Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಗೋಧಿಯಿಂದ ಹೊಟ್ಟು ಬೇರ್ಪಡಿಸಲ್ಪಡುತ್ತದೆ

    ಸಭೆಯಲ್ಲಿ ಭಿನ್ನಾಭಿಪ್ರಾಯಗಳು ತೋರಿಬಂದು ಎರಡು ಗುಂಪುಗಳಾಗುವವು, ಗೋಧಿ ಮತ್ತು ಹಣಜಿ - ಇವೆರಡೂ ಸುಗ್ಗಿಯ ಸಮಯದವರೆಗೆ ಒಟ್ಟಾಗಿ ಬೆಳೆಯುವವು (ಸೆಲಕ್ಟೆಡ್ ಮೆಸೇಜಸ್, ಸಂಪುಟ 2, 114, 1896). ಜರಡಿ ಹಿಡಿಯಲಾಗುವುದು.ಕೊಕಾಘ 99.3

    ತಕ್ಕ ಸಮಯದಲ್ಲಿ ಹೊಟ್ಟನ್ನು ಗೋಧಿಯಿಂದ ಬೇರ್ಪಡಿಸಲಾಗುವುದು. ಪಾಪವು ಹೆಚ್ಚಾಗುವುದರಿಂದ ಅನೇಕರ ಪ್ರೀತಿಯು ಆರಿ ತಣ್ಣಗಾಗುವುದು. ಅಂತಹ ಸಮಯದಲ್ಲಿ ಯಥಾರ್ಥ ನಂಬಿಕೆಯುಳ್ಳವರು ಬಲಶಾಲಿಗಳಾಗಿರುವರು. ದಾತಾನ್ ಮತ್ತು ಅಭಿರಾಮರು ದಂಗೆಯು ಅಂತ್ಯಕಾಲದವರೆಗೆ ಪುನರಾವರ್ತನೆಗೊಳ್ಳುವುದು (ಅರಣ್ಯಕಾಂಡ 16-18ನೇ ಅಧ್ಯಾಯಗಳು), ಕರ್ತನ ಪಕ್ಷದವರು ಯಾರು? ಯಾರು ಮೋಸಕ್ಕೊಳಗಾಗುವರು ಹಾಗೂ ಮೋಸಗಾರರು ಯಾರು?ಕೊಕಾಘ 99.4

    ಕರ್ತನು ಶೀಘ್ರವಾಗಿ ಬರಲಿದ್ದಾನೆ. ಅಡ್ರೆಂಟಿಸ್ಟರಲ್ಲಿ ದೇವರ ಸತ್ಯವನ್ನು ಪ್ರೀತಿಸದವರು ಅಥವಾ ದೇವರಿಗೆ ಗೌರವ ಕೊಡದಿರುವ ದುಷ್ಟರಿರುವುದರಿಂದ, ಪ್ರತಿಯೊಂದು ಸಭೆಯಲ್ಲಿಯೂ ಜರಡಿ ಹಿಡಿಯುವ, ಮೊರದಿಂದ ತೂರುವ ಕಾರ್ಯವು ನಡೆಯಬೇಕಾಗಿದೆ ರಿವ್ಯೂ ಅಂಡ್ ಹೆರಾಲ್ಡ್, ಮಾರ್ಚ್ 19, 1885). ನಾವು ಈಗ ಹೊಟ್ಟನ್ನು ಗೋಧಿಯಿಂದ ಪ್ರತ್ಯೇಕಿಸುವ ಸಮಯದಲ್ಲಿದ್ದೇವೆ. ಜರಡಿ ಹಿಡಿಯಬಹುದಾದ ಎಲ್ಲವೂ, ಜರಡಿ ಹಿಡಿಯಲ್ಪಡುತ್ತದೆ. ಸತ್ಯವನ್ನು ಅರಿತು, ನಡೆನುಡಿಯಲ್ಲಿ ದೇವರಾಜ್ಞೆಗಳಿಗೆ ಅವಿಧೇಯರಾಗುವವರನ್ನು ಕರ್ತನು ಕ್ಷಮಿಸುವುದಿಲ್ಲ (ಟೆಸ್ಟಿಮೊನೀಸ್, ಸಂಪುಟ 6, ಪುಟ 332, 1900).ಕೊಕಾಘ 99.5