Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗ್ರಹಿಕೆಗೆ ಮೀರಿದ ಭಯಾನಕತೆ

    ನೀತಿವಂತರಿಗೆ ಬರಲಿರುವ ಸಂಕಟ, ಕಷ್ಟಗಳನ್ನು ಹಾಗೂ ಆಯಾಸ, ಹಸಿವೆಗಳನ್ನು ತಡೆದುಕೊಳ್ಳುವಂತ ನಂಬಿಕೆಯು ಬೇಕು. ತೀವ್ರವಾದ ಸಂಕಟ, ಶೋಧನೆಗಳು ಬಂದರೂ ಕುಂದಿಹೋಗದಂತ ನಂಬಿಕೆಯು ನೀತಿವಂತರಲ್ಲಿರಬೇಕು....ಕೊಕಾಘ 149.1

    ಹಿಂದೆಂದೂ ಬಂದಿರದಂತ ಸಂಕಟದ ಸಮಯವು ನಮಗೆ ಶೀಘ್ರದಲ್ಲಿಯೇ ಬರಲಿದೆ. ಈಗ ನಾವು ಎದುರಿಸದಿರುವಂತ ಅನುಭವದ ಅಗತ್ಯ ನಮಗಿದೆ. ಅಂತಹ ಅನುಭವ ಪಡೆದುಕೊಳ್ಳಲಾಗದಷ್ಟು ಆನೇಕರು ಅತಿಯಾದ ಸೋಮಾರಿಗಳಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ನಾವು ಎದುರು ನೋಡುತ್ತಿರುವಂತ ಕಷ್ಟಗಳು ಬರುವುದಿಲ್ಲ. ಆದರೆ ಕೃಪಾಕಾಲದ ಮುಕ್ತಾಯದ ನಂತರ ಮುಂದೆ ಮಹಾಸಂಕಟವು ಖಂಡಿತವಾಗಿಯೂ ಬರಲಿದೆ. ಈ ಉಗ್ರಪರೀಕ್ಷೆಯ ಪ್ರಮಾಣವನ್ನು ನಮ್ಮಿಂದ ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 621, 622).ಕೊಕಾಘ 149.2

    ಯೇಸುಸ್ವಾಮಿಯು ಮಹಾಪರಿಶುದ್ದ ಸ್ಥಳವನ್ನು ಬಿಟ್ಟಾಗ ಲೋಕದ ಆಡಳಿತಗಾರರು ಮತ್ತು ಜನರನ್ನು ತಡೆಹಿಡಿದಿರುವ ಪವಿತ್ರಾತ್ಮನ ಶಕ್ತಿಯು ಹಿಂದೆಗೆಯಲ್ಪಡುತ್ತದೆ. ಅವರು ಸೈತಾನನ ದುಷ್ಟದೂತರ ಹತೋಟಿಗೆ ಒಳಪಡುತ್ತಾರೆ. ಆಗ ಸೈತಾನನ ಮಾರ್ಗದರ್ಶನ ಹಾಗೂ ಸಲಹೆಯ ಮೇರೆಗೆ ಲೋಕದ ಸರ್ಕಾರಗಳು ಹಾಗೂ ಆಡಳಿತಗಾರರು ಎಂತಹ ಕಾನೂನುಗಳನ್ನು ಜಾರಿಗೆ ತರುತ್ತಾರೆಂದರೆ, ದಿನಗಳು ಕಡಿಮೆಯಾಗದಿದ್ದಲ್ಲಿ, ಯಾರೂ ಸಹ ಉಳಿಯುವುದಿಲ್ಲ (ಟೆಸ್ಟಿಮೊನಿಸ್ ಸಂಪುಟ 1, ಪುಟ 204).ಕೊಕಾಘ 149.3