Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವಜನರು ನಗರಗಳಿಂದ ಪಲಾಯನ ಮಾಡುವರು.ಅನೇಕರು ಸೆರೆಮನೆಗೆ ಹಾಕಲ್ಪಡುವರು

    ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು, ಆಗ ದೇವಜನರು ದುಷ್ಟರ ಕೈಗೆ ಸಿಕ್ಕಿ ನಾಶವಾಗುವ ಸಾಧ್ಯತೆಯಿರುವುದರಿಂದ ಅವರು ನಗರ, ಪಟ್ಟಣ, ಹಳ್ಳಿಗಳನ್ನು ಬಿಟ್ಟು ಒಟ್ಟಾಗಿ ಪಲಾಯನ ಮಾಡುವರು ಹಾಗೂ ಜನವಸತಿಯಿಲ್ಲದ ಸ್ಥಳಗಳಲ್ಲಿ ವಾಸಿಸುವರು, ಬೆಟ್ಟಗುಡ್ಡಗಳಲ್ಲಿ ಅನೇಕರು ಆಶ್ರಯ ಪಡೆದುಕೊಳ್ಳುವರು. ಆದರೆ ದೇಶ ವಿದೇಶಗಳಲ್ಲಿ ಎಲ್ಲಾ ವರ್ಗಗಳಿಗೆ ಸೇರಿದ ಬಡವರು ಶ್ರೀಮಂತರು ಹಾಗೂ ವಿವಿಧ ಭಾಷೆ, ಜನಾಂಗ, ಕುಲ, ಬಣ್ಣಗಳಿಗೆ ಸೇರಿದ ಕ್ರೈಸ್ತಭಕ್ತರು ಅತ್ಯಂತ ಅನ್ಯಾಯವಾದ ಹಾಗೂ ಕ್ರೂರವಾದ ಸೆರೆಮನೆಯಲ್ಲಿರುವರು. ದೇವರ ಪ್ರಿಯರಾದ ಇವರು ಸರಪಣಿಗಳಿಂದ ಕಟ್ಟಲ್ಪಟ್ಟು, ಸೆರೆಮನೆಯ ಸರಳುಗಳ ಹಿಂದೆ ದಿನಗಳನ್ನು ಕಳೆಯಬೇಕಾಗಿದೆ. ಕೆಲವರಿಗೆ ಮರಣದಂಡನೆಯಾಗಿರುತ್ತದೆ. ಅಲ್ಲದೆ ಕತ್ತಲೆ ತುಂಬಿದ ಓಕರಿಕೆ ತರುವ ಅಸಹ್ಯಕರವಾದ ಕತ್ತಲು ಕೋಣೆಯ ಸೆರೆಮನೆಯಲ್ಲಿ ಬೇರೆ ಕೆಲವರು ಆಹಾರವಿಲ್ಲದೆ ಸಾಯುವರು (ಗೇಟ್ ಕಾಂಟ್ರೊವರ್ಸಿ, 626).ಕೊಕಾಘ 152.4

    ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರನ್ನು ಕೊಲ್ಲಲು ಸಾಮಾನ್ಯವಾದ ಕಾನೂನಿನ ಮೂಲಕ ಒಂದು ದಿನವನ್ನು ನಿಗದಿಪಡಿಸಿದ್ದರೂ, ಅದಕ್ಕಿಂತ ಮೊದಲೇ ಅವರನ್ನು ಕೊಲ್ಲಬೇಕೆಂದು ಅವರ ಶತ್ರುಗಳು ಪ್ರಯತ್ನಿಸುವರು. ಆದರೆ ನಂಬಿಗಸ್ತರಾದ ಈ ಭಕ್ತರನ್ನು ಕಾಯುತ್ತಿರುವ ಬಲಿಷ್ಠ ದೇವದೂತರನ್ನು ದಾಟಿ ಯಾರೂ ಅವರನ್ನು ಮುಟ್ಟಲಾಗದು. ನಗರ ಪಟ್ಟಣ ಹಾಗೂ ಹಳ್ಳಿಗಳನ್ನು ಬಿಟ್ಟು ಪಲಾಯನ ಮಾಡುವಾಗ ದುಷ್ಟರು ಅವರ ಮೇಲೆ ದಾಳಿ ಮಾಡುವರು. ಆದರೆ ಅವರ ಮೇಲೆ ದಾಳಿ ಮಾಡಲು ಉಪಯೋಗಿಸುವ ಎಲ್ಲಾ ಆಯುಧಗಳೂ ಮುರಿದು ಹೋಗಿ ಬಲ ಕಳೆದುಕೊಂಡು ಹುಲ್ಲಿನಂತೆ ಬೀಳುವವು. ಬೇರೆ ಭಕ್ತರನ್ನು ದೇವದೂತರು ಯುದ್ಧಕ್ಕೆ ಸಿದ್ದರಾದ ಯೋಧರ ರೂಪದಲ್ಲಿ ರಕ್ಷಿಸುವರು (ಗ್ರೇಟ್ ಕಾಂಟ್ರೊವರ್ಸಿ, 631).ಕೊಕಾಘ 152.5

    ಇಂತಹ ಸಂಕಟದ ಸಮಯದಲ್ಲಿ ದೇವಜನರೆಲ್ಲರೂ ಒಂದೇ ಸ್ಥಳದಲ್ಲಿರುವುದಿಲ್ಲ. ಅವರು ಜಗತ್ತಿನ ಎಲ್ಲೆಡೆಯಲ್ಲಿ ಗುಂಪುಗುಂಪಾಗಿ ವಾಸಿಸುವರು. ಆದರೆ ಅವರು ಪ್ರತಿಯೊಬ್ಬರೂ, ಬೇರೆಯವರ ಸಹಾಯವಿಲ್ಲದೆ ಒಬ್ಬಂಟಿಗರಾಗಿ ಸ್ವತಃ ಕಷ್ಟ ಸಂಕಟ ಶೋಧನೆ ಎದುರಿಸಬೇಕು (ಬೈಬಲ್ ವ್ಯಾಖ್ಯಾನ ಸಂಪುಟ 4, ಪುಟ 1143), ಈ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲವೇನೋ ಎಂಬಂತೆ ಸಭೆಯ ಪ್ರತಿಯೊಬ್ಬ ಸದಸ್ಯರ ನಂಬಿಕೆಯು ಪರೀಕ್ಷೆಗೆ ಒಳಪಡುತ್ತದೆ (ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 983).ಕೊಕಾಘ 153.1