Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ವಾಕ್ಯದ ಬರಗಾಲ

    ದೇವರು ತನ್ನ ಪ್ರವಾದಿಗಳ ಹಾಗೂ ಸೇವಕರ ಮೂಲಕ ತಿಳಿಸಿರುವ ವಾಕ್ಯಗಳನ್ನು ಈಗ ಅಧ್ಯಯನ ಮಾಡದೆ ಮತ್ತು ಅದನ್ನು ಅಮೂಲ್ಯವಾದದೆಂದು ಗೌರವಿಸದವರು ಮುಂದೆ ಅದಕ್ಕಾಗಿ ಬಹಳ ವ್ಯಥೆಪಡುವ ಕಾಲ ಬರಲಿದೆ. ನ್ಯಾಯಾಧಿಪತಿಯಾದ ಕರ್ತನು ಕೃಪಾಕಾಲ ಮುಕ್ತಾಯವಾದಾಗ ಈ ಲೋಕದಲ್ಲಿ ನಡೆಯಲಿರುವ ಘಟನೆಗಳನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ನೋಡಿದರು; ಆಗ ಭಯಾನಕವಾದ ಕೊನೆಯ ಏಳು ಉಪದ್ರವಗಳು ಬೀಳಲು ಆರಂಭವಾಗುತ್ತವೆ. ಆಗ ದೇವರ ವಾಕ್ಯವನ್ನು ತಿರಸ್ಕರಿಸಿ ಅದನ್ನು ನಿರ್ಲಕ್ಷಿಸಿದವರು, “ಸಮುದ್ರದಿಂದ ಸಮುದ್ರಕ್ಕೆ, ಬಡಗಲಿಂದ ಮೂಡಲಿಗೆ, ಬಳಲುತ್ತಾ ಹೋಗುವರು. ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು, ಆದರೂ ಅದು ಸಿಕ್ಕದು’ (ಆಮೋಸ 8:12). ದೇವರ ವಾಕ್ಯದ ‘ಬರಗಾಲ ಉಂಟಾಗುವುದು (ಮ್ಯಾನುಸ್ಕ್ರಿಪ್ಟ್ 1, 1857).ಕೊಕಾಘ 136.4

    ದೇವರ ಸೇವಕರು ಸುವಾರ್ತಾ ಸೇವೆಯ ತಮ್ಮ ಕೊನೆಯ ಕಾರ್ಯ ಮುಗಿಸಿದ್ದಾರೆ, ಕೊನೆಯ ಪ್ರಾರ್ಥನೆ ಮಾಡಿದ್ದಾರೆ. ದೇವರ ವಿರುದ್ಧವಾಗಿ ದಂಗೆಯೆದ್ದ ಸಭೆಗೂ ಮತ್ತು ಭಕ್ತಿಹೀನರಿಗಾಗಿ ದುಃಖದಿಂದ ಕಣ್ಣೀರಿಟ್ಟಿದ್ದಾರೆ. ಗಂಭೀರವಾದ ಎಚ್ಚರಿಕೆಯ ಕೊನೆಯ ಸಂದೇಶ ನೀಡಲಾಗಿದೆ. ಅಯ್ಯೋ ಬಹಳ ಜಿಪುಣತನದಿಂದ ಕೂಡಿಸಿಟ್ಟ ಮನೆ, ಹೊಲಗದ್ದೆಗಳು, ಹಣ, ಸಂಪತ್ತು, ಸತ್ಯವನ್ನು ತಿಳಿದಿದ್ದೇವೆಂದು ಹೇಳಿಕೊಂಡು, ಆದರೆ ಅದರಂತೆ ನಡೆಯದವರಿಗೆ, ಅಲ್ಲಿ ಆದರಂತೆ ನೀಡುವುದಾಗಿದ್ದರೆ ಅವರಿಗೆ ರಕ್ಷಣಾ ಮಾರ್ಗ ವಿವರಿಸುವಂತಿದ್ದರೆ, ಅಥವಾ ನಿರೀಕ್ಷೆ ಮಾತುಗಳು, ಇಲ್ಲವೆ ಪ್ರಾರ್ಥನೆ ಅಥವಾ ಬೋಧಕರಿಂದ ಎಚ್ಚರಿಕೆಯ ಮಾತುಗಳು ತಿಳಿಸಲ್ಪಡುವಂತಿದ್ದರೆ! ಇಲ್ಲಿ ಅವರಿಗೆ ಇದಾವುದೂ ದೊರೆಯುವುದಿಲ್ಲ, ಅವರು ದೇವರ ವಾಕ್ಯಕ್ಕಾಗಿ ಬಾಯಾರಿ ವ್ಯರ್ಥವಾಗಿ ಹಸಿದಿರಬೇಕು, ಅವರ ಆತ್ಮೀಕ ದಾಹವು ಎಂದಿಗೂ ತೀರುವುದಿಲ್ಲ ಹಾಗೂ ಭಕ್ತಿಹೀನರಾಗಿ ಹಣವೇ ಪ್ರಮುಖವೆಂದು ಕೂಡಿಸಿಟ್ಟ ಆ ಜನರಿಗೆ ಇನ್ನೆಂದಿಗೂ ಸಮಾಧಾನದ ವಾಕ್ಯಗಳು ದೊರೆಯುವುದೇ ಇಲ್ಲ. ಅವರ ಪ್ರಕರಣಗಳು ಅಂದರೆ ಮೊಕದ್ದಮೆಗಳು ಪರಲೋಕದಲ್ಲಿ ನಿರ್ಧಾರವಾಗಿ ಅಂತಿಮವಾಗಿ ಸ್ಥಿರಪಟ್ಟಿವೆ. ಅದು ಭಕ್ತಿಹೀನರಾಗಿ ದೇವರ ವಾಕ್ಯವನ್ನು ತಿರಸ್ಕರಿಸಿದ ಜನರಿಗೆ ಅತ್ಯಂತ ಭಯಾನಕವಾದ ಸಮಯವಾಗಿದೆ (ಮ್ಯಾನುಸ್ಕ್ರಿಪ್ಟ್ , 1857).ಕೊಕಾಘ 136.5

    ದುಷ್ಟರು ಹಾಗೂ ಭಕ್ತಿಹೀನರ ಮೇಲೆ ದೇವರ ನ್ಯಾಯತೀರ್ಪಿನ ದಂಡನೆಯು ಕರುಣೆಯಿಲ್ಲದೆ ಬಂದಾಗ ಅವರು ಪರಾತ್ಪರನ ರೆಕ್ಕೆಗಳ ಮನೆಯಲ್ಲಿ ಸುರಕ್ಷಿತವಾಗಿರುವವರನ್ನು ಕಂಡು ಬಹಳವಾಗಿ ಹೊಟ್ಟೆಕಿಚ್ಚು ಪಡುವರು, ತನ್ನನ್ನು ಪ್ರೀತಿಸಿ, ತನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವವರನ್ನು ಕರ್ತನಾದ ದೇವರು ಕಾಪಾಡುವನು. ಕೆಟ್ಟವರು ತಮ್ಮ ಪಾಪದ ಫಲವಾಗಿ ಶಿಕ್ಷೆ ಅನುಭವಿಸುತ್ತಿರುವಾಗ, ನೀತಿವಂತರು ಸುರಕ್ಷಿತರಾಗಿರುವುದು ಅವರಲ್ಲಿ ಅಸೂಯೆ ತರಿಸುತ್ತದೆ. ಆದರೆ ಕೆಟ್ಟವರಿಗೆ ಕೃಪೆಯ ಬಾಗಿಲು ಈಗಾಗಲೇ ಮುಚ್ಚಲ್ಪಟ್ಟಿದೆ. ಕೃಪಾಕಾಲ ತೀರಿದ ನಂತರ ಅವರ ಪರವಾಗಿ ಯಾವ ಪ್ರಾರ್ಥನೆಯೂ ಸಹ ಕೇಳಲ್ಪಡುವುದಿಲ್ಲ (ಬೈಬಲ್ ವ್ಯಾಖ್ಯಾನ, ಸಂಪುಟ 3. ಪುಟ 1150).ಕೊಕಾಘ 137.1