Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನೈತಿಕ ಶಕ್ತಿಗಳನ್ನು ಹತೋಟಿಯಲ್ಲಿಡಿ

    ನಮ್ಮ ನಂಬಿಕೆಗೆ ಕಾರಣಕೊಡುವ ಸಾಮರ್ಥವು ಒಂದು ಒಳ್ಳೆಯ ಸಾಧನೆ. ಆದರೆ ಸತ್ಯವನ್ನು ಇದಕ್ಕಿಂತಲೂ ಹೆಚ್ಚಾಗಿ ತಿಳಿದುಕೊಳ್ಳದಿದ್ದಲ್ಲಿ, ಅಂತವರು ಎಂದಿಗೂ ರಕ್ಷಿಸಲ್ಪಡುವುದಿಲ್ಲ. ಹೃದಯವು ಎಲ್ಲಾ ವಿಧವಾದ ನೈತಿಕವಾದ ಅಪವಿತ್ರತೆಯಿಂದ ಶುದ್ಧಿಕರಿಸಲ್ಪಡಬೇಕು (ಅವರ್ ಹೈ ಕಾಲಿಂಗ್, ಪುಟ 142, 1893).ಕೊಕಾಘ 41.2

    ತಮ್ಮ ಊಹಾಪೋಹಗಳು ಹಾಗೂ ಆಲೋಚನೆಗಳ ಮೇಲೆ ಹತೋಟಿ ಹೊಂದಬೇಕಾದದ್ದು ತಮ್ಮ ಕರ್ತವ್ಯವೆಂದು ಕೆಲವರು ಮಾತ್ರ ಅರಿತುಕೊಳ್ಳುವರು. ಅಶಿಸ್ತಿಗೊಳಗಾದ ಮನಸ್ಸನ್ನು ಆತ್ಮೀಕವಾಗಿಕೊಕಾಘ 41.3

    ವಿಷಯಗಳ ಬಗ್ಗೆ ಗಮನ ಹರಿಸುವಂತೆ ಮಾಡುವುದು ಬಹಳ ಕಷ್ಟ. ಆದರೆ ನಮ್ಮ ಆಲೋಚನೆಗಳು ಶುದ್ಧವಾಗಿರದಿದ್ದಲ್ಲಿ, ಅಂತಹ ಮನಸ್ಸಿನಲ್ಲಿ ಧರ್ಮಸಭೆ ನಿಷ್ಠೆ ಇರುವುದಿಲ್ಲ. ಮನಸ್ಸು ಪರಿಶುದ್ಧವಾದ ಹಾಗೂ ಶಾಶ್ವತವಾದ ವಿಷಯಗಳಲ್ಲಿ ಮಗ್ನವಾಗಿರಬೇಕು. ಇಲ್ಲದಿದ್ದಲ್ಲಿ ಕ್ಷುಲ್ಲಕವಾದ ಹಾಗೂ ಪೊಳ್ಳಾದ ಆಲೋಚನೆಗಳು ತುಂಬಿರುತ್ತವೆ. ಬೌದ್ಧಿಕ ಮತ್ತು ನೈತಿಕ ಶಕ್ತಿಗಳೆರಡೂ ನಮ್ಮ ಹತೋಟಿಯಲ್ಲಿರಬೇಕು ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿದಲ್ಲಿ, ಅವು ಬಲಗೊಂಡು ಅಭಿವೃದ್ಧಿಯಾಗುವವು (ಅವರ್ ಹೈ ಕಾಲಿಂಗ್, ಪುಟ 111, 1881),ಕೊಕಾಘ 41.4

    ನಮ್ಮ ಮನಸ್ಸಿನಲ್ಲಿ ಪರಿಶುದ್ಧವಾದ ಹಾಗೂ ಕಳಂಕವಿಲ್ಲದ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಲೌಕಿಕವಾದ ಶಕ್ತಿಗಳಿಗೆ ಬದಲಾಗಿ ನೈತಿಕವಾದ ಶಕ್ತಿಗಳನ್ನು ಬಲಪಡಿಸಿಕೊಳ್ಳಬೇಕು. ನಮ್ಮ ಇಹಲೋಕದ ಭೋಗಾಸಕ್ತಿಯಿಂದ ಎಚ್ಚರಗೊಳ್ಳುವಂತೆ ದೇವರು ನಮಗೆ ಸಹಾಯಮಾಡಲಿ (ಮೆಡಿಕಲ್ ಮಿನಿಸ್ತಿ, ಪುಟ 278, 1896).ಕೊಕಾಘ 41.5