರಬೇಕು ಎಂದು ಮಹಾಮೋಸಗಾರನಾದ ಸೈತಾನನು ಹೇಳುತ್ತಾನೆಂದು ಶ್ರೀಮತಿ ವೈಟಮ್ಮನವರು ‘ಟೆಸ್ಟಿಮೊನಿಸ್ ಟು ಮಿನಿಸ್ಟರ್ಸ್’ ಪುಸ್ತಕದ 472, 473ನೇ ಪುಟಗಳಲ್ಲಿ ತಿಳಿಸುತ್ತಾರೆ.ಕೊಕಾಘ 149.6

    ಈ ಲೋಕದಲ್ಲಿ ತನಗಿರುವ ಪರಮಾಧಿಕಾರವನ್ನು ಪ್ರಶ್ನೆ ಮಾಡದಂತೆ ಸಬ್ಬತ್ತನ್ನು ಆಚರಿಸುವವರನ್ನು ಬೇರು ಸಹಿತ ನಾಶಮಾಡಬೇಕೆನ್ನುವುದು ಸೈತಾನನ ಗುರಿಯಾಗಿದೆ (ಪುಟ 37).ಕೊಕಾಘ 150.1

    ಉಳಿದ ಸಭೆಯಾದ ಸೆವೆಂತ್ ಡೇ ಅಡ್ವೆಂಟಿಸ್ಟ್, ಸಭೆಯು ಮಹಾಕಷ್ಟ ಸಂಕಟ, ಶೋಧನೆ ಎದುರಿಸಲಿದೆ. ದೇವರಾಜ್ಞೆಗಳನ್ನು ಕೆಕೊಂಡು ಯೇಸುವಿನ ವಿಷಯವಾದ ಸಾಕ್ಷಿ ಹೊಂದಿರುವವರು ಮಹಾಘಟಸರ್ಪನಾದ ಸೈತಾನನು ಹಾಗೂ ಅವನ ದುಷ್ಟದೂತರ ಉಗ್ರಕೋಪ ಎದುರಿಸುವರು. ಈ ಲೋಕವು ತನ್ನದೆಂದು ಹಾಗೂ ಜನರು ತನ್ನ ಪ್ರಜೆಗಳೆಂದು ಸೈತಾನನು ತಿಳಿದುಕೊಂಡಿದ್ದಾನೆ. ಧರ್ಮಭ್ರಷ್ಟತೆ ಹೊಂದಿದ ಪ್ರೊಟೆಸ್ಟೆಂಟ್ ಸಭೆಗಳ ಮೇಲೆ ಅವನು ನಿಯಂತ್ರಣ ಪಡೆದುಕೊಂಡಿದ್ದಾನೆ; ಆದರೆ ಒಂದು ಚಿಕ್ಕಗುಂಪಿನವರು ಅವನ ಪರಮಾಧಿಕಾರವನ್ನು ಎದುರಿಸುತ್ತಿದ್ದಾರೆ. ಅವರನ್ನು ಈ ಲೋಕದಿಂದ ನಿರ್ಮೂಲ ಮಾಡಿದಲ್ಲಿ, ತನ್ನ ಜಯವು ಸಂಪೂರ್ಣವಾಗುವುದಂದು ಸೈತಾನನ ಅಭಿಪ್ರಾಯ, ಇಸ್ರಾಯೇಲ್ಯರನ್ನು ನಾಶಮಾಡುವಂತೆ ಅವನು ಹೇಗೆ ಅನ್ಯರಾಜ್ಯಗಳನ್ನು ಪ್ರೇರಿಸಿದ್ದನೋ, ಅದೇ ರೀತಿ ಶೀಘ್ರದಲ್ಲಿಯೇ ದೇವಜನರನ್ನು ನಾಶಮಾಡಬೇಕೆಂದು ಸೈತಾನನು ಲೋಕದ ದುಷ್ಟಶಕ್ತಿಗಳನ್ನು ಪ್ರಚೋದಿಸುತ್ತಾನೆ (ಟೆಸ್ಟಿಮೊನೀಸ್‌ ಸಂಪುಟ 9, ಪುಟ 231).ಕೊಕಾಘ 150.2