Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ನಂಬಿಗಸ್ತ ತಾಯಂದಿರಿಗೆ ಹೊಗಳಿಕೆಯ ಮಾತು

    ನ್ಯಾಯಾಸನವು ಹಾಕಲ್ಪಟ್ಟು ಪುಸ್ತಕಗಳು ತೆರೆಯಲ್ಪಟ್ಟಾಗ, ಮಹಾನ್ಯಾಯಾಧಿಪತಿಯಾದ ದೇವರು “ಭಲಾ, ನಂಬಿಗಸ್ತನಾದ ಆಳು’ ಎಂದು ಘೋಷಿಸುತ್ತಾನೆ. ಆಗ ಎಂದೆಂದಿಗೂ ಬಾಡಿಹೋಗದ ಮಹಿಮೆಯ ಕಿರೀಟವನ್ನು ಭಕ್ತರಿಗೆ ಹಾಕಲಾಗುವುದು, ಅವರಲ್ಲಿ ಅನೇಕರು ಅಲ್ಲಿ ನೆರೆದಿರುವ ಎಲ್ಲರ ಮುಂದೆ ತಮ್ಮ ಕಿರೀಟಗಳನ್ನು ಮೇಲೆತ್ತಿ ಹಿಡಿದುಕೊಂಡು ತಮ್ಮ ತಾಯಂದಿರನ್ನು ಉದ್ದೇಶಿಸಿ ‘ನಾನು ಪರಲೋಕದಲ್ಲಿರುವುದಕ್ಕೆ ದೇವರ ಕೃಷಿಯಿಂದ ಇವರೇ ಕಾರಣಕರ್ತರು. ಅವರ ಸಲಹೆಗಳು, ಪ್ರಾರ್ಥನೆಗಳು ನಾವು ಈ ಶಾಶ್ವತ ರಕ್ಷಣೆ ಪಡೆಯಲು ಆಶೀರ್ವಾದಕರವಾಯಿತು’ ಎಂದು ಹೇಳುವರು (ಮೆಸೇಜಸ್ ಟು ಯಂಗ್ ಪೀಪಲ್, 330)ಕೊಕಾಘ 172.5

    ತಮ್ಮ ಮಕ್ಕಳನ್ನು ಕ್ರಿಸ್ತನ ರಾಜ್ಯಕ್ಕೆ ನಡೆಸುವಲ್ಲಿ ಯಶಸ್ವಿಯಾದ ತಾಯಂದಿರ ಹೆಸರನ್ನು ದೇವದೂತರು ನೆನಪಿನಲ್ಲಿ ಉಳಿಯುವಂತೆ ಮಾಡುವರು (ಚೈಲ್ಡ್ ಗೈಡೆನ್ಸ್, 568).ಕೊಕಾಘ 172.6