Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಗರಗಳನ್ನು ಬಿಟ್ಟುಹೋಗಬೇಕು

    ಸಾಧ್ಯವಾದಷ್ಟು ಬೇಗನೆ ನಗರಗಳನ್ನು ಬಿಟ್ಟು ಹೋಗಿರಿ, ಒಂದು ಚಿಕ್ಕಸ್ಥಳ ಖರೀದಿಸಿ, ಕೈತೋಟ ಮಾಡಿ. ಅಲ್ಲಿ ನಿಮ್ಮ ಮಕ್ಕಳು ಹೂಗಿಡಮರಗಳು ಬೆಳೆಯುವುದನ್ನು ಹೂ ಬಿಡುವುದನ್ನು ಗಮನಿಸಿ ಅದರಿಂದ ನಿರ್ಮಲತೆ ಹಾಗೂ ಸರಳತೆಯನ್ನು ಕಲಿತುಕೊಳ್ಳಲಿ (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟ 356, 1903).ಕೊಕಾಘ 56.3

    ನಗರಗಳನ್ನು ಬೇಗನೆ ಬಿಟ್ಟು ಹೋಗಬೇಕೆಂಬುದೇ ಈ ಸಮಯದಲ್ಲಿ ಶ್ರೀಮತಿ ವೈಟಮ್ಮನವರು ಕೊಡುವ ಸಂದೇಶವಾಗಿದೆ. ನಗರಗಳಿಂದ ಸಾಕಷ್ಟು ದೂರ ಹೋಗಬೇಕೆಂಬುದು ಅಡ್ವಿಂಟಿಸ್ಪರಿಗೆ ದೇವರು ಕೊಡುವ ಕರೆಯಾಗಿದೆ. ಅಮೇರಿಕಾ ದೇಶದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್‌ಫ್ರಾನ್ಸಿಸ್ಕೋ ನಗರದ ಇಂದಿನ ಸ್ಥಿತಿಯನ್ನು ನೋಡುವಾಗ, ನಗರಗಳಿಂದ ಶೀಘ್ರವಾಗಿ ಹೋಗಬೇಕೆಂಬುದು ಬುದ್ದಿವಂತರಿಗೆ ತಿಳಿಯುತ್ತದೆ (ನಮ್ಮ ಭಾರತ ದೇಶದ ಬೆಂಗಳೂರು, ಮುಂಬೈ, ದೆಹಲಿ, ಮದ್ರಾಸ್, ಕಲ್ಕತ್ತ ನಗರಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ)ಕೊಕಾಘ 56.4

    ದೇವರು ತನ್ನ ಮಕ್ಕಳಿಗೆ ದೊಡ್ಡ ನಗರಗಳನ್ನು ಬಿಟ್ಟು ಹಳ್ಳಿಗಾಡುಗಳಿಗೆ ಹೋಗಬೇಕೆಂದು ಕರೆ ನೀಡುತ್ತಾರೆ. ನಾವು ನೆನಸದ ಗಳಿಗೆಯಲ್ಲಿ ದೊಡ್ಡ ನಗರಗಳ ಮೇಲೆ ಪರಲೋಕದಿಂದ ಬೆಂಕಿ ಗಂಧಕಗಳ ಮಳೆ ಸುರಿಯಲಿದೆ. ಅವುಗಳ ಪಾಪಕ್ಕೆ ತಕ್ಕಂತೆ ಶಿಕ್ಷೆಯುಂಟಾಗುತ್ತದೆ. ಈ ವಿಷಯವನ್ನು ಅಥೈಂಟಿಸ್ಟರು ಹಗುರವಾಗಿ ಎಣಿಸಬಾರದು. ನಾಶವಾದ ಅದೇ ನಗರದಲ್ಲಿ ಅವಕಾಶ ದೊರೆತಲ್ಲಿ ತಿರುಗಿ ಅಲ್ಲಿಯೇ ಮನೆಗಳನ್ನು ಕಟ್ಟುತ್ತೇವೆಂದು ಎಂದೂ ಸಹ ತಿಳಿದುಕೊಳ್ಳಬಾರದು.ಕೊಕಾಘ 57.1

    ಈ ವಿಷಯಗಳ ಅರ್ಥವನ್ನು ತಿಳಿದುಕೊಳ್ಳುವವರೆಲ್ಲರೂ ಪ್ರಕಟನೆ ಹನ್ನೊಂದನೆ ಅಧ್ಯಾಯ ಓದಿರಿ. ಪ್ರತಿಯೊಂದು ವಾಕ್ಯವನ್ನು ಗಮನವಿಟ್ಟು ಓದಿ ದೊಡ್ಡ ನಗರಗಳಲ್ಲಿ ಇನ್ನೂ ಸಹ ನಡೆಯಬೇಕಾದ ಘಟನೆಗಳ ಬಗ್ಗೆ ತಿಳಿದುಕೊಳ್ಳಿ, ಅದೇ ಪುಸ್ತಕದ 18ನೇ ಅಧ್ಯಾಯದಲ್ಲಿ ತಿಳಿಸಿರುವ ದೃಶ್ಯಗಳನ್ನೂ ಓದಿರಿ (ಮ್ಯಾನುಸ್ಕ್ರಿಪ್ಟ್ ರಿಲೀಸ್ 1518, ಮೇ 10, 1906)ಕೊಕಾಘ 57.2

    ಸ್ವಲ್ಪ ಜಾಗ ಹಾಗೂ ವಾಸಕ್ಕೆ ಹಿತಕರವಾದ ಮನೆ ಹೊಂದಿರುವ ತಂದೆ ತಾಯಿಯರು ನಿಜವಾಗಿಯೂ ರಾಜರೂ, ರಾಣಿಯರೂ ಆಗಿದ್ದಾರೆ (ಅಡ್ವೆಂಟಿಸ್ಟ್ ಹೋಮ್, ಪುಟ 141, 1894).ಕೊಕಾಘ 57.3