Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೈತಾನನು ಸಂತರ ಪ್ರಾರ್ಥನೆಗಳಿಗೆ ಉತ್ತರಿಸುವಂತೆ ನಟನೆ ಮಾಡುವನು

    ಕ್ರಿಸ್ತನ ವಿರುದ್ಧವಾದ ಹೋರಾಟದಲ್ಲಿ ತಾನು ಇನ್ನೇನು ಸೋಲುತ್ತಿದ್ದೇನೆಂದು ಸೈತಾನನಿಗೆ ತಿಳಿದಿದೆ. ಅವನು ಸಮಸ್ತ ಲೋಕವನ್ನು ಮೋಸಗೊಳಿಸಲಾಗದು. ಅವನು ತನ್ನ ಮೋಸದಿಂದ ಕ್ರಿಸ್ತನಿಗೆ ಪ್ರಾಮಾಣಿಕರಾಗಿರುವವರನ್ನು ಜಯಿಸಲು ಹತಾಶೆಯಿಂದ ಒಂದು ಕೊನೆಯ ಪ್ರಯತ್ನ ಮಾಡುವನು. ಕ್ರಿಸ್ತನಂತೆ ವೇಷ ಹಾಕಿಕೊಳ್ಳುವ ಮೂಲಕ ಇದನ್ನು ಮಾಡುವನು. ಯೋಹಾನನು ಪ್ರಕಟನೆ ಗ್ರಂಥದಲ್ಲಿ ವಿವರಿಸಿದಂತೆಯೇ ಸೈತಾನನು ರಾಜವಸ್ತ್ರಗಳನ್ನು ಧರಿಸಿಕೊಳ್ಳುವನು. ಅದರಂತೆ ಮಾಡಲು ಅವನಿಗೆ ಶಕ್ತಿಯಿದೆ. ಸತ್ಯವನ್ನು ಪ್ರೀತಿಸದೆ, ಅಜ್ಞೆಗಳನ್ನು ಮೀರಿ ಅನೀತಿಯಲ್ಲಿ ಸಂತೋಷಪಡುವ ಕ್ರೈಸ್ತ ದೇಶಗಳ ಜನರನ್ನು ಮರುಳುಗೊಳಿಸಿ ಕ್ರಿಸ್ತನೇ ಎರಡನೇ ಸಾರಿ ಬಂದಂತೆ ಅವರ ಮುಂದೆ ಪ್ರತ್ಯಕ್ಷನಾಗುವನು.ಕೊಕಾಘ 94.3

    ಸೈತಾನನು ತಾನೇ ಕ್ರಿಸ್ತನೆಂದು ಹೇಳಿಕೊಳ್ಳುವನು, ಬಹು ಸುಂದರವಾಗಿ ರಾಜಗಾಂಭೀರ್ಯದಿಂದ ಕೂಡಿ ಇದುವರೆಗೂ ಮನುಷ್ಯರು ಎಂದೂ ನೋಡದಿದ್ಧಂತ ಅತಿಶಯ ರೂಪದಲ್ಲಿಯೂ, ಹಿತಕರವಾಗಿ ಮೃದುವಾದ ಸ್ವರದಲ್ಲಿ ಮಾತಾಡುವುದನ್ನು ನೋಡಿದ ಜನರು ಅವನೇ ಕ್ರಿಸ್ತನೆಂದು ನಂಬಿ ಮೋಸಹೋಗುವರು, ಆಗ ವಂಚನೆಗೊಳಗಾದ ಅವನ ಅನುಯಾಯಿಗಳು ಸಂತೋಷದಿಂದ ಕ್ರಿಸ್ತನು ಎರಡನೇ ಸಾರಿ ಈ ಲೋಕಕ್ಕೆ ಬಂದನೆಂದು ಜಯಘೋಷ ಮಾಡುವರು. ಅನಂತರ ಕಿಸನು ಈ ಲೋಕದಲ್ಲಿದಾಗ ತನ್ನ ಕೈಗಳನ್ನು ಎತ್ತಿ ಜನರನ್ನು ಆಶೀರ್ವದಿಸಿದಂತೆಯೆ, ಸೈತಾನನು ಜನರನ್ನು ಆಶೀರ್ವದಿಸುವನು. ಕೊಕಾಘ 94.4

    ದೇವರ ಭಕ್ತರು ವಿಸ್ಮಯರಾಗಿ ಇದನ್ನು ನೋಡುವರು. ಅವರೂ ಸಹ ಮೋಸಕ್ಕೊಳಗಾಗುವರೇ? ಅವರೂ ಸಹ ಸೈತಾನನಿಗೆ ಅಡ್ಡಬಿದ್ದು ಆರಾಧಿಸುವರೇ? ಆದರೆ ದೇವದೂತರು ಅವರ ಸುತ್ತಲೂ ಇರುತ್ತಾರೆ. ಒಂದು ಸಷ್ಟವಾದ, ದೃಢವಾದ ಆದರೆ ಸಂಗೀತದಂತೆ ಮಧುರವಾದ ಸ್ವರವು ಮೇಲಕ್ಕೆ ನೋಡಿ’ ಎಂದು ದೇವಭಕ್ತರಿಗೆ ಕೇಳಿಸುತ್ತದೆ. ಇವರ ಮುಂದೆ ಒಂದೇ ಒಂದು ಉದ್ದೇಶವಿರುತ್ತದೆ. ಅದೇನೆಂದರೆ ತಾವು ನಿತ್ಯವಾದ ರಕ್ಷಣೆ ಹೊಂದಬೇಕೆಂಬುದು. ಕಡೆಯವರೆಗೂ ತಾಳುವವನಿಗೆ ನಿತ್ಯಜೀವ ದೊರೆಯುವುದೆಂಬ ವಾಗ್ದಾನವೇ ಆ ಉದ್ದೇಶ. ಅದು ಅವರ ಮುಂದೆ ಯಾವಾಗಲೂ ಇರುತ್ತದೆ. ಅವರ ಬಯಕೆಯು ಎಷ್ಟೊಂದು ಪ್ರಾಮಾಣಿಕವಾಗಿಯೂ, ಉತ್ಸಾಹಪೂರಿತವಾಗಿಯೂ ಇರುತ್ತದಲ್ಲವೇ? ನ್ಯಾಯತೀರ್ಪು ಮತ್ತು ನಿತ್ಯಜೀವವು ಅವರ ಮುಂದಿದೆ. ಅವರ ಕಣ್ಣುಗಳು ನಂಬಿಕೆಯಿಂದ ಪ್ರಜ್ವಲಿಸುವ ಸಿಂಹಾಸನದ ಮೇಲೆ ನೆಟ್ಟಿದೆ. ಅದರ ಮುಂದೆ ಬಿಳಿ ವಸ್ತ್ರಗಳನ್ನು ಧರಿಸಿರುವವರು ನಿಂತಿರುವರು. ಈ ದೃಶ್ಯವು ದೇವಭಕ್ತರು ಪಾಪ ಮಾಡದಂತೆ ತಡೆಯುವುದು (ಲಾಸ್ಟ್ ಡೇ ಈವೆಂಟ್ಸ್ ಪುಟ 164). ಕೊಕಾಘ 94.5