Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರು ಎಲ್ಲವನ್ನೂ ಕ್ರಮಪಡಿಸುತ್ತಾನೆ

    ದೇವರ ಸುವಾರ್ತಾ ಸೇವೆಯು ಯಶಸ್ವಿಯಾಗುವುದಿಲ್ಲವೆಂಬ ಭಯ ಅಥವಾ ಸಂದೇಹ ನಿಮ್ಮಲ್ಲಿರಬಾರದು. ದೇವರು ತನ್ನ ಸೇವೆಯ ನಾಯಕನಾಗಿದ್ದು, ಎಲ್ಲವನ್ನೂ ಕ್ರಮಪಡಿಸುತ್ತಾನೆ. ಎಲ್ಲಾ ತಪ್ಪಾದವುಗಳನ್ನು ದೇವರು ಸರಿಮಾಡುತ್ತಾನೆ. ಈ ಲೋಕವೆಂಬ ಹಡಗಿನಲ್ಲಿ ನಾವು ಪ್ರಯಾಣಿಸುತ್ತಿರುವಾಗ, ಆತನು ಸುರಕ್ಷಿತವಾಗಿ ನಮ್ಮನ್ನು ಬಂದರಿಗೆ ಸೇರಿಸುತ್ತಾನೆಂಬ ನಂಬಿಕೆ ನಮ್ಮಲ್ಲಿರಬೇಕು (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟಗಳು 390, 1892)ಕೊಕಾಘ 30.5

    ದೇವರಿಗೆ ಜೀವಂತವಾಗಿರುವ ಸಭೆಯಲ್ಲವೇ? ಆತನಿಗೆ ತನ್ನದೇ ಆದ ಸಭೆಯಿದೆ, ಆದರೆ ಅದು ಉಗ್ರಗಾಮಿ ಸಭೆಯಾಗಿದೆಯೇ ಹೊರತು, ಜಯಶಾಲಿಯಾದ ಸಭೆಯಲ್ಲಿ ಕುಂದುಕೊರತೆ ದೊಷವಿರುವ ಸಭಿಕರಿದ್ದಾರೆ. ಗೋಧಿಯ ನಡುವೆ ಹಣಜಿಗಳಿವೆ ಎಂದು ಹೇಳಲು ನನಗೆ ವಿಷಾದವಾಗುತ್ತದೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ. ಸಭೆಯಲ್ಲಿ ದುಷ್ಟತನವು ಲೋಕದ ಅಂತ್ಯದವರೆಗೂ ಇದ್ದರೂ, ಪಾಪದಿಂದ ಧೈರ್ಯಗುಂದಿ ಕಲುಷಿತವಾಗಿರುವ ಈ ಲೋಕಕ್ಕೆ ಕೊನೆಯ ಕಾಲದಲ್ಲಿ ಸಭೆಯು ಬೆಳಕಾಗಿರಬೇಕಾಗಿದೆ. ಪಾಪದೋಷದಿಂದ ತುಂಬಿ ಬಲಹೀನವಾಗಿದ್ದರೂ, ಈ ಲೋಕದಲ್ಲಿ ಸಭೆಯು ದೇವರು ತನ್ನ ಉತ್ಕೃಷ್ಟವಾದ ಆಶೀರ್ವಾದಗಳನ್ನು ಸುರಿಸುವ ಕಣ್ಣಿಗೆ ಕಾಣಿಸುವ ಏಕೈಕ ಸ್ವರೂಪವಾಗಿದೆ (Object) ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟಗಳು 45, 49 (1893).ಕೊಕಾಘ 30.6

    ಸೈತಾನನ ಅಡೆತಡೆಗಳು ಎಂದಿಗೂ ಜಯಹೊಂದುವುದಿಲ್ಲ. ಆದರೆ ಮೂರನೇ ದೂತನ ವರ್ತಮಾನವು ಜಯಪಡೆಯಲಿದೆ. ಕರ್ತನ ಸೇನಾಪತಿಯು ಯೆರಿಕೋ ಪಟ್ಟಣದ ಬಲವಾದ ಕೋಟೆಗಳನ್ನು ಹೇಗೆ ಕೆಡವಿದನೋ, ಅದೇ ರೀತಿ ಆಜ್ಞೆಗಳನ್ನು ಕೈಕೊಂಡು ನಡೆಯುವ ದೇವಜನರು ತಮ್ಮ ವಿರುದ್ಧವಾಗಿರುವ ಎಲ್ಲಾ ದುಷ್ಟಶಕ್ತಿಗಳನ್ನು ಸೋಲಿಸಿ ಜಯ ಹೊಂದುವರು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್ ಪುಟ 410, 1898).ಕೊಕಾಘ 31.1