Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಹಿಂಸೆಯಿಂದ ದೇವಜನರು ಚದರಿ ಹೋಗುವರು

    ಕರ್ತನ ಸಬ್ಬತ್ತನ್ನು ಆಚರಿಸುವವರ ವಿರುದ್ದವಾಗಿ ವಿವಿಧ ಸ್ಥಳಗಳಲ್ಲಿ ಹಗೆತನ ಹೆಚ್ಚಿದಾಗ, ದೇವರ ಮಕ್ಕಳು ವಿರೋಧತೆ ಅಷ್ಟಾಗಿಲ್ಲದ ಸ್ಥಳಗಳಿಗೆ ಚದರಿ ಹೋಗುವುದು ಅಗತ್ಯವಾಗಬಹುದು. ದುಷ್ಟಜನರಿಂದ ಅಪಾಯ ಎದುರಿಸಬೇಕಾದ ಸ್ಥಳಗಳಲ್ಲಿ ದೇವಜನರು ಇರಬೇಕೆಂದು ದೇವರು ಬಯಸುವುದಿಲ್ಲ. ಜೀವಕ್ಕೆ ಅಪಾಯ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ದೇವರ ವಾಕ್ಯವನ್ನು ಭಯವಿಲ್ಲದೆ ಸಾರುವಂತ ಹಾಗೂ ಜೀವವಾಕ್ಯವನ್ನು ಜನರು ಆಸಕ್ತಿಯಿಂದ ಕೇಳುವಂತ ಸ್ಥಳಗಳಿಗೆ ಚದರಿ ಹೋಗುವುದು ನಮ್ಮ ಕರ್ತವ್ಯವಾಗಿದೆ (ಮ್ಯಾನುಸ್ಕ್ರಿಪ್ಟ್ 26, 1904).ಕೊಕಾಘ 87.1

    ಹಿಂಸೆಯ ನಿಮಿತ್ತ ದೇವರ ಮಕ್ಕಳು ಬೇರೆ ಬೇರೆ ದೇಶಗಳಿಗೆ ಚದರಿ ಹೋಗಬೇಕಾದ ಸಮಯವು ಶೀಘ್ರ ಬರಲಿದೆ. ಬಹುಮುಖ ಸಾಮರ್ಥ್ಯ, ಪ್ರತಿಭೆ ತೋರುವ ಶಿಕ್ಷಣ ಪಡೆದಿರುವವರು, ಎಲ್ಲಿಯೇ ಚದರಿ ಹೋಗಿರಲಿ, ಅವರಿಗೆ ಅನುಕೂಲವಾಗುವುದು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 5, ಪುಟ 280, 1908).ಕೊಕಾಘ 87.2