Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಿಂಸೆಯು ಸಭೆಯನ್ನು ಶುದ್ದೀಕರಿಸುತ್ತದೆ

    ಸಮೃದ್ದಿಯು ಸಭಿಕರ ಸಂಖ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಆದರೆ ಕಷ್ಟಸಂಕಟ, ವಿಪತ್ತುಗಳು ಅವರನ್ನು ಸಭೆಯಿಂದ ಹೊರದೂಡುತ್ತವೆ (ಟೆಸ್ಟಿಮೊನೀಸ್, ಸಂಪುಟ 4, ಪುಟ 89, 1876).ಕೊಕಾಘ 100.1

    ಎಲ್ಲರಿಗೂ ಪರೀಕ್ಷೆ ಬರುವ ಸಮಯ ಬಹಳ ದೂರವೇನಿಲ್ಲ. ಮೃಗದ ಗುರುತನ್ನು ಹಾಕಿಸಿಕೊಳ್ಳುವಂತೆ ನಮ್ಮ ಮೇಲೆ ಒತ್ತಡವುಂಟಾಗುವುದು. ನಿಧಾನವಾಗಿ ಲೋಕದ ಒತ್ತಡಗಳಿಗೆ ಬಲಿಯಾಗಿ, ಅದರ ಸಂಪ್ರದಾಯ ಆಚರಣೆಗಳಿಗೆ ಸಮ್ಮತಿಸುವವರಿಗೆ ಅಪಮಾನ, ನಿಂದನೆ, ಅಪಹಾಸ್ಯ ಸೆರಮನೆಯ ಬಂಧನ ಮತ್ತು ಮರಣಕ್ಕೆ ಒಳಗಾಗುವುದಕ್ಕಿಂತ, ದುಷ್ಟಶಕ್ತಿಗಳಿಗೆ ವಿಧೇಯರಾಗುವುದು ಕಷ್ಟವಲ್ಲ. ಸ್ಪರ್ಧೆ ಇರುವುದು ದೇವರಾಜ್ಞೆಗಳು ಮತ್ತು ಮನುಷ್ಯರ ಆಜ್ಞೆಗಳ ನಡುವೆ ಮಾತ್ರ, ಅಂತಹ ಸಮಯದಲ್ಲಿ ಸಭೆಯಲ್ಲಿರುವ ಬಂಗಾರವನ್ನು ಕಿಲುಬಿನಿಂದ ಬೇರ್ಪಡಿಸಲಾಗುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 81, 1882).ಕೊಕಾಘ 100.2

    ಹಿಂಸೆಯಿಲ್ಲದಿರುವಾಗ ನಮ್ಮ ಸಭೆಗೆ ನಂಬಿಕೆಯಲ್ಲಿ ದೃಢವಾಗಿರುವವರೆಂದು ಹೇಳಿಕೊಳ್ಳುವ ಅನೇಕರು ಸೇರಿಕೊಳ್ಳುತ್ತಾರೆ. ಆದರೆ ಸಭೆಗೆ ಹಿಂಸೆ ಬಂದಾಗ, ಇಂತವರು ಸಭೆಯನ್ನು ಬಿಟ್ಟು ನಮ್ಮಿಂದ ದೂರವಾಗುತ್ತಾರೆ (ಎವಾಂಜಲಿಸಮ್, ಪುಟ 360, 1890). ದೇವರಾಜ್ಜೆಗಳು ನಿರರ್ಥಕ ಮಾಡಲ್ಪಟ್ಟಾಗ ಹಾಗೂ ಸಭೆಯು ತೀಕ್ಷ್ಣವಾದ ಶೋಧನೆಗಳಿಂದ ಜರಡಿ ಹಿಡಿಯಲ್ಪಟ್ಟಾಗ ನಮ್ಮ ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ದುರಾತ್ಮಗಳ ವಂಚನೆಗೆ ಒಳಗಾಗಿ ದೆವ್ವಗಳ ಬೋಧನೆಗೆ ಕಿವಿಗೊಡುವರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 368, 1891).ಕೊಕಾಘ 100.3