Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಜನರು ಸಂಪೂರ್ಣವಾಗಿ ವ್ಯಾಪಾರ ವ್ಯವಹಾರದಲ್ಲಿ ತಲ್ಲೀನರಾಗಿರುವರು

    ಲೋಟನು ಸೊದೋಮ್ ಪಟ್ಟಣದ ನಾಶದ ಬಗ್ಗೆ ತನ್ನ ಕುಟುಂಬದ ಸದಸ್ಯರನ್ನು ಎಚ್ಚರಿಸಿದಾಗ, ಅವರು ಅದನ್ನು ತಿರಸ್ಕರಿಸಿದ್ದು ಮಾತ್ರವಲ್ಲ, ಅವನು ಒಬ್ಬ ತಲೆಕೆಟ್ಟ ಹುಚ್ಚನೆಂದು ಅವರು ಭಾವಿಸಿದರು. ಅದು ನಾಶವಾದಾಗ ಅದರಿಂದ ತಪ್ಪಿಸಿಕೊಳ್ಳಲು ಅವರು ಸಿದ್ಧರಾಗಿರಲಿಲ್ಲ. ಕ್ರಿಸ್ತನು ಬರುವಾಗಲೂ ಅದೇ ರೀತಿಯಾಗಿರುವುದು. ರೈತರು, ವ್ಯಾಪಾರಿಗಳು, ವಕೀಲರು, ವೈದ್ಯರು ಇತರೆಲ್ಲಾ ಕೆಲಸಗಾರರು ತಮ್ಮ ತಮ್ಮ ವ್ಯವಹಾರದಲ್ಲಿ ತಲೀನರಾಗಿರುವರು. ಮತ್ತು ದೇವರ ದಿನವು ಅವರ ಮೇಲೆ ಉರುಲಿನಂತೆ ಬರುವುದು (ರಿವ್ಯು ಅಂಡ್ ಹೆರಾಲ್ಡ್, ಮಾರ್ಚ್ 10, 1904).ಕೊಕಾಘ 135.3

    ಸಭಾಬೋಧಕರು, ರೈತರು, ವ್ಯಾಪಾರಿಗಳು, ವಕೀಲರು, ಲೋಕದ ಗಣ್ಯವ್ಯಕ್ತಿಗಳು ಮತ್ತು ಒಳ್ಳೆಯವರೆಂದು ತೋರಿಸಿಕೊಳ್ಳುವವರು ‘ಎಲ್ಲೆಲ್ಲಿಯೂ ಸಮಾಧಾನ, ಭದ್ರತೆ’ ಇದೆ ಎಂದು ಹೇಳುತ್ತಿರುವಾಗಲೇ, ಇದಕ್ಕಿದಂತೆ ನಾಶವು ಅವರ ಮೇಲೆ ಬರುವುದು, ಕರ್ತನ ದಿನವು ಉರುಲಿನಂತೆ ಎಲ್ಲರ ಮೇಲೆ ಬರುವುದೆಂದು ಕ್ರಿಸ್ತನು ಹೇಳಿದ್ದಾನೆ. ಬೇಟೆಗಾರನ ಬಲೆಯ ಉರುಲಿನಲ್ಲಿ ಸಿಕ್ಕ ಪಕ್ಷಿಯಂತೆ, ಇದ್ದಕ್ಕಿದ್ದಂತೆ ಮನುಷ್ಯರು ನಾಶಕ್ಕೆ ಬಲಿಯಾಗುವರು, ಜನರು ಆರಾಮದಿಂದಿರುವಾಗ, ಮನರಂಜನೆಯಲ್ಲಿ ಮಗ್ನರಾಗಿರುವಾಗ, ಮಾರುವುದರಲ್ಲಿಯೂ, ಕೊಳ್ಳುವುದರಲ್ಲಿಯೂ ನಿರಂತರವಾಗಿ ಕಳ್ಳನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಬರುವನು. ಮನುಷ್ಯಕುಮಾರನು ಬರುವಾಗ ಅದರಂತೆಯೇ ಇರುವುದು.ಕೊಕಾಘ 135.4