Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಭೆ ಮತ್ತು ಸರ್ಕಾರವು ದೇವಜನರನ್ನು ವಿರೋಧಿಸುತ್ತವೆ

    ದೇವರ ಪವಿತ್ರದಿನವನ್ನು ಕಡೆಗಣಿಸಿ ಅಧರ್ಮ ಸ್ವರೂಪನು ಸ್ಥಾಪಿಸಿದ ವಾರದ ಮೊದಲನೆ ದಿನವನ್ನು ಸಬ್ಬತ್ತೆಂದು ಆಚರಿಸಬೇಕೆಂಬ ರಾಷ್ಟ್ರೀಯ ಕಾನೂನುಗಳಿಗೆ ಅವಿಧೇಯರಾದವರು, ಕಥೋಲಿಕ್ ಸಭೆಯ ದಮನಕಾರಕ ಶಕ್ತಿಯನ್ನು ಮಾತ್ರವಲ್ಲ, ಮೃಗದ ಘನಕ್ಕಾಗಿ ವಿಗ್ರಹ ಮಾಡಿಕೊಂಡಿರುವ ಪ್ರೊಟೆಸ್ಟೆಂಟ್ ದೇಶಗಳ ವಿರೋಧತೆಯನ್ನು ಎದುರಿಸಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 380, 1886).ಕೊಕಾಘ 83.1

    ದೇವರ ಎಚ್ಚರಿಕೆಯ ಸಂದೇಶವನ್ನು ಕೇಳಲು ನಿರಾಕರಿಸುವ ಸಭೆಗಳು ಹಾಗೂ ಧಾರ್ಮಿಕ ಶಕ್ತಿಗಳು ಮಹಾವಂಚನೆಗೆ ಒಳಗಾಗಿ, ಸರ್ಕಾರದೊಂದಿಗೆ ಸೇರಿಕೊಂಡು ದೇವಭಕ್ತರನ್ನು ಹಿಂಸಿಸುತ್ತವೆ. ಪ್ರೊಟೆಸ್ಟೆಂಟ್‌ಸಭೆಗಳು ಕಥೋಲಿಕ್ಕರೊಂದಿಗೆ ಸೇರಿ ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರನ್ನು ಹಿಂಸಿಸುತ್ತವೆ. ಟಗರಿನಂತಿರುವ ಈ ಶಕ್ತಿಯು ಘಟಸರ್ಪನೊಂದಿಗೆ ಸೇರಿ ದೇವರಾಜ್ಞೆಗಳನ್ನು ಕೈಕೊಂಡು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೊಂದಿರುವವರ ಮೇಲೆ ಯುದ್ಧ ಮಾಡುವುದು (ಮ್ಯೂನುಸ್ಕ್ರಿಪ್ಟ್ ರಿಲೀಸ್, ಸಂಪುಟ 14, ಪುಟ 162, 1899). ಸಭೆಯು ನಾಗರೀಕ ಸರ್ಕಾರದ ಬಲಪ್ರಯೋಗಕ್ಕೆ ಮನವಿ ಮಾಡಿಕೊಳ್ಳುವುದು ಮತ್ತು ಈ ಕಾರ್ಯದಲ್ಲಿ ಕಥೋಲಿಕ್ಕರು ಹಾಗೂ ಪ್ರೊಟೆಸ್ಟೆಂಟರು ಒಂದಾಗುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 607, 1911).ಕೊಕಾಘ 83.2