Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೃಪಾಕಾಲವು ಇದಕ್ಕಿದ್ದಂತೆ, ಅನಿರೀಕ್ಷಿತವಾಗಿ ಮುಕ್ತಾಯವಾಗುವುದು

    ಯೇಸುವು ಪರಲೋಕದ ದೇವಾಲಯದಲ್ಲಿ ಮನುಷ್ಯರಿಗಾಗಿ ಮಾಡುತ್ತಿರುವ ಯಾಜಕ ಸೇವೆಯನ್ನು ನಿಲ್ಲಿಸಿದಾಗ, ಎಲ್ಲಾ ಜನರ ಪಕರಣಗಳು ಮುಕ್ತಾಯವಾಗುತ್ತವೆ. ಕೃಪಾಕಾಲವು ಮುಕ್ತಾಯವಾಯಿತು. ನಮಗಾಗಿ ಯೇಸುಕ್ರಿಸ್ತನ ಪ್ರಾರ್ಥನೆಯು ಮುಗಿಯಿತು. ಇದು ಇದಕ್ಕಿದ್ದಂತೆ, ಅನಿರೀಕ್ಷಿತವಾಗಿ ಎಲ್ಲರ ಮೇಲೆ ಬರುವುದು ಮತ್ತು ಸತ್ಯಕ್ಕೆ ವಿಧೇಯರಾಗಿ ತಮ್ಮನ್ನು ಶುದ್ಧೀಕರಿಸಿಕೊಳ್ಳಲು ಅಲಕ್ಷ್ಯ ಮಾಡಿದವರೆಲ್ಲರೂ, ಅತ್ಮೀಕವಾಗಿ ನಿದ್ರಿಸುತ್ತಿರುವರು (ಟೆಸ್ಟಿಮೊನೀಸ್, ಸಂಪುಟ 2, ಪುಟ 191, 1868).ಕೊಕಾಘ 133.6

    ಕೃಪಾಕಾಲವು ನಾವು ನೆನಸದೇ ಇರುವ ಗಳಿಗೆಯಲ್ಲಿ ತಕ್ಷಣವೇ ಅನಿರೀಕ್ಷಿತವಾಗಿ ಬರುವುದು. ಆದರೆ ನಾವು ದೇವರ ದೃಷ್ಟಿಯಲ್ಲಿ ಈಗ ಯೋಗ್ಯರಾಗಿ ಕಾಣಿಸಿಕೊಳ್ಳಬಹುದು ಹಾಗೂ ಆತನು ನಮ್ಮನ್ನು ಅಂಗೀಕರಿಸುತ್ತಾನೆಂದು ನಾವು ಬಲ್ಲೆವು (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 989, 1906).ಕೊಕಾಘ 133.7

    ನ್ಯಾಯವಿಚಾರಣೆಯ ಕಾರ್ಯವು ಮುಕ್ತಾಯವಾದಾಗ ಎಲ್ಲಾ ಮನುಷ್ಯರಿಗೆ ದೈವನಿರ್ಣಯವು ನಿತ್ಯಮರಣ ಅಥವಾ ನಿತ್ಯಜೀವಕ್ಕಾಗಿ ನಿರ್ಧಾರವಾಗಿರುವುದು. ಕರ್ತನು ಆಕಾಶದಲ್ಲಿ ಮೇಘಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ಕೃಪಾಕಾಲವು ಮುಕ್ತಾಯವಾಗುವುದು.ಕೊಕಾಘ 134.1

    ಜಲಪ್ರಳಯದ ಸಮಯದಲ್ಲಿ ನೂಹನು ನಾವೆಯೊಳಗೆ ಹೋದನಂತರ, ದೇವರು ನಾವೆಯ ಬಾಗಿಲನ್ನು ಹಾಕಿದನು ಮತ್ತು ಭಕ್ತಿಹೀನರು ಅದರಿಂದ ಹೊರಗಿದ್ದರು, ಆದರೆ ಜನರಿಗೆ ತಮ್ಮ ನಾಶವು ಈಗಾಗಲೇ ನಿರ್ಧಾರಿತವಾಗಿದೆ ಎಂದು ತಿಳಿದಿರುವುದಿಲ್ಲ. ಬದಲಾಗಿ ತಮ್ಮದೇ ಆದ ಸುಖಸಂತೋಷದಲ್ಲಿ ಮುಳುಗಿದ್ದರು ಹಾಗೂ ಇನ್ನೇನು ಬರಲಿರುವ ದಂಡನೆಯ ತೀರ್ಪಿನ ಎಚ್ಚರಿಕೆ ಅಲಕ್ಷ್ಯ ಮಾಡಿದರು ಮತ್ತು ನೋಹನನ್ನು ಅಪಹಾಸ್ಯ ಮಾಡಿದರು. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವುದು ಎಂದು ರಕ್ಷಕನು ಎಚ್ಚರಿಕೆ ನೀಡಿದ್ದಾನೆ (ಮತ್ತಾಯ 24:39). ಮಧ್ಯರಾತ್ರಿಯಲ್ಲಿ ಕಳ್ಳನು ಎಚ್ಚರಿಕೆ ನೀಡದೆ ಬರುವಂತೆ ಕರ್ತನ ದಿನವು ಮೌನವಾಗಿ ಬರುವುದು. ಅಪರಾಧಿಗಳಾದ ಮನುಷ್ಯರಿಗೆ ಕೊಟ್ಟಿರುವ ಕೃಪಾಕಾಲವು ತೆಗೆಯಲ್ಪಟ್ಟು, ಪ್ರತಿಯೊಬ್ಬನಿಗೆ ನಿತ್ಯವಾದ ದಂಡನೆ ಅಥವಾ ನಿತ್ಯಜೀವವು ನಿರ್ಣಾಯಕವಾದ ಗಳಿಗೆ ಬರಲಿದೆ. ಕೊಕಾಘ 134.2

    ವ್ಯಾಪಾರಿಗಳು ವಾಣಿಜ್ಯ ವ್ಯವಹಾರದಲ್ಲಿನ ಲಾಭದ ಬಗ್ಗೆ ಯೋಚಿಸುತ್ತಿರುವಾಗ, ಲೋಕದ ಸುಖಭೋಗಗಳಲ್ಲಿ ಇತರರು ಮುಳುಗಿ ಹೋಗಿರುವಾಗ, ವಧೂವರರು ಆಭರಣಗಳಿಂದ ಅಲಂಕೃತವಾಗುತ್ತಿರುವಾಗ - ಆ ಗಳಿಗೆಯು ಜಗತ್ತಿನ ನ್ಯಾಯಾಧಿಪತಿಯಾದ ಕರ್ತನು ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿದ್ದೀ ಎಂದು ದಂಡನೆ ವಿಧಿಸುವ ಸಮಯವಾಗಿದೆ (ದಾನಿಯೇಲನು 5:27, ಗ್ರೇಟ್ ಕಾಂಟ್ರೊವರ್ಸಿ, ಪುಟಗಳು 490, 491).ಕೊಕಾಘ 134.3