Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ತೋರಿಕೆಯ ವಿಶ್ವಾಸಿಗಳು ಕ್ರಿಸ್ತನಂಬಿಕೆ ತ್ಯಜಿಸುವರು

    ಶಾಂತಿ, ಸಮಾಧಾನ, ಸಮೃದ್ಧಿಯಿರುವ ಸಮಯದಲ್ಲಿ ಮಾಡದಿದ್ದ ಕೆಲಸವನ್ನು ಸಭೆಯು ಬಹಳ ನಿರಾಶೆಯುಳ್ಳ ಸನ್ನಿವೇಶದಲ್ಲಿ ಭಯಂಕರವಾದ ಇಕ್ಕಟ್ಟಿನ ಕಾಲದಲ್ಲಿ ಮಾಡಬೇಕಾಗುತ್ತದೆ. ಮೊದಲು ಕೊಡಲಾಗದಿದ್ದ ಎಚ್ಚರಿಕೆಯನ್ನು ಕ್ರಿಸ್ತನಂಬಿಕೆಯ ವೈರಿಗಳ ತೀಕ್ಷವಾದ ವಿರೋಧತೆಯ ನಡುವೆ ಕೊಡಬೇಕಾಗುವುದು ಮತ್ತು ಆ ಸಮಯದಲ್ಲಿ ದೇವರ ಸೇವೆಯ ಬೆಳವಣಿಗೆಗೆ ಬಹಳ ಅಡ್ಡಿ ಉಂಟುಮಾಡಿದ್ದ ಹೆಸರಿಗೆ ಮಾತ್ರ ಕ್ರೈಸ್ತರಾಗಿರುವವರು ಕ್ರಿಸ್ತ ನಂಬಿಕೆಯನ್ನು ಬಿಟ್ಟು ಹೋಗುವರು (ಟೆಸ್ಟಿಮೊನೀಸ್‌ ಸಂಪುಟ 5, ಪುಟ 463, 1885).ಕೊಕಾಘ 100.4

    ಕರ್ತನಾದ ದೇವರು ತನ್ನ ಜನರನ್ನು ಆಶೀರ್ವದಿಸಿ ಅವರನ್ನು ಸೈತಾನನ ಭ್ರಮೆ ಹಾಗೂ ಮೋಸಗಾರಿಕೆಯನ್ನು ಗ್ರಹಿಸಿಕೊಳ್ಳಲು ಸಿದ್ಧ ಮಾಡುವನು. ಇದನ್ನು ನೋಡಿದ ಸೈತಾನನು ಧರ್ಮದ ಬಗ್ಗೆ ದುರಭಿಮಾನ ಮತ್ತು ಉತ್ಸಾಹಹೀನವಾದ ಸಂಪ್ರದಾಯಿಕ ನಿಯಮಗಳನ್ನು ಜಾರಿಗೆ ತರಲು ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸುವನು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 19, 1890).ಕೊಕಾಘ 100.5

    ಸತ್ಯದ ವಿಷಯವಾಗಿ ಬುದ್ದಿವಂತರಾಗುವ ಅವಕಾಶ ಹಾಗೂ ಸೌಲಭ್ಯಗಳು ದೊರೆತರೂ, ದೇವರು ಸಾಧಿಸಬಹುದಾಗಿದ್ದ ಕಾರ್ಯಗಳಿಗೆ ವಿರುದ್ಧವಾದ ಕಾರ್ಯಗಳನ್ನು ಮುಂದುವರಿಸುವವರನ್ನು ನಿರ್ಮೂಲ ಮಾಡಲಾಗುವುದು. ಯಾಕೆಂದರೆ ಇಬ್ಬರು ಯಜಮಾನರಿಗೆ ಸೇವೆ ಮಾಡುವುದನ್ನು ದೇವರು ಒಪ್ಪುವುದಿಲ್ಲ. ಕಷ್ಟ ಸಂಕಟ, ಶೋಧನೆಗಳು ಹೆಚ್ಚಾದಂತೆ, ಸಭೆಯಲ್ಲಿ ಒಡಕು ಉಂಟುಮಾಡುವವರು ಮತ್ತು ಐಕ್ಯತೆ ತರುವವರು. ಇರುತ್ತಾರೆ. ಸೈತಾನನ ವಿರುದ್ದವಾಗಿ ಈಗ ಹೋರಾಡಲು ಸಿದ್ದವಾಗಿರುವ ಅನೇಕರು, ನಿಜವಾದ ಸಂಕಟದ ಸಮಯದಲ್ಲಿ ತಮ್ಮ ವಿಶ್ವಾಸ ದೃಢವಾಗಿಲ್ಲವೆಂದು ತೋರಿಸುವರು ಮತ್ತು ಶೋಧನೆಗೆ ಒಳಗಾಗುವರು. ಸತ್ಯದ ಬಗ್ಗೆ ಹೆಚ್ಚಿನ ಬೆಳಕು ಮತ್ತು ಅಮೂಲ್ಯವಾದ ತಲಾಂತು ಹೊಂದಿದ್ದು, ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿರುವವರು, ಒಂದಲ್ಲಾ ಒಂದು ನೆವ ಹೇಳಿ ನಮ್ಮನ್ನು ಅಂದರೆ ಅಡ್ವೆಂಟಿಸ್ಟ್ ಸಭೆಯನ್ನು ಬಿಟ್ಟುಹೋಗುವರು (ಟೆಸ್ಟಿಮೊನೀಸ್, ಸಂಪುಟ 6, ಪುಟ 400, 1900).ಕೊಕಾಘ 100.6