Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಸೈತಾನನ ಈ ನಕಲಿ ಅನುಕರಣೆಯು ಯಥಾರ್ಥವಾದದ್ದಕ್ಕಿಂತ ಹೇಗೆ ವ್ಯತ್ಯಾಸವಾಗಿದೆ?

    ಕ್ರಿಸ್ತನ ಎರಡನೇ ಬರೋಣದ ವಿಧಾನವನ್ನು ನಕಲಿ ಮಾಡುವುದಕ್ಕೆ ಸೈತಾನನಿಗೆ ಅನುಮತಿಯಿಲ್ಲ (ಗ್ರೇಟ್ ಕಾಂಟ್ರೊವರ್ಸಿ, 625, 1911).ಕೊಕಾಘ 95.1

    ಸೈತಾನನು ಕ್ರಿಸ್ತನ ವೇಷ ಧರಿಸಿ ಈ ಲೋಕಕ್ಕೆ ಬಂದು ಬಲವಾದ ಅದ್ಭುತಗಳನ್ನು ಮಾಡುವನು; ಜನರು ಅವನ ಮುಂದೆ ಅಡ್ಡಬಿದ್ದು ಅವನನ್ನು ಕ್ರಿಸ್ತನೆಂದು ಆರಾಧಿಸುವರು, ಕ್ರಿಸ್ತನೆಂದು ಈ ಲೋಕವು ಮಹತ್ವ ನೀಡುವ ಸೈತಾನನನ್ನು ಆರಾಧಿಸಬೇಕೆಂದು ನಮಗೆ ಆದೇಶ ನೀಡಲಾಗುತ್ತದೆ. ಆಗ ನಾವೇನು ಮಾಡಬೇಕು? ಇಂತಹ ಶತ್ರುವಿನ ವಿರುದ್ದವಾಗಿ ಕ್ರಿಸ್ತನು ನಮಗೆ ಎಚ್ಚರಿಕೆ ನೀಡಿದ್ದಾನೆ. ಇವನು ಮಾನವರ ಅತ್ಯಂತ ದುಷ್ಟ ಶತ್ರುವಾಗಿದ್ದರೂ, ತಾನು ದೇವರೆಂದು ಹೇಳಿಕೊಳ್ಳುತ್ತಾನೆ. ಆದರೆ ಕ್ರಿಸ್ತನು ಮಹಾಬಲದಿಂದಲೂ ವೈಭವದಿಂದಲೂ ಬರುತ್ತಾನೆ. ಆತನೊಂದಿಗೆ ಕೋಟ್ಯಾನುಕೋಟಿ ದೇವದೂತರಿರುತ್ತಾರೆ. ಆತನು ಬರುವಾಗ ಆತನ ಧ್ವನಿಯನ್ನು ನಾವು ತಿಳಿದುಕೊಳ್ಳುತ್ತೇವೆಂದು ಅಂತವರಿಗೆ ಉತ್ತರಿಸಬೇಕು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 6, ಪುಟ 1106, 1888),ಕೊಕಾಘ 95.2

    ಸೈತಾನನು ಪ್ರತಿಯೊಂದು ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ಪ್ರಕಾಶಮಾನವಾದ ದೂತನಂತೆ ವೇಷ ಧರಿಸಿದ ಅವನು, ಅದ್ಭುತಗಳನ್ನು ಮಾಡುವವನಂತೆ ಈ ಲೋಕದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುತ್ತಾನೆ. ಸುಂದರವಾದ ಕಿವಿಗಿಂಪಾದ ಭಾಷೆಯಲ್ಲಿ ಸೈತಾನನು ಶ್ರೇಷ್ಠವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಅವನು ಒಳ್ಳೆಯ ಮಾತುಗಳನ್ನಾಡುತ್ತಾನೆ ಹಾಗೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾನೆ ಅವನು ಕ್ರಿಸ್ತನ ಆದರ್ಶ ರೂಪವಾಗಿರುತ್ತಾನೆ. ಆದರೆ ಒಂದು ವಿಷಯದಲ್ಲಿ ಎದ್ದುಕಾಣುವ ವ್ಯತ್ಯಾಸವಿರುತ್ತದೆ. ಅದೇನೆಂದರೆ ಸೈತಾನನು ಜನರ ಮನಸ್ಸನ್ನು ದೇವರ ಆಜ್ಞೆಗಳಿಂದ ದೂರ ಮಾಡುತ್ತಾನೆ. ಇಷ್ಟೆಲ್ಲಾ ಆದಾಗ್ಯೂ, ಅವನು ಕ್ರಿಸ್ತನನ್ನು ಎಷ್ಟು ಚೆನ್ನಾಗಿ ಅನುಕರಣೆ ಮಾಡುತ್ತಾನೆಂದರೆ, ಸಾಧ್ಯವಾದರೆ ಆರಿಸಲ್ಪಟ್ಟವರನ್ನೂ ಮೋಸಗೊಳಿಸುತ್ತಾನೆ (ಫಂಡಮೆಂಟಲ್ಸ್ ಆಫ್ ಕ್ರಿಶ್ಚಿಯನ್ ಎಜುಕೇಷನ್, ಪುಟಗಳು 471, 472, 1897).ಕೊಕಾಘ 95.3