Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ದೇವರ ಮುದ್ರೆ ಎಂದರೇನು?

    ದೇವರ ಜನರ ಹಣೆಯ ಮೇಲೆ ಮುದ್ರೆ ಹಾಕಲಾಗುವುದು. ಇದು ಎಲ್ಲರಿಗೂ ಎದ್ದು ಕಾಣುವಂತ ಯಾವುದೇ ಗುರುತಲ್ಲಿ ಅಥವಾ ಮುದ್ರೆಯಲ್ಲ. ಆದರೆ ಅವರು ನಂಬಿಕೆಯಲ್ಲಿ ಚಂಚಲರಾಗದಂತೆ ಬೌದ್ಧಿಕವಾಗಿ ಮತ್ತು ಆತ್ಮೀಕವಾಗಿ ಸತ್ಯದಲ್ಲಿ ಭದ್ರವಾಗಿ ನೆಲೆಯೂರುವುದು. ದೇವಜನರು ಮುದ್ರೆ ಹೊಂದಿದ ನಂತರ ಹಿಂಸೆಯ ಕಾಲಕ್ಕೆ ಸಿದ್ಧರಾಗುವರು. ಈಗಾಗಲೇ ಹಿಂಸೆ ಆರಂಭವಾಗಿದೆ (ಬೈಬಲ್ ವ್ಯಾಖ್ಯಾನ, ಸಂಪುಟ 4, ಪುಟ 1161, 1902).ಕೊಕಾಘ 128.1

    ಆತ್ಮಸಾಕ್ಷಿಗೆ ಅನುಗುಣವಾಗಿ ನಿಷ್ಠೆಯಿಂದ ಯಾರು ಕರ್ತನ ಸಬ್ಬತ್ತನ್ನು ಕೈಕೊಂಡು ನಡೆಯುತ್ತಾರೋ, ಅವರು ದೇವರ ಮುದ್ರಿಹೊಂದುವರು. ಯಾರ ಹಣೆಯ ಮೇಲೆ ದೇವರ ಮುದ್ರೆ ಇರುವುದೋ, ಅವರು ನಾಲ್ಕನೇ ಆಜ್ಞೆಯಾದ ಸಬ್ಬತ್ತನ್ನು ಪವಿತ್ರವಾಗಿ ಕೈಗೊಳ್ಳಬೇಕು (ಬೈಬಲ್ ವ್ಯಾಖ್ಯಾನ, ಸಂಪುಟ 7, 930, 980). ನಿಜವಾದ ನಿಷ್ಠೆಯಿಂದ ಸಬ್ಬತ್ತನ್ನು ಆಚರಿಸುವುದು ದೇವರಿಗೆ ನಿಷ್ಠೆ ತೋರಿಸುವ ಗುರುತಾಗಿದೆ (981). ಎಲ್ಲಾ ಹತ್ತು ಆಜ್ಞೆಗಳಲ್ಲಿ ನಾಲ್ಕನೇ ಆಜ್ಞೆಯು ಮಾತ್ರ ಭೂಮ್ಯಾಕಾಶಗಳ ಸೃಷ್ಟಿಕರ್ತನೂ, ಸೀನಾಯಿ ಬೆಟ್ಟದಲ್ಲಿ ಮಹಾ ಆಜ್ಞೆಗಳನ್ನು ಕೊಟ್ಟ ದೇವರ ಮುದ್ರೆಯನ್ನು ಹೊಂದಿದೆ (ಟೆಸ್ಟಿಮೊನೀಸ್, ಸಂಪುಟ 6, 350, 1900).ಕೊಕಾಘ 128.2

    ಏದೆನ್ ತೋಟದಲ್ಲಿ ಸ್ಥಾಪಿಸಲ್ಪಟ್ಟ ಏಳನೇ ದಿನದ ಸಬ್ಬನ್ನು ಕರ್ತನ ಸೃಷ್ಟಿಯ ಸ್ಮಾರಕವಾಗಿ ಆಚರಿಸುವುದು. ದೇವರಿಗೆ ನಮ್ಮ ನಿಷ್ಠೆ ತೋರಿಸುವ ಒಂದು ಪರೀಕ್ಷೆಯಾಗಿದೆ (ಶ್ರೀಮತಿ ವೈಟಮ್ಮನವರ ಪತ್ರ 94, 1900).ಕೊಕಾಘ 128.3

    ಇಸ್ರಾಯೇಲ್ಯರು ಸಂಹಾರಕ ದೂತನಿಂದ ನಾಶವಾಗದಂತೆ ಅವರ ಮನೆಯ ಬಾಗಿಲಿನ ನಿಲುವು ಪಟ್ಟಿಗಳ ಮೇಲೆ ಹೇಗೆ ರಕ್ತದ ಗುರುತು ಹಚ್ಚಲಾಗಿತ್ತೋ, ಅದೇ ರೀತಿ ದೇವಜನರಲ್ಲಿ ಪ್ರೀತಿಯೊಬ್ಬರ ಮೇಲೆ ಮುದ್ರೆ ಹಾಕಲ್ಪಡುವುದು. ‘ತಮ್ಮನ್ನು ದೇವಜನರನ್ನಾಗಿ ಮಾಡಿರುವ ಯೆಹೋವನು ನಾನೇ ಎಂದು ಅವರು ತಿಳುಕೊಳ್ಳುವಂತೆ, ನನಗೂ ಅವರಿಗೂ ಗುರುತಾದ ಸಬ್ಬತ್ ದಿನಗಳನ್ನು ಅವರಿಗೆ ನೇಮಿಸಿದನು ಎಂದು ಕರ್ತನು ಹೇಳುತ್ತಾನೆ (ಯೆಹೆಜ್ಕೇಲನು 20:12) (ಬೈಬಲ್ ವ್ಯಾಖ್ಯಾನ ಸಂಪುಟ 7, ಪುಟ 969, 1900).ಕೊಕಾಘ 128.4