Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕ್ರಿಸ್ತನಿಗೆ ಮೆಚ್ಚಿಕೆಯಾಗುವ ಮನರಂಜನೆ

    ಕ್ರೈಸ್ತರು ದೇವರ ಮಹಿಮೆಗಾಗಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳನ್ನು ಉಪಯೋಗಿಸುವ ಉದ್ದೇಶದಿಂದ ನಿಷ್ಕಳಂಕವಾದ ಮನರಂಜನೆಯಲ್ಲಿ ಭಾಗಿಗಳಾಗಬಹುದು. ಇದು ಅವರ ಶರೀರವನ್ನು ಚೈತನ್ಯಗೊಳಿಸಿ ಬಲಪಡಿಸುವ ಒಂದು ಅವಕಾಶವಾಗಿದೆ (ಮೆಸೇಜಸ್ ಟು ಯಂಗ್ ಪೀಪಲ್, ಪುಟ 364, 1871).ಕೊಕಾಘ 50.2

    ಕ್ರೈಸ್ತರು ಯಾವ ಮನರಂಜನೆ ಹಾಗೂ ಸಂತೋಷವು ನ್ಯಾಯಸಮ್ಮತವಾಗಿದೆ ಎಂದು ಖಚಿತವಾಗಿ ತಿಳಿದಿರಬೇಕು. ಮನಸ್ಸನ್ನು ಕೆಡಿಸುವ ಮತ್ತು ಹಣ ಹಾಗೂ ಸಮಯವನ್ನು ಪೋಲು ಮಾಡುವಂತ ಮನರಂಜನೆಯು ಕ್ರೈಸ್ತರಿಗೆ ನಿಷಿದ್ಧವಾಗಿದೆ ಅಂತಹ ಮನರಂಜನೆಯು ದುಃಖಕರ ಪರಿಣಾಮ ಬೀರಿ, ಸ್ವಗೌರವವನ್ನು ಹಾಳು ಮಾಡುತ್ತದೆ. ಅವರು ಕ್ರಿಸ್ತನಲ್ಲಿ ಮಗ್ನರಾಗಿ ಪ್ರಾರ್ಥನೆಯಲ್ಲಿ ಆಸಕ್ತರಾಗಿದ್ದಲ್ಲಿ, ಇಂತಹ ಕೆಟ್ಟ ಪರಿಣಾಮಗಳಿಂದ ಸಂಪೂರ್ಣವಾಗಿ ರಕ್ಷಿಸಲ್ಪಡುವರು (ಮೆಸೇಜಸ್ ಟು ಯಂಗ್ ಪೀಪಲ್, ಪುಟ 38, 1884).ಕೊಕಾಘ 50.3

    ನ್ಯಾಯಸಮ್ಮತವಾದ ಮತ್ತು ಕ್ರಿಸ್ತನಿಗೆ ಮೆಚ್ಚಿಕೆಯಾದ ಮನರಂಜನೆ ಕೂಟದಲ್ಲಿಯೂ ನಾವು ಗೌರವದಿಂದ ವರ್ತಿಸಬೇಕು. ನಾವು ಮನೆಗೆ ಹಿಂದಿರುಗಿದ ನಂತರವೂ ಇತರರ ಮನಸ್ಸಿನ ನೋವಾಗುವಂತೆ ಈ ಕೂಟದಲ್ಲಿ ನಾನು ನಡೆದುಕೊಂಡಿಲ್ಲ ಎಂಬ ಪ್ರಜ್ಞೆ ನಮ್ಮಲ್ಲಿರಬೇಕು.ಕೊಕಾಘ 50.4

    ದೇವರ ಅಶೀರ್ವಾದವನ್ನು ನಂಬಿಕೆಯಿಂದ ಬೇಡಿಕೊಂಡು ಭಾಗವಹಿಸುವ ಯಾವುದೇ ಮನರಂಜನೆಯು ಅಪಾಯಕರವಲ್ಲ. ಆದರೆ ಪ್ರಾರ್ಥನಾಕೂಟದಲ್ಲಿ ಭಾಗವಹಿಸಲು ಅಥವಾ ಏಕಾಂತ ಪ್ರಾರ್ಥನೆ ಮಾಡಲು ನಿಮ್ಮನ್ನು ನಿಷೇಧಿಸುವಂತೆ ಮನರಂಜನೆಯು ಸುರಕ್ಷಿವಲ್ಲ, ಆದರೆ ನಿಮ್ಮ ಆತ್ಮೀಕ ಜೀವಿತಕ್ಕೆ ಅಪಾಯಕರವಾಗಿದೆ (ಮೆಸೇಜಸ್ ಟು ಯಂಗ್ ಪೀಪಲ್, ಪುಟ 386, 1913).ಕೊಕಾಘ 50.5