Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಮೌಂಟನ್‌ವ್ಯೂ, ಕ್ಯಾಲಿಫೋರ್ನಿಯಾ

    ಓಕ್ಲೆಂಡ್ ಎಂಬ ಸ್ಥಳದಿಂದ ನಮ್ಮ ಅಡ್ವೆಂಟಿಸ್ಟ್ ಪುಸ್ತಕ ಪ್ರಕಟಣಾಲಯವಾದ ಪೆಸಿಫಿಕ್ ಪ್ರೆಸ್ ಅನ್ನು ಬೇರೆ ಕಡೆಗೆ ವರ್ಗಾಯಿಸಬೇಕೆಂದು ದೇವರು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ಸಲಹೆ ನೀಡಿದನು. ಆ ನಗರವು ಬೆಳೆದಂತೆ ಪ್ರೆಸ್‌ನಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ಮನೆಗಳನ್ನು ಕಟ್ಟಲು ಅನುಕೂಲವಾಗುವಂತೆ ಅದನ್ನು ಒಂದು ಗ್ರಾಮೀಣ ಪ್ರದೇಶದಲ್ಲಿ ಸ್ಥಾಪಿಸುವ ಅಗತ್ಯ ಕಂಡುಬಂತು. ಪುಸ್ತಕ ಪ್ರಕಟಣಾಲಯ ಹಾಗೂ ಪ್ರೆಸ್‌ನಲ್ಲಿ ಕೆಲಸ ಮಾಡುವ ನಮ್ಮ ಕೆಲಸಗಾರರು ಜನಸಂದಣಿಯಿರುವ ನಗರಗಳಲ್ಲಿ ವಾಸಿಸಬೇಕಾದ ಅಗತ್ಯವಿಲ್ಲ (ಫಂಡಮೆಂಟಲ್ಸ್ ಆಫ್.... ಎಜುಕೇಷನ್ 492, 1904.ಕೊಕಾಘ 62.2

    ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಮೌಂಟನ್‌ವ್ಯೂ ಅನೇಕ ಸೌಲಭ್ಯಗಳಿರುವ ಒಂದು ಪಟ್ಟಣ, ಅಲ್ಲಿನ ಹವಾಮಾನ ಹಿತಕರವಾಗಿದ್ದು, ಊರಿನ ಸುತ್ತಲೂ ಹಣ್ಣು, ಕಾಯಿಪಲ್ಲೆಗಳನ್ನು ಬೆಳೆಯುವ ತೋಟಗಳಿವೆ. ದೊಡ್ಡ ನಗರಗಳಲ್ಲಿದ್ದ ಎಲ್ಲಾ ಸೌಕರ್ಯಗಳೂ ಅಲ್ಲಿದವು. ಪೆಸಿಫಿಕ್ ಪ್ರೆಸ್ ಕಚೇರಿಯು ಯಾಕೆ ಓಕ್ಲೆಂಡ್‌ನಿಂದ ಮೌಂಟನ್‌ವ್ಯೂಗೆ ವರ್ಗಾಯಿಸಲ್ಪಡಬೇಕೆಂದು ಕೇಳಿದರು. ತನ್ನ ಜನರು ನಗರಗಳನ್ನು ಬಿಟ್ಟು ಹೋಗಬೇಕೆಂದು ದೇವರು ಕರೆಯುತ್ತಿದ್ದಾನೆ. ನಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯೌವನಸ್ಥರು ದೊಡ್ಡನಗರಗಳಲ್ಲಿ ಕಂಡುಬರುವ ಭ್ರಷ್ಟತೆ ಮತ್ತು ಶೋಧನೆಗಳಿಂದ ಒಳಗಾಗಬಾರದು. ಈ ಕಾರಣಗಳಿಂದ ಮೌಂಟನ್ ವ್ಯೂ ಪುಸ್ತಕ ಹಾಗೂ ಪತ್ರಿಕೆಗಳನ್ನು ಅಚ್ಚು ಮಾಡುವ ಪ್ರಕಟಣಾಲಯಕ್ಕೆ ಸೂಕ್ತವಾದ ಸ್ಥಳವಾಗಿತ್ತು (ಕಂಟ್ರಿ ಲಿವಿಂಗ್, 1905).ಕೊಕಾಘ 62.3

    Larger font
    Smaller font
    Copy
    Print
    Contents