Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅಡ್ವೆಂಟಿಸ್ಟ್ ಸಭೆಯ ಮೇಲೆ ವಿಶ್ವಾಸ ಪುನಃ ದೃಢೀಕರಿಸಲ್ಪಟ್ಟಿದ್ದು

    ದೇವರು ಹಾಕಿದ ಅಸ್ತಿವಾರದಿಂದ ನಾವು ದೂರವಾಗಬಾರದು. ಯಾವುದೇ ಹೊಸ ಸಂಸ್ಥೆಯನ್ನು ಆರಂಭಿಸಬಾರದು. ಆರಂಭಿಸಿದಲ್ಲಿ ಸತ್ಯದಿಂದ ದೂರವಾಗಿ ಧರ್ಮಭ್ರಷ್ಟರಾಗುತ್ತೇವೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 25, 398, 1908).ಕೊಕಾಘ 32.4

    ಜಗತ್ತಿನಾದ್ಯಂತ ಇರುವ ಅಡ್ವೆಂಟಿಸ್ಟರು ದೇವರಿಗೆ ಒಂದು ವಿಶೇಷ ಜನವಾಗಿರಬೇಕೆಂದು ಆತನು ನಮ್ಮನ್ನು ಕರೆದಿದ್ದಾನೆಂದು ತಿಳಿಸಬೇಕೆಂದು ನನಗೆ ದರ್ಶನದಲ್ಲಿ ಆದೇಶ ನೀಡಲಾಗಿದೆ. ಈ ಸಭೆಯು ಅಂತ್ಯಕಾಲದಲ್ಲಿ ಪವಿತ್ರಾತ್ಮನಲ್ಲಿ ಸಂಪೂರ್ಣ ಐಕ್ಯತೆಯಿಂದಲೂ ಹಾಗೂ ಸೇನಾಧೀಶ್ವರನಾದ ಕರ್ತನ ಆದೇಶದಲ್ಲಿಯೂ ದೃಢವಾಗಿ ನಿಲ್ಲಬೇಕೆಂದು ದೇವರು ಅಡ್ವೆಂಟಿಸ್ಟ್ ಸಭೆಯನ್ನು ನೇಮಿಸಿದ್ದಾನೆ (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟಗಳು 397, 1908).ಕೊಕಾಘ 32.5

    ಅನೇಕ ಸಂದರ್ಭಗಳಲ್ಲಿ ಜನರಲ್ ಕಾನ್ಫರೆನ್ಸ್ ಕಚೇರಿಯ ಹೆಸರಿನಲ್ಲಿ ದೇವರ ಸೇವೆಯ ಜವಾಬ್ದಾರಿ ಹೊತ್ತಿರುವ ಕೆಲವೇ ಕೆಲವು ವ್ಯಕ್ತಿಗಳು, ಆತನ ಸೇವೆ ಅಡ್ಡಿಯಾಗುವಂತೆ ಅವಿವೇಕದ ಯೋಜನೆಗಳನ್ನು ಹಾಕಿಕೊಳ್ಳಲು ಯೋಚಿಸಿದ್ದರು. ಈ ಕೆಲವೇ ವ್ಯಕ್ತಿಗಳು ಪ್ರತಿನಿಧಿಸುವ ಜನರಲ್ ಕಾನ್ಫರೆನ್ಸ್ ಕಚೇರಿಯ ಅಭಿಪ್ರಾಯವನ್ನು ದೇವರ ಮಾತೆಂದು ನಾನು ಗೌರವಿಸುವುದಿಲ್ಲ. ಆದರೆ ಎಲ್ಲಾ ಸೆಕ್ಷನ್, ಯೂನಿಯನ್‌ಗಳಿಂದ ಬಂದ ಪ್ರತಿನಿಧಿಗಳು ತೆಗೆದುಕೊಳ್ಳುವ ನಿರ್ಣಯಗಳನ್ನು ಗೌರವಿಸಬಾರದೆಂದು ಇದರರ್ಥವಲ್ಲ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ.ಕೊಕಾಘ 32.6

    ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ಜಗತ್ತಿನ ಎಲ್ಲಾ ಕಡೆಯಿಂದ ಬರುವ ತನ್ನ ಸಭೆಯ ಪ್ರತಿನಿಧಿಗಳು ಅಧಿಕಾರ ಹೊಂದಿರಬೇಕೆಂದು ದೇವರು ಅಧಿಕೃತವಾಗಿ ಸಂಕಲ್ಪಿಸಿದ್ದಾನೆ. ಕೆಲವರು ಒಬ್ಬರ ಅಥವಾ ಒಂದು ಸಣ್ಣ ಗುಂಪಿನ ಜನರ ತೀರ್ಪಿಗೆ ಅಥವಾ ನಿರ್ಣಯಕ್ಕೆ ಕಿವಿಗೊಡುವುದು ಅಪಾಯವಾಗಿದೆ. ಬದಲಾಗಿ ದೇವರು ತನ್ನ ಸಭೆಗೆ ಕೊಟ್ಟಿರುವ ಸಂಪೂರ್ಣ ಅಧಿಕಾರವನ್ನು ಆತನ ಸೇವೆಯ ಮುಂದುವರಿಕೆ ಹಾಗೂ ಅಭಿವೃದ್ಧಿಗಾಗಿ ಜನರಲ್ ಕಾನ್ಫರೆನ್ಸ್ ಸಮಾವೇಶವು ಸಂಪೂರ್ಣವಾಗಿ ಯೋಜಿಸಿಕೊಳ್ಳಬೇಕು (ಟೆಸ್ಟಿಮೊನೀಸ್‌ ಸಂಪುಟ 9, ಪುಟಗಳು 260, 261, (1909) ದೇವರು ತನ್ನ ಸಭೆಗೆ ವಿಶೇಷವಾದ ಅಧಿಕಾರ ಹಾಗೂ ಬಲವನ್ನು ನೀಡಿದ್ದಾನೆ. ಅದನ್ನು ಯಾರೂ ಸಹ ತಿರಸ್ಕರಿಸಬಾರದು ಅಥವಾ ಅಸಡ್ಡೆ ಮಾಡಬಾರದು. ಹಾಗೆ ಮಾಡುವವರು ದೇವರ ಸ್ವರವನ್ನು ತಿರಸ್ಕರಿಸುವವರಾಗಿದ್ದಾರೆ (ಆಕ್ಟ್ಸ ಆಫ್ ದಿ ಅಪೋಸ್ತಲ್ ಪುಟ 164, 1911).ಕೊಕಾಘ 33.1

    ಇಸ್ರಾಯೇಲ್ ದೇವರು ತನ್ನ ಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾನೆ ಹಾಗೂ ಅಂತ್ಯಕಾಲದವರೆಗೂ ಅವರೊಂದಿಗೆ ಇರುತ್ತಾನೆಂದು ನಾನು ತಿಳಿದುಕೊಂಡಾಗ ನನಗೆ ಬಹಳ ಉತ್ತೇಜನವಾಯಿತು ಹಾಗೂ ಆಶೀರ್ವಾದ ಉಂಟಾಯಿತೆಂದು ಶ್ರೀಮತಿ ವೈಟಮ್ಮನವರು ಅಡ್ರೆಂಟಿಸ್ಟ್ ಸಭೆಗೆ ಕೊಟ್ಟ ಕೊನೆಯ ಸಂದೇಶದಲ್ಲಿ ತಿಳಿಸಿದ್ದಾರೆ (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 406 (1913).ಕೊಕಾಘ 33.2