Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಕೃಪಾಕಾಲದ ಮುಕ್ತಾಯಕ್ಕೆ ಮೊದಲು ಭಾನುವಾರಾಚರಣೆ ಕಾನೂನು ಕಡ್ಡಾಯವಾಗಿ ಜಾರಿಗೆ ಬರುತ್ತದೆ

    ಕೃಪಾಕಾಲ ಮುಕ್ತಾಯವಾಗುವುದಕ್ಕೆ ಮೊದಲು ಮೃಗದ ಘನಕ್ಕಾಗಿ ವಿಗ್ರಹ ಮಾಡಲಾಗುತ್ತದೆಂದು (ಪ್ರಕಟನೆ 13:14) ಶ್ರೀಮತಿ ವೈಟಮ್ಮನವರಿಗೆ ಕರ್ತನು ದರ್ಶನದಲ್ಲಿ ಸಷ್ಟವಾಗಿ ತೋರಿಸಿದ್ದಾನೆ. ಇದು ದೇವರ ಮಕ್ಕಳಿಗೆ ಒಂದು ಪರೀಕ್ಷೆಯಾಗಿದ್ದು, ಅದರಿಂದ ಅವರು ನಿತ್ಯವಾದ ಮರಣಕ್ಕೆ ಹೋಗುತ್ತಾರೋ ಇಲ್ಲವೆ ನಿತ್ಯಜೀವ ಪಡೆದುಕೊಳ್ಳುತ್ತಾರೋ ಎಂಬುದು ನಿರ್ಧಾರವಾಗಲಿದೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟ 81, 1890).ಕೊಕಾಘ 132.3

    ಮೃಗದ ವಿಗ್ರಹವೆಂದರೇನು? ಅದನ್ನು ಹೇಗೆ ಮಾಡಲಾಗುತ್ತದೆ? ಎರಡು ಕೊಂಬುಗಳುಳ್ಳ ಮೃಗವು ವಿಗ್ರಹ ಮಾಡುತ್ತದೆ ಹಾಗೂ ಮೊದಲನೆ ಮೃಗಕ್ಕಾಗಿ ವಿಗ್ರಹ ಮಾಡುತ್ತದೆ. ಪ್ರಕಟನೆ 13:1-10; 11:17). ವಿಗ್ರಹವೆಂದರೇನು ಹಾಗೂ ಅದನ್ನು ಹೇಗೆ ಮಾಡಲಾಗುತ್ತದೆ ಎಂದು ತಿಳಿಯಲು ನಾವು ಮೃಗವಾದ ರೋಮನ್ ಕಥೋಲಿಕ್ ಸಭೆಯ ಗುಣಸ್ವಭಾವವನ್ನು ಅಧ್ಯಯನ ಮಾಡಬೇಕು.ಕೊಕಾಘ 132.4

    ಆದಿಕ್ರೈಸ್ತ ಸಭೆಯು ಸರಳವಾದ ಸುವಾರ್ತೆಯ ಸತ್ಯವನ್ನು ಬಿಟ್ಟು ಅನ್ಯಧರ್ಮದ ಆಚಾರ ವಿಚಾರ ಸಂಪ್ರದಾಯಗಳನ್ನು ಅಳವಡಿಸಿಕೊಂಡು ಧರ್ಮಭ್ರಷ್ಟವಾಯಿತು. ಅದು ದೇವರಾತ್ಮನನ್ನು ಹಾಗೂ ಬಲವನ್ನು ಕಳೆದುಕೊಂಡಿತು. ಜನರ ಮನಸ್ಸಾಕ್ಷಿಯನ್ನು ನಿಯಂತ್ರಿಸಲು ಆದಿಕ್ರೈಸ್ತ ಸಭೆಯು ಸರ್ಕಾರದ ಸಹಾಯವನ್ನು ಕೇಳಿತು. ಇದರ ಪರಿಣಾಮವಾಗಿ ರೋಮನ್ ಕಥೋಲಿಕ್ ಸಭೆ ಆಸ್ತಿತ್ವಕ್ಕೆ ಬಂದಿತು. ಈ ಸಭೆಯು ಸರ್ಕಾರವನ್ನು ಹತೋಟಿಯಲ್ಲಿಟ್ಟುಕೊಂಡು ತನ್ನ ಸ್ವಾರ್ಥಕ್ಕಾಗಿ ಅದನ್ನು ಉಪಯೋಗಿಸಿಕೊಂಡದ್ದಲ್ಲದೆ, ಪಾಷಂಡಮತವನ್ನು ಶಿಕ್ಷಿಸಲು ವಿಶೇಷವಾಗಿ ಬಳಸಿಕೊಂಡಿತು. ಅಮೇರಿಕಾ ದೇಶವು ಮೃಗಕ್ಕೆ ವಿಗ್ರಹಮಾಡಬೇಕಾದಲ್ಲಿ ಧಾರ್ಮಿಕಶಕ್ತಿಯು ನಾಗರೀಕ ಸರ್ಕಾರದ ಮೇಲೆ ಹತೋಟಿ ಹೊಂದಿರಬೇಕಲ್ಲದೆ, ಸಭೆಯು ತನ್ನ ಗುರಿಯನ್ನು ಸಾಧಿಸಲು ಸರ್ಕಾರವನ್ನು ಉಪಯೋಗಿಸಿಕೊಳ್ಳುತ್ತದೆ.ಕೊಕಾಘ 132.5

    ಮೃಗದ ವಿಗ್ರಹವು ಧರ್ಮಭ್ರಷ್ಟಗೊಂಡ ಪ್ರೊಟೆಸ್ಟೆಂಟ್ ಸಭೆಗಳನ್ನು ಸೂಚಿಸುತ್ತದೆ. ಈ ಸಭೆಗಳು ತಮ್ಮ ವಿಚಾರಕ್ಕೆಡೆಗೊಡದ ನಂಬಿಕೆ ಹಾಗೂ ಮತತತ್ವಗಳನ್ನು ಜಾರಿಗೆ ತರಲು ನಾಗರೀಕ ಸರ್ಕಾರದ ಸಹಾಯ ಯಾಚಿಸಿದಾಗ, ಮೃಗದ ಘನಕ್ಕಾಗಿ ವಿಗ್ರಹ ಮಾಡಿಸಿದಂತಾಗುತ್ತದೆ.ಕೊಕಾಘ 133.1