Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಪ್ರವಾದನೆಗಳನ್ನು ಜನರಿಗೆ ತಿಳಿಸಿ ಹೇಳಬೇಕು

    ಕೊನೆಯ_ಕಾಲದ ಘಟನೆಗಳನ್ನು ತಿಳಿಸುವ ಪ್ರವಾದನೆಗಳನ್ನು ಅನೇಕರು ಅರ್ಥಮಾಡಿಕೊಳ್ಳಲಾರರು. ಅವರಿಗೆ ಇದರ ಬಗ್ಗೆ ತಿಳುವಳಿಕೆ ನೀಡಬೇಕು. ಅವರನ್ನು ಎಚ್ಚರಿಸುವುದು ಕಾವಲುಗಾರರಾದ ಬೋಧಕರು ಮತ್ತು ಸಾಮಾನ್ಯ ಸದಸ್ಯರ ಕರ್ತವ್ಯವಾಗಿದೆ (ಎವಾಂಜಲಿಸಮ್, ಪುಟಗಳು 194,195, (1875).ಕೊಕಾಘ 8.2

    ಕಾವಲುಗಾರರು ತಮ್ಮ ಧ್ವನಿಯೆತ್ತಿ ವರ್ತಮಾನ ಕಾಲದ ಈ ಸತ್ಯಸಂದೇಶವನ್ನು ಜನರಿಗೆ ನೀಡಬೇಕು. ಪ್ರವಾದನಾತ್ಮಕ ಇತಿಹಾಸದಲ್ಲಿ ನಾವು ಯಾವ ಘಟ್ಟದಲ್ಲಿದ್ದೇವೆಂದು ಜನರಿಗೆ ತಿಳಿಸಿ ಹೇಳಬೇಕು (ಟೆಸ್ಟಿಮೊನೀಸ್ ಫಾರ್ ಮಿನಿಸ್ಟರ್ಸ್, ಸಂಪುಟ 5, ಪುಟ 716) (1889).ಕೊಕಾಘ 8.3

    ಈ ಜಗತ್ತಿನ ಇತಿಹಾಸವನ್ನು ಕೊನೆಗೊಳಿಸುವ ಒಂದು ದಿನವನ್ನು ದೇವರು ಗೊತ್ತುಮಾಡಿದ್ದಾನೆ. ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವುದು; ಆಗ ಅಂತ್ಯವು ಬರುವುದು’ (ಮತ್ತಾಯ 24:14). ಈ ಪ್ರವಾದನೆಯು ಅತಿವೇಗವಾಗಿ ನೆರವೇರುತ್ತಿದೆ. ಅತ್ಯಂತ ಪ್ರಾಮುಖ್ಯವಾದ ಈ ವಿಷಯಗಳ ಬಗ್ಗೆ ಹೆಚ್ಚಾಗಿ, ಅಧಿಕವಾಗಿ ತಿಳಿಸಬೇಕು. ಕೃಪೆಯ ಕಾಲವು ಮುಗಿಯುವ ಸಮಯ ಬಹಳ ಹತ್ತಿರವಾಗಿದೆ.ಕೊಕಾಘ 8.4

    ಈ ವಿಷಯವನ್ನು ಜನರ ಗಮನಕ್ಕೆ ತರಲು ಶ್ರಮವಹಿಸಿ ಎಲ್ಲಾ ಪ್ರಯತ್ನ ಮಾಡಬೇಕು. ಕರ್ತನದಿನವು ಯಾರೂ ನೆನಸದ ಗಳಿಗೆಯಲ್ಲಿ ಅನಿರೀಕ್ಷಿತವಾಗಿ ಬರುವುದರಿಂದ, ಗಂಭೀರವಾದ ಈ ಸಂದೇಶವನ್ನು ಇತರರಿಗೆ ಮಾತ್ರವಲ್ಲ, ನಮ್ಮ ಸಭಿಕರಿಗೂ ತಿಳಿಸಬೇಕು. ಪ್ರವಾದನೆಯ ಭಯಾನಕವಾದ ಈ ಎಚ್ಚರಿಕೆಯನ್ನು ಎಲ್ಲರಿಗೂ ಸಾರಿ_ಹೇಳಬೇಕು. ಅನಿರೀಕ್ಷಿತವಾಗಿ ಬರುವ ಈ ಅಪಾಯದಿಂದ ತಾನು ಸುರಕ್ಷಿತವಾಗಿದ್ದೇನೆಂದು ಯಾರೂ ಭಾವಿಸಬಾರದು. ಈ ಮಹಾಘಟನೆಯು ಹತ್ತಿರದಲ್ಲಿದೆ ಎಂಬ ಜ್ಞಾನವು ನಮ್ಮಿಂದ ಎಂದೂ ಮರೆಯಾಗಬಾರದು ಹಾಗೂ ಈ ಪ್ರವಾದನೆಯ ಬಗ್ಗೆ ಇತರರು ಕೊಡುವ ವ್ಯಾಖ್ಯಾನಕ್ಕೆ ಗಮನ ಕೊಡಬಾರದು (ಫಂಡಮೆಂಟಲ್ಸ್... ಎಜುಕೇಷನ್ ಪುಟಗಳು 335, 336 (1895):ಕೊಕಾಘ 8.5