Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ಕೊನೆಯ ಸಂದೇಶದ ಮುಖ್ಯ ಅಂಶಗಳು

    ಅನೇಕರು ಶ್ರೀಮತಿ ವೈಟಮ್ಮನವರಿಗೆ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿಸಲ್ಪಡುವುದೇ ಮೂರನೇ ದೂತನ ಸಂದೇಶವೇ? ಎಂದು ಪತ್ರಗಳ ಮೂಲಕ ಕೇಳಿದರು. ಅದಕ್ಕೆ ಶ್ರೀಮತಿ ವೈಟಮ್ಮನವರು ಹೌದು, ಅದು ಯಥಾರ್ಥವಾಗಿಯೂ ಮೂರನೇ ದೂತನ ಸಂದೇಶವಾಗಿದೆ’ ಎಂದು ಉತ್ತರಕೊಟ್ಟಿದರು. (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 372, 1890).ಕೊಕಾಘ 115.4

    ಕರ್ತನು ಮಹಾಕರುಣೆಯಿಂದ ಹಿರಿಯರಾದ ಇ.ಜೆ. ವ್ಯಾಗೊನರ್ ಮತ್ತು ಎ.ಟಿ. ಜೋನ್ಸ್ವರ ಮೂಲಕ ತನ್ನ ಜನರಿಗೆ ಬಹಳ ಅಮೂಲ್ಯವಾದ ಸಂದೇಶ ನೀಡಿದ್ದಾನೆ. ಈ ಸಂದೇಶವು ಜಗತ್ತಿಗೆ ಸಮಸ್ತ ಲೋಕದ ರಕ್ಷಕನಾದ ಯೇಸುಕ್ರಿಸ್ತನು ಹಾಗೂ ಆತನ ಪಾಪ ಪರಿಹಾರಕ್ಕಾಗಿ ಮಾಡಿದ ಮಹಾತ್ಯಾಗವನ್ನು ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ ಸಾರಲ್ಪಡಬೇಕಾಗಿದೆ. ಮೂರು ದೂತರ ವರ್ತಮಾನವು ನಂಬಿಕೆಯ ಮೂಲಕ ದೈವಕೃಪೆಯಿಂದ ಪಾಪಕ್ಷಮೆಯನ್ನು ಖಚಿತಪಡಿಸುತ್ತದೆ. ದೇವರ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ಕ್ರಿಸ್ತನ ನೀತಿಯನ್ನು ಪಡೆದುಕೊಳ್ಳುವಂತೆ ಆಹ್ವಾನ ನೀಡುತ್ತದೆ.ಕೊಕಾಘ 115.5

    ಅನೇಕರು ಕ್ರಿಸ್ತನ ಬಗ್ಗೆ ತಿಳಿದುಕೊಂಡಿಲ್ಲ. ಅವರು ಆತನ ದೈವೀಕತ್ವ ಆತನ ಯೋಗ್ಯತೆಗಳು ಹಾಗೂ ಮಾನವರ ಮೇಲೆ ಎಂದೆಂದಿಗೂ ಬದಲಾಗದ ಪ್ರೀತಿಯ ಬಗ್ಗೆ ತಮ್ಮ ದೃಷ್ಟಿ ಇಡುವುದು ಅಗತ್ಯವಾಗಿದೆ. ಮಾನವರಿಗೆ ಹೇರಳವಾದ ವರಗಳನ್ನು ಕೊಡಲು ಹಾಗೂ ಅಸಹಾಯಕರಾದ ಪಾಪಿಗಳಿಗೆ ಬೆಲೆ ಕಟ್ಟಲಾಗದ ತನ್ನ ನೀತಿಯೆಂಬ ವರವನ್ನು ಕೊಡಲು ಕ್ರಿಸ್ತನಿಗೆ ಎಲ್ಲಾ ಅಧಿಕಾರವು ಕೊಡಲ್ಪಟ್ಟಿದೆ. ಈ ಸಂದೇಶವನ್ನು ಜಗತ್ತಿಗೆ ಕೊಡಬೇಕೆಂದು ದೇವರು ಆದೇಶನೀಡಿದ್ದಾನೆ. ಮೂರುದೂತರ ವರ್ತಮಾನವಾಗಿರುವ ಇದನ್ನು ಮಹಾಶಬ್ದದಿಂದ ಸಾರಿ ಹೇಳಬೇಕಾಗಿದೆ ಹಾಗೂ ಪವಿತ್ರಾತ್ಮವರವು ಅಪಾರವಾಗಿ ಸುರಿಸಲ್ಪಡುವಂತದ್ದಾಗಿದೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟಗಳು 91, 92, 1895).ಕೊಕಾಘ 115.6

    ಕ್ರಿಸ್ತನ ನೀತಿಯ ಸಂದೇಶವು ಕರ್ತನ ಹಾದಿಯನ್ನು ಸಿದ್ಧಪಡಿಸಲು ಲೋಕದ ಒಂದು ಕಡೆಯಿಂದ ಮತ್ತೊಂದು ಕೊನೆಯವರೆಗೆ ಮಹಾಧ್ವನಿಯಿಂದ ಸಾರಿ ತಿಳಿಸಬೇಕಾಗಿದೆ (ಟೆಸ್ಟಿಮೊನೀಸ್, ಸಂಪುಟ 6, ಪುಟ 19, 1900), ಜಗತ್ತಿಗೆ ಕೊಡಬೇಕಾಗಿರುವ ಕರುಣೆಯ ಸಂದೇಶವು ದೇವರ ಗುಣಸ್ವಭಾವವಾದ ಪ್ರೀತಿಯ ಪ್ರಕಟನೆಯಾಗಿದೆ. ದೇವರ ಮಕ್ಕಳು ಆತನ ಮಹಿಮೆಯನ್ನು ಇತರರಿಗೆ ಸ್ಪಷ್ಟವಾಗುವಂತೆ ಪ್ರಕಟ ಪಡಿಸಬೇಕಾಗಿದೆ. ಅವರು ತಮ್ಮ ಜೀವನ ಹಾಗೂ ಗುಣಸ್ವಭಾವದ ಮೂಲಕ ದೇವರ ಕೃಪೆಯು ತಮಗೇನು ಮಾಡಿದೆ ಎಂಬುದನ್ನು ತೋರಿಸಬೇಕಾಗಿದೆ (ಕ್ರೈಸ್ಟ್ ಆಬ್ಜೆಕ್ಟ್ ಲೆಸನ್ಸ್, ಪುಟಗಳು 415, 416, 1900).ಕೊಕಾಘ 116.1