Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಅನೇಕರು ಕೊಲ್ಲಲ್ಪಡುವರು

    ದೇವರೊಂದಿಗೆ ನಿಕಟ ಸಂಬಂಧ ಹೊಂದುವುದು ನಮಗೆ ಅತ್ಯುತ್ತಮವಾಗಿದೆ. ಸತ್ಯಕ್ಕಾಗಿ ನಾವು ಪ್ರಾಣಕೊಡಬೇಕೆಂದು ಆತನು ಬಯಸಿದಲ್ಲಿ, ಅದು ಇನ್ನೂ ಅನೇಕರನ್ನು ದೇವರ ಮಾರ್ಗಕ್ಕೆ ತರುವ ಸಾಧನವಾಗಬಹುದು. ಅನೇಕರು ಸೆರೆಮನೆಗೆ ತಳ್ಳಲ್ಪಡುವರು, ಅನೇಕರು ನಗರ ಪಟ್ಟಣಗಳನ್ನು ಬಿಟ್ಟು ತಮ್ಮ ಪ್ರಾಣ ಉಳಿಸಿಕೊಳ್ಳಲು ಪಲಾಯನ ಮಾಡುವರು. ಇನ್ನೂ ಅನೇಕರು ಸತ್ಯಕ್ಕಾಗಿ ದೃಢವಾಗಿ ನಿಂತು ಕ್ರಿಸ್ತನಿಗಾಗಿ ತಮ್ಮ ಪ್ರಾಣಕೊಟ್ಟು ರಕ್ತಸಾಕ್ಷಿಗಳಾಗುವರು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟಗಳು 397, 420).ಕೊಕಾಘ 85.5

    ಸೈತಾನನೊಂದಿಗಿನ ಹೋರಾಟವು ಮುಂದುವರಿಯುತ್ತಿರುವಾಗ, ಕೆಲವರು ಸೆರೆಮನೆಗೆ ಹಾಕಲ್ಪಡುವರು, ಆಸ್ತಿ ನಷ್ಟವಾಗುವುದು ಹಾಗೂ ದೇವರಾಜ್ಞೆಯನ್ನು ಸಮರ್ಥಿಸಿಕೊಳ್ಳಲು ದೃಢವಾಗಿ ನಿಂತಾಗ ಪ್ರಾಣ ನಷ್ಟವೂ ಸಹ ಉಂಟಾಗುವುದು (ಟೆಸ್ಟಿಮೊನೀಸ್, ಸಂಪುಟ 5, ಪುಟ 712, 1889). ದೈವೀಕ ಆಜ್ಞೆಗಳನ್ನು ಉಲ್ಲಂಘಿಸಿ ಮನುಷ್ಯನು ಜಾರಿಗೆ ತಂದ ಶಾಸನಗಳಿಗೆ ವಿಧೇಯತೆ ತೋರಿಸಬೇಕೆಂದು ಒತ್ತಾಯಿಸಲಾಗುವುದು. ದೇವರಾಜ್ಞೆಗಳಿಗೆ ವಿಧೇಯರಾದವರು ಬೆದರಿಸಲ್ಪಡುವರು, ಉಗ್ರವಾದ ಆಪಾದನೆಗೆ ಗುರಿಯಾಗುವರು ಹಾಗೂ ಗಡಿಪಾರು ಮಾಡಲ್ಪಡುವರು. ಅಲ್ಲದೆ ಮರಣದಂಡನೆಗೆ ಗುರಿಯಾಗಿರುವರೆಂದೂ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದೂ ಅವರ ಹೆಸರನ್ನು ಪ್ರಕಟಿಸುವರು. ಅವರು ತಮ್ಮ ತಾಯಿಯರಿಂದ, ಸಹೋದರರು ಬಂಧುಬಾಂಧವರು ಹಾಗೂ ಸ್ನೇಹಿತರಿಂದ ಮೋಸಕ್ಕೆ ಒಳಗಾಗಿ ಮರಣಕ್ಕೆ ಒಪ್ಪಿಸಲ್ಪಡುವರು (ಪ್ಲಾಫೆಟ್ಸ್ ಅಂಡ್ ಕಿಂಗ್ಸ್, ಪುಟ 588, 1914).ಕೊಕಾಘ 86.1

    ಆದಿಕ್ರೈಸ್ತ ಸಭೆಯ ಕಾಲದಲ್ಲಿ ಹಾಗೂ ಅಂಧಕಾರದ ಮಧ್ಯಯುಗದಲ್ಲಿ ರಕ್ತಸಾಕ್ಷಿಗಳಾದವರಿಗಿದ್ದ ಧೈರ್ಯ ಮತ್ತು ಕಷ್ಟ ಸಹಿಷ್ಣುತೆಯು ನಾವು ಅವರಂತ ಪರಿಸ್ಥಿತಿ ಎದುರಿಸುವ ತನಕ ನಮ್ಮಲ್ಲಿರುವುದಿಲ್ಲ. ಅಂತಹ ಹಿಂಸೆ ಸಂಕಟವು ಬಂದಾಗ, ನಮಗೆ ಚೈತನ್ಯ ನೀಡಿ ನಿಜವಾದ ಶೌರ್ಯ ಸಾಹಸಗಳು ತೋರಿ ಬರುವಂತೆ ಪರಲೋಕದಿಂದ ಕೃಪೆಯು ಕೊಡಲ್ಪಡುವುದು (ಅವರ್ ಹೈ ಕಾಲಿಂಗ್, ಪುಟ 125, 1889). ಇಂತಹ ಕೃಪೆಯ ಅಗತ್ಯ ಕಂಡುಬರುವ ತನಕ ಕ್ರಿಸ್ತನ ಶಿಷ್ಯರಿಗೆ ಧೈರ್ಯ ಹಾಗೂ ಕಷ್ಟ ಸಹಿಷ್ಣುತೆ ಕೊಡಲ್ಪಟ್ಟಿರಲಿಲ್ಲ (ಡಿಸೈರ್‌ ಆಫ್ ಏಜಸ್, ಪುಟ 354, 1898).ಕೊಕಾಘ 86.2