Loading...
Larger font
Smaller font
Copy
Print
Contents

ಕೊನೆಯ ಕಾಲದ ಘಟನೆಗಳು

 - Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First

    ಶ್ರೀಮತಿ ವೈಟಮ್ಮನವರ ಸಲಹೆಗೆ ಜನರಲ್ ಕಾನ್ಫರೆನ್ಸ್ ಉತ್ತರ 1903

    ಶ್ರೀಮತಿ ವೈಟಮ್ಮನವರು 1901ನೇ ಇಸವಿಯಲ್ಲಿ ಬ್ಯಾಟಲ್‌ಕ್ರೀಕ್‌ನಲ್ಲಿ ನಡೆದ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ಸಭೆಯನ್ನು ಉದ್ದೇಶಿಸಿ ‘ಈ ಸಮಾವೇಶದ ಆರಂಭದಿಂದ ನಮ್ಮೊಂದಿಗೆ ಯಾರಿದ್ದಾರೆ? ಇಂತಹ ಕೂಟಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೂಗಾಟವನ್ನು ಯಾರು ದೂರವಿಟ್ಟಿದ್ದಾರೆ? ಈ ಪವಿತ್ರ ಸ್ಥಳದಲ್ಲಿ ಯಾರ ಪ್ರಸನ್ನತೆ ನೆಲೆಗೊಂಡಿದೆ? ಪರಲೋಕದ ದೇವರು ಹಾಗೂ ದೇವದೂತರು ತಮ್ಮೊಂದಿಗಿದ್ದಾರೆ. ನಮಲ್ಲಿ ಒಡಕು ಉಂಟುಮಾಡಬೇಕೆಂದು ಅವರು ಇಲ್ಲಿ ಬಂದಿಲ್ಲ, ಬದಲಾಗಿ ನಮಗೆ ಸಮಾಧಾನ,ಕೊಕಾಘ 31.5

    ಮನಶ್ಶಾಂತಿ ನೀಡಲು ಬಂದಿದ್ದಾರೆ. ಅಂಧಕಾರದ ಶಕ್ತಿಗಳನ್ನು ತಡೆದು, ದೇವರ ಕಾರ್ಯವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುವಂತೆ ಮಾಡಲು ಪರಲೋಕದ ದೇವರು ನಮ್ಮೊಂದಿಗಿದ್ದಾನೆ. ದೇವದೂತರು ನಮ್ಮೊಡನೆ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.ಕೊಕಾಘ 31.6

    ತಮ್ಮ ಸಂದೇಶವನ್ನು ಮುಂದುವರೆಸುತ್ತಾ ಶ್ರೀಮತಿ ವೈಟಮ್ಮನವರು ‘ಈ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ನಡೆದ ಘಟನೆಗಳನ್ನು ನೋಡಿ ನನ್ನ ಜೀವನದಲ್ಲಿ ಎಂದೂ ಉಂಟಾಗದಿದ್ದಂತ ಆಶ್ಚರ್ಯ ನನಗಾಗಿದೆ. ಇದು ನಮ್ಮ ಕಾರ್ಯವಲ್ಲ, ಇದನ್ನು ದೇವರು ಕೊಟ್ಟಿದ್ದಾನೆ. ಇದರ ಬಗ್ಗೆ ದೇವರು ದರ್ಶನದಲ್ಲಿ ನನಗೆ ಸಲಹೆಗಳನ್ನು ನೀಡಿದ್ದಾನೆ. ಆದರೆ ಈ ಸಮಾವೇಶದ ಕೆಲವು ವಿಷಯಗಳನ್ನು ಸರಿಪಡಿಸದಿದ್ದಲ್ಲಿ, ಆ ಸಲಹೆಗಳನ್ನು ನಾನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ದೇವದೂತರು ಈ ಸಮಾವೇಶದಲ್ಲಿ ತಿರುಗಾಡುತ್ತಿದ್ದಾರೆ. ಇದನ್ನು ನೀವು ನೆನಪಿನಲ್ಲಿಡಬೇಕು. ಅಲ್ಲದೆ ತನ್ನ ಜನರ ಗಾಯಗಳನ್ನು ವಾಸಿ ಮಾಡುತ್ತೇನೆಂದು ದೇವರು ಹೇಳಿರುವುದನ್ನು ಸಹ ನೆನಪಿನಲ್ಲಿಡಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು (ಜನರಲ್ ಕಾನ್ಫರೆನ್ಸ್ ಬುಲೆಟಿನ್, ಏಪ್ರಿಲ್ 25, 1901 ಪುಟಗಳು 463, 464).ಕೊಕಾಘ 32.1

    “ಆ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ದೇವರು ತನ್ನ ಜನರಿಗೆ ಅದ್ಭುತ ಕಾರ್ಯ ಮಾಡಿದ್ದಾನೆ. ಆ ಸಮಾವೇಶದ ಬಗ್ಗೆ ಆಲೋಚಿಸುವ ಪ್ರತಿಯೊಂದು ಸಮಯದಲ್ಲಿಯೂ ಒಂದು ಮಧುರವಾದ ಗಾಂಭೀರ್ಯತೆ ನನ್ನಲ್ಲುಂಟಾಗಿ ನನ್ನ ಹೃದಯದಲ್ಲಿ ಕೃತಜ್ಞತೆ ಹರಿಯುತ್ತದೆ. ಆ ಸಮಾವೇಶದಲ್ಲಿ ನಮ್ಮ ರಕ್ಷಕನೂ, ವಿಮೋಚಕನೂ ಆದ ಕರ್ತನ ಭವ್ಯವೂ, ಮಹೋನ್ನತವೂ ಹಾಗೂ ಗಂಭೀರ ಸೊಬಗಿನ ಹೆಜ್ಜೆಯನ್ನು ನಾವು ನೋಡಿದೆವು. ಆತನು ತನ್ನ ಜನರಿಗೆ ಬಿಡುಗಡೆ ತಂದದ್ದಕ್ಕಾಗಿ ಆತನ ಪವಿತ್ರ ನಾಮಕ್ಕೆ ಸ್ತೋತ್ರ ಸಲ್ಲಿಸುತ್ತೇವೆ” (ರಿವ್ಯೂ ಅಂಡ್ ಹೆರಾಲ್ಡ್ ಪತ್ರಿಕೆ, ನವೆಂಬರ್ 26, 1901 ರಲ್ಲಿ ಶ್ರೀಮತಿ ವೈಟಮ್ಮನವರ ಲೇಖನದಿಂದ)ಕೊಕಾಘ 32.2

    ಪ್ರತಿಯೊಂದು ರಾಜ್ಯ, ಪ್ರಾಂತ್ಯಗಳಲ್ಲಿ ಸೆಕ್ಷನ್, ಯೂನಿಯನ್ ಕಚೇರಿಗಳನ್ನು ಸ್ಥಾಪಿಸಬೇಕು. ಅವುಗಳ ಮೇಲೆ ಜನರಲ್ ಕಾನ್ಫರೆನ್ಸ್ ಕಚೇರಿ ಸರ್ವಾಧಿಕಾರ ಚಲಾಯಿಸಬಾರದು. ಸೆಕ್ಷನ್, ಯೂನಿಯನ್ ಕಚೇರಿಗಳಲ್ಲಿ ಅಧಿಕಾರವು ಒಬ್ಬರು, ಇಬ್ಬರು ಅಥವಾ ಆರು ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗಿರಬಾರದು. ಅನೇಕ ವ್ಯಕ್ತಿಗಳಿರುವ ಒಂದು ಕಮಿಟಿ ಅಥವಾ ಸಮಾಲೋಚನಾ ಸಮಿತಿಯಿರಬೇಕು ಎಂದು ಶ್ರೀಮತಿ ವೈಟಮ್ಮನವರು 1903ನೇ ಇಸವಿಯಲ್ಲಿ ಸಲಹೆ ನೀಡಿದ್ದಾರೆ.ಕೊಕಾಘ 32.3