Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸಂತೋಷವು ಖಚಿತವಾಗಿದೆ

    ಯೇಸುಸ್ವಾಮಿಯು ಪರಲೋಕದ ಜೀವನದ ಬಗ್ಗೆ ತಿಳಿಸಿದ್ದಾನೆ. ಪುನರುತ್ಥಾನಗೊಂಡವರು ‘ಮದುವೆ ಮಾಡಿಕೊಳ್ಳುವುದೂ ಇಲ್ಲ, ಮಾಡಿಕೊಡುವುದೂ ಇಲ್ಲ. ಪರಲೋಕದಲ್ಲಿರುವ ದೇವದೂತರಂತಿರುತ್ತಾರೆ’ ಎಂದು ಹೇಳಿದ್ದಾನೆ (ಮತ್ತಾಯ 22:30) (ಡಿಸೈರ್ ಆಫ್ ಏಜಸ್, ಪುಟ 605).ಕೊಕಾಘ 170.4

    ನೂತನ ಭೂಮಿಯಲ್ಲಿ ಮದುವೆ ಮಾಡಿಕೊಳ್ಳುತ್ತಾರೆ ಹಾಗೂ ಮಕ್ಕಳಾಗುತ್ತವೆ ಎಂದು ಕೆಲವರು ನಂಬಿಕೆ ಹೊಂದಿದ್ದಾರೆ. ಆದರೆ ಸತ್ಯವೇದದಲ್ಲಿ ವಿಶ್ವಾಸವಿಟ್ಟಿರುವವರು ಅಂತಹ ಸಿದ್ದಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ. ದೇವರು ತನ್ನ ವಾಕ್ಯದ ಮೂಲಕ ತಿಳಿಯಪಡಿಸಿದ ವಿಷಯಗಳ ಬಗ್ಗೆ ಕಲಿತ ಭಾವನೆಯಿಂದ ಊಹಾಪೋಹ ಮಾಡುವುದು ದುರಹಂಕಾರವಾಗಿದೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 1, ಪುಟಗಳು 172, 173).ಕೊಕಾಘ 170.5

    ನೂತನ ಭೂಮಿಯಲ್ಲಿ ಎಂತಹ ಪರಿಸ್ಥಿತಿ ಇರುವುದೆಂಬ ಬಗ್ಗೆ ದೇವರ ಸೇವಕರು ಊಹಾಪೋಹ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡಬಾರದು. ದೇವರು ನಮ್ಮ ಮುಂದಿನ ಜೀವನದಲ್ಲಿ ಸಂತೋಷವಿರಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾನೆ, ಆದುದರಿಂದ ದೇವರು ನಮಗಾಗಿ ಮಾಡಿರುವ ಯೋಜನೆಗಳ ಬಗ್ಗೆ ಯಾವುದೇ ಕಲ್ಪನೆ ಮಾಡಿಕೊಳ್ಳಬಾರದು. ಅಲ್ಲದೆ ಈ ಜೀವನದ ಪರಿಸ್ಥಿತಿಯನ್ನು ಮುಂದೆ ಬರಲಿರುವ ಜೀವನದ ಪರಿಸ್ಥಿತಿಯೊಂದಿಗೆ ಹೋಲಿಸಬಾರದು (ಗಾಸ್ಪಲ್ ವರ್ಕರ್ಸ್, ಪುಟ 314).ಕೊಕಾಘ 170.6