Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಉಳಿದ ಜನರು ದೇವರನ್ನು ತಮ್ಮ ರಕ್ಷಣೆಯನ್ನಾಗಿ ಮಾಡಿಕೊಳ್ಳುವರು

    ನಿನ್ನ ಜನರ ಪಕ್ಷವನ್ನು ಹಿಡಿದಿರುವ ಮಹಾಪಾಲಕನಾದ ಮೀಕಾಯೇಲನು ಆ ಕಾಲದಲ್ಲಿ ಏಳುವನು; ಮೊಟ್ಟಮೊದಲು ಜನಾಂಗವು ಉಂಟಾದಂದಿನಿಂದ ಅಂದಿನವರೆಗೆ ಸಂಭವಿಸದಂತ ಸಂಕಟವು ಸಂಭವಿಸುವುದು; ಆಗ ನಿನ್ನ ಜನರೊಳಗೆ ಯಾರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಸಿಕ್ಕುವವೋ, ಅವರೆಲ್ಲರೂ ರಕ್ಷಿಸಲ್ಪಡುವರು (ದಾನಿಯೇಲನು 12:1). ಇಂತಹ ಮಹಾಸಂಕಟವು ಬಂದಾಗ ಎಲ್ಲರ ನ್ಯಾಯವಿಚಾರಣೆಯು ಮುಗಿದಿರುವುದು; ಪಶ್ಚಾತ್ತಾಪಪಡದ ಪಾಪಿಗಳಿಗೆ ಕರುಣೆ ತೋರಿಸಲ್ಪಡುವುದಿಲ್ಲ ಹಾಗೂ ಯಾವ ಕೃಪಾಕಾಲವೂ ಇರುವುದಿಲ್ಲ, ದೇವರ ಮಕ್ಕಳ ಮೇಲೆ ಜೀವಸ್ವರೂಪನಾದ ಆತನ ಮುದ್ರೆ ಹಾಕಲ್ಪಟ್ಟಿರುವುದು.ಕೊಕಾಘ 152.2

    ಮಹಾಘಟಸರ್ಪನ ನಾಯಕತ್ವದಲ್ಲಿ ಒಂದಾಗಿರುವ ಲೋಕದ ಶಕ್ತಿಗಳೆಲ್ಲವೂ, ದೇವರಾಜ್ಞೆ ಕೈಕೊಳ್ಳುವ ಚಿಕ್ಕಗುಂಪಿನ ಉಳಿದ ಜನರ ವಿರುದ್ಧವಾಗಿರುವವು. ಭಯಂಕರವಾದ ಈ ಹೋರಾಟದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿರುವುದರಿಂದ, ಇವರು ದೇವರನ್ನು ತಮ್ಮ ಆಶ್ರಯ ದುರ್ಗವನ್ನಾಗಿ ಮಾಡಿಕೊಳ್ಳುವರು. ಮೃಗಕ್ಕೆ ನಮಸ್ಕರಿಸಿ ಅದರ ಗುರುತನ್ನು ಹೊಂದಿದವರಿಗೆ ಹಿಂಸೆ ಮತ್ತು ಮರಣದಂಡನೆಯಾಗುವುದೆಂಬ ಆಜ್ಜೆಯು ಈ ಲೋಕದ ಅತ್ಯುನ್ನತ ಆಡಳಿತಗಾರರಿಂದ ಜಾರಿಯಾಗುತ್ತದೆ. ದೇವರು ತನ್ನ ಜನರಿಗೆ ಸಹಾಯ ಮಾಡಲಿ. ಅಂತಹ ಭಯಂಕರವಾದ ಸಂಘರ್ಷದ ಸಮಯದಲ್ಲಿ ಆತನ ಸಹಾಯವಿಲ್ಲದೆ ನಾವು ಏನು ತಾನೇ ಮಾಡಲು ಸಾಧ್ಯ! (ಟೆಸ್ಟಿಮೊನೀಸ್, ಸಂಪುಟ 5, ಪುಟಗಳು 212, 213).ಕೊಕಾಘ 152.3