Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಆತ್ಮೀಕ ಬದುಕನ್ನು ಉತ್ತಮಗೊಳಿಸುವ ಸಂಗೀತ

    ಇಸ್ರಾಯೇಲ್ಯರು ಅರಣ್ಯದ ತಮ್ಮ ಪ್ರಯಾಣದಲ್ಲಿ ಪವಿತ್ರ ಹಾಡುಗಳ ಸಂಗೀತದಿಂದ ಸಂತೋಷಗೊಂಡರು. ಅದರಂತೆಯೇ, ದೇವರು ತನ್ನ ಮಕ್ಕಳು ಈ ಯಾತ್ರಿಕ ಜೀವನದ ಪಯಣದಲ್ಲಿ ಸಂತೋಷವಾಗಿರಬೇಕೆಂದು ಹೇಳುತ್ತಾನೆ. ಹಾಡುಗಳ ಮೂಲಕವಾಗಿ ದೇವರ ವಾಕ್ಯವನ್ನು ಮತ್ತೆ ಮತ್ತೆ ಹೇಳಿದಾಗ, ಅದು ನಮ್ಮ ಮನಸ್ಸಿನ ಮೇಲೆ ಅಪಾರ ಪರಿಣಾಮ ಬೀರಿ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ. ಅಂತಹ ಹಾಡುಗಳು ಅದ್ಭುತವಾದ ಶಕ್ತಿಹೊಂದಿವೆ. ಅವು ಒರಟಾದ ಹಾಗೂ ಅನಾಗರೀಕ ವರ್ತನೆಯನ್ನು ಬದಲಾಯಿಸುವ, ನಮ್ಮ ಆಲೋಚನೆಗೆ ಪ್ರಚೋದನೆ ನೀಡುವ, ನಡೆನುಡಿಗಳಲ್ಲಿ ಸಾಮರಸ್ಯ ಉತ್ತೇಜಿಸುವ, ದುಃಖವನ್ನು ಹೋಗಲಾಡಿಸುವ ಹಾಗೂ ಧೈರ್ಯವನ್ನು ನಾಶಗೊಳಿಸಿ ನಮ್ಮ ಪ್ರಯತ್ನಗಳನ್ನು ದುರ್ಬಲಗೊಳಿಸುವ ಶಕ್ತಿಯನ್ನು ಎದುರಿಸುವ ಬಲಹೊಂದಿದೆ (ಎಜುಕೇಷನ್, ಪುಟಗಳು 167, 168, 1903).ಕೊಕಾಘ 50.6

    ಸಂಗೀತವು ಪರಲೋಕದಲ್ಲಿ ದೇವಾರಾಧನೆಯ ಒಂದು ಭಾಗವಾಗಿದೆ. ಕರ್ತನನ್ನು ಸ್ತುತಿಸುವ ಹಾಡುಗಳು ಸಾಧ್ಯವಾದಷ್ಟು ಮಟ್ಟಿಗೆ ಪರಲೋಕದ ಗಾಯನ ವೃಂದದೊಂದಿಗೆ ಸಾಮರಸ್ಯ ಹೊಂದಿರುವಂತೆ ಪ್ರಯತ್ನಿಸಬೇಕು. ಹಾಡುಗಾರಿಕೆಯು ಪ್ರಾರ್ಥನೆಯಂತೆಯೇ ದೇವಾರಾಧನೆಯ ಒಂದು ಭಾಗವಾಗಿದೆ (ಪೇಟ್ರಿಯಾರ್ಕ್ ಅಂಡ್ ಪ್ರಾಫೆಟ್ಸ್, ಪುಟ 594, 1890). ಸಂಗೀತ ವಾದ್ಯಗಳನ್ನು ಸಭೆಯಲ್ಲಿ ಉಪಯೋಗಿಸುವುದು ಖಂಡಿತವಾಗಿಯೂ ಆಕ್ಷೇಪಾರ್ಹವಲ್ಲ. ಪುರಾತನ ಕಾಲದಲ್ಲಿಯೂ ಅಂದರೆ ಹಳೆಯ ಒಡಂಬಡಿಕೆಯ ಕಾಲದಲ್ಲಿಯೂ ಧಾರ್ಮಿಕ ಕಾರ್ಯಗಳಲ್ಲಿ ಅವುಗಳನ್ನು ಉಪಯೋಗಿಸುತ್ತಿದ್ದರು, ತಂತಿವಾದ್ಯ, ಕಿನ್ನರಿ, ತಳ, ಝಲ್ಲರಿಯಿಂದ ಭಕ್ತರು ದೇವರಿಗೆ ಸ್ತೋತ್ರ ಮಾಡುತ್ತಿದ್ದರು. ನಮ್ಮ ಸಭೆಗಳ ಆರಾಧನೆಯಲ್ಲಿಯೂ ಸಂಗೀತಕ್ಕೆ ಸ್ಥಾನಕೊಡಬೇಕು (ಎವಾಂಜಲಿಸಂ, ಪುಟ 500, 501, 1898).ಕೊಕಾಘ 50.7

    Larger font
    Smaller font
    Copy
    Print
    Contents